fbpx
ಸಮಾಚಾರ

ಅಕ್ರಮ ಸಂಬಂಧ ಹೊಂದಿ ಶಾಪ ಪಡೆದು ಕಲ್ಲಾಗಿದ್ದ ಅಹಲ್ಯೆ ಶಾಪ ಹೇಗೆ ವಿಮೋಚನೆಯಾಯಿತು ಗೊತ್ತಾ

ವಿಶ್ವಾಮಿತ್ರರು ಸುಮತಿಯ ಅರಮನೆಗೆ ಬಂದಾಗ, ರಾಜನು ಇವರನ್ನು ಸತ್ಕರಿಸಿದನು. ಅವರು ಸತ್ಕಾರವನ್ನು ಪಡೆದರು. ಅನಂತರ ಮಿಥಿಲಾ ನಗರದ ಕಡೆಗೆ ಪ್ರಯಾಣವನ್ನು ಆರಂಭಿಸಿದ್ದರು. ದಾರಿಯಲ್ಲಿ ಒಂದು ಸುಂದರವಾದ ಆಶ್ರಮವನ್ನು ಕಂಡ ರಾಮ ಲಕ್ಷ್ಮಣರು, ಇದು ಯಾರ ಆಶ್ರಮ ? ಯಾಕೆ ಹೀಗೆ ನಿರ್ಜನವಾಗಿದೆ ? ಎಂದು ವಿಶ್ವಾಮಿತ್ರರನ್ನು ಕೇಳಿದಾಗ.

 

 

 

ಇದು ಗೌತಮ ಋುಷಿಗಳ ಆಶ್ರಮ, ಎಂದು ಅವರ ಮಹತ್ವದ ಬಗ್ಗೆ ತಿಳಿಸಲು ಆರಂಭಿಸಿದರು.
ಗೌತಮ ಋಷಿಗಳ ಪತ್ನಿ ಅಹಲ್ಯೆ ಪತಿವ್ರತೆಯಾಗಿದ್ದು , ಅವಳು ಅತ್ಯಂತ ಸುಂದರಿ ಎಂದು ತಿಳಿದ ಇಂದ್ರನು, ಗೌತಮ ಮಹರ್ಷಿಗಳು ಇಲ್ಲದ ಸಮಯದಲ್ಲಿ, ಗೌತಮ ಋಷಿಗಳ ವೇಷದಲ್ಲಿ ಬಂದು ಅವಳ ಸಂಗಡ ಪ್ರೀತಿಯಿಂದ ಇದ್ದನು. ಗೌತಮರು ಆಶ್ರಮಕ್ಕೆ ಮರಳಿ ಬಂದಾಗ ತಪ್ಪು ಮಾಡಿದ ಅಹಲ್ಯೆಯನ್ನು ಮತ್ತು ಬೆಕ್ಕಿನ ರೂಪದಲ್ಲಿ ಇರುವ ಇಂದ್ರನನ್ನು ತಿಳಿದು ಅಹಲ್ಯೆಯೂ ಕಾಮ ವಿಕಾರಕ್ಕೊಳಗಾಗಿದ್ದರಿಂದಾಗಿ, ಕಲ್ಲಾಗುವಂತೆ ಅಹಲ್ಯೆಗೆ ಶಾಪ ಕೊಟ್ಟನು.ಇಂದ್ರನಿಗೆ ಮೈಯೆಲ್ಲಾ ಕಲ್ಲಾಗಿರುವಂತೆ ಮಾಡಿದರು. ಇಂದ್ರನು ಅನಂತರ ಸಹಸ್ರಾಕ್ಷ ಎಂದು ಹೆಸರು ಪಡೆದನು .ಮುಂದೆ ದಶರಥ ಪುತ್ರನಿಂದಲೇ ನಿನ್ನ ಶಾಪ ವಿಮೋಚನೆ ಎಂದು ಅಹಲ್ಯೆಗೆ ತಿಳಿಸಿ ತಪಸ್ಸಿಗೆ ಹೋದರು. ರಾಮ ಅಹಲ್ಯೆ ಇಲ್ಲಿ ಅದೃಶ್ಯ ರೂಪದಲ್ಲಿ ಕಲ್ಲಾಗಿದ್ದಾಳೆ, ಪಶ್ಚಾತ್ತಾಪ ಪಡುತ್ತಿದ್ದಾಳೆ. ನಿನ್ನ ಆಗಮನವನ್ನೇ ಕಾಯುತ್ತಿದ್ದಾಳೆ, ಬೇಗನೆ ಆ ಪತಿವ್ರತೆಯನ್ನು ಉದ್ಧರಿಸು ಎಂದಾಗ ಅವರು ಆಶ್ರಮವನ್ನು ಪ್ರವೇಶಿಸಿದರು.

ರಾಮನ ಪಾದ ಸ್ಪರ್ಶದಿಂದಲೇ ಅಹಲ್ಯೆಯು ತನ್ನ ಮೊದಲಿನ ರೂಪ ಪಡೆದು ಪ್ರತ್ಯಕ್ಷಳಾದಳು. ರಾಮಲಕ್ಷ್ಮಣರು ಅವಳನ್ನು ವಂದಿಸಿದರು. ಗೌತಮ ಮಹರ್ಷಿಗಳು ಅಲ್ಲಿಗೆ ಬಂದರು. ಪತ್ನಿಯನ್ನು ಸಂತೈಸಿದರು, ವಿಶ್ವಾಮಿತ್ರರನ್ನು ಮತ್ತು ರಾಮ ಲಕ್ಷ್ಮಣರನ್ನು ಸತ್ಕರಿಸಿದರು. ಅಲ್ಲಿಯೇ ಗೌತಮರು ವಿಶ್ವಾಮಿತ್ರರು ಪಶ್ಚಾತ್ತಾಪದಿಂದ ಮೊದಲು ಮಾಡಿದ ತಪ್ಪಿಗೆ ಪರಿಹಾರ ಸಿಗುವುದು ಪಾಪದ ಪರಿಹಾರವಾಗುವುದೆಂದು ಹೇಳಿದರು .ಹೀಗೆ ಶ್ರೀರಾಮನ ಪಾದ ಸ್ಪರ್ಶದಿಂದಲೇ ಕಲ್ಲಾಗಿದ್ದ ಅಹಲ್ಯೆಯ ಮತ್ತೆ ಮೊದಲಿನ ರೂಪ ಪಡೆದಳು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top