fbpx
ಕ್ರಿಕೆಟ್

ಇಂಗ್ಲೆಂಡ್ -ಭಾರತ 3 ನೇ ಟೆಸ್ಟ್: ಆಂಗ್ಲರನ್ನು ಕಾಡಿದ ವಿರಾಟ್-ರಹಾನೆ, ಮೊದಲ ದಿನ ಭಾರತಕ್ಕೆ ಮೇಲುಗೈ

ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿಇರುವ ಇಂಗ್ಲೆಂಡ್- ಭಾರತ ವಿರುದ್ಧದ ಮೂರನೇ ಟೆಸ್ಟ್ ನ ಮೊದಲ ದಿನದಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ. ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಟಾಸ್‌ ಗೆದ್ದು ಭಾರತ ತಂಡಕ್ಕೆ ಬ್ಯಾಟಿಂಗ್ ಅವಕಾಶ ಮಾಡಿಕೊಟ್ಟರು. ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಭಾರತ ತಂಡ ಜವಾಬ್ದಾರಿಯುತ ಆಟ ಪ್ರದರ್ಶಿಸಿ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಅವರ ಎಚ್ಚರಿಕೆಯ ಆಟದ ಫಲವಾಗಿ ಟೀಂ ಇಂಡಿಯಾ ಮೊದಲ ದಿನ ಮೇಲುಗೈ ಸಾಧಿಸಿದೆ.

 

 

ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಟಾಸ್‌ ಗೆದ್ದು ಭಾರತ ತಂಡಕ್ಕೆ ಬ್ಯಾಟಿಂಗ್ ಅವಕಾಶ ಮಾಡಿಕೊಟ್ಟರು. ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ಶಿಖರ್ ಧವನ್ ಹಾಗೂ ಕೆ. ಎಲ್. ರಾಹುಲ್ ಮೊದಲ ವಿಕೆಟ್​​ಗೆ 60 ರನ್​ಗಳ ಜೊತೆಯಾಟ ನೀಡಿದರಷ್ಟೆ.. ಆದರೆ ಕ್ರಿಸ್ ವೋಕ್ಸ್ ಬೌಲಿಂಗ್ ದಾಳಿಗೆ ಭಾರತದ 3 ಪ್ರಮುಖ ಬ್ಯಾಟ್ಸ್​ಮನ್​ಗಳು ವಿಕೆಟ್ ಒಪ್ಪಿಸಿದರು..

82 ರನ್ನುಗಳಿಗೆ ತನ್ನ ಅಗ್ರ ಮೂರು ವಿಕೆಟ್ ಗಳನ್ನೂ ಕಳೆದುಕೊಂಡು ದುಸ್ಥಿತಿಗೆ ತಲುಪಿದ್ದ ಭಾರತಕ್ಕೆ ಆಸರೆಯಾಗಿದ್ದು ನಾಯಕ ಕೊಹ್ಲಿ ಮತ್ತು ಉಪನಾಯಕ ರಹಾನೆ.. ಎಚ್ಚರಿಕೆಯ ಆಟವಾಡಿ ತಂಡಕ್ಕೆ ಚೇತರಿಕೆ ನೀಡಿದ ಕೊಹ್ಲಿ ಹಾಗೂ ರಹಾನೆ 4ನೇ ವಿಕೆಟ್​ಗೆ 159 ರನ್​ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾದರು. ತಾಳ್ಮೆಯುತ ಆಟವಾಡಿದ ಕೊಹ್ಲಿ 97 ರನ್‌(152 ಎಸೆತಗಳಲ್ಲಿ 11 ಬೌಂಡರಿ) ಗಳಿಸಿದರು.. ಅತ್ತ ಕಲಾತ್ಮಕವಾಗಿ ಬ್ಯಾಟ್ ಬೀಸಿದ ಅಜಿಂಕ್ಯಾ ರಹಾನೆ 81 ರನ್‌(131 ಎಸೆತಗಳಲ್ಲಿ 12 ಬೌಂಡರಿ) ಗಳಿಸಿದರು.. ಇಬ್ಬರೂ ಶತಕ ಗಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಶತಕ ಹೊಸ್ತಿಲಲ್ಲೇ ಎಡವಿದ ಇಬ್ಬರೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.. ಕೊಹ್ಲಿ ಬಳಿಕ ಮೈದಾನಕ್ಕಿಳಿದ ಹರ್ದಿಕ್ ಪಾಂಡ್ಯ, 58 ಎಸೆತದಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಪಾಂಡ್ಯ ವಿಕೆಟ್ ಬೀಳುತ್ತಿದ್ದಂತೆ ಮೊದಲ ದಿನದ ಆಟಕ್ಕೆ ತೆರೆ ಎಳೆಯಲಾಯಿತು. ಸದ್ಯ ಬ್ಯಾಟಿಂಗ್ ಕಾಯ್ದುಕೊಂಡಿರುವ ರಿಷಬ್ ಪಂತ್ 32 ಎಸೆತದಲ್ಲಿ 22 ರನ್ ಗಳಿಸಿದ್ದಾರೆ

ಸಂಕ್ಷಿಪ್ತ ಸ್ಕೊರ್:
ಭಾರತ ಮೊದಲ ಇನ್ನಿಂಗ್ಸ್.
87 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 307 ರನ್
ವಿರಾಟ್ ಕೊಹ್ಲಿ 97 ರನ್‌(152 ಎಸೆತಗಳಲ್ಲಿ 11 ಬೌಂಡರಿ)
ಅಜಿಂಕ್ಯಾ ರಹಾನೆ 81 ರನ್‌(131 ಎಸೆತಗಳಲ್ಲಿ 12 ಬೌಂಡರಿ)
ಶಿಖರ್ ಧವನ್(35ರನ್, 65ಎಸೆತ, 7ಬೌಂಡರಿ)
ಕೆಎಲ್ ರಾಹುಲ್(23ರನ್, 53ಎಸೆತ, 4ಬೌಂಡರಿ)
ರಿಷಬ್ ಪಂತ್ (22ರನ್, 33 ಎಸೆತ, 2ಬೌಂಡರಿ, 1 ಸಿಕ್ಸರ್)

ಇಂಗ್ಲೆಂಡ್ ಬೌಲಿಂಗ್:
ಕ್ರಿಸ್ ವೋಕ್ಸ್ 75- 3
ಆದಿಲ್ ರಶೀದ್ 46-1

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top