fbpx
ಸಮಾಚಾರ

ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಣಿ ತ್ರಿಶಿಖಾ ಕುಮಾರಿ

ಇಂದು ಅರಮನೆ ನಗರಿ ಮೈಸೂರಿನಲ್ಲಿ ಸಂತೋಷದ ವಾತಾವರಣ ಯಾಕೆ ಗೊತ್ತಾ ಇಂದು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸೊಸೆ ತ್ರಿಶಿಕಾ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
.ಶ್ರೀಕಂಠದತ್ತ ಒಡೆಯರ ಮರಣದ ನಂತರ ಅವರಿಗೆ ಮಕ್ಕಳಿಲ್ಲದ ಕಾರಣ ಯದುವೀರ್ ಅವರನ್ನು ಮಹಾರಾಣಿ ಪ್ರಮೋದಾ ದೇವಿ ದತ್ತು ಪಡೆದುಕೊಂಡಿದ್ದರು ,2016ರಲ್ಲಿ ರಾಜಸ್ಥಾನದ ದುರ್ಗಪುರದ ರಾಜ ಮನೆತನದ ರಾಜಕುಮಾರಿ ತ್ರಿಷಿಕಾ ಕುಮಾರಿ ಅವರನ್ನು ಯದುವೀರ್ ಮದುವೆಯಾಗಿದ್ದರು,ಜನಪದ ಕಥೆಯೊಂದರ ಪ್ರಕಾರ, ಶ್ರೀರಂಗಪಟ್ಟಣದ ರಾಜ ಶ್ರೀರಂಗರಾಯನ ಪತ್ನಿ ಅಲಮೇಲಮ್ಮನ ಶಾಪದಿಂದಾಗಿ ಒಡೆಯರ್‌ ವಂಶದ ಅರಸರಿಗೆ ಮಕ್ಕಳಾಗುತ್ತಿರಲಿಲ್ಲ ಎಂಬ ಪ್ರತೀತಿ ಇದೆ. ಈಗ ಕುಟುಂಬಕ್ಕೆ ರಾಜಕುಮಾರಿ ತ್ರಿಷಿಕಾ ಹಾಗೂ ಯದುವೀರ್ ರವರಿಗೆ ಮಗುವಾಗಿ ಮಕ್ಕಳ ಭಾಗ್ಯ ಕಾಣುವಂತಾಗಿದೆ.

ಹೌದು ರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಹಾಗು ರಾಣಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ತಂದೆ ತಾಯಿ ಯಾಗಿರುವ ವಿಷಯ ಎಲ್ಲರಿಗೂ ಗೊತ್ತು , ಈ ವಿಷ್ಯ ಮೈಸೂರಿನಲ್ಲಿ ಭಾರಿ ಸಂತಸಕ್ಕೆ ಸಾಕ್ಷಿಯಾಗಿತ್ತು . ಮೈಸೂರಿನ ಅರಮನೆಯಲ್ಲಿ ಇಂದು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಶಿಕಾ ಹುಟ್ಟುಹಬ್ಬದ ಸಂತಸ ದಲ್ಲಿ ಇದ್ದಾರೆ .

 

 

 

ಯದುವೀರ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತ್ರಿಶಿಕಾ ಹಾಗೂ ತಮ್ಮ ಮಗುವಿನ ಫೋಟೋ ಹಾಕಿ ಜೊತೆಗೆ ಹೀಗೆ ಬರೆದು “ನನ್ನ ಧರ್ಮಪತ್ನಿಯಾದ, ಸನ್ನಿಧಾನ ಸವಾರಿಯವರು ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ವರ್ಧಂತಿಯಂದು ಶುಭ ಕೋರುತ್ತೇನೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ”ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top