fbpx
ಸಮಾಚಾರ

ನೀವು ಕೋಟ್ಯಾಧಿಪತಿಯಾಗೋ ಕನಸು ಕಾಣುತ್ತಿದ್ದರೆ ತಪ್ಪದೆ ಈ 9 ಸೂತ್ರಗಳನ್ನು ಫಾಲೋ ಮಾಡಿ

ಈ 9 ಸೂತ್ರಗಳನ್ನು ಪಾಲಿಸಿದರೆ ನೀವು ಸಹ ಕೋಟ್ಯಾಧಿಪತಿಯಾಗಬಹುದು. ನ್ಯಾಯಯುತವಾದ ಮಾರ್ಗಗಳಿವು.
ಎಲ್ಲರಿಗೂ ಕೋಟಿಗಟ್ಟಲೆ ಹಣ ಗಳಿಸಬೇಕೆಂಬ ಆಸೆ ಇರುತ್ತದೆ. ಆದರೆ ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳು ಇರುವುದಿಲ್ಲ. ಆದರೆ ಕೆಲವು ಹವ್ಯಾಸಗಳನ್ನು ಅನುಸರಿಸಿದರೆ , ಅವು ಸ್ವಯಂ ನಿರ್ಮಿತ ಕೋಟ್ಯಾಧಿಪತಿಯಾಗುವಂತೆ ಉತ್ತೇಜನ ಹಾಗೂ ಪ್ರೇರಣೆಯನ್ನು ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ. ಕೋಟ್ಯಾಧಿಪತಿಯಾಗಲು ತಿಳಿದುಕೊಳ್ಳಬೇಕಾದ 9 ಸಂಗತಿಗಳು ಯಾವುವು ? ಗೊತ್ತೆ ಬನ್ನಿ ತಿಳಿದುಕೊಳ್ಳೋಣ.
ನಿಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಿ:ಕೋಟ್ಯಾಧಿಪತಿ ಆಗಬೇಕೆಂದು ಬಯಸುತ್ತಿರುವ ಆಶಾವಾದಿಗಳು ಮೂಲಭೂತವಾಗಿ ಆದಾಯದ ಮೂಲಗಳನ್ನು ಹೆಚ್ಚಿಸಬೇಕು. ಒಂದೇ ಆದಾಯದ ಮೂಲಕ ಅವಲಂಬನೆ ಆಗುವುದು ಬೇಡ, ಹೂಡಿಕೆ ಮಾಡಬಹುದಾದ ಮಾರ್ಗ ಮತ್ತು ಮೂಲಗಳನ್ನು ಹುಡುಕಿ ರಿಯಲ್ ಎಸ್ಟೇಟ್, ಇನ್ಫ್ರಾಸ್ಟ್ರಕ್ಚರ್ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಿ , ಶ್ರೀಮಂತ ಜನರು ಯಾವುದೇ ಒಂದು ಆದಾಯದ ಮೇಲೆ ಅವಲಂಬಿತವಾಗಿ ಇರುವುದಿಲ್ಲ.

 

ಗುರಿ ಇರಲಿ:ಗುರಿ ಇಲ್ಲದೆ ಹಣವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಗುರಿಗಳನ್ನು ಬರೆದು, ನೀವು ಬಯಸಿದಂತೆ ಭವಿಷ್ಯವನ್ನು ರೂಪಿಸಿಕೊಳ್ಳಿ, ಅಂದರೆ ಮನಸ್ಸಿನಲ್ಲಿರುವ ಗುರಿಗಳನ್ನು ಬರೆದಿಟ್ಟು ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿ, ಅದರ ಸಾಧನೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಮೇಲೆ ಬರೆದಿರುವುದರಿಂದ ಅದು ಸಂಭವಿಸುವಂತೆ ಮಾಡಬಹುದು.
ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ:ಒಂದು ಬಾರಿ ಕಳೆದ ಸಮಯ ಎಂದು ಮತ್ತೆ ಸಿಗದು.ಸಮಯವನ್ನು ಅನ್ಯತ ವ್ಯರ್ಥ ಮಾಡುವುದು ಮನುಷ್ಯನ ದೊಡ್ಡ ದೌರ್ಬಲ್ಯ, ಕೆಲವರು ಟಿವಿ ನೋಡುತ್ತಾ, ಹರಟೆ ಹೊಡೆಯುತ್ತಾ, ಕಾಲಹರಣ ಮಾಡುತ್ತಿರುತ್ತಾರೆ . ಆದರೆ ಕೋಟ್ಯಾಧಿಪತಿಗಳು ಟಿವಿ ನೋಡುವುದರಿಂದ ದೂರ ಉಳಿದು ಬಿಸಿನೆಸ್, ವ್ಯಾಪಾರ ಅಥವಾ ಹೊಸ ಯೋಜನೆಗಳ ಬಗ್ಗೆ ಕೆಲಸದ ಬಗ್ಗೆ ಚಿಂತನೆ ಮಾಡುತ್ತಿರುತ್ತಾರೆ. ಅವರಿಗೆ ತಮ್ಮ ವ್ಯಾಪಾರ ಮತ್ತು ಪ್ರಾಜೆಕ್ಟ್ ಮೇಲೆ ಹೆಚ್ಚು ಸಮಯ ಕಳೆಯುವುದೇ ಸಂತೋಷ ಕೊಡುತ್ತದೆ.
ಬೇರೆಯವರನ್ನು ನೋಡಿ ಕಲಿಯುವುದು ಸಾಕಷ್ಟಿದೆ:ಎಲ್ಲಾ ತಪ್ಪುಗಳನ್ನು ನಾವೇ ಮಾಡಿ ಅದನ್ನು ಸರಿಪಡಿಸಿಕೊಂಡು ಹೋಗುವಷ್ಟು ದೀರ್ಘ ಜೀವನ ನಮ್ಮದಲ್ಲ. ಅದ್ದರಿಂದ ಇನ್ನೊಬ್ಬರ ಸೋಲು-ಗೆಲುವುಗಳಿಂದ ತಿಳಿದುಕೊಳ್ಳಬೇಕಾದದ್ದು ತುಂಬಾ ಇರುತ್ತದೆ. ಇನ್ನೊಬ್ಬರಿಂದ ತಿಳಿದುಕೊಳ್ಳಬೇಕಾದ ಮತ್ತು ಕಲಿತುಕೊಳ್ಳಬೇಕಾದ ಅಗತ್ಯ ಏನಿದೆ,ಎಂಬ ಅಹಂಭಾವ ಇರಬಾರದು. ಶ್ರೀಮಂತರು ಯಾವಾಗಲೂ ಸಲಹೆಗಾರರನ್ನು ಇಟ್ಟುಕೊಂಡು ಮಾರ್ಗದರ್ಶನ ಪಡೆಯುತ್ತಾರೆ. ಹೀಗಾಗಿ ಯಾವಾಗಲೂ ತುಂಬಾ ಎಚ್ಚರಿಕೆಯಿಂದ ಮನಸ್ಸನ್ನು ಸದಾ ಜಾಗೃತವಾಗಿ ಇಡಬೇಕಾಗುತ್ತದೆ. ಹೊಸ ತನಕ್ಕೆ ಸದಾ ತೆರೆದುಕೊಂಡು ಹೊಂದಿಕೊಂಡು ಹೋಗಬೇಕಾಗುತ್ತದೆ.

 

 

 

ಕನಸು ಕಾಣಿರಿ:ನಿಮ್ಮ ಕನಸುಗಳನ್ನು ಬಿಟ್ಟು ಕೊಡಬೇಡಿ, ಉತ್ತಮ ಭವಿಷ್ಯದತ್ತ ಸಾಗಲು ಕಂಡ ಕನಸುಗಳು ಸಾಕಾರದತ್ತ ಮುನ್ನಡೆಯಬೇಕು, ಶ್ರೀಮಂತನಾಗಲು ಬಯಸುವ ವ್ಯಕ್ತಿ ಕೇವಲ ಕನಸುಗಳನ್ನು ನನಸು ಮಾಡುವತ್ತ ನಡೆಯುತ್ತಾ ಇರುತ್ತಾನೆ.ಜೀವನದಲ್ಲಿ ಎದುರಾಗುವ ಅಡಚಣೆಯ ವೈಫಲ್ಯ ತೊಂದರೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕನಸುಗಳ ಮೇಲೆ ಸವಾರಿ ಮಾಡುವುದಷ್ಟೇ ಅವರ ಗುರಿಯಾಗಿರುತ್ತದೆ.
ಹಠವಿರಲಿ:ಯಶಸ್ಸು ಎನ್ನುವುದು ನಿಂತ ನೀರಲ್ಲ , ಅದು ಯಾವಾಗಲೂ ನಿರಂತರವಾಗಿರುತ್ತದೆ, ಕೋಟ್ಯಾಧಿಪತಿಯಾಗ ಬಯಸುವವರಿಗೆ ನಿರಂತರತೆಯ ಯೋಜನೆ ಮತ್ತು ವ್ಯವಹಾರದ ಬಗ್ಗೆ ನಿರಂತರತೆ ಇರುತ್ತದೆ. ನಿರಂತರತೆ ಎನ್ನುವುದು ನಿಂತ ನೀರಲ್ಲ ಅದು ದೃಢತೆಯನ್ನು ಪ್ರತಿಬಿಂಬಿಸುವ ಚಟ,ಆ ಹಂಬಲ ಹಾಗೂ ತುಡಿತ ಇರಬೇಕು, ಹೀಗಾಗಿ ನಿರಂತರತೆ ತುಂಬಾ ಮುಖ್ಯ.
ನಿಮ್ಮನ್ನು ನೀವು ಅವಲೋಕನ ಮಾಡಿಕೊಳ್ಳಿ:ಪ್ರತಿ ಹಂತದಲ್ಲೂ ನೀವು ಏಳುಬೀಳುಗಳ ಬಗ್ಗೆ ಅವಲೋಕನ ಮಾಡುವುದು ತುಂಬಾ ಮುಖ್ಯ. ಪ್ರತಿನಿತ್ಯ ನಿಮ್ಮ ಪ್ರಗತಿಯ ಬಗ್ಗೆ ಅವಲೋಕನ ಮಾಡುವುದರಿಂದ ನಾವು ಯಾವ ಹಾದಿಯಲ್ಲಿ ಸಾಗುತ್ತಿದ್ದೇವೆ, ಹಾಗೂ ಸರಿ ತಪ್ಪುಗಳು ಯಾವುವು ಎಂಬುದು ಗೊತ್ತಾಗುತ್ತದೆ. ನಮ್ಮ ತಪ್ಪುಗಳನ್ನು ಸರಿಪಡಿಸಿ ನಡೆಯದಿದ್ದರೆ, ಯಶಸ್ಸು ಸಾಧ್ಯವಿಲ್ಲ. ಸೋಲು ಮತ್ತು ಗೆಲುವುಗಳಿಗೆ ಕಾರಣಗಳೇನು ? ಎಂಬುದನ್ನು ಪ್ರತಿ ಹೆಜ್ಜೆಯಲ್ಲೂ ತಿಳಿದುಕೊಳ್ಳುತ್ತಿರಬೇಕು.
ನಿಮ್ಮ ಸುತ್ತಮುತ್ತ ಒಳ್ಳೆಯ ಜನರು ಇರಲಿ:ಶ್ರೀಮಂತ ವ್ಯಕ್ತಿಗಳು ಯಾವಾಗಲೂ ತಮ್ಮ ಸುತ್ತಮುತ್ತ ಯಶಸ್ವಿ, ಸಮಾನ ಮನಸ್ಕ ಮತ್ತು ಬುದ್ಧಿವಂತ ಜನರನ್ನು ಹೊಂದಿರಲು ಬಯಸುತ್ತಾರೆ. ಯಶಸ್ವಿ ವ್ಯಕ್ತಿಗಳು ಅಂದರೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಮಹತ್ವದ ಸಾಧನೆ ಮಾಡಿ ಇನ್ನೂ ಹೆಚ್ಚಿನ ಸಾಧನೆಗಾಗಿ ಹಪಹಪಿಸುತ್ತಿರುತ್ತಾರೆ. ಅಂಥವರು ನಮ್ಮ ಸುತ್ತಮುತ್ತ ಇರುವಂತೆ ನೋಡಿಕೊಳ್ಳಬೇಕು. ಅವರಲ್ಲಿರುವ ಉತ್ಸಾಹ ಇನ್ನೂ ಉತ್ತಮ ಕೆಲಸಕ್ಕಾಗಿ ಪ್ರೇರೇಪಿಸುತ್ತದೆ.
ಮುಂಜಾನೆ ಬೇಗ ಏಳುವ ರೂಢಿ ಮಾಡಿಕೊಳ್ಳಿ:ಹೆಚ್ಚಿನ ಯಶಸ್ವಿ ವ್ಯಕ್ತಿಗಳು ಬೇಗ ಏಳುವ ಹವ್ಯಾಸ ಹೊಂದಿರುತ್ತಾರೆ. ಬೇಗ ಬೆಳ್ಳಗ್ಗೆ ಎದ್ದೇಳುವುದರಿಂದ ಹೆಚ್ಚಿನ ಸಮಯ ಸಿಗುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಉಲ್ಲಾಸದಿಂದ ಇರುವುದು ತುಂಬಾ ಮುಖ್ಯವಾಗಿರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top