fbpx
ಹೆಚ್ಚಿನ

ನೀವು ಜೀವನದಲ್ಲಿ ಯಶಸ್ಸು ಮತ್ತು ಗೆಲುವನ್ನು ಸಾಧಿಸಿ ಸಿರಿವಂತರಾಗಬೇಕು ಅನ್ಕೊಂಡ್ರೆ ಈ ಲಕ್ಷಣಗಳನ್ನು ನಿಮ್ ಹತ್ರ ಕೂಡ ಸೇರಿಸಬೇಡಿ

ಜೀವನದಲ್ಲಿ ಜಯ,ಕೆಲಸದಲ್ಲಿ ಯಶಸ್ಸು ಮತ್ತು ಗೆಲುವನ್ನು ಸಾಧಿಸಲು ಮತ್ತು ಸಿರಿವಂತರಾಗಲು ಈ ಲಕ್ಷಣಗಳು ಇರಬಾರದು .
ಮುಖ್ಯವಾಗಿ ಜೀವನದಲ್ಲಿ ಎಲ್ಲರೂ ಗೆಲ್ಲಲೇಬೇಕು, ಯಶಸ್ಸನ್ನು ಗಳಿಸಬೇಕು, ಧನವಂತರಾಗಬೇಕು ಎಂದು ಕನಸನ್ನು ಕಾಣುತ್ತಾರೆ. ಆದರೆ ಕೆಲವರಿಗೆ ಅದು ಕನಸು ಕನಸಾಗಿಯೇ ಉಳಿದು ಬಿಡುತ್ತದೆ. ಯಾಕೆಂದರೆ ಆ ಕನಸನ್ನು ನಿಜ ಮಾಡಿಕೊಳ್ಳುವ ಪ್ರಯತ್ನವನ್ನು ಯಾರೂ ಸಹ ಮಾಡುವುದಿಲ್ಲ. ಎಲ್ಲಾ ಕೆಲಸಗಳು ಸುಲಭವಾಗಿಯೇ ಆಗಬೇಕು ಎಂದು ಅಂದುಕೊಳ್ಳುತ್ತಾರೆ. ಉದಾಹರಣೆಗೆ ಜಿಮ್ ಗೆ ಹೋಗದೆ ಸಿಕ್ಸ್ ಪ್ಯಾಕ್ ಬರಬೇಕೆಂದು ಮತ್ತು ಇದ್ದಕ್ಕಿದ್ದ ಹಾಗೆ ಲಾಟರಿಯಲ್ಲಿ ಲಕ್ಷ ಲಕ್ಷ ಹಣ ಬರಬೇಕೆಂದು ಅಂದುಕೊಳ್ಳುತ್ತಾರೆ. ಆ ದುಡ್ಡಿನಿಂದ ಕಾರು, ಮನೆ, ಹೊಸ ಮೊಬೈಲ್ ಖರೀದಿ ಮಾಡಬೇಕೆಂದು, ಸೋಮಾರಿತನದ ಲೋಕದಲ್ಲಿಯೇ ಇರುತ್ತಾರೆ.

ಒಂದು ಊರಿನಲ್ಲಿ ರಾಮ ಎನ್ನುವ ಹುಡುಗನಿದ್ದನು. ಆ ರಾಮ ತುಂಬಾ ಸೋಮಾರಿ, ಪ್ರತಿ ಕೆಲಸವು ಸುಲಭವಾಗಿಯೇ ಆಗಬೇಕು ಎಂದು ಅಂದುಕೊಳ್ಳುತ್ತಿದ್ದ. ಕಷ್ಟಕರ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡುತ್ತಿರಲಿಲ್ಲ. ಒಂದು ದಿನ ಆ ಊರಿನಲ್ಲಿದ್ದ ಪಂಡಿತರು ಆ ರಾಮನ ಹತ್ತಿರ ಹೋಗಿ ರಾಮ ಬದಲಾಗುತ್ತಾನೇನೋ ಎಂದು ಪರೀಕ್ಷೆ ಮಾಡುತ್ತಾರೆ. ರಾಮ ನೀನು ಧನವಂತನಾಗಿ ಬದಲಾಗುವುದಕ್ಕೆ ಒಂದು ಮಾರ್ಗವಿದೆ.ಈ ಊರಿನ ಉತ್ತರ ಭಾಗಕ್ಕೆ ಒಂದು ದೊಡ್ಡ ಆಲದ ಮರವಿದೆ. ಆ ಮರದ ಕೆಳಗೆ ಹತ್ತು ಅಡಿ ದೂರದಲ್ಲಿ ನಿಧಿ ಇದೆ ಅಲ್ಲಿ ನೀನು ಮಣ್ಣನ್ನು ತೆಗಿ ಆಗ ನಿನಗೆ ಬಂಗಾರದ ನಾಣ್ಯಗಳು ಸಿಗುತ್ತವೆ ಎಂದು ಹೇಳಿ ಪಂಡಿತರು ಅಲ್ಲಿಂದ ಹೊರಟು ಹೋಗುತ್ತಾರೆ.
ಆಗ ಆ ರಾಮ ಬಂಗಾರದ ನಾಣ್ಯಗಳಿಗೆ ಎಷ್ಟು ಆಳ ಅಗೋಯಬೇಕೋ ಏನೋ ಒಂದು ವೇಳೆ ಇದ್ದರೆ ಅಲ್ಲಿ ಬಂಗಾರದ ನಾಣ್ಯಗಳು ಇಲ್ಲವೆಂದರೆ ಮಾಡಿದ ಕೆಲಸವೆಲ್ಲ ವ್ಯರ್ಥವಾಗುತ್ತದೆ ಎಂದು ರಾಮ ಸುಮ್ಮನಾಗುತ್ತಾನೆ. ಈ ರೀತಿಯಾಗಿ ಪ್ರತಿ ಕೆಲಸಕ್ಕೂ ಯಾವುದೋ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಹೀಗೆ ಸ್ವಲ್ಪ ಕಾಲದ ನಂತರ ಆ ಊರಿನಲ್ಲಿ ಬರಗಾಲ ಬರುತ್ತದೆ. ಕುಡಿಯುವುದಕ್ಕೆ ನೀರು ಇಲ್ಲದೆ ಊರಿನ ಜನ ತುಂಬಾ ಕಷ್ಟ ಪಡುತ್ತಾ ಇರುತ್ತಾರೆ ತುಂಬಾ ಬಾವಿಗಳನ್ನು ಅಗೆಯುತ್ತಾರೆ. ಎಷ್ಟೇ ಪ್ರಯತ್ನ ಮಾಡಿದರೂ ಒಂದು ಹನಿ ನೀರು ಕೂಡ ಸಿಗುವುದಿಲ್ಲ.

 

 

 

ಆಗ ರಾಮನಿಗೆ ಪಂಡಿತರು ಹೇಳಿದ ಮಾತುಗಳು ನೆನಪಿಗೆ ಬರುತ್ತವೆ. ಪಂಡಿತರು ಹೇಳಿದ ಹಾಗೆ ಬಂಗಾರದ ನಾಣ್ಯಗಳು ಸಿಕ್ಕರೆ ಸಂತೋಷವಾಗಿ ಇರಬಹುದು ಎಂದು ಅಂದುಕೊಳ್ಳುತ್ತಾನೆ. ತಕ್ಷಣ ಆಲದ ಮರದ ಬಳಿ ಹೋಗಿ ಮರದಿಂದ 10 ಅಡಿ ದೂರದಲ್ಲಿ ಅಗೆಯುವುದಕ್ಕೆ ಪ್ರಾರಂಭಿಸುತ್ತಾನೆ. ಎಷ್ಟೇ ಅಗೆದರೂ ನಾಣ್ಯಗಳು ಸಿಗುವುದಿಲ್ಲ. ಆದರೂ ಆ ಬರಗಾಲದಿಂದ ತಪ್ಪಿಸಿಕೊಳ್ಳುವುದಕ್ಕೆ ಹಣ ತುಂಬಾ ಮುಖ್ಯ ಎಂದು ನಾಣ್ಯಗಳು ಸಿಗುವವರೆಗೂ ಆಗೆಯಬೇಕು ಎಂದು ಆ ಕೆಲಸವನ್ನು ಮುಂದುವರೆಸುತ್ತಾನೆ. ಮೂರು ದಿನಗಳ ಕಾಲ ಇದೇ ಕೆಲಸದಲ್ಲಿ ಇರುತ್ತಾನೆ. ನಾಲ್ಕನೇ ದಿನ ಅಗೆಯುವ ಸಮಯದಲ್ಲಿ ನೀರು ಬರುತ್ತದೆ. ರಾಮು ಅದರಿಂದ ಹೊರಗೆ ಬರುತ್ತಾನೆ. ನಂತರ ಅದರಿಂದ ಅ ನೀರು ರಾಮ ಅಗೆದ ಆ ಗುಂಡಿಯ ತುಂಬಿ ತುಂಬುತ್ತದೆ. ನಂತರ ಈ ವಿಷಯ ತಿಳಿದ ಊರಿನ ಜನ ಬಂದು ರಾಮನನ್ನು ಅಭಿನಂದಿಸುತ್ತಾರೆ. ಊರಿಗಾಗಿ ಎಷ್ಟು ಒಳ್ಳೆಯ ಕೆಲಸ ಮಾಡಿದೆ ಎಂದು ಬಹುಮಾನವನ್ನು ಕೂಡ ಕೊಡುತ್ತಾರೆ .ಕಷ್ಟ ಪಟ್ಟರೆ ಎಲ್ಲರ ಅಭಿಮಾನದ ಜೊತೆ ಬಹುಮಾನವು ಸಹ ಸಿಗುತ್ತದೆ.

ಇದನ್ನು ಅರ್ಥ ಮಾಡಿಕೊಂಡ ರಾಮ ಕಷ್ಟಪಟ್ಟು ಕೆಲಸ ಮಾಡುವುದನ್ನು ಪ್ರಾರಂಭಿಸುತ್ತಾನೆ. ನೀವು ಕೂಡ ಸೋಮಾರಿಗಳಾಗಿ ಇರಬೇಡಿ. ಕಷ್ಟಪಟ್ಟು ಕೆಲಸ ಮಾಡಿ, ಕಷ್ಟ ಪಡದೆ ಏನು ಸಿಗುವುದಿಲ್ಲ. ನೀವು ಯಾವುದಾದರೂ ಒಂದು ಗುರಿಯನ್ನು ಇಟ್ಟುಕೊಂಡು ಕಷ್ಟಪಟ್ಟು ಅದನ್ನು ಸಾಧಿಸುವುದಕ್ಕೆ ಹಠ ಹಿಡಿದರೆ, ಕೆಲಸ ಮಾಡಿದರೆ ಕಷ್ಟಪಟ್ಟು ಮಾಡಿದ ಕೆಲಸ ಖುಷಿ ಕೊಡುತ್ತದೆ. ನಾವು ಮಾಡುವ ಕೆಲಸವನ್ನು ನಾವು ಎಷ್ಟು ಪ್ರೀತಿ ಮಾಡುತ್ತೇವೆಯೋ ಕೆಲಸದ ಪ್ರತಿಫಲವು ಸಹ ಅಷ್ಟೇ ಪ್ರಭಾವ ಬೀರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top