fbpx
ಸಮಾಚಾರ

ಅಯ್ಯೋ ಇನ್ಮುಂದೆ ಇಲ್ಲಿ ಹೆಣ್ಮಕ್ಳು ನೈಟಿ ಹಾಕೊಂಡ್ರೆ 2000ರೂ ದಂಡ ಕೊಡ್ಬೇಕಂತೆ.

ಉತ್ತರ ಪ್ರದೇಶ, ಹರಿಯಾಣದ ಗ್ರಾಮಗಳಲ್ಲಿ ಕೆಲ ಸಂಪ್ರದಾಯ ಹಾಗೂ ನಿಯಮಗಳು ಸ್ವಲ್ಪ ವಿಚಿತ್ರವಾಗಿರೋದು ಸಹಜ ,ಅಲ್ಲಿನ ಪಂಚಾಯಿತಿಗಳಲ್ಲಿ ಇಂತಹ ನಿಯಮಾವಳಿ ಹಾಗು ನಿಷೇಧವನ್ನು ಹೇರಿಸಿವುದು ಸಾಮನ್ಯ ವಾದ ವಿಚಾರ ಅಂದ್ರೆ ಅಲ್ಲಿಯ ಗಾಳಿ ಈಗ ಆಂಧ್ರದ ಪಶ್ಚಿಮ ಗೋದಾವರಿಯ ನಿಡಮರ್ರು ಮಂಡಲದ ತೋಕಲಪಲ್ಲಿಗೆ ಬಿಸಿದೆ .ಹೌದು ಈ ಊರಿನಲ್ಲಿ ಇನ್ಮುಂದೆ ಹೆಣ್ಮಕ್ಳು ನೈಟಿ ಧರಿಸುವ ಆಗಿಲ್ಲ ,ಅಪ್ಪಿ ತಪ್ಪಿ ಹಾಕೊಂಡ್ರೆ ಬಾರಿ ಮೊತ್ತ ತೆರಬೇಕು, ಈ ಹಳ್ಳಿಯಲ್ಲಿ ಯಾರಾದರೂ ಮಹಿಳೆಯರು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ನೈಟಿ ಧರಿಸಿಬಾರದು ಎಂದು ಗ್ರಾಮದ ಮುಖ್ಯಸ್ಥರು ಆದೇಶಿಸಿದ್ದಾರೆ.

 

 

 

ಒಂದು ವೇಳೆ ಇದನ್ನು ಉಲ್ಲಂಘಿಸಿದರೆ 2 ಸಾವಿರ ದಂಡ ವಿಧಿಸಲಾಗುವುದು ಎಂದೂ ಹೇಳಿದ್ದಾರಂತೆ. ಅಷ್ಟೆ ಅಲ್ಲ, ಮಹಿಳೆಯರು ‘ನೈಟಿ’ ಧರಿಸಿದ ಕುರಿತು ಯಾರಾದರೂ ದೂರು ನೀಡಿದರೆ, ಅವರಿಗೆ ಒಂದು ಸಾವಿರ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ. ಈ ಹಳ್ಳಿಯಲ್ಲಿ ಮಹಿಳೆಯರು ‘ನೈಟಿ’ ಧರಿಸುವುದನ್ನು ಹಿರಿಯರು ವಿರೋಧಿಸುತ್ತಿದ್ದಾರೆ.ನೈಟಿ’ ಧರಿಸಿ ಮಹಿಳೆಯರು ಮಕ್ಕಳನ್ನು ಶಾಲೆ ಕರೆದುಕೊಂಡು ಹೋಗುವುದು ಹಾಗೂ ತರಕಾರಿ ಖರೀದಿಗೆ ಹೋಗುವುದು ಸರಿಯಾದ ಕ್ರಮವಲ್ಲ. ಅದನ್ನು ಕೇವಲ ರಾತ್ರಿಯಷ್ಟೆ ತೊಡಬೇಕು ಎನ್ನುವುದು ಗ್ರಾಮದ ಹಿರಿಯರ ವಾದ. ಆದರೆ ಈ ನಿರ್ಧಾರದ ವಿರುದ್ಧ ಸಾಕಷ್ಟು ವಿರೋಧವೂ ಕೇಳಿ ಬರುತ್ತಿದೆ. ಮಹಿಳೆಯರ ಖಾಸಗಿ ನಿರ್ಧಾರದ ಕುರಿತು ನಿಷೇಧ ಹೇರುವುದು ಸರಿಯಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top