fbpx
ಮನೋರಂಜನೆ

ದೀಪಿಕಾ ಪಡುಕೋಣೆ ಮದುವೆಗೆ ಸ್ಯಾಂಡಲ್ ವುಡ್ನ ಈ ಖ್ಯಾತ ನಿರ್ದೇಶಕನಿಗೆ ಸಿಕ್ತು ಆಮಂತ್ರಣ

ಬಾಲಿವುಡ್ ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ,ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬಾಲಿವುಡ್ ಲವ್​ ಬರ್ಡ್ಸ್​ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಂದು ಇಟಲಿಗೆ ಪ್ರಯಾಣ ಬೆಳೆಸಿದರು.ಬಾಲಿವುಡ್ ನ ಅನೇಕ ಪ್ರಸಿದ್ಧ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ನವೆಂಬರ್ 14-15 ರಂದು ದೀಪಿಕಾ-ರಣವೀರ್ ಮದುವೆ ಕಾರ್ಯಕ್ರಮ ಇಟಲಿಯಲ್ಲಿ ನಡೆಯಲಿದೆ.ಮದುವೆಗೆ ಇನ್ನು ಕೆಲವೇ ದಿನ ಬಾಕಿಯಿದೆ. ಮದುವೆಗೆ ತಯಾರಿ ಮಾಡಿಕೊಳ್ಳಲು ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆಅಂದಂಗೆ ದೀಪ್​ವೀರ್​ ಜೋಡಿಯ ಮದುವೆಯು ನವೆಂಬರ್​ 14-15ರಂದು ಇಟಲಿಯ ಲೇಕ್​ ಕೊಮೊದಲ್ಲಿ ನಡೆಯಲಿದೆ.ರಣವೀರ್ ಹಾಗೂ ದೀಪಿಕಾ ಬೇರೆ ಬೇರೆ ಸಮುದಾಯದವರು. ಹಾಗಾಗಿ ತಮ್ಮ ಶೈಲಿಯಲ್ಲಿ ಎರಡು ಬಾರಿ ಮದುವೆಯಾಗಲಿದ್ದಾರೆ. 14 ರಂದು ದಕ್ಷಿಣ ಭಾರತದ ಶೈಲಿಯಲ್ಲಿ ಮದುವೆ ನಡೆದ್ರೆ 15 ರಂದು ಸಿಂಧಿ ಸಮುದಾಯದಂತೆ ಮದುವೆ ನಡೆಯಲಿದೆ.

 

 

 

ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ದೀಪ್​ವೀರ್ ಇತ್ತೀಚೆಗಷ್ಟೆ ಮದುವೆಯ ವಿಷಯವನ್ನು ಬಹಿರಂಗ ಪಡಿಸಿದ್ದರು. ಈ ಜೋಡಿ ಮದುವೆಗೆ ಇಡೀ ಬಾಲಿವುಡ್​ ಎದುರು ನೋಡುತ್ತಿದೆ.ಮದುವೆ ನಂತ್ರ ನವೆಂಬರ್ 23 ರಂದು ಬೆಂಗಳೂರಿನಲ್ಲಿ ಪಾರ್ಟಿ ನೀಡಲು ದೀಪಿಕಾ-ರಣವೀರ್ ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ದಂಡೇ ಬರುವ ಸಾಧ್ಯತೆಯಿದೆ.ಬಾಲಿವುಡ್ ನವರನ್ನು ಅಲ್ಲದೆ ದೀಪಿಕಾ ಸ್ಯಾಂಡಲ್ವುಡ್ ನ ಈ ನಿರ್ದೇಶಕರನ್ನು ಮದುವೆಗೆ ಕರೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ ,ಹೌದು ದೀಪಿಕಾ ಮೊದಲು ಅವರ ಸಿನಿ ಬದುಕು ಶುರು ಮಾಡಿದ್ದೂ ಕನ್ನಡ ಸಿನಿಮಾದ ಮೂಲಕವೇ ದೀಪಿಕಾ ಚಿತ್ರರಂಗದಲ್ಲಿ ಇಷ್ಟೊಂದು ಹೆಸರು ಮಾಡಲು ಕನ್ನಡ ಚಿತ್ರರಂಗವೂ ಕಾರಣ. ಏಕೆಂದರೆ ದೀಪಿಕಾ ಮೊದಲು ನಟಿಸಿದ್ದು, 2006ರ ಇಂದ್ರಜಿತ್​ ಲಂಕೇಶ್​ ನಿರ್ದೇಶನದ ಐಶ್ವರ್ಯ ಸಿನಿಮಾದಲ್ಲಿ, ಕೇವಲ 5 ಲಕ್ಷಕ್ಕೆ ಈ ಚಿತ್ರದಲ್ಲಿ ದೀಪಿಕಾ ಸೂಪರ್​ ಸ್ಟಾರ್​ ಉಪೇಂದ್ರ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಈ ಮೂಲಕ ಚಿತ್ರರಂಗಕ್ಕೆ ದೀಪಿಕಾ ಎಂಟ್ರಿ ಕೊಟ್ಟಿದ್ದರು.

ಆದ್ದರಿಂದ ದೀಪಿಕಾ ತಮ್ಮ ಮದುವೆಗೆ ಸ್ಯಾಂಡಲ್​ವುಡ್​ನಿಂದ ಇಂದ್ರಜಿತ್​ ಲಂಕೇಶ್​ಗೆ ಆಹ್ವಾನ ಬಂದಿದೆ.ಆದರೆ ಇಂದ್ರಜಿತ್​ಗೆ ಮದುವೆ ಆಮಂತ್ರಣ ಕೇವಲ ವಾಟ್ಸ್​ಪ್​ ಮೂಲಕ ಬಂದಿರುವುದರಿಂದ , ಮದುವೆಗೆ ಹೋಗದಿರಲು ತೀರ್ಮಾನಿಸಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿದೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top