fbpx
ಸಮಾಚಾರ

ಮಾಯ ಮಂತ್ರತಂತ್ರ, ದುಷ್ಟ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿಗಳ ಪರಿಹಾರಕ್ಕೆ ಒಂದೇ ಪರಿಹಾರ ಬಿಳಿ ಎಕ್ಕದ ಗಿಡ

ಬಿಳಿ ಎಕ್ಕದ ಗಿಡದ ಬಳಿ ಮಂತ್ರ, ತಂತ್ರಗಳು, ದುಷ್ಟ ಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಗಳು ಕೆಲಸ ಮಾಡುವುದಿಲ್ಲ.
ಜೀವ ವಾಯುವನ್ನು ನೀಡುವ ವನ ಸಂಪತ್ತಿನಿಂದಲೇ ಮನುಷ್ಯನ ಜೀವನ ಸಾಗುತ್ತಿದೆ. ಗಿಡ, ಮರ, ಬಳ್ಳಿಗಳು ,ಕಾಡುಗಳ ಮೇಲೆ ಆಧಾರವಾಗಿದೆ. ಸಮಸ್ತ ಜೀವ, ಜಂತುಗಳ ಜೀವನ ಹಾಗೂ ಮಾನವರ ಜೀವನ ಹಸಿರು ವನಸಿರಿಯು ಇಲ್ಲವೆಂದರೆ ಈ ಭೂಮಿಯ ಮೇಲೆ ಜೀವಿಸಲು ಸಾಧ್ಯವಿಲ್ಲ . ಇತರೆ ಗ್ರಹಗಳಿಗೂ, ಭೂಮಿಗೂ ವ್ಯತ್ಯಾಸವೇ ಇರುವುದಿಲ್ಲ.ಪ್ರಕೃತಿ ನೋಡಲು ಎಷ್ಟು ಸುಂದರವೋ ಅದರ ಕಾರ್ಯವೂ ಕೂಡ ಅಷ್ಟೇ ಸುಂದರ ಹಾಗೂ ಪ್ರಕೃತಿ ಎಂಬ ಪದದ ಅರ್ಥವೇ ಕೇಳಲು ಸುಮಧುರವಾಗಿದೆ ಹಾಗೂ ನೋಡಲು ರಮಣೀಯವಾಗಿದೆ ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಭೂಮಿ ಎಂತಹವರನ್ನೂ ಮನಸೂರೆಗೊಳಿಸುತ್ತದೆ.

ಸಸ್ಯ  ಸಂಪತ್ತಿನಿಂದಲೇ ಈ ಭೂಮಿಯ ಮೇಲೆ ಜೀವನ ಸುಗಮವಾಗಿ ಸಾಗುತ್ತಿದೆ.ವಾಸ್ತುವಿನಲ್ಲಿ, ಜ್ಯೋತಿಷ್ಯದಲ್ಲಿ ಮತ್ತು  ಆಯುರ್ವೇದದಲ್ಲಿ ಋಷಿಮುನಿಗಳು ಸಸ್ಯ ಸಂಪತ್ತಿನ ಬಗ್ಗೆ ಸಾಕಷ್ಟು ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ. ಅದರ ಉಪಯೋಗಗಳನ್ನು ನಿರೂಪಿಸಿ ಸಾಬೀತುಪಡಿಸಿ ತೋರಿಸಿದ್ದಾರೆ. ನಿಮಗೆ ತುಂಬಾ ದಿನಗಳಿಂದ ಅನಾರೋಗ್ಯ ಕಾಡುತ್ತಿದ್ದರೆ ಅಥವಾ ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದರೆ . ಎಷ್ಟು ಔಷಧಿಗಳನ್ನು ತೆಗೆದುಕೊಂಡರೂ  ನಿಮ್ಮ ಖಾಯಿಲೆ ವಾಸಿಯಾಗುತ್ತಿಲ್ಲವೇ.ಅನೇಕ ವರ್ಷಗಳಿಂದ ನಿಮಗೆ ಗಂಭೀರವಾದ ಖಾಯಿಲೆಗಳು ಕಾಡುತ್ತಿದ್ದರೆ. ನಿಮಗೆ ಗಾಳಿಯಿಂದ ಕೂಡಿದ ಮತ್ತು ಧೂಳುಗಳಿಂದ ಕೂಡಿದ ನಕಾರಾತ್ಮಕ ಶಕ್ತಿಯಿಂದ ಕಾಯಿಲೆ ಮತ್ತು ಬಾಧೆಗೆ ಒಳಪಟ್ಟಿದ್ದೀರ ಎಂದರ್ಥ.

 

ಇಂತಹ ವಿಷಯಗಳು ಏನಿದ್ದರೂ  ಸಹ ಈ ಗಿಡದ ಮುಂದೆ ನಡೆಯುವುದಿಲ್ಲ. ಅದು ಹೇಗೆ ಎಂದು ಆಶ್ಚರ್ಯವಾಗುತ್ತಿದೆಯಾ !  ಈ ಖಾಯಿಲೆಗಳಿಗೂ ಈ ಸಸ್ಯಕ್ಕೆ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ… ಸಂಬಂಧ ಇದೆ. ಈ ಗಿಡವನ್ನು ನೀವು ಎಲ್ಲರೂ ಸಾಮಾನ್ಯವಾಗಿ ನೋಡಿರುತ್ತೀರಾ ಅದು ಎಲ್ಲಿ ನೆಡುತ್ತೀರೋ.. ಅಲ್ಲಿ ಸಮೃದ್ಧವಾಗಿ ಪುಷ್ಕಳವಾಗಿ ಗುಂಪಾಗಿ ಬೆಳೆಯುತ್ತದೆ. ಭೂಮಿಯಲ್ಲಿ ತೇವ ಒಂದು ಇದ್ದರೆ ಸಾಕು. ಈ ಗಿಡವನ್ನು ನೆಟ್ಟರೆ ಅದು ಅಲ್ಲಿಯೇ ಸಮೃದ್ಧವಾಗಿ ಬೆಳೆಯುತ್ತದೆ. ಇದನ್ನು ಎಲ್ಲರಿಗೂ ಕಾಣುವಂತೆ ನೆಟ್ಟರೆ ಇನ್ನೂ ಒಳ್ಳೆಯದು. ಇದನ್ನು  ಎಕ್ಕದ  ಗಿಡ ಎಂದು ಕರೆಯುತ್ತಾರೆ.

 

 

 

ಎಕ್ಕದ ಗಿಡಗಳಲ್ಲಿ ಎರಡು ವಿಧಗಳಿವೆ. ಒಂದು ಬಿಳಿ ಎಕ್ಕದ ಗಿಡ ಇನ್ನೊಂದು ನೀಲಿ ಎಕ್ಕದ ಗಿಡ. ಬಿಳಿ ಎಕ್ಕದ ಗಿಡ ಎಂದರೆ ಬಿಳಿಯ ಹೂವನ್ನು ಬಿಡುವ ಗಿಡಕ್ಕೆ ಬಿಳಿ ಎಕ್ಕದ  ಗಿಡ ಎಂದು ಕರೆಯುತ್ತೇವೆ. ನೀಲಿಯ ಹೂವನ್ನು ಬಿಡುವ ಎಕ್ಕದ ಗಿಡಕ್ಕೆ ನೀಲಿ ಎಕ್ಕದ ಗಿಡ ಎಂದು ಕರೆಯುತ್ತೇವೆ. ಆದರೆ ಇವೆರಡರಲ್ಲಿ ಶ್ರೇಷ್ಠವಾದದ್ದು ಬಿಳಿ ಎಕ್ಕದ  ಗಿಡವಾಗಿದೆ. ಬಿಳಿ ಎಕ್ಕದ ಗಿಡದಲ್ಲಿ ಎಷ್ಟೋ ವಿಷಯಗಳು ಮಾನಸ ಸ್ನೇಹಿ ಮತ್ತು ಮಾನವ ಸ್ನೇಹಿ ಮತ್ತು ಪ್ರಕೃತಿ ಸ್ನೇಹಿಯಾಗಿ ಈ ಗಿಡ ಆವಿರ್ಭವಿಸಿದ ಇದೊಂದು ಅತ್ಯುತ್ತಮ ಗಿಡ ಗಿಡ ಮೂಲಿಕೆಯು ಹೌದು.ನಿಮಗೆ ಕಾಲಿಗೆ ಮುಳ್ಳು ಚುಚ್ಚಿದರೆ ಗಾಯಗಳಾಗಿದ್ದರೆ. ನಮ್ಮ ಹಿರಿಯರು ಎಕ್ಕೆ ಗಿಡದ ಔಷಧೋಪಚಾರ ಮಾಡುತ್ತಿದ್ದುದುಂಟು. ಅದು ರಾಮಬಾಣದಂತೆ ಕೆಲಸ ಮಾಡುತ್ತದೆ. ಅಂತೆಯೇ ಎಕ್ಕದ ಹಾಲಿನ೦ತಹ ಔಷಧಿಯುಕ್ತ ಪದಾರ್ಥವು ಇದ್ದು. ಈ  ಗಿಡದಲ್ಲಿ ಈ ಹಾಲು ಉದ್ಭವಿಸುತ್ತದೆ. ಅದು ತುಂಬಾ ವಿಷಪೂರಿತ ವಾಗಿರುತ್ತದೆ. ನಿಮಗೆ ಎಂತಹ  ಅನಾರೋಗ್ಯ ಸಮಸ್ಯೆಗಳಿದ್ದರೂ ಸಹ ಕಡಿಮೆ ಆಗುತ್ತಿಲ್ಲ ಎಂದಾದರೆ ಆನಾರೋಗ್ಯದ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ನೀವು ಈ ಕೆಲಸವನ್ನು ಮಾಡಿ.

 ಎಕ್ಕದ ಗಿಡದ ಬೇರು:ಎಕ್ಕದ ಗಿಡದ ಬೇರನ್ನು ತೆಗೆದುಕೊಂಡು ಕೊಳವೆ ಆಕಾರದಲ್ಲಿ ಇರುವಂತಹ ಒಂದು ತಾವೇಜು ಅಂದರೆ ಯಂತ್ರದಲ್ಲಿ ಹಾಕಿಕೊಂಡು ಒಂದು ಕಪ್ಪು ದಾರದಲ್ಲಿ ಪೋಣಿಸಿ ಅದನ್ನು ಕುತ್ತಿಗೆಗೆ ಹಾಕಿಕೊಳ್ಳಬೇಕು.ಹೀಗೆ ಇದನ್ನು ಕುತ್ತಿಗೆಗೆ ಧರಿಸುವುದರಿಂದ ಮತ್ತು ಕೈಗೆ ಕಟ್ಟಿಕೊಳ್ಳುವುದರಿಂದ  ಅನಾರೋಗ್ಯದ ತೊಂದರೆಗಳು, ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಅವು ಏನಾದರೂ ಇದ್ದರೆ ಅವು ಒಂದೊಂದಾಗಿ ತೊಲಗುತ್ತಾ ನಿಮ್ಮಿಂದ ದೂರ ಹೋಗುತ್ತದೆ. ಈ ತಾವೇಜು ಒಂದು ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ .ವೈಜ್ಞಾನಿಕವಾಗಿ ಮಧುಮೇಹ ಕಾಯಿಲೆ ಕಡಿಮೆ ಮಾಡುವಲ್ಲಿ  ಸಾಬೀತಾಗಿರುವ  ಈ ಗಿಡದ  ಎಲೆಗಳು .

ಮಧುಮೇಹ ಖಾಯಿಲೆಗೆ ಎಕ್ಕದ ಗಿಡದ ಎಲೆಗಳನ್ನು ತೆಗೆದುಕೊಂಡು ನಿಮ್ಮ ಪಾದಗಳ ಅಡಿಯಲ್ಲಿ ಹಿಮ್ಮುಖವಾಗಿ ಇಟ್ಟು ಕಾಲುಚೀಲವನ್ನು ಧರಿಸಿ ದಿನಪೂರ್ತಿ ಹಾಗೆಯೇ ಬಿಟ್ಟು ರಾತ್ರಿ ಅವುಗಳನ್ನು ತೆಗೆದು  ಮಲಗಬೇಕು. ಈ ರೀತಿ ಪ್ರತಿದಿನ ಮಾಡುತ್ತ ಬಂದರೆ ಒಂದು ವಾರ ಅಥವಾ ಹದಿನೈದು ದಿನಗಳ ನಂತರ ನಿಮ್ಮ ಮಧುಮೇಹ ಅ೦ದರೆ ಸಕ್ಕರೆ ಅಂಶದ ಪ್ರಮಾಣವು ರಕ್ತದಲ್ಲಿ ಕ್ರಮೇಣ ಕಡಿಮೆಯಾಗುವುದು. ಇದು ಬಹಳ ಉಪಕಾರಿ ಮತ್ತು ಸುಲಭ ಮಾರ್ಗವಾಗಿದೆ. ಯಾರಿಗಾದರೂ ಮಧುಮೇಹ ಖಾಯಿಲೆ ಇದ್ದಲ್ಲಿ ಈ ಉಪಾಯವನ್ನು  ಪಾಲಿಸಿ ನೋಡಿ.

 

ಇನ್ನು ಬಹಳ ಗಂಭೀರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹರಳಿನ ಮರದ ಅಂದರೆ ಔಡಲ ಎಂದು ಕರೆಯುವ ಕಾಯಿಯ ಮರದ ಬೇರನ್ನು ತೆಗೆದುಕೊಂಡು ಅದನ್ನು ಗಂಗಾಜಲದಿಂದ ಶುದ್ಧಗೊಳಿಸಿ ಪೂಜಾ ಮಂದಿರದಲ್ಲಿ ಇಟ್ಟು ಪ್ರತಿದಿನ  “ಓಂ ಗಂ ಗಣಪತಯೇ ನಮಃ” ಎಂಬ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಬೇಕು.ಎಕ್ಕದ ಗಿಡದ ಹೂವುಗಳು:ಈ ಗಿಡದ ಹೂವುಗಳು ಎಂದರೆ ಶಿವನಿಗೆ ಅತ್ಯಂತ ಪ್ರಿಯ .ಆದ್ದರಿಂದ ಎಕ್ಕದ ಗಿಡದ ಈ ಹೂವುಗಳನ್ನು ಶಿವನಿಗೆ ಸಮರ್ಪಿಸಿದರೆ ಶಿವನು ಪ್ರಸನ್ನನಾಗಿ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುವನು. ಪಾರ್ವತಿ  ದೇವಿಯೂ ಸಹ ಶಿವನಿಗೆ ಈ ಗಿಡದ ಹೂವುಗಳನ್ನು ಅರ್ಪಿಸಿ ಶಿವನನ್ನು ವರಿಸಿದಳು ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಎಕ್ಕದ ಗಿಡ ಮನೆಯ ಮುಂದೆ ಆಗಲಿ ಮನೆಯ ಹಿಂದೆ ಆಗಲಿ  ಅಥವಾ ನಿಮ್ಮ ಮನೆಯ ಒಳಗೆ ಆಗಲಿ ಇದ್ದರೆ ಅದು ಶುಭಪ್ರದ ಎಂದು ಹೇಳುತ್ತಾರೆ. ಈ ಗಿಡ ಇರುವ ಕಡೆ ಸುಖ, ಶಾಂತಿ, ನೆಮ್ಮದಿ, ಸಂತೋಷವನ್ನು ಕರುಣಿಸುತ್ತದೆ. ಯಾರ ಮನೆಯಲ್ಲಿ ಈ ಗಿಡ ಇರುತ್ತದೆಯೋ ಅವರಿಗಾಗಲಿ ಅಥವಾ ಅವರ ಮನೆಯವರಿಗಾಗಲಿ ಯಾವ ಕೆಟ್ಟ ದೃಷ್ಟಿಯೂ ತಗುಲುವುದಿಲ್ಲ. ಎಂತಹ ಮಾಟ, ಮಂತ್ರದ ಪ್ರಭಾವ ಕೂಡ ಈ ಮನೆಗೆ ಸುಳಿಯುವುದಿಲ್ಲ. ಅದು ಧನಕನಕ, ಸಂಪತ್ತನ್ನು ಕರುಣಿಸಿ ಸುರಿಸಿ ಮನೆಯಲ್ಲಿ ಧನಲಕ್ಷ್ಮೀ ತಾಂಡವವಾಡುವಂತೆ ಮಾಡುತ್ತದೆ.

 ಈ ಗಿಡದ ಬೇರು:ಬಿಳಿ ಎಕ್ಕದ ಗಿಡದಲ್ಲಿ ಹನ್ನೊಂದು ವರ್ಷಗಳ ನಂತರ ಗಣಪತಿ ಮತ್ತು ಆಂಜನೇಯ ಸ್ವಾಮಿಯು ಆ ಬೇರಿನಲ್ಲಿ ಮೂಡುತ್ತಾರೆ. ಅಂತಹ ಬೇರುಗಳನ್ನು ತಂದು ವ್ಯಾಪಾರ, ವ್ಯವಹಾರ ಸ್ಥಳಗಳಲ್ಲಿ ಇಟ್ಟುಕೊಂಡರೆ ವ್ಯಾಪಾರವೂ ವೃದ್ಧಿಯಾಗಿ ಲಾಭವನ್ನು ಗಳಿಸುವಿರಿ. ಅಷ್ಟೇ ಅಲ್ಲ ಧನ, ಕನಕ, ಸಿರಿ ಸಂಪತ್ತನ್ನು ಕರುಣಿಸುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top