ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಅದೇನೆಂದರೆ ಹೆಣ್ಣಿನ ವಯಸ್ಸು ಗಂಡಿನ ವಯಸ್ಸಿಗಿಂತ ಕಡಿಮೆ ಇರಬೇಕು ,ಹಾಗಂದ್ರೆ ತೀರಾ ಮುದಕರನ್ನು ಮದುವೆ ಆಗಬೇಕು ಅಂತಲ್ಲ , ಆದರೂ ಅನೇಕ ಕಡೆ ಈ ಸಂಪ್ರದಾಯ ಇತ್ತು ಹದಿನಾರರ ಹರೆಯದ ಹುಡುಗಿಗೆ ಅರವತ್ತರ ಮುದುಕನನ್ನು ಕರೆದು ಮದುವೆ ಮಾಡಿಕೊಡಲಾಗುತಿತ್ತು ಕಾಲ ಕ್ರಮೇಣ ಈ ಸಂಪ್ರದಾಯ ಅಳಿದು ಜನರು ತುಂಬಾ ಬದಲಾಗುತ್ತಿದ್ದಾರೆ .
ಆದರೂ ಸಹ ಗಂಡಿನ ವಯಸ್ಸು ಹೆಣ್ಣಿನ ವಯಸ್ಸಿಗಿಂತ ಸ್ವಲ್ಪ ಹೆಚ್ಚಿಗೆ ಇದ್ದರೆ ಒಳ್ಳೆಯದಂತೆ ಹೇಗೆ ಅಂತ ನೀವೇ ಓದಿ .ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ವಿಚಾರಗಳು ಅಷ್ಟು ಗೊತ್ತಾಗುತ್ತಿರಲಿಲ್ಲ , ಒಂದು ವೇಳೆ ಗಂಡನಾದವನು ಓರಗೆಯವನಲ್ಲದೇ ಸ್ವಲ್ಪ ದೊಡ್ಡವನಾಗಿದ್ದರೆ ಈ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವನೆಂದು ಭಾವಿಸುತ್ತಿದ್ದರು ಅಷ್ಟೇ ಅಲ್ಲದೆ ಸಮಯ ವಯಸ್ಸಿನ ಹುಡುಗು ಬುದ್ಧಿಗಳನ್ನು ಬಿಟ್ಟು ಸಂಸಾರದ ಜವಾಬ್ದಾರಿಗಳನ್ನು ತೆಗೆದು ಕೊಂಡು ವರ್ಷಕ್ಕೆ ಒಂದು ಮಗು ನೀಡಲು ಸಜ್ಜಾಗುವನು ಎಂಬುದು ಈ ವಯಸ್ಸಿನ ಅಂತರದ ನಡುವಿನ ಮರ್ಮ .
ಸಂಶೋಧನಾಕಾರರು ಹೇಳುವ ಪ್ರಕಾರ ಹೆಣ್ಣು ಮಕ್ಕಳಲ್ಲಿ ಮೂವತ್ತು ದಾಟಿದ ನಂತರ ಲೈಂಗಿಕ ಆಸಕ್ತಿ ಬಹಳ ಹೆಚ್ಚಿಗೆ ಇರುತ್ತದೆಯಂತೆ ಹಾಗೆಯೇ ಗಂಡಸರಲ್ಲಿ ಮೂವತ್ತೈದು ದಾಟಿದ ಮೇಲೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆಯಂತೆ ಒಂದು ರೀತಿ ಜೀವನದಲ್ಲಿ ಬ್ಯಾಲೆನ್ಸ್ ಉಂಟಾಗುವುದಂತೆ .ಹೆಣ್ಣು ಮಕ್ಕಳು ಯೋಚನೆ ಮಾಡೋದು ಗಂಡುಮಕ್ಕಳಿಗಿಂತ ಐದು ಆರು ವರ್ಷ ದೊಡ್ಡವರ ರೀತಿಯಂತೆ ಅದಕ್ಕೆ ಸ್ವಲ್ಪ ವಯಸ್ಸಲ್ಲಿ ಚಿಕ್ಕವಳಿದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ .ಸಮಾನ ವಯಸ್ಸಿನ ಗಂಡು ಹೆಣ್ಣಿನಲ್ಲಿ ಅಹಂಕಾರದ ಕಾರಣದಿಂದ ಮೂವತ್ತು ಶೇಖಡಾ ಜಗಳವಾಗುತ್ತದೆಯಂತೆ ಇದನ್ನು ತಡೆಯಲು ವಯಸ್ಸಿನ ಅಂತರ ಅವರಿಬ್ಬರ ನಡುವಿನ ಬಾಂಧವ್ಯ ಹೆಚ್ಚಿಸುತ್ತದೆಯಂತೆ .ಮೊದಮೊದಲು ಹೆಚ್ಚು ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಗಂಡು ನಂತರದಲ್ಲಿ ಹೆಂಡತಿಗೆ ಮನೆಯ ಅಧಿಕಾರವನ್ನು ಬಿಟ್ಟುಕೊಡುವನು ,ವಯಸ್ಸಾದ ಮೇಲೆ ಮಕ್ಕಳ ನಿರ್ವಾಹಣೆ , ಕುಟುಂಬ ನಿರ್ವಾಹಣೆ ಮಾಡುವವಳೇ ಹೆಣ್ಣು ವಯಸ್ಸಿನ ಅಂತರ ಇಲ್ಲೂ ಕೆಲಸಕ್ಕೆ ಬರುತ್ತದೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
