fbpx
ಮನೋರಂಜನೆ

‘ದಯವಿಟ್ಟು ಅನ್​ ಫಾಲೊ ಮಾಡಿ’,ಅಯ್ಯೋ ಕೆಜಿಎಫ್​ ನಿರ್ದೇಶಕರಿಗೆ ಹಿಂಗ್ ಆಯ್ತಾ

ಪ್ರೇಕ್ಷಕರ ವಲಯದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಕೆಜಿಎಫ್​ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಟ್ರೈಲರ್ ನೋಡಿ ಸಿನಿ ಪ್ರಿಯರು ಕ್ಲೀನ್ ಬೌಲ್ಡ್ ಆಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಎಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್ ಸಿನಿಮಾ ಬಹುಕೋಟಿ ವೆಚ್ಚದ ಸಿನಿಮಾ. ಸುಮಾರು 70ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿದ್ದು ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.. ಚಾಪ್ಟರ್-1 ಮತ್ತು ಚಾಪ್ಟರ್-2 ರೂಪದಲ್ಲಿ ಎರಡು ಕಂತುಗಳಲ್ಲಿ ‘ಕೆಜಿಎಫ್’ ಬಿಡುಗಡೆಯಾಗುತ್ತಿದೆ. ಮೊದಲ ಭಾಗದಲ್ಲಿ ರಾಕಿಯ ಬಾಲ್ಯ ಮತ್ತು ಭೂಗತ ಲೋಕದಲ್ಲಿ ಆತ ಗ್ಯಾಂಗ್​ಸ್ಟರ್ ಆಗಿ ಗುರುತಿಸಿಕೊಳ್ಳಲು ಕಾರಣವೇನು ಎಂಬುದನ್ನು ನಿರ್ದೇಶಕ ಪ್ರಶಾಂತ್ ನೀಲ್ ತೋರಿಸಲಿದ್ದಾರಂತೆ.

 

 

 

ಯಶ್ ಪಾಲಿಗೆ ಈ ಸಿನಿಮಾ ದೊಡ್ಡಮಟ್ಟದ ಹೆಸರು ತಂದುಕೊಡಬಹುದು ಎಂಬ ನಿರೀಕ್ಷೆ ಇದೆ. ಈಗಾಗಲೇ ದೊಡ್ಡಮಟ್ಟದಲ್ಲಿ ಅಭಿಮಾನಿಗಳ ಬಳಗವನ್ನೇ ಕಟ್ಟಿಕೊಂಡಿರುವ ಸಿನಿಮಾ ಕೆಜಿಎಫ್​ ಹಾಲಿವುಡ್​ ತನಕ ತಲುಪಿದೆ.
ಕೆಜಿಎಫ್​ ಸಿನಿಮಾ ನಿರ್ದೇಶಕಪ್ರಶಾಂತ್ ನೀಲ್​, ಇಡೀ ದೇಶವೇ ಈಗ ಹೊಗಳುತ್ತಿರೋ ಹೆಸರು. ಸದ್ಯ ಯಶ್​ರಷ್ಟೇ ಸಿನಿಮಾ ನಿರ್ದೇಶಕನ ಹೆಸರು ಎಲ್ಲೆಡೆ ಕೇಳಿ ಬರುತ್ತಿದೆ. ಪ್ರಶಂತ್​ ಹಾಲಿವುಡ್​ ಅಂಗಳದಲ್ಲಿಯೂ ಸುದ್ದಿಯಾಗುತ್ತಿದ್ದಾರೆ.
ರಾಕಿಂಗ್​ ಸ್ಟಾರ್​ ಯಶ್​ ರೀತಿಯೇ, ಪ್ರಶಾಂತ್​ ಕೂಡ ಜನಪ್ರಿಯ ಆಗಿಬಿಟ್ಟಿದ್ದಾರೆ. ಇತ್ತ ಪ್ರಶಾಂತ್​ ಫೇಮಸ್ ಆಗ್ತದ್ದಂತೆ, ಕೆಲ ಕಿಡಿಗೇಡಿಗಳು ಅವರ ಹೆಸರಿಗೆ ಮಸಿ ಬಳಿಯೋ ಕೆಲಸ ಮಾಡ್ತಿದ್ದಾರೆ. ಪ್ರಶಾಂತ್​ ಹೆಸರಲ್ಲಿ ನಕಲಿ ಟ್ವಿಟ್ಟರ್​ ಖಾತೆ ಸೃಷ್ಟಿಸಿ, ಟ್ವೀಟ್​ ಪೋಸ್ಟ್ ಮಾಡ್ತಿದ್ದಾರೆ. ಈ ಬೆಳವಣಿಗೆಯನ್ನು ಪ್ರಶಾಂತ್ ಖಂಡಿಸಿದ್ದಾರೆ.

ನಕಲಿ ಟ್ವಿಟ್ಟರ್ ಖಾತೆ ಕುರಿತು ಗೊತ್ತಾಗ್ತಿದ್ದಂತೆ ಪ್ರಶಾಂತ್ ನಿಲ್ ​, ತಮ್ಮ ಟ್ವಿಟ್ಟರ್​ನಲ್ಲಿ ಹೀಗೆ ಟ್ವಿಟ್ ಮಾಡಿದ್ದಾರೆ “ನಾನು ಕೆಜಿಎಫ್​ ಸಿನಿಮಾದ ನಿರ್ದೇಶಕ. ಯಾರೊ ಕೆಲವರು ನನ್ನ ಹೆಸರಿನಲ್ಲಿ ನಕಲಿ ಟ್ವಿಟ್ಟರ್​​ ಅಕೌಂಟ್​ ಸೃಷ್ಟಿಸಿದ್ದಾರೆ. ದಯವಿಟ್ಟು ಆ ಖಾತೆಯನ್ನು ಅನ್ ಫಾಲೊ ಮಾಡಿ. ಈ ಕುರಿತು ಟ್ವಿಟ್ಟರ್​ ಇಂಡಿಯಾ ಕ್ರಮ ಕೈಗೊಳ್ಳಬೇಕು”ಎಂದು ಮನವಿ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top