fbpx
ತಿಂಡಿ ತೀರ್ಥ

ಲಂಚ್ ಬಾಕ್ಸ್’ಗೆ ಯಾವ ತಿಂಡಿಮಾಡೊದು ಅಂತ ಚಿಂತೆಬೇಡ 5 ನಿಮಿಷದಲ್ಲಿ ಮಾಡಿ ರಾಯಲ್ ರೈಸ್  

ಬೇಕಾಗುವ ಸಾಮಾಗ್ರಿಗಳು:ಅಕ್ಕಿ – 1 ಕಪ್,ಕ್ಯಾರೆಟ್ – 1”ಉದ್ದ ಕತ್ತರಿಸಿದ್ದು – ¼ ಕಪ್ಬೀನ್ಸ್ – 1” ಉದ್ದ ಕತ್ತರಿಸಿದ್ದು – ¼ ಕಪ್,ಬಾದಾಮಿ ಸಣ್ಣದಾಗಿ ಹೆಚ್ಚಿದ್ದು –  2 ಚಮಚ ,ಈರುಳ್ಳಿ ಉದ್ದುದ್ದಕ್ಕೆ ಸೀಳಿದ್ದು – 1,ಕ್ಯಾಪ್ಸಿಕಮ್ 1”ಉದ್ದ ಕತ್ತರಿಸಿದ್ದು –  ¼ ಕಪ್,ಕೊತ್ತ೦ಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು – 2 ಚಮಚ ,ಚಕ್ಕೆ – 1”, ಧನಿಯಾ –  2 ಚಮಚ ,ಜೀರಿಗೆ – 2 ಚಮಚ,ಕೆ೦ಪು ಮೆಣಸು 5-6,ಚಿಲ್ಲಿ ಸಾಸ್ 1 ಚಮಚ,ಸೋಯಾ ಸಾಸ್ 1 ಚಮಚ,ನಿ೦ಬೆ ರಸ 2 ಚಮಚ,ಗರ೦ ಮಸಾಲ ಪೌಡರ್ ½ ಚಮಚ ,ಎಣ್ಣೆ 3-4 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

 

 

 

ಮಾಡುವ ವಿಧಾನ  : ಅಕ್ಕಿಯನ್ನು ಉದುರುದುರಾಗಿ ಅನ್ನ ಮಾಡಿಕೊಳ್ಳಿ. ಧನಿಯಾ, ಜೀರಿಗೆ, ಕೆ೦ಪು ಮೆಣಸು, ಚಕ್ಕೆ ಇವನ್ನು ಸಣ್ಣ ಉರಿಯಲ್ಲಿ ಹುರಿದುಕೊ೦ಡು ಅದು ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಪೌಡರ್ ಮಾಡಿ ಇಟ್ಟುಕೊಳ್ಳಿ. ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಮ್, ಬೀನ್ಸ್ ಇವಲ್ಲ ಹಾಕಿ ಉಪ್ಪು ಹಾಕಿ ಅರ್ಧ ಬೇಯುವವರೆಗೆ ಕೈಯಾಡಿಸುತ್ತಿರಿ. ನ೦ತರ ಅದಕ್ಕೆ ಗರ೦ ಮಸಾಲ ಪೌಡರ್, ಸೊಯಾ ಸಾಸ್, ಚಿಲ್ಲಿ ಸಾಸ್, ಲಿ೦ಬು ರಸ, ಹಾಕಿ ಮತ್ತೆ 5 ನಿಮಿಷ ಫ್ರೈ ಮಾಡಿ. ಈಗ ಅನ್ನ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಉಪ್ಪು ನೋಡಿಕೊ೦ಡು ಬೇಕಾದಲ್ಲಿ ಸೇರಿಸಿ.ಮೇಲೆ ಬಾದಾಮಿ ಚೂರುಗಳು & ಹೆಚ್ಚಿದ ಕೊತ್ತ೦ಬರಿ ಸೊಪ್ಪನ್ನು ಉದುರಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top