ಕ್ರಿಕೆಟ್ ನಲ್ಲಿ ಫೀಲ್ಡರ್ಸ್’ಗಳು ಆಗಾಗ್ಗೆ ಪಡೆಯುವ ಕೆಲ ಅದ್ಭುತ ಕ್ಯಾಚ್’ಗಳು ನೋಡುಗರ ಹುಬ್ಬೇರುಸುತ್ತವೆ. ಅಸಾಧ್ಯವೆನಿಸುವ ಕ್ಯಾಚ್ ಗಳನ್ನೂ ನಂಬೋದಕ್ಕೆ ಆಗದ ರೀತಿ ಹಿಡಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ಇದೀಗ ಅಂಥಾ ಅದ್ಭುತ ಕ್ಯಾಚುಗಳ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು ಇದಕ್ಕೆ ಸಂಭಂದಿಸಿದ ವಿಡಿಯೋವೊಂದು ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
— Mushfiqur Fan (@NaaginDance) August 27, 2018
ಸದ್ಯ ನಡೆಯುತ್ತಿರುವ ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್) ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಆಟಗಾರ ಸ್ಟುವರ್ಟ್ ಬಿನ್ನಿ ಬೌಂಡರಿ ಲೈನ್ ನಲ್ಲಿ ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. ಬಳ್ಳಾರಿ ಟಸ್ಕರ್ಸ್ ವಿರುದ್ಧದ ಪಂದ್ಯದಲ್ಲಿ ಟಿ ಪ್ರದೀಪ್ ರಭಸವಾಗಿ ಹೊಡೆದ ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸರ್ ಆಗುತ್ತದೆ ಎಂದು ಭಾವಿಸಲಾಗಿತ್ತು, ಆದರೆ ಬೌಂಡರಿ ಗೆರೆಯಲ್ಲಿ ನಿಂತಿದ್ದ ಬಿನ್ನಿ ಚಂಗನೆ ಜಿಗಿದು ಒಂದೇ ಕೈಯಲ್ಲಿ ಚೆಂಡನ್ನು ಹಿಡಿಯುವ ಮೂಲಕ ಬೆರಗಾಗಿಸಿದರು.
ಅಂದಹಾಗೆ ಈ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ವಿರುದ್ಧ ಬೆಳಗಾವಿ ಪ್ಯಾಂಥರ್ಸ್ 22 ರನ್ ಗಳಿಂದ ಜಯ ಕಂಡಿತು. ಸದ್ಯ ಕೆಪಿಎಲ್ ನಲ್ಲಿ ಅದ್ಭುತ ಆಲ್ ರೌಂಡ್ ಪ್ರದರ್ಶನ ತೋರುತ್ತಿರುವ ಸ್ಟುವರ್ಟ್ ಬಿನ್ನಿ ಆಡಿರುವ ಎರಡು ಪಂದ್ಯಗಳಲ್ಲಿ ಒಟ್ಟು ಐದು ಕಿತ್ತು 37 ರನ್ ಚಚ್ಚಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
