fbpx
ಕ್ರಿಕೆಟ್

ಭಾರತ V/S ಇಂಗ್ಲೆಂಡ್ ಪ್ರಥಮ್ ಟೆಸ್ಟ್- ಕುತೂಹಲಕಾರಿ ಘಟ್ಟ ತಲುಪಿದ ಪಂದ್ಯದಲ್ಲಿ ಯಾರಾಗ್ತಾರೆ ವಿನ್.

ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಕುತೂಹಲಕಾರಿ ಘಟ್ಟತಲುಪಿದೆ. ಗೆಲುವಿಗಾಗಿ ಎರಡನೆ ಇನ್ನಿಂಗ್ಸ್‌ನಲ್ಲಿ 194ರನ್ ಗುರಿ ಬೆನ್ನಟ್ಟುತ್ತಿರುವ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿದ್ದು, ಸಂಕಷ್ಟಕ್ಕೊಳಗಾಗಿದೆ. ಭಾರತಕ್ಕಿನ್ನು ಐದು ವಿಕೆಟ್‌ಗಳು ಮಾತ್ರ ಬಾಕಿ ಉಳಿದಿರುವಂತೆಯೇ ಗೆಲುವಿಗಾಗಿ 84 ರನ್ ಗಳಿಸಬೇಕಾದ ಅವಶ್ಯಕತೆಯಿದೆ. . ಇದರೊಂದಿಗೆ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯ ರೋಚಕ ಹಂತವನ್ನು ತಲುಪಿದೆ.

 

 

ಮೂರನೇ ದಿನ ಬ್ಯಾಟಿಂಗ್ ಮುಂದುವರೆಸಿದ ಆಂಗ್ಲರು ಆರ್. ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿಹೋದರು. ಇಂಗ್ಲೆಂಡ್ ಅಗ್ರಕ್ರಮಾಂಕದ ಬ್ಯಾಟ್ಸ್​ಮನ್​ಗಳಿಗೆ ಸ್ಪಿನ್ ಮಾಂತ್ರಿಕ ಅಶ್ವಿನ್ ಪೆವಿಲಿಯನ್ ದಾರಿ ತೋರಿಸಿದ್ರೆ, ಮಾಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವಿಕೆಟ್ಟುಗಳನ್ನು ವೇಗಿ ಇಶಾಂತ್ ಶರ್ಮಾ ಕೆಡವಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ 180 ರನ್​ಗಳಿಗೆ ಆಲೌಟ್ ಆಯ್ತು.. ಮೊದಲ ಇನ್ನಿಂಗ್ಸ್ ನಲ್ಲಿ 13ರನ್’ಗಳ ಪಡೆದಿದ್ದ ಪಡೆದಿದ್ದರಿಂದ ಟೀಂ ಇಂಡಿಯಾಕ್ಕೆ ಗೆಲ್ಲಲು 194 ರನ್​ಗಳ ಟಾರ್ಗೆಟ್ ನೀಡಿತು…

ಈ ಗುರಿ ಬೆನ್ನತ್ತಿದ ಭಾರತ ಕೂಡ ಆರಂಭ ಪಡೆಯಲಿಲ್ಲ, ಓಪನಿಂಗ್ ಬ್ಯಾಟ್ಸ್ಮನ್ ಗಳಾದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಬೇಗನೆ ವಿಕೆಟ್ ಒಪ್ಪಿಸಿದರೆ ನಂತರ ಕ್ರೀಸಿಗೆ ಬಂದ ಕನ್ನಡಿಗ ಕೆಎಲ್ ರಾಹುಲ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ಬಂದ ರಹಾನೆ ಕೂಡ ನಿರಾಸೆ ಮೂಡಿಸಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಜತೆಗೂಡಿದ ನಾಯಕ ಕೊಹ್ಲಿ ತಂಡಕ್ಕೆ ಆಸರೆಯಾಗಿದ್ದು ಇಂದು ಯಾವ ರೀತಿ ಬ್ಯಾಟಿಂಗ್ ನಡೆಸುತ್ತಾರೆ ಎಂದು ಕಾದುನೋಡಬೇಕಿದೆ.

ಸಂಕ್ಷಿಪ್ತ ಸ್ಕೊರ್:
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್.
89.4 ಓವರ್​ಗಳಲ್ಲಿ 287 ರನ್ ಆಲೌಟ್ ​
ಜೋ ರೂಟ್ (80 ರನ್, 156 ಎಸೆತ, 9 ಬೌಂಡರಿ)
ಜಾನಿ ಬೇರ್​ಸ್ಟೋ (70ರನ್, 88 ಎಸೆತ, 9 ಬೌಂಡರಿ)
ಕೀಟನ್ ಜೆನ್ನಿಂಗ್ಸ್ (42ರನ್ 98 ಎಸೆತ )

ಭಾರತದ ಬೌಲಿಂಗ್:
ಅಶ್ವಿನ್ 62-4
ಮೊಹಮದ್ ಶಮಿ 64-3

ಭಾರತ ಮೊದಲ ಇನ್ನಿಂಗ್ಸ್
76 ಓವರ್‌ಗಳಲ್ಲಿ 274 ರನ್‌ ಆಲೌಟ್
ವಿರಾಟ್ ಕೊಹ್ಲಿ149,
ಹಾರ್ಧಿಕ್ ಪಾಂಡ್ಯ 22
ಮುರಳಿ ವಿಜಯ್ 20,
ಶಿಖರ್ ಧವನ್ 26,

ಇಂಗ್ಲೆಂಡ್:
ಸ್ಯಾಮ್ ಕರ್ರನ್ 74-4
ಜೇಮ್ಸ್ ಆಂಡೆರ್ಸನ್ 41-2
ಆದಿಲ್ ರಶೀದ್ 31-2
ಬೆನ್ ಸ್ಟೋಕ್ಸ್ 73-2

ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: 180/10 (53.0 ov)
ಸ್ಯಾಮ್ ಕುರ್ರನ್ 63
ಜಾನಿ ಬೈರ್ಸ್ಟೊ 28
ಡೇವಿಡ್ ಮಲನ್ 20

ಬೌಲಿಂಗ್ :
ಇಶಾಂತ್ ಶರ್ಮ 5-51
ಅಶ್ವಿನ್ 3-59

ಭಾರತ ದ್ವಿತೀಯ ಇನ್ನಿಂಗ್ಸ್:
36 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 110 ರನ್
ವಿರಾಟ್ ಕೊಹ್ಲಿ 43*(ಬ್ಯಾಟಿಂಗ್)
ದಿನೇಶ್ ಕಾರ್ತಿಕ್ 18*(ಬ್ಯಾಟಿಂಗ್)

ಬೌಲಿಂಗ್:
ಸ್ಟುವರ್ಟ್​ ಬ್ರಾಡ್ 29-2
ಜೇಮ್ಸ್ ಆಂಡರ್ಸ್​ನ್ 33-1
ಬೆನ್ ಸ್ಟೋಕ್ಸ್​ 25-1
ಸ್ಯಾಮ್ ಕುರ್ರನ್ 17-1

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top