fbpx
ಹೆಚ್ಚಿನ

ಈ ಗ್ರಾಮದಲ್ಲಿನ ಜನರಿಗೆ ಪೊಲೀಸರು ಎಂದರೆ ಯಾರು,ಕೋರ್ಟ್ ಕೇಸು ಅಂದ್ರೆ ಏನು ಅಂತ ಗೊತ್ತೇ ಇಲ್ಲವಂತೆ,ಯಾವುದು ಆ ಗ್ರಾಮ ಗೊತ್ತಾ

ಭಾರತ ಇತಿಹಾಸದಲ್ಲಿ ಅಷ್ಟೇ ಯಾಕೆ ಸ್ವಾತಂತ್ರ್ಯ ಬಂದಾಗಿನಿಂದ ಈ ಊರಲ್ಲಿ ಒಂದೇ ಒಂದು ಕೋರ್ಟ್ ಕೇಸು ಕೂಡ ದಾಖಲಾಗಿಲ್ಲವಂತೆ. ಪೊಲೀಸರು ಎಂದರೆ ಯಾರು ? ಎಂದು ಇವರಿಗೆ ಗೊತ್ತಿಲ್ಲವಂತೆ.
ಈ ಊರಿನ ಜನರು, ಈ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸಿದ್ದಾರೆ. ಶುದ್ಧ ಗಾಳಿ, ನೀರಿನ ಜೊತೆಗೆ, ಉಚಿತ ವೈಫೈ ಸಂಪರ್ಕವನ್ನು ಹೊಂದಿರುವ ಈ ಗ್ರಾಮ ಗುಜರಾತ್ ರಾಜ್ಯದಲ್ಲಿದೆ. ಇದು ಬರೀ ಗುಜರಾತ್ ಗೆ ಮಾತ್ರವಲ್ಲ. ಇಡೀ ಭಾರತಕ್ಕೆ ಮಾದರಿಯಾಗಿರುವ ತುಂಬಾ ವಿಶೇಷವಾದ ಗ್ರಾಮವಿದು.ಚಿಕ್ಕ ಚೊಕ್ಕದಾದ ಗ್ರಾಮವಿದು. ಈ ಊರಿನಲ್ಲಿ 70 ವರ್ಷಗಳಿಂದ ಪೊಲೀಸ್ ಕೇಸು ದಾಖಲಾಗಿಲ್ಲವಂತೆ. ಅದೊಂದು ಆದರ್ಶ ಗ್ರಾಮ ಎನಿಸಿಕೊಂಡಿದೆ.ಆ ಪುಟ್ಟ ಊರಿನಲ್ಲಿ ಕಳೆದ 20 ವರ್ಷದಿಂದ ಒಂದೇ ಒಂದು ಎಫ್ಐಆರ್ ಕೇಸ್ ಕೂಡಾ ದಾಖಲಾಗಿಲ್ಲ. ವರ್ಷಪೂರ್ತಿ ಮಿರಮಿರ ಎನ್ನುವ ನ್ಯಾಯಬೆಲೆ ಅಂಗಡಿಗೆ ಪಡಿತರ ಬಂದಾಗ ಊರಿನ ಮುಖ್ಯಸ್ಥರು ಮೈಕ್ನಲ್ಲಿ ಕೂಗಿ ಹೇಳುತ್ತಾರೆ.
ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಉದಾಹರಣೆಯಾಗಿರುವ ಈ ಗ್ರಾಮದ ಹೆಸರು ಹಾಂಡಿಯಾ ಗುಜರಾತ್ ನ ವೀರಪುರ ತಾಲೂಕಿನಲ್ಲಿರುವ ಈ ಹಳ್ಳಿ ಯಾವುದೇ ವಿಶೇಷ ಅನುದಾನ ಪಡೆಯದೇ, ಚಾಲ್ತಿಯಲ್ಲಿರುವ ಸರ್ಕಾರದ ಯೋಜನೆಯ ಅನುದಾನವನ್ನು ಬಳಸಿಕೊಂಡು ಮಾದರಿಯಾಗಿದೆ.

 

 

 

ಈ ಊರಿಗೆ ನಿತ್ಯ ಇತರೆ ಊರಿನ ಜಿಲ್ಲೆಯ ಜನರ ಜೊತೆಗೆ ಬೇರೆ ರಾಜ್ಯದವರು ಆಗಮಿಸಿ ಅಭಿವೃದ್ಧಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಹಾಂಡಿಯಾ ಗುಜರಾತ್ ರಾಜಧಾನಿ, ಗಾಂಧಿನಗರದಿಂದ 120 ಕಿಲೋ ಮೀಟರ್ ದೂರದಲ್ಲಿದೆ.
ಈ ಗ್ರಾಮದಲ್ಲಿ ಧ್ವನಿ ವರ್ಧಕಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ 6.30 ರಿಂದ 6. 45 ನಿಮಿಷದವರೆಗೆ ಭಜನೆ ,ಕೀರ್ತನೆ, ದೇಶ ಭಕ್ತಿಗೀತೆ ಮೊಳಗುತ್ತದೆ ಆಧಾರ್ ನೊಂದಣಿ, ಉಜ್ವಲ, ಉಜಾಲಾ ಸೇರಿದಂತೆ ಸರ್ಕಾರದ ಯೋಜನೆಗಳ ಅಂತಿಮ ಗಡುವಿನ ಸೂಚನೆ ಸಾರ್ವಜನಿಕ ಹಿತದೃಷ್ಟಿಯ ಸೂಚನೆ ನೀಡಲಾಗುತ್ತದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯದಿದ್ದಲ್ಲಿ ಅಂತವರಿಗೆ ಬೇಗ ಬಂದು ಪಡೆಯುವಂತೆ ಹೇಳಲಾಗುತ್ತದೆ. ಎಲ್ಲದಕ್ಕೂ ವಿಶೇಷವೆಂದರೆ ಸರಪಂಚ ಜಯೇಂದ್ರಬಾಯಿ ಹಾಗೂ ಧ್ವನಿವರ್ಧಕ ಸಿಬ್ಬಂದಿ ತಮ್ಮ ಫೋನಿನ ಮೂಲಕ ದೇಶದಲ್ಲಿ ಎಲ್ಲಿ ಬೇಕಾದರೂ ಕುಳಿತು ಘೋಷಣೆ ಮಾಡುವಂತೆ ತಂತ್ರಜ್ಞಾನ ಅಳವಡಿಸಲಾಗಿದೆ.

ಉಚಿತ ಶುದ್ಧ ನೀರು:ಈ ಊರಿನಲ್ಲಿ ಉಚಿತ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ಈ ಮೊದಲು ಐದು ರೂಪಾಯಿ ನೀಡಿ 20 ಲೀಟರ್ ನೀರನ್ನು ಪಡೆಯುವ ಜನರು , ಆದರೆ ಹಾಂಡಿಯ ಅಕ್ಕ ಪಕ್ಕದ ಊರಿನಲ್ಲಿ ನೀರಿಗೆ ತತ್ವಾರ ವಾದಾಗ ಅಲ್ಲಿನ ಅನೇಕರು ಇಲ್ಲಿಗೆ ಬರುತ್ತಾರೆ. ಹೀಗೆ ಬಂದವರು ಸರಪಂಚ್ ಮನೆಗೆ ಆಗಮಿಸಿ ವಿಶೇಷ ಅನುಮತಿ ಪಡೆದು ನೀರು ಕೊಂಡೊಯ್ಯುತ್ತಿದ್ದರು. ಇದೀಗ ಉಚಿತವಾಗಿ ನೀರನ್ನು ನೀಡಲಾಗುತ್ತಿದೆ.
ಈ ಗ್ರಾಮದಲ್ಲಿ 255 ಮನೆಗಳಿದ್ದು ಸುಮಾರು ಒಂದು ಸಾವಿರ ಜನರು ವಾಸವಿದ್ದಾರೆ. ಇಷ್ಟಾದರೂ ಕಳೆದ 20 ವರ್ಷದಿಂದ ಒಂದೇ ಒಂದು ಎಫ್ಐಆರ್ ಕೂಡ ದಾಖಲಾಗಿಲ್ಲ. ಇಂದಿನ ತಲೆಮಾರಿನ ಜನರೆಲ್ಲ ಬಹುತೇಕ ಸಹಬಾಳ್ವೆಯಲ್ಲಿ ಇದ್ದಾರೆ.ಬಿಸಿರಕ್ತದ ಯುವಕರಲ್ಲಿ ಆಗಾಗ ಸಣ್ಣಪುಟ್ಟ ಮನಸ್ತಾಪಗಳು ಆದರೂ ಊರಿನ ನಾಲ್ಕು ಹಿರಿಯರು ಅವರ ಮನೆಗೆ ತೆರಳಿ ಅಥವಾ ಪಂಚಾಯಿತಿ ಕಟ್ಟೆಯಲ್ಲಿ ಕುಳಿತು ಪರಿಹಾರ ಸೂಚಿಸುತ್ತಾರೆ. ತಪ್ಪು ಮಾಡಿದವರಿಗೆ ಬುದ್ಧಿ ಹೇಳುತ್ತಾರೆ. ಅಷ್ಟಕ್ಕೆ ಎಲ್ಲವೂ ಶಾಂತವಾಗುತ್ತದೆ ಎನ್ನುತ್ತಾರೆ ಜಯೇಂದ್ರ ಭಾಯಿಯವರು.

 

 

 

ಗ್ರಾಮಕ್ಕೆ ಅವಶ್ಯಕವಾಗಿದ್ದ ಸಮುದಾಯ ಘೋಷಣೆ, ವ್ಯವಸ್ಥೆ, ಸಿಸಿಟಿವಿ ಹಾಗೂ ವೈಫೈ ವ್ಯವಸ್ಥೆಗೆ ಸರ್ಕಾರದ ಯಾವುದೇ ಯೋಜನೆಯಲ್ಲಿ ಹಣ ನೀಡುವ ಅವಕಾಶ ಇರಲಿಲ್ಲ . ಇದಕ್ಕಾಗಿ ಊರಿನಲ್ಲಿ ಸಭೆ ನಡೆಸಿದಾಗ ಎಲ್ಲರೂ ತಾವೇ ಹಣ ನೀಡುವ ಮನಸ್ಸು ಮಾಡಿದರು. ಒಂಬತ್ತು ಲಕ್ಷ ರೂ ಸಂಗ್ರಹಿಸಿ 58 ಸಿಸಿಟಿವಿ ಕ್ಯಾಮೆರಾ, ಧ್ವನಿವರ್ಧಕ ಹಾಗೂ ವೈಫೈ ಅಳವಡಿಸಲಾಗಿದೆ ಗ್ರಾಮದ ಎಲ್ಲಾ ರಸ್ತೆಗಳಲ್ಲೂ ಸಿಮೆಂಟ್ ಬ್ಲಾಕ್ ಅಳವಡಿಸಲಾಗಿದ್ದು. ಬೀದಿಗಳು ಎಲ್. ಇ. ಡಿ. ಬೆಳಕಿನಲ್ಲಿ ಕಂಗೊಳಿಸುತ್ತವೆ. ಶೇಕಡಾ ನೂರರಷ್ಟು ಶೌಚಗೃಹ ಹಾಗೂ ಗ್ಯಾಸ್ ಸಂಪರ್ಕವಿದೆ .ಪಾರ್ಕ್ ಬಳಿ ಇರುವ ಬಯಲು ರಂಗಮಂದಿರದಲ್ಲಿ ಪ್ರತಿ ಶನಿವಾರ ಪ್ರೇರಣಾದಾಯಿ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಪಡೆದಿಲ್ಲ. 14 ನೇ ಹಣಕಾಸು ಆಯೋಗದ ಅನುದಾನ ಜಿಲ್ಲಾಧಿಕಾರಿಗಳ ಅನುದಾನ, ಸ್ವಚ್ಛಭಾರತ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿರುವ ಯೋಜನೆಗಳನ್ನೇ ಪರಿಣಾಮಕಾರಿಯಾಗಿ ಇಲ್ಲಿ ಬಳಸಿಕೊಳ್ಳಲಾಗಿ ಇದೊಂದು ಆದರ್ಶ ಗ್ರಾಮ ಎನಿಸಿಕೊಂಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top