ಕ್ರಿಕೆಟ್ ನಲ್ಲಿ ಆಗಾಗ್ಗೆ ಸಂಭವಿಸುವ ಕೆಲ ತಮಾಷೆಯೆನಿಸುವ ಎಡವಟ್ಟುಗಳು ಜನರನ್ನು ನಗೆಪಾಟಲಿಗೀಡಾಗುವಂತೆ ಮಾಡುತ್ತವೆ. ಇದೀಗ ಅಂಥಾ ಎಡವಟ್ಟುಗಳ ಸಾಲಿಗೆ
ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು ಇದಕ್ಕೆ ಸಂಭಂದಿಸಿದ ವಿಡಿಯೋವೊಂದು ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶಗಳ ನಡುವೆ ಏಕದಿನ ಸರಣಿ ನಡೆಯುತ್ತಿದೆಯಲ್ಲಾ, ಅದರ ಮೂರನೇ ಪಂದ್ಯ ಮೊನ್ನೆ ತಾನೇ ನಡೆದಿತ್ತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ದೈತ್ಯ ವೇಗಿ ಶೇಲ್ಡನ್ ಕಾಟ್ರೆಲ್ ಎಸೆದ ಬಾಲು ಇದೀಗ ಶತಮಾನದ ಅತ್ಯಂತ ಕೆಟ್ಟ ಎಸೆತಗಳ ಸಾಲಿಗೆ ನಿಸ್ಸಂದೇಹವಾಗಿ ಸೇರಿಕೊಂಡಿದೆ..
ವಾರ್ನರ್ ಪಾರ್ಕ್ ನಲ್ಲಿ ನಡೆದ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಇಂಡೀಸ್’ನ ಶೇಲ್ಡನ್ ಕಾಟ್ರೆಲ್ ಎಸೆದ ಚೆಂಡು ನೇರವಾಗಿ ಬ್ಯಾಟ್ಸ್ ಮನ್ ಕಡೆ ಹೋಗದೆ ಸೆಕೆಂಡ್ ಸ್ಲಿಪ್’ನಲ್ಲಿ ನಿಂತಿದ್ದ ಕ್ಷೇತ್ರರಕ್ಷನ ಕೈಗೆ ನೇರವಾಗಿ ಕೈಸೇರಿಕೊಂಡಿದೆ. ದುರಂತವೆಂದರೆ ಈ ಚೆಂಡು ಪಿಚ್ ಕೂಡ ಬೀಳದೆ ಫುಲ್ ಟಾಸ್ ಆಗಿಯೇ ಫೀಲ್ಡರ್ ಕೈಗೆ ಸೇರಿಕೊಂಡಿದೆ. ಇದನ್ನು ಕಂಡು ಬ್ಯಾಟ್ಸ್ ಮ್ಯಾನ್ ಕಂಗಾಲಾದರೇ ಇತ್ತ ಆಶ್ಚರ್ಯಚಕಿತನಾದ ಅಂಪೈರ್ ಅದನ್ನು ನೋಬಾಲ್ ಎಂದು ಘೋಷಿಸಿದರು. ನಂತರ ತನ್ನ ಎಡವಟ್ಟಿಗೆ ಕೈಸನ್ನೆಯಲ್ಲಿ ಕಾಟ್ರೆಲ್ ಕೈಸನ್ನೆಯಲ್ಲಿಯೇ ಕ್ಷಮೆ ಕೇಳಿದನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
