fbpx
ಕ್ರಿಕೆಟ್

ಎರಡನೇ ಟೆಸ್ಟ್- ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು.

ಕ್ರಿಕೆಟ್ ಕಾಶಿ ‘ಲಾರ್ಡ್ಸ್’ ಮೈದಾನದಲ್ಲಿ ನಡೆದ ಬಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 159 ರನ್ ಗಳ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಐದು ಟೆಸ್ಟ್ ಗಳ ಸರಣಿಯಲ್ಲಿ 2-0 ಅಂತರದಲ್ಲಿ ಅತಿಥೇಯ ಇಂಗ್ಲೆಂಡ್ ತಂಡವು ಮುನ್ನಡೆ ಸಾಧಿಸಿದೆ. ನಾಲ್ಕೇ ದಿನದಲ್ಲಿ ಪಂದ್ಯ ಮುಕ್ತಾಯಗೊಂಡಿದ್ದು ಆಂಗ್ಲರ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಸತತ 2ನೇ ಸೋಲು ಅನುಭವಿಸಿದೆ.

 

 

ಮೊದಲ ಇನ್ನಿಂಗ್ಸ್ ಭಾರತ 107 ರನ್ ಆಲೌಟ್ ಆಗಿದ್ದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 6 ವಿಕೆಟ್ ನಷ್ಟಕ್ಕೆ 396 ರನ್ ದಾಖಲಿಸಿ ಡಿಕ್ಲೇರ್ ಮಾಡಿಕೊಂಡು 289 ರನ್​ಗಳ ಭರ್ಜರಿ ಮುನ್ನಡೆ ಸಾಧಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 130ರನ್ ಗಳಿಗೆ ಆಲೌಟ್ ಆಯಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಪ್ರವಾಸಿಗರಿಗೆ ಮಾರಕವಾಗಿ ಕಾಡಿದ ಜೇಮ್ಸ್ ಆಂಡ್ರೆಸನ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ ನಾಲ್ಕು ವಿಕೆಟ್‌ಗಳನ್ನು ಕಿತ್ತು ಇಂಗ್ಲೆಂಡ್’ಗೆ ಸುಲಭ ಜಯ ತಂದುಕೊಟ್ಟರು. ಇದೀಗ ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಸರಣಿ ಕನಸು ನನಸಾಗಿಸಬೇಕಾದರೆ ಮುಂದಿನ ಎಲ್ಲ ಮೂರು ಪಂದ್ಯಗಳಲ್ಲೂ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಮುಂದಿನ 3ನೇ ಟೆಸ್ಟ್​ ಪಂದ್ಯ ಆಗಸ್ಟ್​ 18ರಿಂದ ನ್ಯಾಟಿಂಗ್​ಹ್ಯಾಮ್​ನ ಟ್ರೆಂಟ್​​ ಬ್ರಿಡ್ಜ್​​ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್- 35.2 ಓವರ್‌ಗಳಲ್ಲೇ 107 ರನ್ ಆಲೌಟ್.
ಆರ್ ಅಶ್ವಿನ್ ಅವರ 29 (38)
ಕೊಹ್ಲಿ 23 (57),
ಅಜಿಂಕ್ಯ ರಹಾನೆ 18 (44),
ಹಾರ್ದಿಕ್ ಪಾಂಡ್ಯ 11 (10)

ಇಂಗ್ಲೆಂಡ್ ಬೌಲಿಂಗ್:
ಜೇಮ್ಸ್ ಆಂಡೆರ್ಸನ್ 20-5
ಕ್ರಿಸ್ ವೋಕ್ಸ್ 19-೨

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 396
ಕ್ರಿಸ್ ವೋಕ್ಸ್ (120*)
ಜಾನಿ ಬೈರ್‌ಸ್ಟೋವ್ (93)
ಕುರ್ರನ್- 40

ಬೌಲಿಂಗ್ ಭಾರತ:
ಮೊಹಮ್ಮದ್ ಶಮಿ 74-3
ಹಾರ್ಧಿಕ್ ಪಾಂಡ್ಯ 66-3

ಭಾರತ ಎರಡನೇ ಇನ್ನಿಂಗ್ಸ್ 130-all out (47.0 Ovs)
ರವಿಚಂದ್ರನ್ 33
ಹಾರ್ಧಿಕ್ ಪಾಂಡ್ಯ 26

ಇಂಗ್ಲೆಂಡ್ ಬೌಲಿಂಗ್
ಜೇಮ್ಸ್ ಆಂಡೆರ್ಸನ್ 23-4
ಸ್ಟುವರ್ಟ್ ಬ್ರಾಡ್ 44-4

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top