fbpx
ಭವಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತರಹದ ಬಟ್ಟೆ ಧರಿಸುವುದರಿಂದ ನಿಮಗೆ ಅಷ್ಟಕಷ್ಟ ದರಿದ್ರ ಕಾಡುತ್ತಂತೆ

ಬಟ್ಟೆ ಮಾನ ಮುಚ್ಚುವುದರ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಒಬ್ಬ ವ್ಯಕ್ತಿಯ ನಡವಳಿಕೆ, ಸ್ವಭಾವ ,ಆತ್ಮವಿಶ್ವಾಸ ಎಲ್ಲವನ್ನೂ ಆತ ಧರಿಸುವ ಬಟ್ಟೆಯಿಂದ ಸುಲಭವಾಗಿ ಹೇಳಬಹುದಾಗಿದೆ. ಕಾಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಬರುವ ಬಟ್ಟೆ ಕೂಡ ಬದಲಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ಭಾರತೀಯರು ಧರಿಸುವ ಬಟ್ಟೆಯಲ್ಲಿ ಸಾಕಷ್ಟು ಬದಲಾವಣೆ ನೋಡಬಹುದಾಗಿದೆ. ಅಲ್ಲಲ್ಲಿ ಹರಿದ ಜೀನ್ಸ್ ಸೇರಿದಂತೆ ಭಿನ್ನ ಭಿನ್ನ ಫ್ಯಾಷನ್ ಬಟ್ಟೆಗಳನ್ನು ನೋಡಬಹುದಾಗಿದೆ . ಆದರೆ ಹಿಂದೂ ಶಾಸ್ತ್ರದ ಪ್ರಕಾರ ಕೆಲವೊಂದು ಬಟ್ಟೆ ನಿಮಗೆ ಶುಭವಲ್ಲ .

 

 

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹರಿದ ಬಟ್ಟೆ ಹಾಕಿಕೊಳ್ಳುವುದರಿಂದ ದೇಹದಲ್ಲಿರುವ ಶಕ್ತಿ ನಷ್ಟವಾಗುತ್ತದೆ. ಇದು ಮನಸ್ಸು ಹಾಗೂ ದೇಹವನ್ನು ದುರ್ಬಲಗೊಳಿಸಿ ಕೆಲವು ರೋಗಗಳಿಗೆ ಕಾರಣವಾಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನನ್ನು ಪ್ರೇಮಾ, ರೋಮಾಂಚನ ಮತ್ತು ಸಂತೋಷ ನೀಡುವ ಗ್ರಹವೆಂದು ಪರಿಗಣಿಸಲಾಗಿದೆ .

ಮನರಂಜನೆ ಹಾಗೂ ಐಷಾರಾಮಿ ಗ್ರಹವೆಂದು ಚಂದ್ರನನ್ನು ಕರೆಯಲಾಗುತ್ತದೆ. ಹರಿದ ಬಟ್ಟೆ ಧರಿಸುವುದರಿಂದ ಚಂದ್ರಗ್ರಹ ದುರ್ಬಲವಾಗುತ್ತದೆ.ಫೆಂಗ್ ಶುಯ್ ವಾಸ್ತು ಶಾಸ್ತ್ರದ ಪ್ರಕಾರ ಹರಿದ ಹಾಗೂ ಹಳೆ ಬಟ್ಟೆ ದುಃಖವನ್ನು ನೀಡುತ್ತದೆಯಂತೆ. ಹರಿದ ಜೀನ್ಸ್ ಮತ್ತು ಶರ್ಟ್ ಧರಿಸುವುದರಿಂದ ಬಡತನ ನಮ್ಮನ್ನು ಅರಸಿ ಬರುತ್ತದೆಯಂತೆ. ಹರಿದ ಬಟ್ಟೆ ಆಕರ್ಷಕವಾಗಿದ್ದು ಸುಂದರವಾಗಿ ಕಾಣುತ್ತಿದ್ದರೂ ಅದನ್ನು ಖರೀದಿ ಮಾಡಬೇಡಿ.

ಹರಿದ ಬಟ್ಟೆ ಮನೆಯಿಂದ ಹೊರಗೆ ನಿಷಿದ್ಧ, ಮನೆಯಲ್ಲಿ ಇದನ್ನು ಧರಿಸಿದರೆ ಸಕಾರಾತ್ಮಕ ಶಕ್ತಿ ನಾಶವಾಗಿ ನಕಾರಾತ್ಮಕ ಶಕ್ತಿ ಮನೆಯ ಒಳಗೆ ಪ್ರವೇಶಕ್ಕೆ ಕಾರಣವಾಗುತ್ತದೆ.
ಬುಧವಾರ, ಗುರುವಾರ ಹಾಗೂ ಶುಕ್ರವಾರ ಮಾತ್ರ ಹೊಸ ಬಟ್ಟೆ ಧರಿಸಬೇಕು. ಒಣಗಿದ ಬಟ್ಟೆಯನ್ನು ಎಂದು ರಾತ್ರಿಯ ಸಮಯದಲ್ಲಿ ಹೊರಗೆ ಬಿಡಬಾರದು. ನಕಾರಾತ್ಮಕ ಶಕ್ತಿ ಬಟ್ಟೆಯ ಮೂಲಕ ಮನೆ ಮತ್ತು ಮನಸ್ಸನ್ನು ಪ್ರವೇಶ ಮಾಡುತ್ತದೆ. ಶನಿವಾರ ಎಂದಿಗೂ ಸಹ ಹೊಸ ಬಟ್ಟೆಯನ್ನು ಧರಿಸಬೇಡಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top