fbpx
ಸಮಾಚಾರ

ಮಾಡೆಲ್​ ಆಗಬೇಕು ಎಂದು ಸಾವಿರ ಕನಸು ಹೊತ್ತು ಮಹಾನಗರಿಗೆ ಬಂದಾಕೆ ಕೊನೆಗೆ ಸಿಕ್ಕಿದು ಹೇಗೆ ಹಾಗೂ ಎಲ್ಲಿ ಗೊತ್ತಾ ,ಗೊತ್ತಾದ್ರೆ ಬೆಚ್ಚಿಬೀಳ್ತಿರಾ

ಇಪ್ಪತ್ತು ವರ್ಷದ ರಾಜಸ್ತಾನ ಮೂಲದ ಯುವತಿ ಮಾಡೆಲ್​ ಕ್ಷೇತ್ರದಲ್ಲಿ ಸಾಧನೆ ಮಾಡಲು ಮಹಾನಗರಿ ಮುಂಬೈಗೆ ಬಂದಿಳಿದಿದ್ದಳು,ಆಕೆಯ ಹೆಸರು ಮಾನ್ಸಿ ದೀಕ್ಷಿತ್ .ಈ ಹುಡುಗಿ ಶವವಾಗಿ ಸಿಕ್ಕ ಘಟನೆ ಬಂಗುರ್​ ನಗರದಲ್ಲಿ ನಡೆದಿದೆ.

ನಡೆದಿದ್ದಾದ್ರೂ ಏನು :ಸೋಮವಾರ ಆಕೆ ಭೇಟಿ ಮಾಡಲು ತೆರಳಿದ್ದ 20 ವರ್ಷದ ವಿದ್ಯಾರ್ಥಿ ಮುಜಮ್ಮಿಲ್ ಸಯ್ಯದ್ ಎಂಬಾತನನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ. ಇಬ್ಬರ ನಡುವೆಯೂ ವಾಗ್ವಾದ ನಡೆದಿದ್ದು, ಬಳಿಕ ಆತ ಮಾನ್ಸಿಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಸಯ್ಯದ್ ಮಾನ್ಸಿ ದೀಕ್ಷಿತ್ಗೆ ಇಂಟರ್​ನೆಟ್​ ಮೂಲಕ ಪರಿಚಿತವಾಗಿದ್ದಾನೆ. ಕೆಲ ದಿನಗಳ ನಂತರ ಇಬ್ಬರೂ ಸಯ್ಯದ್​​ ವಾಸಿಸುತ್ತಿದ್ದ ಅಂಧೇರಿಯ ಅಪಾರ್ಟ್​ಮೆಂಟ್​ನಲ್ಲಿ ಭೇಟಿಯಾಗಿದ್ದರು. ಸೋಮವಾರ ಮಧ್ಯಾಹ್ನದ ಬಳಿಕ ಈ ಭೇಟಿ ನಡೆದಿದೆ ಎನ್ನಲಾಗಿದ್ದು, ಇಲ್ಲಿ ಕೆಲ ಮಾತಿನ ಚಕಮಕಿ ನಡೆದಿದೆ. ಬಳಿಕ ಗಟ್ಟಿಯಾದ ವಸ್ತುವೊಂದರಿಂದ ಮಾನ್ಸಿಯನ್ನು ಸಯ್ಯದ್ ಹೊಡೆದಿದ್ದಾನೆ ಅದರ ಪರಿಣಾಮ ಆಕೆ ಅಲ್ಲೇ ಸಾವನ್ನಪ್ಪಿದ್ದಾಳೆ.

 

 

 

ನಂತರ ಆಕೆಯ ಶವವನ್ನು ತುಂಡರಿಸಿ, ಸೂಟ್​ಕೇಸಿಗೆ ತುಂಬಿಸಿದ್ದಾನೆ. ಆ ಬಳಿಕ ಕ್ಯಾಬ್ ಒಂದನ್ನು ಬುಕ್ ಮಾಡಿ ಮಲಾಡ್ ಪ್ರದೇಶಕ್ಕೆ ತೆರಳಿ ಅಲ್ಲಿ ಸೂಟ್​ಕೇಸನ್ನು ಎಸೆದಿದ್ದಾನೆ. ಇವೆಲ್ಲವೂ ಮಧ್ಯಾಹ್ನ 3ರಿಂದ 4 ಗಂಟೆ ನಡುವೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಸಯ್ಯದ್​ನ ಕೃತ್ಯವನ್ನು ಕ್ಯಾಬ್ ಡ್ರೈವರ್​ ಓರ್ವಪೊಲೀಸರಿಗೆ ತಿಳಿಸಿದ್ದಾನೆ. ಇದರಿಂದ ಜಾಗೃತರಾದ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.ಈಗಾಗಲೇ ಸಯ್ಯದ್​ನನ್ನು ಬಂಧಿಸಲಾಗಿದ್ದು, ಆತ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾನ್ಸಿ ದೀಕ್ಷಿತ್​ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top