fbpx
ಹೆಚ್ಚಿನ

ಈ ಗಿಡ ನಿಮ್ಮ ಮನೆಯಲ್ಲಿ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಲಕ್ಷ್ಮಿ ತಾಂಡವವಾಡಿ ನೀವು ಕುಭೇರರಾಗುವುದು ಖಂಡಿತಾ ಇದನ್ನು ಹೇಳಿದು ಸಾಕ್ಷಾತ್ ಶ್ರೀ ರಾಮನೇ .

ಈ ಗಿಡ ನಿಮ್ಮ ಮನೆಯಲ್ಲಿ ಇದ್ದರೆ ಅವರೇ ಕುಭೇರರು ಇದನ್ನು ಸಾಕ್ಷಾತ್ ಶ್ರೀ ರಾಮನು ಹೇಳಿದ್ದಾನೆ.ಗೋರಂಟಿ ಈ ಗಿಡ ಮನೆಯೊಳಗೆ ಇದ್ದರೆ ಸಾಕು ಅದು ಕುಭೇರರಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳುತ್ತಿದ್ದಾರೆ. ಹಬ್ಬ, ಹರಿ ದಿನಗಳಲ್ಲಿ ಮನೆಯ ಹೆಂಗಳೆಯರು ಗೋರಂಟಿಯನ್ನು ತಂದು ಶುಚಿ ,ಶುಭ್ರಗೊಳಿಸಿ ನುಣ್ಣಗೆ ರುಬ್ಬಿ, ಕೈಗಳಿಗೆ ಕಾಲುಗಳಿಗೆ ಹಚ್ಚಿಕೊಂಡು ಆನಂದಿಸುವುದನ್ನು ನಾವು ನೋಡುತ್ತಾ ಇರುತ್ತೇವೆ. ಹಬ್ಬದ ಆಚರಣೆ ಅಂದರೆ ಗೋರಂಟಿಯಿಂದಲೇ ಆರಂಭವಾಗುತ್ತದೆ.

 

 

 

ಗೋರಂಟಿಯಲ್ಲಿ ಸಹಜ ರಸಾಯನಗಳೊಂದಿಗೆ ಇದರಲ್ಲಿ ರುಸಿನ ಎಂಬ ಒಂದು ರಸಾಯನ ಪದಾರ್ಥವು ಬಣ್ಣವನ್ನು ಕೆಂಪಾಗಿ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇತ್ತೀಚೆಗೆ ಗೋರಂಟಿಯ ಬದಲಾಗಿ ಕೋನಗಳನ್ನು ಉಪಯೋಗಿಸುತ್ತಿದ್ದಾರೆ. ಆ ಕೋನಗಳಲ್ಲಿ ಕೃತ್ತಿಮವಾದಂತಹ ರಸಾಯನಗಳು ಇರುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ.ಮುಖ್ಯವಾಗಿ ಆಷಾಢ ಮಾಸ ಬಂತು ಎಂದರೆ ಸಾಕು ಸಡಗರವೇ ಸಡಗರ ಗೋರಂಟಿಗೆ ಹಬ್ಬನೇ ಹಬ್ಬ. ಹೆಚ್ಚಾಗಿ ಆಷಾಡ ಮಾಸದಲ್ಲಿ ಮಳೆ ಬೀಳುವುದರಿಂದ ಕಾಲು , ಕೈಗಳು ಸದಾ ಓದ್ದೆಯಾಗಿರುತ್ತವೆ. ಮನೆಯ ಹಿರಿಯರು ಹೇಳುವುದೇನೆಂದರೆ ಆಷಾಢ ಮಾಸ ಬಂತು ಅಂದರೆ ಸಾಕು ಪ್ರತಿಯೊಬ ಹೆಣ್ಣು ಮಗಳು ಗೋರಂಟಿಯನ್ನು ಹಚ್ಚಿಕೊಳ್ಳಬೇಕು ಎಂದು. ಇದರಿಂದ ಚರ್ಮ ವ್ಯಾಧಿಗಳು ದೂರ ಸರಿಯುತ್ತವೆ ಚರ್ಮ ವ್ಯಾಧಿಗಳು ಇದ್ದರು ಕೂಡ ಅವುಗಳ ಜೊತೆ ಹೋರಾಟ ಮಾಡಲು ಗೋರಂಟಿ ಉಪಯೋಗವಾಗುತ್ತದೆ. ಹೀಗಾಗಿ ಯಾವುದೇ ಸೋಂಕುಗಳು ಬರದಂತೆ ಇದು ಕಾಪಾಡುತ್ತದೆ. ಅದಕ್ಕೆ ಹಿರಿಯರು ಇದನ್ನು ಒಂದು ಸಂಪ್ರದಾಯವಾಗಿ ಆಷಾಢ ಮಾಸದಲ್ಲಿ ತಪ್ಪದೇ ಗೋರಂಟಿಯನ್ನು ಹಚ್ಚಿಕೊಳ್ಳಬೇಕು ಎನ್ನುವ ಸಂಸ್ಕೃತಿಯನ್ನು ಕಟ್ಟಿ ಕೊಟ್ಟಿದ್ದಾರೆ.

ಹಿಂದಕ್ಕೆ ಹೋಗಿ ಐತಿಹ್ಯದ ಕಡೆಗೆ ತೆರಳಿದಾಗ ಶ್ರೀರಾಮಚಂದ್ರನ ಪಟ್ಟಾಭಿಷೇಕದ ನಂತರದ ಮಾತಿದು ಒಮ್ಮೆ ಸೀತಾ ದೇವಿ ಶ್ರೀರಾಮಚಂದ್ರನ ಬಳಿ ತನ್ನ ಹಿಂದಿನ ಕಥೆಯನ್ನು ಹೇಳುತ್ತಿದ್ದಳಂತೆ. ಆಶೋಕ ವನದಲ್ಲಿ ತಾನು ಬಂಧಿತಳಾಗಿರುವಾಗ ತನ್ನ ನೋವನ್ನು ಮನಸ್ಸಿನ ದುಗುಡವನ್ನು ಗೋರಂಟಿಯ ಗಿಡಕ್ಕೆ ಹೇಳಿಕೊಂಡು ಉಪಶಮನ ಹೊಂದುತ್ತಿದ್ದಳು ತನ್ನ ದುಃಖವನ್ನು ತೋಡಿಕೊಳ್ಳುತ್ತಿದ್ದೇ ಎಂದು ಹೇಳಿದಳಂತೆ. ಆಗ ಶ್ರೀ ರಾಮನು ಸಂತೋಷ ಬರಿತನಾಗಿ ಹೀಗೆ ಹೇಳಿದನಂತೆ. ನಿನ್ನ ಕಷ್ಟಗಳಿಗೆ ಸಂತೈಸಿದ ಆ ಗೋರಂಟಿ ಗಿಡ ಎಲ್ಲಿರುತ್ತದೆಯೋ ಅಲ್ಲಿ ಅವರಿಗೆ ಸುಖ, ಸಂತೋಷ, ಐಶ್ವರ್ಯ, ಸಂಪತ್ತುಗಳು ಬಂದು ಒದಗುತ್ತವೆ ಎಂದು ಆಶೀರ್ವಾದ ಮಾಡಿದನಂತೆ ಶ್ರೀರಾಮ.ಹೀಗಾಗಿ ಅಂದಿನಿಂದ ಪ್ರತಿಯೊಂದು ಮನೆಯಲ್ಲಿ ಗೋರಂಟಿ ಗಿಡ ನೆಡುವುದನ್ನು ಆರಂಭ ಮಾಡಿದ್ದರೂ ಎಂದು ಹೇಳಲಾಗುತ್ತದೆ. ಪೂರ್ವಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಈ ಗೋರಂಟಿ ಗಿಡಗಳನ್ನು ತಪ್ಪದೆ ನೆಡುತ್ತಾರೆ . ಈ ಗೋರಂಟಿ ಗಿಡದಿಂದ ಅನೇಕಾನೇಕ ಆರೋಗ್ಯಕರ ಪ್ರಯೋಜನಗಳಿವೆ.

 

 

ಅದೇ ಗೋರಂಟಿ ಮತ್ತು ನೆಲ್ಲಿಕಾಯಿಯನ್ನು ಚೆನ್ನಾಗಿ ನುಣ್ಣಗೆ ಪುಡಿಮಾಡಿಕೊಂಡು ಎರಡು ಸಮಪಾಲಿನಲ್ಲಿ ಬೆರೆಸಿ ಕೂದಲಿಗೆ ಹಚ್ಚಿಕೊಂಡರೆ ಕೂದಲಿನ ಆರೈಕೆ ಪ್ರಶಸ್ತವಾಗಿ ಮಾಡುತ್ತದೆ. ಹೌದು ಕೂದಲು ಕಪ್ಪಾಗುವುದು ಅಷ್ಟೇ ಅಲ್ಲದೆ ಸೊಂಪಾಗಿ ಬೆಳೆದು ಉದ್ದವಾಗಿ ಬೆಳೆಯುತ್ತದೆ.

ಇನ್ನು ಗೋರಂಟಿ ರುಬ್ಬಿ ಕೈಗೆ ಕಾಲಿಗೆ ಹಚ್ಚಿಕೊಳ್ಳುವುದರಿಂದ ಕಾಲು ಸೀಳುವಿಕೆಯ ಸಮಸ್ಯೆಗಳಿಂದ ಕೂಡ ಹೊರ ಬರಬಹುದು. ಗೋರಂಟಿ ಪೇಸ್ಟ್ ಅನ್ನು ಉಗುರುಗಳಿಗೆ ಹಚ್ಚಿಕೊಳ್ಳುವುದರಿಂದ ಉಗುರುಗಳು ಆರೋಗ್ಯವಂತವಾಗಿ ಇರುತ್ತವೆ.
ಬೇಸಿಗೆಯಲ್ಲಿ ಅಶಕ್ತಿ, ಸುಸ್ತು ಕಡಿಮೆ ಮಾಡಿಕೊಳ್ಳಬೇಕು ಎಂದರೆ ಗೋರಂಟಿ ಎಲೆಗಳನ್ನು ಚೆನ್ನಾಗಿ ರುಬ್ಬಿಕೊಂಡು ಹಸಿ ಗೋರಂಟಿ ಎಲೆಗಳನ್ನು 5 ಗ್ರಾಂ ನಷ್ಟು ತೆಗೆದುಕೊಂಡು ನೀರಿನಲ್ಲಿ ನೆನೆಸಿಟ್ಟು ಬೆಳ್ಳಗ್ಗೆ ಎದ್ದ ತಕ್ಷಣ ಆ ಎಲೆಗಳನ್ನು ಚೆನ್ನಾಗಿ ಹಿಂಡಿಕೊಂಡು ಆ ಶೋಧಿಸಿದ ನೀರಿನಲ್ಲಿ ಕಲ್ಲುಸಕ್ಕರೆ ಬೆರೆಸಿ, ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿದರೆ ಸಾಕು ನೀವು ಎಷ್ಟೇ ಬಿಸಿಲನ್ನು ಓಡಾಡಿದರು ಅಶಕ್ತಿತನ ಬರುವುದಿಲ್ಲ. ಸುಸ್ತು ನಿಮ್ಮ ಬಳಿ ಸುಳಿಯುವುದಿಲ್ಲ. ಇಷ್ಟೆಲ್ಲಾ ಅಲ್ಲದೆ ರಕ್ತ ಶುದ್ಧವಾಗಿ ಶರೀರಕ್ಕೆ ಬಲವನ್ನು ಒದಗಿಸುತ್ತದೆ ಎಂದು ನಿಪುಣರು ಹೇಳುತ್ತಿದ್ದಾರೆ.

ಸುಖಕರವಾದ ನಿದ್ರೆ ಬರಬೇಕು ಅಂದರೆ ಗೋರಂಟಿ ಹೂಗಳನ್ನು ತಂದು ತಲೆ ದಿಂಬಿನ ಮೇಲೆ ಹರಡಿ ಅದರ ಮೇಲೆ ಒಂದು ತೆಳುವಾದ ಬಟ್ಟೆಯನ್ನು ಹಾಕಿ ಅದರ ಮೇಲೆ ಮಲಗಿದರೆ ಸಾಕು ಸುಖವಾದ ನಿದ್ರೆ ನಿಮ್ಮದಾಗುತ್ತದೆ.ಆದೇ 15 ಗೋರಂಟಿ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಒಂದು ಗ್ಲಾಸ್ ನೀರು ಅರ್ಧ ಗ್ಲಾಸ್ ಆಗುವವರೆಗೂ ಕುದಿಸಿ ಚೆನ್ನಾಗಿ ಶೋಧಿಸಿಕೊಂಡು ಬಾಯಲ್ಲಿ ಹಾಕಿಕೊಂಡು 5 ರಿಂದ 10 ನಿಮಿಷಗಳ ವರೆಗೆ ಮುಕ್ಕಳಿಸಿ ಆಮೇಲೆ ಉಗುಳಿಬಿಡಿ. ಎಂಥದ್ದೇ ಬಾಯಿ ಹುಣ್ಣು ಬಂದಿರಲಿ ತಕ್ಷಣವೇ ಕಡಿಮೆಯಾಗುತ್ತದೆ. ಹೀಗೆ ಗೋರಂಟಿ ಆರೋಗ್ಯಕಾರಿ ಪ್ರಯೋಜನಗಳು ಅಷ್ಟೇ ಅಲ್ಲದೆ ಸುಖವಾದ ನಿದ್ರೆಗೂ ಉಪಯುಕ್ತ ಅಷ್ಟೇ ಅಲ್ಲದೆ ಹೆಂಗಸರಿಗೆ ಸೌಭಾಗ್ಯವನ್ನು ಒದಗಿಸುವ ಗಿಡ ಎಂದು ಹಿರಿಯರು ಹೇಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top