fbpx
ಮನೋರಂಜನೆ

ಐಶೂ ಅಲಿಯಾಸ್ ಅಮೂಲ್ಯ ಪ್ರೀತಿಯ ಅಕ್ಕನಿಗೆ ಬರ್ತ್ಡೇ ವಿಶ್ ಮಾಡಿದ್ದೂ ಹೀಗೆ ,ಯಾವ ಅಕ್ಕ ಅನ್ಕೊಂಡ್ರೆ,ನೀವೇ ನೋಡಿ

ಮದುವೆಯಾದ ನಂತರ ಚಿತ್ರರಂಗದಿಂದ ದೂರ ಸರಿದು ಸಂಸಾರ ತಾಪತ್ರಗಳಲ್ಲಿ ಮುಳುಗಿಹೋಗಿರುವಾಕೆ ಅಮೂಲ್ಯ. ತನ್ನ ರೂಪ ಲಾವಣ್ಯದಿಂದಲೇ ಕನ್ನಡಿಗರ ಮನೆಮಾತಾಗಿದ್ದರು ಅಮೂಲ್ಯ ,ಓದು-ಸಿನಿಮಾ ಅಂತಾ ಎರಡು ಕಡೆ ಬ್ಯಾಲೆನ್ಸ್ ಮಾಡಿಕೊಂಡು ಬರ್ತಿದ್ದ ಐಸೂ, ಮದುವೆಗೆ ಮುನ್ನ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ರು.. ವರ್ಷಕ್ಕೆ ಕಮ್ಮಿಯಂದ್ರೂ ಮೂರ್‍ನಾಲ್ಕು ಸಿನಿಮಾಗಳು ರಿಲೀಸ್ ಆಗ್ತಿದ್ವು.. ನಿಜ ಹೇಳ್ಬೇಕು ಅಂದ್ರೆ ಒಂದಷ್ಟು ಚಿತ್ರಗಳು ಅಮೂಲ್ಯಗಾಗಿನೆ ಮಾಡಿದ್ದಾರೇನೋ ಅನ್ನುವಂತಿದ್ವು.. ಹೀಗಾಗಿನೆ ಬಹು ಬೇಗನೆ ಸ್ಯಾಂಡಲ್‌ವುಡ್‌ನ ರಾಣಿಪಟ್ಟ ಅಲಂಕರಿಸಿದ್ದು ಈ ಚಲುವೆ.. ನಾಯಕಿಯಾಗಿ ಬ್ಯುಸೀ ಇರುವ ಹೊತ್ತಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಮೂಲ್ಯ ಬಣ್ಣದ ಲೋಕದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿಯ ಜೊತೆ ಕಾಲಕಳೆದಿದ್ದರು

ಮಾಸ್ತಿಗುಡಿ ಮತ್ತು ಮುಗುಳುನಗೆ ಚಿತ್ರಗಳಲ್ಲಿ ನಟಿಸಿದ ನಂತರ ಮತ್ಯಾವ ಚಿತ್ರಗಳಲ್ಲೂ ಐಸೂ ಕಾಣಿಸಿಕೊಂಡಿರಲಿಲ್ಲ ಆದರೆ ಇದೀಗ ಅಮೂಲ್ಯ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದು ಆದಷ್ಟು ಬೇಗ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ನಮ್ಮ ಗೋಲ್ಡನ್ ಕ್ವೀನ್ ಅಮೂಲ್ಯ ಈಗ ಅಭಿಮಾನಿಗಳಿಗೆ ಸಿಗುವುದು ಒಂದು ಸಾಮಾಜಿಕ ಜಾಲತಾಣದಲ್ಲಿ ,ಸದಾ ಇಲ್ಲಿ ಸಕ್ರಿಯರಾಗಿ ತಮನ್ನು ತೊಡಗಿಸಿಕೊಂಡು ಅಭಿಮಾನಿಗಳಿಗೆ ಹತ್ತಿರವಾಗೇ ಇದ್ದಾರೆ .ಅಮೂಲ್ಯ ಅಕ್ಕನಿಗೆ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದೂ ಹೀಗೆ,ಯಾವ ಅಕ್ಕ ಅನ್ಕೊಂಡ್ರಾ ?

 

 

 

ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿ,ಇಂದು ವಿಜಯ ಲಕ್ಷ್ಮಿಯವರ ಹುಟ್ಟುಹಬ್ಬ,ನಟಿ ಅಮೂಲ್ಯ, ವಿಜಯಲಕ್ಷ್ಮಿ ಮತ್ತು ನಟ ದರ್ಶನ್ ಪಾರ್ಟಿಗಳಲ್ಲಿ ಆಗಾಗ ಭೇಟಿಯಾಗುತ್ತಿರುತ್ತಾರೆ. ಅದರಲ್ಲೂ ಅಮೂಲ್ಯ ಮತ್ತು ವಿಜಯಲಕ್ಷ್ಮಿ ಅವರು ಆತ್ಮೀಯರಾಗಿದ್ದು, ಅಮೂಲ್ಯ ಯಾವಾಗಲೂ ಅವರನ್ನು ಅಕ್ಕ ಎಂದು ಕರೆಯುತ್ತಾರೆ. ಇಂದು ಕೂಡ ಪ್ರೀತಿಯ ಅಕ್ಕನಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ. ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ಅವರ ಜೊತೆಗಿದ್ದ ಫೋಟೋಗಳನ್ನು ಪೋಸ್ಟ್ ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ. ” ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕ. ನೀವು ಯಾವಾಗಲೂ ಸಂತೋಷದಿಂದ ಇರಬೇಕು” ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top