fbpx
ಕ್ರಿಕೆಟ್

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ- ಇಬ್ಬರು ಕನ್ನಡಿಗರಿಗೆ ಸ್ಥಾನ.

ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಆಗಸ್ಟ್​ 1 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಡಲಿದೆ. ಈಗಾಗಲೇ ಟಿ-20 ಮತ್ತು ಏಕದಿನ ಪಂದ್ಯಗಳ ಸರಣಿಗಳು ಮುಗಿದಿದ್ದು ಟೆಸ್ಟ್ ಸರಣಿ ಅತ್ಯಂತ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಟೆಸ್ಟ್​ ಸರಣಿಯ ಪೈಕಿ ಮೊದಲ 3 ಪದ್ಯಗಳಿಗೆ ಬಿಸಿಸಿಐ ಆಯ್ಕೆ ಸಮಿತಿ ಟೀಮ್ ಇಂಡಿಯಾ ಆಟಗಾರರನ್ನು ಪ್ರಕಟಿಸಿದೆ.

 

 

ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಐದು ವಿಕೆಟುಗಳ ಸಾಧನೆ ಮಾಡಿರುವ ಸ್ಪಿನ್ನರ್ ಕುಲ್‌ದೀಪ್ ಯಾದವ್ ಟೆಸ್ಟ್ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಉಳಿದಂತೆ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ತ್ರಿಶತಕ ವೀರ ಕರುಣ್ ನಾಯರ್ ಕೂಡ ತಂಡದಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ವಿಕೆಟ್ ಕೀಪರ್ ವೃದ್ಧಿಮಾನ್ ಗಾಯಾಳುವಾಗಿರುವುದರಿಂದ ಐಪಿಎಲ್ ನಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ರಿಷಬ್ ಪಂಥ್’ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಮುರಳಿ ವಿಜಯ್, ಚೇತೇಶ್ವರ ಪೂಜಾರ, ಉಪ ನಾಯಕ ಅಜಿಂಕ್ಯ ರಹಾನೆ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ ಸಹ ತಂಡಕ್ಕೆ ಮರಳಿದ್ದು ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಟೆಸ್ಟ್ ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಟೀಮ್ ಇಂಡಿಯಾ ತಂಡ 
1. ವಿರಾಟ್ ಕೊಹ್ಲಿ (ನಾಯಕ)
2. ಅಜಿಂಕ್ಯ ರಹಾನೆ (ಉಪ ನಾಯಕ)
3. ಶಿಖರ್ ಧವನ್
4. ಮುರಳಿ ವಿಜಯ್,
5. ಚೇತೇಶ್ವರ ಪೂಜಾರ
6. ಕೆಎಲ್ ರಾಹುಲ್
7. ಕರುಣ್ ನಾಯರ್
8. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
9. ರಿಷಬ್ ಪಂತ್ (ವಿಕೆಟ್ ಕೀಪರ್)
10. ಆರ್ ಅಶ್ವಿನ್
11. ರವೀಂದ್ರ ಜಡೇಜಾ
12. ಕುಲ್‌ದೀಪ್ ಯಾದವ್
13. ಹಾರ್ದಿಕ್ ಪಾಂಡ್ಯ
14. ಇಶಾಂತ್ ಶರ್ಮಾ
15. ಮೊಹಮ್ಮದ್ ಶಮಿ
16. ಉಮೇಶ್ ಯಾದವ್
17. ಜಸ್ಪ್ರೀತ್ ಬುಮ್ರಾ
18. ಶಾರ್ದೂಲ್ ಠಾಕೂರ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top