fbpx
ಸಮಾಚಾರ

ಈ ಗ್ರಾಮದಲ್ಲಿ ಹೆಣ್ಮಕ್ಳು ಹುಟ್ಟಿದ್ರೆ ಏನ್ ಮಾಡ್ತಾರಂತೆ ಗೊತ್ತಾ,ಈ ಬಗ್ಗೆ ನಿಮಗೆ ಗೊತ್ತಾದ್ರೆ ನೀವು ಆಶ್ಚರ್ಯ ಪಡೋದು ಖಂಡಿತಾ

ಇಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಏನು ಮಾಡುತ್ತಾರೆ ಗೊತ್ತೆ ?ನೀವು ತಿಳಿದರೆ ಒಮ್ಮೆಲೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಭಾರತ ದೇಶದಲ್ಲಿ ಸರಿ ಸುಮಾರು ಶೇಕಡಾ ಎಪ್ಪತ್ತಕ್ಕೂ ಹೆಚ್ಚು ಜನಸಂಖ್ಯೆ ಇಂದಿಗೂ ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಹೀಗಾಗಿ ಹಳ್ಳಿಗಳೆ ನಮ್ಮ ದೇಶದ ಆತ್ಮ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಗರದ ಜಂಜಾಟದಿಂದ ದೂರವಿದ್ದು, ಹಚ್ಚ ಹಸಿರಿನ ಮಧ್ಯೆ ಶಾಂತಿ ಹಾಗೂ ನೆಮ್ಮದಿಯ ಜೀವನವನ್ನು ಹಳ್ಳಿಯ ವಾಸಿಗರು ನಡೆಸುತ್ತಿದ್ದಾರೆ. ಅಲ್ಲದೆ ಶಿಕ್ಷಣ, ಆರೋಗ್ಯ,ಸಾರಿಗೆ ವ್ಯವಸ್ಥೆ, ಸ್ವಚ್ಛತೆ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆ ಇಂದಿಗೂ ಹಳ್ಳಿಯಲ್ಲಿ ಇದ್ದೇ ಇದೆ. ಇನ್ನು ಮೂಡ ನಂಬಿಕೆಗಳು ಸಹ ಹಳ್ಳಿಗಳು ಹಿಂದೆ ಹಿಂದೆ ಉಳಿಯುವುದಕ್ಕೆ ಒಂದು ಕಾರಣವಾಗಿದೆ. ಆದರೆ ಇವೆಲ್ಲ ಕಷ್ಟಗಳನ್ನು ಮೀರಿ ಈ ಜಗತ್ತಿಗೆ ಮಾದರಿಯಾಗುವಂತಹ ಹಳ್ಳಿಗಳು ಸಹ ಇಂದು ನಮ್ಮ ಭಾರತದಲ್ಲಿ ಇವೆ ಎಂದರೆ ನಂಬಲೇಬೇಕು. ನಮ್ಮ ಭಾರತ ಗ್ರಾಮದ ವಿಶಿಷ್ಟ ಆಚರಣೆಗಳ ಮೂಲಕ ಇಡೀ ಜಗತ್ತಿಗೆ ಉತ್ತಮ ಸಂದೇಶವನ್ನು ನೀಡುತ್ತಿವೆ.ದೇಶದಾದ್ಯಂತ ಹರಡಿರುವ ಅಂತಹ ವಿಶಿಷ್ಟ ಹಾಗೂ ಸ್ಪೂರ್ತಿದಾಯಕ ಆಚರಣೆಗಳನ್ನು ಹೊಂದಿರುವ ಹಳ್ಳಿಗಳ ಬಗ್ಗೆ ಅಂತಹದ್ದೊಂದು ಮಾಹಿತಿ ಲಭ್ಯವಿದೆ. ಪಟ್ಟಣ ವಾಸಿಗಳಿಗೂ ಜೀವನದ ಶ್ರೇಷ್ಠ ಈ ಹಳ್ಳಿಗಳು ಹೇಳುತ್ತವೆ.

ವಿಶಿಷ್ಟ ಹಾಗೂ ಸ್ಪೂರ್ತಿದಾಯಕ ಆಚರಣೆಗಳನ್ನು ಹೊಂದಿವೆ ಕೆಲವು ಹಳ್ಳಿಗಳು ಭಾರತದ ಈ ಗ್ರಾಮಗಳು. ಅಂತಹ ಅದ್ಭುತವಾದ ಗ್ರಾಮಗಳ ಪೈಕಿ ಪೀಪಲಾತ್ರಿ ಗ್ರಾಮವು ಒಂದು. ಇದೀಗ ಈ ಗ್ರಾಮದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

 

 

 

ಪಿಪಾಲಾತ್ರಿ ಗ್ರಾಮ, ಇದು ರಾಜಸ್ಥಾನ ರಾಜ್ಯದ ರಾಜ ಸಾಮಂತ ಜಿಲ್ಲೆಯಲ್ಲಿ ಇರುವ ಒಂದು ಗ್ರಾಮವಾಗಿದೆ. ಇಲ್ಲೊಂದು ವಿಶಿಷ್ಟ ಆಚರಣೆ ಇದೆ,ಈ ಗ್ರಾಮದಲ್ಲಿ ಪ್ರತಿ ಬಾರಿ ಹೆಣ್ಣು ಮಗು ಜನಿಸಿದಾಗ ಗ್ರಾಮಸ್ಥರ ಎಲ್ಲರೂ ಸೇರಿ 111 ಸಸಿಗಳನ್ನು ನೆಡುತ್ತಾರೆ. ಅಲ್ಲದೆ ಅವು ಬೆಳೆದು ಮರವಾಗುವ ತನಕ ಎಲ್ಲರೂ ಅವುಗಳನ್ನು ನಿರಂತರವಾಗಿ ಪೋಷಣೆ ಮಾಡುತ್ತಾರೆ. ಹೆಣ್ಣು ಮಗು ಬೆಳೆದು ದೊಡ್ಡವಳಾದಂತೆ ಗಿಡಗಳು ಮರವಾಗುವ ತನಕ ಅವರೆಲ್ಲರೂ ಶ್ರಮ ಪಡುತ್ತಾರೆ. ಗ್ರಾಮದ ಸುತ್ತಲೂ ಇರುವ ಖಾಲಿ ಪ್ರದೇಶಗಳಲ್ಲಿ ಈ ಗಿಡಗಳನ್ನು ಬೆಳೆಸಲಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಬೇವು, ಮಾವು, ನೆಲ್ಲಿ ಮುಂತಾದ ರೀತಿಯ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮರಗಳನ್ನು ಈ ಗ್ರಾಮಸ್ಥರು ಬೆಳಸಿದ್ದು ನಿಜವಾಗಿಯೂ ಪ್ರೇರಣ ದಾಯಕವಾಗಿದೆ.

ಈ ಗ್ರಾಮಸ್ಥರ ಹೆಣ್ಣು ಮಗುವಿನ ಮತ್ತು ಪರಿಸರ ಕಾಳಜಿಯ ಬಗ್ಗೆ ನಿವು ತಿಳಿದರೆ ಇನ್ನೂ ಹೆಮ್ಮೆ ಪಡುತ್ತೀರ. ಮಗುವಿನ ಭವಿಷ್ಯದ ಭದ್ರತೆಗಾಗಿ ಗ್ರಾಮಸ್ಥರೆಲ್ಲರೂ ಸೇರಿ 21 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಅದರ ಜೊತೆಗೆ ಮಗುವಿನ ಪಾಲಕರಿಂದ ಹತ್ತು ಸಾವಿರ ರೂಪಾಯಿಗಳನ್ನು ಪಡೆದು ಆ ಸಂಪೂರ್ಣ ಮೊತ್ತವನ್ನು ಬ್ಯಾಂಕಿನಲ್ಲಿ ಆ ಹೆಣ್ಣು ಮಗುವಿನ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುತ್ತಾರೆ.
ಈ ಗ್ರಾಮದಲ್ಲಿ ಜನಿಸಿದ ಹೆಣ್ಣು ಮಕ್ಕಳು ನಿಜಕ್ಕೂ ಅದೃಷ್ಟ ಶಾಲಿಗಳು ಎಂದೇ ಹೇಳಬಹುದು. ಹಾಗಾಗಿ ಹೆಣ್ಣುಮಕ್ಕಳಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುವ ಈ ಗ್ರಾಮ ಇಡೀ ಭಾರತಕ್ಕೆ ಮಾತ್ರವಲ್ಲದೆ ಸಂಪೂರ್ಣ ಜಗತ್ತಿಗೆ ಮಾದರಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top