fbpx
ಸಮಾಚಾರ

ಲಾಲು ಪುತ್ರನ ಸಂಸಾರದಲ್ಲಿ ಬಿರುಗಾಳಿ,ಕೋರ್ಟ್ ಮೆಟ್ಟಿಲೇರಿದ ದಂಪತಿಗಳು,ಕೊಟ್ಟ ಕಾರಣ ಏನ್ ಗೊತ್ತಾ

ಬಿಹಾರ ರಾಜ್ಯದ ಆರ್ ಜೆ ಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮೊದಲ ಮಗ ತೇಜ್ ಪ್ರತಾಪ್ ಯಾದವ್ 6 ತಿಂಗಳ ಹಿಂದೆ ಅಷ್ಟೇ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬಿಹಾರ ಸರ್ಕಾರದಲ್ಲಿ ಸಚಿವರಾಗಿದ್ದ ಚಂದ್ರಿಕಾ ರೈ ದೊಡ್ಡ ಮಗಳು ಐಶ್ವರ್ಯ ರೈ ಅವರನ್ನು ತೇಜ್ ಪ್ರತಾಪ್ ಮದುವೆ ಆದ ಹುಡುಗಿ ,ಐಶ್ವರ್ಯ ರೈ ದೆಹಲಿಯಲ್ಲಿ ಉನ್ನತ ಶಿಕ್ಷಣ ಅಧ್ಯಯನ ಮಾಡಿದ್ದಾರೆ. ಚಂದ್ರಿಕಾ ರೈ ಅವರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ. ಚಂದ್ರಿಕಾ ಕುಟುಂಬ ದೆಹಲಿಯಲ್ಲಿ ನೆಲೆಸಿದೆ. ತೇಜ್ ಪ್ರತಾಪ್ ಯಾದವ್ ಮದುವೆ ಚಂದ್ರಿಕಾ ದೊಡ್ಡ ಮಗಳು ಐಶ್ವರ್ಯ ರೈ ಜೊತೆ ಕಳೆದ ಮೇ ತಿಂಗಳಲ್ಲಿ ಬಹಳ ಅದ್ದೂರಿಯಾಗಿ ನಡೆದಿತ್ತು.
ಆದ್ರೆ ಈಗ ಕೇವಲ 6 ತಿಂಗಳಿಗೆ ಈ ದಂಪತಿಗಳು ವಿಚ್ಛೇದನಕ್ಕಾಗಿ ಕೋರ್ಟ್ ಗೆ ಹೋಗಿದ್ದಾರೆ ,ಈ ವಿಷಯ ತಿಳಿಯುತ್ತಿದ್ದಂತೆ ಐಶ್ವರ್ಯಾ ರೈ ಮತ್ತು ಅವರ ಪೋಷಕರು ತೇಜ್ ಪ್ರತಾಪ್ ಯಾದವ್ ರ ತಾಯಿ ರಾಬ್ರಿ ದೇವಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಬಹುಕೋಟಿ ಮೇವು ಹಗರಣದಲ್ಲಿ ಆರ್ ಜೆಡಿ ಮುಖ್ಯಸ್ಥರಾದ ಲಾಲು ಪ್ರಸಾದ್ ಯಾದವ್ ರಾಂಚಿಯ ಜೈಲಿನಲ್ಲಿದ್ದಾರೆ. ಸದ್ಯಕ್ಕೆ ವಿಚ್ಛೇದನ ಅರ್ಜಿಯನ್ನು ಹಿಂತೆಗೆದುಕೊಳ್ಳುವ ಪ್ರಯತ್ನಗಳು ನಡೆದಿವೆ ಎಂದು ಸಂಬಂಧಿಗಳು ತಿಳಿಸಿದ್ದಾರೆ.ಕೆಲವು ದಿನಗಳ ಹಿಂದೆ ತೇಜ್ ಪ್ರತಾಪ್ ಯಾದವ್ ವಿಚ್ಛೇದನ ಅರ್ಜಿಯೊಂದಿಗೆ ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ ಅಂದು ತಾಂತ್ರಿಕದೋಷದ ಕಾರಣಗಳಿಂದಾಗಿ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆದರೆ ಈ ಬಗ್ಗೆ ಲಾಲು ಪ್ರಸಾದ್ ಯಾದವ್ ಕುಟುಂಬದ ಸದಸ್ಯರೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಈ ಬಗ್ಗೆ ತೇಜ್ ಪ್ರತಾಪ್ ಯಾದವ್ ಅವರ ವಕೀಲ ಯಶವಂತ್ ಕುಮಾರ್ ಶರ್ಮಾ ಮಾತನಾಡಿ, ಇಬ್ಬರ ನಡುವೆ ಸಾಂಸರಿಕ ಜೀವನ ಚೆನ್ನಾಗಿರಲಿಲ್ಲ ಎಂದು ದೃಢಪಡಿಸಿದ್ದಾರೆ. ಜೊತೆಗೆ ತೇಜ್ ಪ್ರತಾಪ್ ಯಾದವ್ ಅವರ ಪರವಾಗಿ ಹಿಂದೂ ಮದುವೆ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಬಿಟ್ಟು ಈ ಸಂದರ್ಭದಲ್ಲಿ ಬೇರೆ ಯಾವುದನ್ನೂ ಹೇಳಲಾರೆ ಅಂತ ತಿಳಿಸಿದ್ದಾರೆ.

 

ತೇಜ್ ಪ್ರತಿಕ್ರಿಯೆ:
ಈ ವಿಷಯದ ಕುರಿತು ಖಾಸಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಲಾಲು ಪುತ್ರ ತೇಜ್​, ಉಸಿರುಗಟ್ಟಿಸುವ ಕಡೆ ಬಾಳಲು ಇಷ್ಟವಿಲ್ಲ ಎಂದು ಸ್ಟಷ್ಟಪಡಿಸಿದ್ದಾರೆ.ತನ್ನ ಪತ್ನಿ ಐಶ್ವರ್ಯಗೆ ವಿಚ್ಚೇದನ ನೀಡುತ್ತಿರುವುದನ್ನ ಸ್ಪಷ್ಟಪಡಿಸಿದ ತೇಜ್​​, ಈ ಬಗ್ಗೆ ಮಾತನಾಡಲು ರಾಂಚಿಯಲ್ಲಿರುವ ತನ್ನ ತಂದೆ ಬಳಿಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ. ಇಬ್ಬರನ್ನೂ ಒಂದುಗೂಡಿಸುವ ಸಲುವಾಗಿ ಕುಟುಂಬದೊಳಗೆ ಸಾಕಷ್ಟು ಪ್ರಯತ್ನಗಳು ನಡೆದಿವೆ ಎನ್ನಲಾಗುತ್ತಿದೆ. ತೇಜ್​ರ ಮಾವ ಚಂದ್ರಿಕಾ ರಾಯ್​ ರಾತ್ರಿಯಿಡೀ ಸಂಧಾನದ ಮಾತುಕತೆ ನಡೆಸಿದ್ದಾರೆ. ಆದರೂ ಮತ್ತೆ ಒಂದಾಗಿ ಬಾಳಲು ಸಾಧ್ಯವೇ ಇಲ್ಲ ಎಂದಿರುವ ತೇಜ್​ ಈಗ ಕೋರ್ಟ್​ ಮೆಟ್ಟಿಲೇರಿದ್ದಾರೆ.
ತೇಜ್​​ – ಐಶ್ವರ್ಯ ವಿಚ್ಛೇದನದ ಕುರಿತಾಗಿ ನವೆಂಬರ್​ 29ರಂದು ಕೋರ್ಟ್​ ವಿಚಾರಣೆ ನಡೆಸಲಿದೆ. ಹಿಂದೂ ವಿವಾಹ ಕಾಯ್ದೆಯಡಿ ಮದುವೆಯಾದ ಒಂದು ವರ್ಷ ಕಳೆದ ನಂತರವಷ್ಟೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ವರ್ಷದೊಳಗೆ ವಿಚ್ಛೇದನ ಪಡೆದ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ. ಸದ್ಯ ತನ್ನ ಹೆಂಡತಿಯಿಂದ ನನಗೆ ತೊಂದರೆಯಾಗಿದೆ ಎಂದು ತೇಜ್​ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕೋರ್ಟ್​ ಇದನ್ನು ಅಂಗೀಕರಿಸುವುದೇ ಎಂದು ಕಾದುನೋಡಬೇಕಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top