fbpx
ಭವಿಷ್ಯ

18 ಅಕ್ಟೋಬರ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಗುರುವಾರ, ೧೮ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೩೮
ಸೂರ್ಯಾಸ್ತ : ೧೮:೦೮
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಶುಕ್ಲ ಪಕ್ಷ
ತಿಥಿ : ನವಮೀ – ೧೫:೨೮ ವರೆಗೆ
ನಕ್ಷತ್ರ : ಶ್ರವಣ – ೨೪:೩೪+ ವರೆಗೆ
ಯೋಗ : ಧೃತಿ – ೦೯:೪೮ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ: ೧೨:೦೦ – ೧೨:೪೬
ಅಮೃತಕಾಲ : ೧೨:೫೦ – ೧೪:೩೮
ರಾಹು ಕಾಲ:೧೩:೪೯ – ೧೫:೧೫
ಗುಳಿಕ ಕಾಲ:೦೯:೩೦ – ೧೦:೫೭
ಯಮಗಂಡ:೦೦೬:೩೮ – ೦೮:೦೪

ಹಿಡಿದ ಕಾರ್ಯ ಮುಗಿಸುವಂತಹ ಛಲಗಾರಿಕೆ ನಿಮ್ಮಲ್ಲಿದೆ. ಇದು ನಿಮ್ಮ ಯಶಸ್ಸಿನ ಗುಟ್ಟು. ಮಾತನಾಡುವ ಮೊದಲು ಅದರ ಪರಿಣಾಮದ ಬಗ್ಗೆ ಗಮನವಿರಲಿ. ಮತ್ತೊಬ್ಬರ ಮೇಲೆ ಛಲ ಅಥವಾ ಅಧಿಕಾರ ಸ್ಥಾಪಿಸಲು ಹೋಗಬೇಡಿ. ಇದರಿಂದ ಧನ ಮತ್ತು ಮಾನಗಳನ್ನು ಕಳೆದುಕೊಳ್ಳಬೇಕಾಗುವುದು.

ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ. ಇದರಿಂದ ಆಗಬೇಕಾದ ಹಾಗೂ ಆಗಬೇಕಾಗಿರುವ ಕೆಲಸ ಸುಲಭವಾಗಿ ನೆರವೇರಲಿದೆ. ಚಾಡಿ ಮಾತುಗಳಿಗೆ ಕಿವಿ ಕೊಡಬೇಡಿ. ಹಿರಿ ಕಿರಿಯರೊಡನೆ ಸ್ನೇಹಭಾವದಿಂದ ವರ್ತಿಸಿ. ಮಕ್ಕಳ ಖರ್ಚು ವೆಚ್ಚಗಳು ಜಾಸ್ತಿ ಆಗುವವು. ಅನವಶ್ಯಕ ವಸ್ತುಗಳನ್ನು ಖರೀದಿಸಬೇಡಿ.

ಹಿಂದಿನ ದುಡುಕುತನ, ಮುಂಗೋಪಗಳೆಲ್ಲ ಕಡಿಮೆಯಾಗಿ ಬಂಧುಗಳೊಡನೆ ಬೆರೆಯುವಿರಿ. ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯಗಳು ಯಶಸ್ವಿಯಾಗುವವು. ಸೋದರರಲ್ಲಿ ಒಗ್ಗಟ್ಟು ಮೂಡಿ ಕುಟುಂಬದ ಕಷ್ಟ ಸುಖಗಳಲ್ಲಿ ಸಮಪಾಲು ಹಂಚಿಕೊಳ್ಳುವಿರಿ.

ನಿಮಗೆ ತಿಳಿಯದಂತೆ ಬೆಳೆದ ಅಹಂಕಾರ ಬೇರೆಯವರಿಗೆ ಇರುಸು ಮುರುಸು ಉಂಟು ಮಾಡಲಿದೆ. ಇದರಿಂದಾಗಿ ಆತ್ಮ ಗೌರವಕ್ಕೆ ಧಕ್ಕೆಯಾಗುವುದು. ಪ್ರತಿ ಕೆಲಸಕ್ಕೂ ಮುನ್ನುಗ್ಗಿ ಹೋಗಬೇಡಿ.

 

ಮನೆಯಲ್ಲಿ ಸಣ್ಣ ವಿಚಾರವೊಂದು ಭಾರಿ ಸಂಚಲನ ಮೂಡಿಸಲಿದೆ. ಇದರಿಂದ ಕುಟುಂಬ ಸದಸ್ಯರಲ್ಲಿ ತೀವ್ರ ಭಿನ್ನಾಭಿಪ್ರಾಯ ಹಾಗೂ ಗೊಂದಲಗಳು ಉಂಟಾಗುವವು. ಹಾಗೆಂದ ಮಾತ್ರಕ್ಕೆ ಗಾಬರಿಯಾಗದೆ, ಯಾವುದೇ ಉದ್ವೇಗ, ಆವೇಶಕ್ಕೆ ಒಳಗಾಗದೆ ಸಂಯಮದಿಂದ ವರ್ತಿಸಿ. ಹಣಕಾಸಿನ ಸ್ಥಿತಿ ಸಾಕಷ್ಟು ಸುಧಾರಿಸಲಿದೆ.

 

ಸಂಯಮದಿಂದ ವರ್ತಿಸಿದರೆ ಪೂರ್ತಿ ನೆಮ್ಮದಿ ಜೀವನ ಕಂಡುಕೊಳ್ಳುವಿರಿ. ಕುಲದೇವತಾ ಅನುಗ್ರಹ ವಿಶೇಷವಾಗಿರುವುದರಿಂದ ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ. ಮಡದಿ ಮಕ್ಕಳು ಸಂತಸದಿಂದಿರುವರು. ಕಾರಣವಿಲ್ಲದೆ ಮತ್ತೊಬ್ಬರನ್ನು ಅವಮಾನಿಸಬೇಡಿ. ಮಾತಿನಲ್ಲಿ ಹಿಡಿತವಿರಲಿ.

 

ಸಕಲ ಅಭಯಗಳನ್ನು ಒದಗಿಸಿ ಚೈತನ್ಯಕ್ಕೆ ಕಾರಣವಾಗುವಂತಹ ಮಾತಾ ದುರ್ಗಾದೇವಿ ಪ್ರಾರ್ಥನೆ ಮಾಡಿ. ಸಾಧ್ಯವಾದರೆ ದೇವಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿ.

 

ಸದ್ಯದ ಪರಿಸ್ಥಿತಿಯಲ್ಲಿ ಹಗ್ಗ ಕೂಡ ಹಾವೆಂದು ಭ್ರಮಿಸಿ ಭಯ ಪಡುವ ಕ್ಷ ಣಗಳಾಗಿವೆ. ಅದಕ್ಕೆ ಈಗಿರುವ ಆರ್ಥಿಕ ಸಂಕಷ್ಟದ ದಿನಗಳೇ ಕಾರಣ. ಯಾವುದೇ ಬೃಹತ್‌ ಪ್ರಮಾಣದ ಯೋಜನೆಗಳನ್ನು ಹಾಕಿಕೊಳ್ಳುವುದು ಸೂಕ್ತವಲ್ಲ.

 

ಈಗಾಗಲೆ ಮಾಡಿರುವ ಸಾಲ ಬೆಟ್ಟದಷ್ಟಿದೆ. ಸಾಲದಲ್ಲಿ ಸಾಲ ಎಂದು ಪುನಃ ಭಂಡ ಧೈರ್ಯದಿಂದ ಸಾಲ ಮಾಡದಿರಿ. ನಿಮ್ಮ ಮೇಲಿನ ಅಭಿಮಾನಕ್ಕೆ ಯಾರಾದರೂ ಸಾಲ ಕೊಡಲು ತಯಾರಿರುತ್ತಾರೆ. ಆದರೆ ಸಾಲ ತೀರುಸುವ ದಾರಿ ತಿಳಿದುಕೊಳ್ಳಿ.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎನ್ನುವ ಗಾದೆ ಮಾತನ್ನು ನೀವು ನೆನಪಿಸಿಕೊಳ್ಳಿ. ನೀವು ನೋಡುವ ಅಥವಾ ಕೇಳುವ ವಿಚಾರಗಳು ಮನಸ್ಸಿಗೆ ಘಾಸಿ ಉಂಟು ಮಾಡುವವು. ಆದಾಗ್ಯೂ ಅವನ್ನು ತಾಳ್ಮೆಯಿಂದ ಪರೀಕ್ಷಿಸಿ.

 

 

ಯಾವುದೇ ರೀತಿಯ ಒತ್ತಡಗಳು ಬಂದರೂ ಜಾಣತನದಿಂದ ಅದನ್ನು ನಿಭಾಯಿಸಿ. ಇದರಿಂದ ನಿಮಗೆ ಉತ್ತಮ ಮಾರ್ಗ ಗೋಚರಿಸುವುದು. ಗುರು ಹಿರಿಯರ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಆನೆ ನಡೆದದ್ದೇ ದಾರಿ ಎನ್ನುವಂತೆ ನೀವು ಯೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ದಾರಿ ವಿಶಿಷ್ಟವಾಗಿರುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ಅಭಿವೃದ್ಧಿಯಾಗುವುದು ಹಾಗೂ ಪರರಿಗೆ ಅಸೂಯೆಯನ್ನುಂಟು ಮಾಡುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top