fbpx
ಸಣ್ಣ ಕಥೆ

ನೀ ಸುಳ್ಳಾದರು ನನ್ನ ಪ್ರೀತಿ ಸುಳ್ಳಲ್ಲ ಮೋಸದ ಹುಡುಗ ಪಾಪದ ಹುಡುಗಿ ಕಥೆಯನ್ನು ನೀವೇ ಮುಂದೆ ಓದಿ

ಸಾಗರದ ಬಳಿ ಕಣ್ಣುಗಳನ್ನು ಮುಚ್ಚಿ ನಿಂತಿದ್ದ ಅವಳು ಜೀವನದ ಹಳೆ ಪುಟಗಳನ್ನು ಮತ್ತು ಸಮಯವನ್ನು ಹಿಂದೆ ಹಾಕಿದಳು , ಹಳೆ ನೆನಪುಗಳ ಸಾರವನ್ನು ಅನುಭವಿಸಿದಳುಅವಳು ಪ್ರೀತಿಸಲು ದ್ವೇಷಿಸುತ್ತಿದ್ದವಳು , ಅವಳ ಭಾವನೆಗಳು ಅವಳನ್ನು ಸುತ್ತುವರಿದವು ಮತ್ತು ಅವಳು ಪ್ರತಿ ಕ್ಷಣದ ಹಿಂದಿನ ಚಿತ್ರವನ್ನು ಮೆಲುಕು ಹಾಕುತ್ತಾ ನಿಂತಳು .ಅವರು ನನಗೆ ಎದುರು ಗೋಡೆಗೆ ಹತ್ತಿರ ನಿಂತಿದ್ದ ನನ್ನ ಹೃದಯ ವೇಗವಾಗಿ ಬಡಿದುಕೊಳ್ಳಲು ಶುರುವಾಗಿತ್ತು .ನಾನು ನನ್ನ ಸ್ಕರ್ಟ್ ಅನ್ನು ಬಿಗಿಯಾಗಿ ಹಿಡಿದಿದ್ದೇನೆ, ನಾನು ಹೆದರಿದ್ದೇನೆ ಆದರೂ ಬಹಳ ಸಂತೋಷದಿಂದ ಇದ್ದೇನೆ ನನ್ನ ಕಣ್ಣ ನೋಟದಲ್ಲಿ ಹೊಳಪನ್ನು ತಂದವನು ಅವನು ,ನಂತರ ಅವನು ನನ್ನ ಕಡೆಗೆ ಹೆಜ್ಜೆ ಹಾಕಿದ ಕೇವಲ ಒಂದು ಎಳೆಯಷ್ಟು ಅಂತರ ತಬ್ಬಿಕೊಳ್ಳಲೇ ? ಬೇಡವೇ ? ಏಕೋ ಆ ನಾಚಿಕೆ ತಳಮಳ , ನನ್ನ ಸುತ್ತಲೂ ತನ್ನ ತೋಳುಗಳನ್ನು ಸುತ್ತಿ, ಈಗ ನಮ್ಮ ಹೃದಯಗಳು ಸಂಪರ್ಕಗೊಂಡವು.

 

 

ತೊಟಿಯಂಚಿನಲಿ ಆ ನಾಚಿಕೆ ಹೃದಯವು ಒಂದೇ ಲಯದಲ್ಲಿ ಬಡಿದುಕೊಳ್ಳುತ್ತಿದೆ , ನಾನು ನನ್ನ ಕಣ್ಣುಗಳನ್ನು ಮುಚ್ಚಿ ಮತ್ತು ಮೊದಲ ಬಾರಿಗೆ, ಕತ್ತಲೆಯ ಬದಲು ಅವನ ಮುಖವನ್ನು ನೋಡಬಹುದೆಂದು ಅಂದು ಕೊಂಡೆ ನನಗೆ ಸಂತೋಷವಾಯಿತು ಆ ಕ್ಷಣದಲ್ಲಿ ಪ್ರಪಂಚದಲ್ಲಿ ಏನೇ ಬಂದರು ಎದುರಿಸುತ್ತೇನೆ ಎನ್ನುವ ಧೈರ್ಯ ಒಮ್ಮೆಲೇ ಎಲ್ಲಿಂದ ಬಂತೋ ಗೊತ್ತಿಲ್ಲ .ಅದು ನನ್ನ ಮಹೇಶನ ಎರಡನೇ ಭೇಟಿ , ಆತ ನನ್ನ ಸ್ನೇಹಿತೆಯ ಗಂಡನ ಸ್ನೇಹಿತ , ನಮ್ಮ ಕಣ್ಣುಗಳು ಮೊದಲ ಭಾರಿಗೆ ಸಂದಿಸಿದ್ದು ನನ್ನ ಸ್ನೇಹಿತೆಯ ಮದುವೆಯಲ್ಲಿ , ಇಷ್ಟ ಪಟ್ಟೆವು ಅದೆಷ್ಟು ಭಾರಿ “I Cant Live without You” ಎಂದು ಹೇಳಿಕೊಂಡಿದ್ದೇವೋ ಗೊತ್ತಿಲ್ಲ , ನನ್ನ ಪ್ರಪಂಚವೇ ಅವನಾಗಿದ್ದ ನಾನು ನನ್ನ ಸ್ನೇಹಿತರನ್ನೇ ಮರೆತು ಬಿಟ್ಟಿದ್ದೆ , 10 ವರ್ಷ ನಮ್ಮ ಸುಖ ದುಃಖ ಎಲ್ಲವನ್ನು ಒಟ್ಟಿಗೆ ಹಂಚಿಕೊಂಡಿದ್ದೆವು , ಒಂದು ದಿನ ನಮ್ಮ ಪ್ರೀತಿಗೆ ಬ್ರೇಕ್ ಹಾಕಿ ಮದುವೆಯಾಗೋಣ ಎಂದು ನಿರ್ಧಾರ ಮಾಡಿಬಿಟ್ಟಿದ್ದೆವು ಆದರೆ ನಾನಿನ್ನು ಆಗ ತಾನೇ ಇಂಜಿನಿಯರಿಂಗ್ ಮುಗಿಸಿದ್ದೆ ಅವನು ನನಗಿಂತ 6 ವರ್ಷ ದೊಡ್ಡವನು .

ಧೈರ್ಯ ತಗೊಂಡು ಮನೆಯಲ್ಲಿ ಹೇಳಿಬಿಟ್ಟೆವು , ಅಲ್ಲೋಲ ಕಲ್ಲೋಲ ಶುರುವಾಯಿತು ಏಕೆಂದರೆ ನಮ್ಮಿಬ್ಬರದು ಬೇರೆ ಜಾತಿ , ಅವನು ಪ್ರಾಕ್ಟಿಕಲ್ ಮನೋಭಾವದ ಹುಡುಗ ನಾನಿಲ್ಲವಾದರೂ ಬದುಕಬಲ್ಲ ಎಂದು ನನಗೆ ಗೊತ್ತಿತ್ತು ! ಆದರೂ ನಾನು ಅವನನ್ನು ಬಹಳವಾಗಿ ಹಚ್ಚಿಕೊಂಡಿದ್ದೆ , ಎರಡು ವರ್ಷಗಳು ಕಣ್ಣೀರಲ್ಲಿ ಕೈ ತೊಳೆದೆವು ,ಸದಾ ದುಡ್ಡಿಗೆ ಬೆಲೆ ಕೊಡುತ್ತಿದ್ದ ನನ್ನ ಪ್ರಾಕ್ಟಿಕಲ್ ಹುಡುಗ ಅಮೇರಿಕಾ ವೀಸಾ ಗೆ ಅಪ್ಲೈ ಮಾಡಿದ್ದ .ಅಮೇರಿಕಾ ವೀಸಾ ಅವನಿಗೆ ಸಿಕ್ಕೇ ಬಿಟ್ಟಿತ್ತು , ಅವನು ಹೇಳಿದ್ದು ಮನೆಯಲ್ಲಿ ಒಪ್ಪಿಕೊಳ್ಳಲಿ ನಾನು ನಿನ್ನನ್ನು ಅಮೇರಿಕಾಗೆ ಕರೆದುಕೊಂಡು ಹೋಗುತ್ತೇನೆ ಎಂದು , ಆಮೇಲೆ ಎರಡು ತಿಂಗಳಲ್ಲೇ ಅವನ US $ ಕಣ್ಣು ತಿರುಗಿಸಿತ್ತು , ಹೇಳಲಿಲ್ಲ ಅವನು ಎರಡು ತಿಂಗಳಲ್ಲೇ ಶ್ರೀಮಂತರ ಮನೆಯ ಹುಡುಗಿಯ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡೆ ಬಿಟ್ಟಿದ್ದ , ಇತರ ಸ್ನೇಹಿತರಿಂದ ಈ ವಿಷಯ ನನಗೆ ಗೊತ್ತಾಯಿತು , ಹೃದಯ ಛಿದ್ರವಾಯಿತು.

 

 

 

ನಾ ಕೇಳಿದೆ “ನಾನು ನಿನಗೆ ನನ್ನ ಸರ್ವಸ್ವವನ್ನೇ ಧಾರೆಯೆರೆದುಕೊಟ್ಟಿದ್ದೇನೆ ನನಗೆ ಏಕೆ ಮೋಸ ಮಾಡಿದೆ” ಎಂದುಆಗ ಅವನು ಹೇಳಿದ್ದು “ನೀನು ಬೇರೆ ಹುಡುಗನನ್ನು ನೋಡಿಕೋ ನೀನು ಪ್ರೀತಿ ಮಾಡೋದು ಹೇಗೆ ಅಂತ ಹೇಳಿಕೊಟ್ಟೆ ಅದಕ್ಕೆ ನಿನಗೆ ಥ್ಯಾಂಕ್ಸ್ ”
ಹೃದಯ ಚೂರಾಯ್ತು ಇದೆ ವಿಷಯವಾಗಿ ಅಮ್ಮನ ಬಳಿ ಬಹಳ ಕಟುವಾಗಿ ನಡೆದುಕೊಂಡಿದ್ದೆ ಅವಳು ಹೇಳಿದ್ದಳು ಇವನು ನಿನಗೆ ಲಾಯಕ್ಕಿಲ್ಲ ಅಂತ .ಆತ್ಮ ಹತ್ಯೆಗೆ ಪ್ರಯತ್ನ ಮಾಡಿದೆ ಮೂರು ಬಾರಿ ಪ್ರತಿ ಬಾರಿ ನಾನು ನನ್ನ ತಾಯಿಗೆ ಮಾಡಿದ ಮೋಸವಷ್ಟೇ ನೆನಪಾಗಿತ್ತು , ಆಗ ನನ್ನ ಕುಟುಂಬ ನನ್ನ ಸ್ನೇಹಿತರು ಬಿಟ್ಟು ಬೇರೆ ಯಾರು ಜೊತೆಗೆ ಬರಲಿಲ್ಲ ..

“ದೇವರಿಗೆ 1000 ಥ್ಯಾಂಕ್ಸ್ ಮೋಸಗಾರನಿಂದ ನನ್ನನ್ನು ಬಚಾವ್ ಮಾಡಿದ್ದಕ್ಕೆ , ಪ್ರಾಕ್ಟಿಕಲ್ , ದುಡ್ಡಿನ ಗುಲಾಮರಿಗೆ ಪ್ರೀತಿಯ ಬೆಲೆ ಗೊತ್ತಾಗುವುದಿಲ್ಲ ಅಂತವರನ್ನು ನಿಮ್ಮ ಜೀವನದಿಂದ ದೂರವಿಡಿ .”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top