fbpx
ಹೆಚ್ಚಿನ

ಪ್ರಪಂಚದಲ್ಲಿ ಅತಿ ಹೆಚ್ಚು ಬೆಲೆ ಬಾಳೋ ಈ 15 ವಸ್ತುಗಳ ಬಗ್ಗೆ ತಿಳ್ಕೊಂಡ್ರೆ ಕಣ್ಣು ಬಾಯಿ ಬಿಡ್ತೀರಾ

ಅತಿ ಹೆಚ್ಚು ಬೆಲೆ ಯಾವುದು ಅಂದ ತಕ್ಷಣ ನಮಗೆ ನೆನಪಾಗುವುದು ಚಿನ್ನ. ಅದಕ್ಕಿಂತ ಹೆಚ್ಚು ಬೆಲೆ ಬಾಳುವ ವಸ್ತುಗಳು ಕೂಡ ಈ ಜಗತ್ತಿನಲ್ಲಿ ಇವೆ. ಅಂತ ನಿಮಗೆ ಗೊತ್ತಾ ? ಇಲ್ಲಿ ಅವುಗಳನ್ನು ಹೇಳಲಾಗಿದೆ ?
ಕೇಸರಿ ಒಂದು ಗ್ರಾಂ -700 ರೂಪಾಯಿಗಳು:ಪ್ರಪಂಚದಲ್ಲಿ ಅತ್ಯಂತ ದುಬಾರಿಯಾದ ಮಸಾಲೆ ಪದಾರ್ಥ ಅಂದರೆ ಅದು ಕೇಸರಿ. 1,50,000 ಹೂವುಗಳನ್ನು ಒಟ್ಟು ಮಾಡಿ ನಲವತ್ತು ಗಂಟೆ ಕಾಲ ಕೆಲಸ ಮಾಡಬೇಕಾಗುತ್ತದೆ. ತುಂಬಾ ಕಷ್ಟ ಅಷ್ಟು ಸಂಗ್ರಹಿಸುವುದರಿಂದ. ಇದರ ಬೆಲೆ ಹೆಚ್ಚು.

ಚಿನ್ನ ಒಂದು ಗ್ರಾಂ :ಬೆಲೆ ಪ್ರತಿದಿನ ಬದಲಾಗುತ್ತದೆ. ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು ಈ ಚಿನ್ನ. ಇದು ಕಾಲಾನು  ಕಾಲದಿಂದಲೂ ಚಿನ್ನಕ್ಕೆ ಅದರದ್ದೇ ಆದ ಬೆಲೆಯಿದೆ.ರೇಡಿಯಂ ಒಂದು ಗ್ರಾಂ-3717 ರೂಪಾಯಿಗಳು:ಅತಿ ಅಪರೂಪದ ಪ್ಲ್ಯಾಟಿನಂ ಕುಟುಂಬಕ್ಕೆ ಸೇರಿದ ಒಂದು ಲೋಹ ನಿಜ ಹೇಳಬೇಕು ಎಂದರೆ ಒಂದು ಟನ್ ಭೂಮಿಗೆ 0.001 ಗ್ರಾಮ ರೇಡಿಯಂ ಮಾತ್ರ ಸಿಗುತ್ತದೆ .ಪ್ಲಾಟಿನಮ್ ಒಂದು ಗ್ರಾಂ- 3,845 ರೂಪಾಯಿಗಳು:ಬೆಳ್ಳಿಯ ಬಣ್ಣದಲ್ಲಿರುವ ಮಿನುಗುವ ಲೋಹ ಪ್ಲಾಟಿನಂ. ಇದು ಬಂಗಾರದ ಹಾಗೆ ಆಸಿಡ್ ಅಥವಾ ಬೇರೆ ಕೆಮಿಕಲ್ ಯಾವುದಕ್ಕೂ ಜಗ್ಗುವುದಿಲ್ಲ.

 

 

 

ಖಡ್ಗಾಮೃಗದ ಕೊಂಬು ಒಂದು ಗ್ರಾಂ-7,050 ರೂಪಾಯಿಗಳು:ಕೊ೦ಬಲ್ಲಿ ಸಾಕಷ್ಟು ಔಷಧದ ಗುಣ ಇದೆ. ಅದಕ್ಕೆ ಕೊಂಬಿಗೆ ಡಿಮ್ಯಾಂಡ್ ಬೆಲೆ ಜಾಸ್ತಿ .ಚೈನೀಸ್ ಔಷಧಿ ತಯಾರಕರು ಜಾಸ್ತಿ ಉಪಯೋಗಿಸುತ್ತಾರೆ. ಕೊಂಬು ಪುಡಿ ಮಾಡಿ ಜ್ವರ, ಆರ್ಥೈಟಿಸ, ಮನೋರೋಗ ದಂತಹ ಖಾಯಿಲೆಗಳಿಗೆ ಬಳಸುತ್ತಾರೆ .ಹೆರಾಯಿನ್ ಒಂದು ಗ್ರಾಂ -8331 ರೂಪಾಯಿಗಳು:ಇದು ಒಂದು ಡ್ರಗ್ ನೀವು ಇದರಿಂದ ದೂರ ಇದ್ದಷ್ಟು ಒಳ್ಳೆಯದು. ಬಳಸೋಕೆ ಯೋಗ್ಯವಲ್ಲ. ಆದರೆ ಇದರ ಬೆಲೆ ಮಾತ್ರ ಸಿಕ್ಕಾಪಟ್ಟೆ ಜಾಸ್ತಿ.

ಕೊಕೇನ್ ಒಂದು ಗ್ರಾಂ-15,125 ರೂಪಾಯಿಗಳು:ಹೆಚ್ಚು ಬಳಸುವುದರಿಂದ ಪ್ರಾಣಕ್ಕೂ ಹಾನಿ ಮಾಡಬಹುದಾದ ಭಯಾನಕ ವಸ್ತು ಕೊಕೇನ್. ಇದರ ಜಾಸ್ತಿ ಬೆಲೆಗೆ ಕಾರಣ ಇದರ ಶುದ್ಧತೆ.ಎಲ್ ಎಸ್ ಡಿ ಒಂದು ಗ್ರಾಂ-1,92,268 ರೂಪಾಯಿಗಳು:ಇದನ್ನು ಮತ್ತು ಭರಿಸುವ ಔಷಧಿಗಳಲ್ಲಿ ಕೇಳಿ ಬರುವ ಒಂದು ಹೆಸರು. ಎಲ್ ಎಸ ಡಿ ಇದರ ಸೇವನೆಯಿಂದ ಪ್ರಾಣ ನಿಧಾನವಾಗಿ ಹೋಗುತ್ತದೆ. ಇದನ್ನು  ಕೃತಕವಾಗಿ ತಯಾರಿಸುವುದಕ್ಕೆ ಬೇಕಾದ ಶ್ರಮ ಇದರ ಬೆಲೆಯನ್ನು ನೋಡೇ ನಿರ್ಧರಿಸಬಹುದು.

ಪೊಲೋನಿಯಂ ಒಂದು ಗ್ರಾಂ-2,56,358 ರುಪಾಯಿಗಳು:ಅಂತರಿಕ್ಷ ನೌಕೆಯಲ್ಲಿ ಇದನ್ನು ಬಳಸುತ್ತಾರೆ. ಹಾಗೆ ಇದು ಪರಮಾಣು ಶಕ್ತಿ ಉತ್ಪಾದನೆಗೆ ಬಳಸುತ್ತಾರಂತೆ.ಫೈನೈಟ  ಒಂದು ಗ್ರಾಂ-5,76,805 ರೂಪಾಯಿಗಳು:ಇಂಥ ಬಂದು ಹರಳು ಇದೆ ಅಂತ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಇದು ಸಿಗೋದು ಅತಿ ವಿರಳ ಕೆಂಬಣ್ಣದ ಈ ಹರಳನ್ನು ಅರವತ್ತೈದು ವರ್ಷಗಳ ಹಿಂದೆ ಕಂಡು ಹಿಡಿದಿದ್ದಾರಂತೆ. 100 ರಿಂದ 200   ಹರಳುಗಳು ಅಷ್ಟೇ ಹೆಚ್ಚಿನದಾಗಿ ಇಲ್ಲ.

 

 

 

ಲಾಫೈಟ್ ಒಂದು ಗ್ರಾಂ-5,76,805 ರೂಪಾಯಿಗಳು:ನೇರಳೆ, ಕೆಂಪು, ಬಿಳಿ ಹಾಗೂ ಗುಲಾಬಿ ಬಣ್ಣದಲ್ಲಿ ಸಿಗುವ ಈ ಹರಳು ವಜ್ರಕ್ಕಿಂತಲೂ ಅಪರೂಪದ್ದು. ಇನ್ನೂ  ಒಡವೆಗಳಲ್ಲಿ ಅಷ್ಟು ಕಾಣೋಕೆ ಸಿಗುವುದಿಲ್ಲ.ಟ್ರೇಶಿಯ೦ ಒಂದು ಗ್ರಾಂ-19,22,685 ರೂಪಾಯಿಗಳು:ಇದನ್ನು ದೀಪಗಳಲ್ಲಿ ಬಳಸಲಾಗುತ್ತದೆ. ಇನ್ನೂ ಒಂದು ಪೌಂಡ್  ತಯಾರಿಸುವುದಕ್ಕೆ ಹದಿನೈದು ಮಿಲಿಯನ್ ಡಾಲರ್ ಬೇಕಾಗುತ್ತದೆ.ವಜ್ರ ಒಂದು ಗ್ರಾ೦ -35,24,922 ರೂಪಾಯಿಗಳು:ಭೂಮಿಯ  ಮೇಲೆ ಸಿಗುವ ಅತ್ಯಂತ ಬೆಲೆ ಬಾಳುವ ಹರಳು ಎಂದರೆ ವಜ್ರ. ಅದು ಎಲ್ಲರ ಅಚ್ಚುಮೆಚ್ಚು.

ಕ್ಯಾಲಿಫೋರ್ನಿಯ೦ ಒಂದು ಗ್ರಾಂ-160 ಕೋಟಿ:ಅತ್ಯಂತ ಬೆಲೆಯುಳ್ಳ ಕೆಮಿಕಲ್ ಇನ್ನೂ ಇದನ್ನು 1950ಯಿಂದ ಈಚೆಗೆ ಒಂದೇ ಬಾರಿ ತಯಾರಿಸಲಾಗಿದೆ.ಆ೦ಟಿಮೀಟರ್  ಒಂದು ಗ್ರಾ೦-40,05,39 ಕೋಟಿ:ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಇದಕ್ಕೆ. ಮುಂದೆ ಇದನ್ನು ಅಂತರಿಕ್ಷ ನೌಕೆಯಲ್ಲಿ ಇಂಧನವಾಗಿ ಬಳಸಬಹುದು ಎಂದು ಹೇಳುತ್ತಾರೆ. ಆದರೆ ತಯಾರಿಸುವುದಕ್ಕೆ ಎಷ್ಟು ಖರ್ಚಾಗುತ್ತದೆ ಅಂದರೆ ಇಡೀ ಪ್ರಪಂಚದ ಮನುಷ್ಯರೆಲ್ಲ ಸೇರಿ ಒಂದು ವರ್ಷ ಒಂದು ಚೂರು ವಿಶ್ರಾಂತಿ ತೆಗೆದುಕೊಳ್ಳದೆ ದುಡಿಯಬೇಕು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top