fbpx
ಮನೋರಂಜನೆ

“ಕ್ಯಾನ್ಸರ್ ​ನನಗೆ ಹೊಸ ಗಿಫ್ಟ್​ ನೀಡಿದೆ”ಎಂದು ಈ ಕಾರ್ಯಕ್ಕೆ ಕೈ ಹಾಕಿದ ಮನಿಷಾ ಕೊಯಿರಾಲಾ​

ಒಂದು ಕಾಲದಲ್ಲಿ ಬಾಲಿವುಡ್‌ನ ಲೀಡ್ ಹೀರೋಯಿನ್ ಆಗಿ ಮಿಂಚಿದ ಬಾಲಿವುಡ್ ನಟಿ ಮನಿಶಾ ಕೊಯಿರಾಲಾ ನೇಪಾಳ ಸುಂದರಿ “ಸೌದಾಗರ್‌’, ಹಿಂದಿ ಚಿತ್ರದ ಮೂಲಕ ಸಿನಿ ಜೀವನ ಶುರು ಮಾಡಿ ಮಣಿರತ್ನಂ ನಿರ್ದೇಶನದ “ಬಾಂಬೆ’ ಸಿನಿಮಾ ಮೂಲಕ ಮನೆಮಾತಾದರು. ಹಲವು ವರ್ಷಗಳ ಕಾಲ ಬಾಲಿವುಡ್‌ ಚಿತ್ರರಂಗವನ್ನು ಆಳಿದ ಈ ಸುಂದರಿ ಬಳಿಕ ವಿವಾಹವಾದರು, ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ವಿಚ್ಚೇದನ ತೆಗೆದುಕೊಂಡರು,ಅನಾರೋಗ್ಯದ ಕಾರಣದಿಂದ ನೇಪಥ್ಯಕ್ಕೆ ಸರಿದ್ದಿದ್ದ ಮೋಹಕ ನಟಿ ಮೊನಿಷಾ ಕೋಯಿರಾಲಾ ಕ್ಯಾನ್ಸರ್‌ಗೆ ತುತ್ತಾಗಿದ್ದರು, ಅದರಿಂದ ಹೊರಬಂದು, ದಿಟ್ಟ ಮಹಿಳೆ ಎನಿಸಿಕೊಂಡರು. ಹೀಗೆ ತನ್ನ ಜೀವನದಲ್ಲಿ ಅನೇಕ ಕಷ್ಟಕರ ಘಟ್ಟಗಳನ್ನು ದಾಡುತ್ತ ಬಂದಿರುವ ಈ ಚೆಲುವೆ ಮತ್ತೆ ನಟನೆಗೆ ಮರಳಿದ್ದಾರೆ.

 

 

 

ಈ ನಡುವೆ ನಾವು ಅದೇಷ್ಟೊ ಜನ ಕ್ಯಾನ್ಸರ್​ಗೆ ಬಲಿ ಆಗಿರುವವರ ಬಗ್ಗೆ ಕೇಳ್ತಾನೆ ಇರ್ತೀರಿ ,ಇಂದು ಕೇಂದ್ರ ಸಚಿವ ಅನಂತಕುಮಾರ್​ರನ್ನು ಬಲಿ ಪಡೆದಿದ್ದು ಈ ಮಹಾಮಾರಿ ರೋಗವೇ ,ಇನ್ನು ಸೋನಾಲಿ ಬೇಂದ್ರೆ ಈ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ .ಕೆಲವರು ಕ್ಯಾನ್ಸರ್​ನಿಂದ ನರಳಿ ಹೊರ ಬಂದಿದ್ದಾರೆ ಅದಕ್ಕೆ ಸಾಕ್ಷಿ ಯುವರಾಜ್​ ಸಿಂಗ್​, ಮನಿಷಾ ಕೊಯಿರಾಲ್​ .

ಮನಿಷಾ ಕೊಯಿರಾಲ್​ ಈ ರೋಗಕ್ಕೆ ನರಳಿ ಗುಣಮುಖರಾಗಿ ಆರೋಗ್ಯದಿಂದ ಹೊರ ಬಂದು ಆರು ವರ್ಷ ಕಳೆದಿವೆ.ಈ ನಡುವೆ ಮನಿಷಾ ಪುಸ್ತಕವೊಂದನ್ನು ಬಿಡುಗಡೆ ಮಾಡಿತ್ತಿದ್ದಾರೆ. ಈ ಪುಸ್ತಕ ಕ್ಯಾನ್ಸರ್​ ತನ್ನ ಜೀವನವನ್ನು ಹೇಗೆ ಬದಲಾಯಿಸಿತು ಎಂದು ವಿವರಿಸುತ್ತಾ ಬರೆದಿದ್ದಾರೆ ,ಆ ಪುಸ್ತಕಕ್ಕೆ ‘HEALED: How cancer gave me a new life’ ಎಂದು ಟೈಟಲ್​ ಇಟ್ಟಿದ್ದಾರೆ. ಇನ್ನು ಈ ಪುಸ್ತಕವನ್ನು ಮನಿಷಾ ಮುಂಬೈನಲ್ಲಿ ಬಿಡುಗಡೆ ಮಾಡಿದ್ದಾರೆ. ಇದನ್ನು ಮನಿಷಾ ಪ್ರಮುಖ ರಚನಾಗಾರ್ತಿ ನಿಲಮ್​ ಕುಮಾರ್​ ಸಹಾಯದಿಂದ ಬರೆದಿದ್ದಾರೆ. ಕ್ಯಾನ್ಸರ್​ ಜೊತೆ ಹೋರಾಟ ನಡೆಸಿರುವುದು ತನಗೆ ಗುಣಪಾಠವಾಗಿದೆಯಂತೆ, ಕ್ಯಾನ್ಸರ್​ ಮನಿಷಾ ಜೀವನದಲ್ಲಿ ಕಠಿಣವಾದ ಪಾಠ ಕಲಿಸಿತು. ಹೇಳಬೇಕಂದ್ರೆ ಕ್ಯಾನ್ಸರ್​ ತನಗೆ ಹೊಸ ಗಿಫ್ಟ್​ ನೀಡಿದೆ. ಆದ್ರೆ ಈ ಗಿಫ್ಟ್​ ಮತ್ತೊಬ್ಬರಿಗೆ ಬಾರದಿರುವುದೇ ಒಳ್ಳೆದು ಎಂದು ಆಶಿಸಿದ್ದಾರೆ, ಕ್ಯಾನ್ಸರ್​ ಜೊತೆ ತನ್ನ ಜೀವನ ಪ್ರಯಾಣವನ್ನು ಈ ಪುಸ್ತಕದ ಮೂಲಕ ಎಲ್ಲರ ಜೊತೆ ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇನೆ’ ಎಂದು ಮನಿಷಾ ಟ್ವೀಟ್​ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top