fbpx
ಸಮಾಚಾರ

ಅಯ್ಯೋ ಕಷ್ಟ ಆಗಲ್ಲ ಅಂದ್ರೆ ಆ ಕಷ್ಟಗಳಿಂದ ಮುಕ್ತರಾಗಲು ಚಾಣಕ್ಯನ ಈ ಮಾತುಗಳನ್ನು ಕೇಳಿ ಸಾಕು

ಜೀವನದ ಎಲ್ಲಾ ಕಷ್ಟಗಳಿಂದ ಮುಕ್ತರಾಗಲು ಚಾಣಕ್ಯನ ಈ ಕೆಲವು ಮಾತುಗಳನ್ನು ಮರೆಯಬೇಡಿ .
ಪುಣ್ಯದ ಕೆಲಸವನ್ನು ಮಾಡದೇ ಪುಣ್ಯದ ಫಲವನ್ನು ಎಲ್ಲರೂ ಬಯಸುತ್ತಾರೆ. ಆದೇ ಪಾಪದ ಕೆಲಸ ಮಾಡುತ್ತಾರೆ ಆದರೆ ಪಾಪದ ಕೆಲಸ ಯಾರಿಗೂ ಬೇಡವಾಗುತ್ತದೆ. ಪಾಪದ ಕೆಲಸದಿಂದ ಗಳಿಸಬೇಡಿ. ಈ ರೀತಿ ಖರ್ಚು ಮಾಡಬೇಡಿ ಅದು ಸಾಲವಾಗಬಾರದು. ಈ ರೀತಿ ತಿನ್ನಬೇಡಿ, ಈ ರೀತಿ ಮಾತನಾಡಬೇಡಿ ಅದು ಬೇರೆಯವರಿಗೆ ನೋವಾಗುವಂತೆ, ಈ ರೀತಿ ನಡೆಯಬೇಡಿ ಅದು ತಡವಾಗಿ, ಈ ರೀತಿ ಯೋಚನೆ ಮಾಡಬೇಡಿ ಅದು ಚಿಂತೆ ಯಾಗುವಂತೆ.ಚಿಕ್ಕವರಾಗಿದ್ದರೆ ಸಿಗುವುದು ದೊಡ್ಡಮನೆ, ದೊಡ್ಡವರಾದ ಮೇಲೆ ತಾಯಿಯೂ ಕೂಡ ತನ್ನಿಂದ ನೆಲೆಕೇಳುವಳು, ಸುಳ್ಳು ಹೇಳಿ ಸಂಬಂಧವನ್ನು ಕೆಡಿಸುವ ಬದಲು ನಿಜವನ್ನು ತಿಳಿಸಬೇಕು ಯಾಕೆಂದರೆ ಸತ್ಯ ಒಂದು ದಿನ ಎಲ್ಲರ ಮುಂದೆ ಬಂದೇ ಬರುತ್ತದೆ. ಸಹಾಯ ಮಾಡಿ ಅದು ಯಾವ ಲಾಭದ ಯೋಚನೆ ಇಲ್ಲದೆ. ಹೊಂದಿಕೊಂಡು ಬಾಳಿರಿ ಯಾವುದೇ ಅನುಮಾನ ಇಲ್ಲದೆ. ಜೀವನ ನಡೆಸುವುದು ಕಲಿಯಿರಿ ಅದು ಅಹಂಕಾರವಿಲ್ಲದೆ.

 

ಜೀವನದಲ್ಲಿ ಮುಂದೆ ಬರುವ ವ್ಯಕ್ತಿ ಯಾರಿಗೂ ಹಾನಿ ಮಾಡಲು ಬಯಸುವುದಿಲ್ಲ ಮತ್ತು ಬೇರೊಬ್ಬರಿಗೆ ಕೆಟ್ಟದ್ದು ಬಯಸುವ ವ್ಯಕ್ತಿ ಯಾವತ್ತೂ ದೊಡ್ಡವರಾಗುವುದಿಲ್ಲ, ಮುಂದೆಯೂ ಬರುವುದಿಲ್ಲ, ಯಾವುದೇ ಒಳ್ಳೆಯ ವ್ಯಕ್ತಿಯಿಂದ ತಪ್ಪು ನಡೆದರೆ ಸಹನೆಯಿಂದ ಇರಿ. ಯಾಕೆಂದರೆ ಒಂದು ರಕ್ತದ ಹನಿ ಹೊರಚೆಲ್ಲಿ ಬಿದ್ದರೂ ಅದಕ್ಕೆ ಬೆಲೆ ಕಡಿಮೆಯಾಗುವುದಿಲ್ಲ.
ಕೋಪವೊ ಒಂಟಿಯಾಗಿಯೇ ಬರುತ್ತದೆ ಆದರೆ ಅದರ ಜೊತೆಗೆ ಎಲ್ಲಾ ಒಳ್ಳೆಯತನವನ್ನು ಜೊತೆಗೆ ಕರೆದುಕೊಂಡು ಹೋಗುತ್ತದೆ. ತಾಳ್ಮೆಯೂ ಒಂಟಿಯಾಗಿಯೇ ಬರುತ್ತದೆ ಆದರೆ ಅದು ನಮಗೆ ಒಳ್ಳೆಯದನ್ನು ಕೊಟ್ಟು ಹೋಗುತ್ತದೆ. ಯಾರಾದರೂ ವ್ಯಕ್ತಿ ನಿಮ್ಮನ್ನು ನೋಡಿ ಉರಿದು ಕೊಳ್ಳುತ್ತಾರೋ, ಅಂದರೆ ಅದು ಅವರ ಕೆಟ್ಟ ಗುಣವೇನು ಅಲ್ಲ, ಬದಲಿಗೆ ಅದು ನಿಮ್ಮ ಸಾಮರ್ಥ್ಯವಾಗಿದೆ .ಅದು ಆ ವ್ಯಕ್ತಿಗಳಿಗೆ ಕೆಲಸ ಮಾಡಲು ಸತಾಯಿಸುತ್ತದೆ. ಸಮಾಜದಲ್ಲಿ ಯಾಕೆ ಬದಲಾವಣೆಯಾಗುವುದಿಲ್ಲ ? ಯಾಕೆಂದರೆ ಬಡವರಲ್ಲಿ ಧೈರ್ಯವಿಲ್ಲ, ಮಾಧ್ಯಮದವರಿಗೆ ಸಮಯವಿರುವುದಿಲ್ಲ ಮತ್ತು ಶ್ರೀಮಂತರಿಗೆ ಅವಶ್ಯಕತೆಯೇ ಇರುವುದಿಲ್ಲ. ಯಾರದ್ದೋ ಅಂತಿಮ ಸಂಸ್ಕಾರಕ್ಕೆ ಹೋದರೆ ನೀವು ಹೀಗೆ ತಿಳಿಯಬೇಡಿ. ಅದು ಅವರನ್ನು ಅಂತ್ಯದ ಸ್ಥಳಕ್ಕೆ ಕಳುಹಿಸುವುದಕ್ಕೆ ನೀವು ಹೋಗಿದ್ದೀರಾ ಎಂದು. ಬದಲಿಗೆ ನೀವು ತಿಳಿಯಬೇಕಾಗಿರುವುದು ಸತ್ತ ವ್ಯಕ್ತಿಯು ನಿಮಗೆ ಅಂತ್ಯದ ಸತ್ಯವನ್ನು ತೋರಿಸಲು ಕರೆದುಕೊಂಡು ಹೋಗುತ್ತಾನೆ ಎಂದು.

 

 

 

ಯಾವ ವ್ಯಕ್ತಿ ನಿಮ್ಮನ್ನು ಕಂಡು ಉರಿದು ಕೊಳ್ಳುತ್ತಾರೋ ಅವರನ್ನು ದ್ವೇಷಿಸಬೇಡಿ. ಏಕೆಂದರೆ ಅದೇ ವ್ಯಕ್ತಿಗಳು ತಿಳಿದಿರುತ್ತಾರೆ ನೀವು ಅವರಿಗಿಂತ ದೊಡ್ಡವರು ಎಂದು. ಯಾವ ವ್ಯಕ್ತಿ ನಿಮ್ಮ ಸಂತೋಷಕ್ಕಾಗಿ ಸೋಲನ್ನು ಒಪ್ಪಿಕೊಳ್ಳುವನೋ ಆತನಿಂದ ನೀವು ಯಾವತ್ತೂ ಗೆಲ್ಲಲು ಸಾಧ್ಯವಿಲ್ಲ. ನೀವು ನಿಮ್ಮ ಜೀವನವನ್ನು ಬೇರೊಬ್ಬರೊಂದಿಗೆ ಹೋಲಿಸಬೇಡಿ. ಸೂರ್ಯ, ಚಂದ್ರ ಇಬ್ಬರು ಹೊಳೆಯುತ್ತಾರೆ. ಆದರೆ ಅವರ ಸಮಯ ಬಂದಾಗಲೇ ಮಾತ್ರ ಹೊಳೆಯುತ್ತಾರೆ. ಗುಡಿಯಲ್ಲಿ ಇರುವ ದೇವರನ್ನು ನಾವು ನಿರ್ಮಿಸಿದ್ದೇವೆ . ಆದರೆ ಮನೆಯಲ್ಲಿ ಇರುವ ತಂದೆ ತಾಯಿಗಳೆ ಆ ದೇವರಾಗಿದ್ದಾರೆ ಯಾಕೆಂದರೆ ಅವರು ನಮ್ಮನ್ನು ನಿರ್ಮಿಸಿದ್ದಾರೆ. ಸಮತೋಲನ ಮನಸ್ಸಿಗಿಂತ ಯಾವ ಸರಳತೆಯು ಇಲ್ಲ. ಸಂತೋಷದಂತಹ ಯಾವ ಸುಖವೂ ಇಲ್ಲ, ಲೋಪದಂತಹ ಯಾವ ರೂಪವು ಇಲ್ಲ ಮತ್ತು ಜಯ ಯಾವ ಪುಣ್ಯವೂ ಆಲ್ಲ. ಕೆಲವು ಬಾರಿ ಸುಮ್ಮನೆ ಇರುವುದು ತಪ್ಪೇನಲ್ಲ ಬದಲಿಗೆ ತಿಳುವಳಿಕೆ ಮತ್ತು ಸಮಯದ ದೃಢೀಕರಣ ವಾಗಿರುತ್ತದೆ. ಜ್ಞಾನಿಗೆ ತಿಳಿ ಹೇಳಬಹುದು, ಅಜ್ಞಾನಿಗೂ ತಿಳಿ ಹೇಳಬಹುದು, ಆದರೆ ಅಭಿಮಾನಿಗೆ ಯಾರು ತಿಳಿ ಹೇಳಲು ಆಗುವುದಿಲ್ಲ. ಆತನಿಗೆ ಕಾಲವೇ ತಿಳಿ ಹೇಳುತ್ತದೆ.

ಸಂಸಾರವು ಅವಶ್ಯಕತೆಗಳಿಂದ ಕೂಡಿರುತ್ತದೆ. ಚಳಿಗಾಲದಲ್ಲಿ ಯಾವ ಸೂರ್ಯನಿಗಾಗಿ ಕಾಯುತ್ತಾರೋ ಅದೇ ಬೇಸಿಗೆಯಲ್ಲಿ ಅದೇ ಸೂರ್ಯನನ್ನು ತಿರಸ್ಕರಿಸುತ್ತಾರೆ. ನಿಮ್ಮ ಅವಶ್ಯಕತೆ ನಿಮಗೆ ಬೆಲೆ ಇದ್ದಾಗ ಮಾತ್ರ. ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ. ಇದು ನಿಮ್ಮನ್ನು ನಾಶ ಮಾಡುವುದು ಖಂಡಿತ. ಘಟನೆಗಳಿಗೆ ಬೇಸರವಾಗಿ ಯಾವ ಚಂದನವನ್ನು ತೇಯುತ್ತಾರೋ ಅದನ್ನು ಭಗವಂತನ ಹಣೆಗೆ ಹಚ್ಚಲಾಗುತ್ತದೆ. ಯಾವುದನ್ನು ತೇಯುವುದಿಲ್ಲವೋ ಅದನ್ನು ಸುಡಲಾಗುತ್ತದೆ.ಶ್ರೀಮಂತರ ಮನೆಯಲ್ಲಿ ಕುಳಿತ ಕಾಗೆ ಎಲ್ಲರಿಗೂ ನವಿಲಿನಂತೆ ಕಾಣುತ್ತದೆ ಮತ್ತು ಬಡವರ ಮನೆಯಲ್ಲಿ ಇರುವ ಹಸುಗೂಸು ಕರ್ಣನ ತರಹ ಕಾಣುತ್ತದೆ. ಮನುಷ್ಯನ ಒಳ್ಳೆಯತನವನ್ನು ನೋಡಿ ಎಲ್ಲರೂ ಮೌನವಾಗಿರುತ್ತಾರೆ. ಆದರೆ ಆ ವ್ಯಕ್ತಿ ಸ್ವಲ್ಪ ತಪ್ಪು ಮಾಡಿದರೆ ಮೂರ್ಖರು ಕೂಡ ಮಾತನಾಡುತ್ತಾರೆ.ಹಾವಿನ ಹಲ್ಲಿನಲ್ಲಿ, ಚೇಳಿನ ಕೊಂಡಿಯಲ್ಲಿ, ದುಂಬಿಯ ಮುಳ್ಳಿನಲ್ಲಿ ಮತ್ತು ಮನುಷ್ಯನ ಮನಸ್ಸಿನಲ್ಲಿ ಎಷ್ಟು ವಿಷವಿದೆ ಎಂದು ಹೇಳುವುದು ಅಸಾಧ್ಯ. ನಮ್ಮನ್ನು ಎಷ್ಟು ಜನ ಗುರುತಿಸುತ್ತಾರೆ ಎನ್ನುವುದು ಮುಖ್ಯವಲ್ಲ. ನಮ್ಮನ್ನು ಯಾವ ಕಾರಣಕ್ಕಾಗಿ ಗುರುತಿಸುತ್ತಿದ್ದಾರೆ ಎನ್ನುವುದು ಮುಖ್ಯವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top