fbpx
ಮನೋರಂಜನೆ

ನಾನು ಸೋತೆ, ಮೇಲತ್ತಿದವರು ಕೆಳಗಿಳಿಯಲೇ ಬೇಕು,ಶ್ರುತಿ ಹರಿಹರನ್

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ.. ಇನ್ನೂ ಕೆಲವರು ಈ ವಿಚಾರಕ್ಕೆ ರಾಜಕೀಯ ಎಳೆದು ಧರ್ಮದ ಬಣ್ಣ ಕಟ್ಟಿ ಗಬ್ಬೆಬ್ಬಿಸಿದ್ದಾರೆ.. ಶ್ರುತಿ ಹರಿಹರನ್ ಮಾಡಿರುವ ಆರೋಪ ಈಗ ಯಾವ್ಯಾವುದೋ ತಿರುವುಗಳನ್ನ ಪಡೆದುಕೊಂಡಿದೆ. ಅರ್ಜುನ್ ಸರ್ಜಾ ಅವರನ್ನು ಸಮರ್ಥಿಸುವ ಭರದಲ್ಲಿ ಶೃತಿ ಹರಿಹರನ್ ನಡತೆ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವು ನಿರ್ಮಾಪಕರು, ನಟರು, ಜನಸಾಮಾನ್ಯರು ಮಿತಿಮೀರಿ ವರ್ತಿಸುತ್ತಿದ್ದಾರೆ. ಅಂತೆಯೇ ಶೃತಿಯನ್ನು ಸಮರ್ಥಿಸುವ ಭರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಸ್ರೀಪೀಡಕನ ಪಟ್ಟ ಕಟ್ಟುವ ಕೆಲಸವೂ ಚಾಲ್ತಿಯಲ್ಲಿದೆ.

 

 

 

ಈ ಪ್ರಕರಣ ಕುರಿತು ಈಗ ಎರಡು ಕಡೆಯಲ್ಲಿ ವಿಚಾರಣೆಗಳು ನಡೆಯುತ್ತಿದೆ ,ಸ್ವಲ್ಪ ದಿನದಿಂದ ದೂರ ಉಳಿದಿದ್ದ ಶ್ರುತಿ ಬೆಂಗಳೂರು ಬಿಟ್ಟು ಬೇರೆ ಎಲ್ಲೋ ಇದ್ದಾರೆ ಎಂಬ ಸುದ್ದಿಯೂ ಕೂಡ ಹರಿದಾಡಿತ್ತು.ಅಂದ್ರೆ ಮತ್ತೆ ಕಾಣಿಸಿಕೊಂಡು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರೇ ಶ್ರುತಿ.ಫ್ರೆಶ್​ ಫೇಸ್ ಸೀಸನ್​ 11​ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶೃತಿ ಹರಿಹರನ್​ ಅವರು, ಸೋಲು-ಗೆಲುವು ಜೀವನದಲ್ಲಿ ಇರವುದೇ. ಯಾರುಮೇಲೆ ಹತ್ತುತ್ತಾರೋ ಅವರು ಕೆಳಗೆ ಇಳಿಯಲೇ ಬೇಕು. ನಾನು ಜೀವನದಲ್ಲಿ ಸಾಕಷ್ಟು ಸೋಲು ಕಂಡವಳು. ಹಾಗಂತಾ ಯಾವತ್ತೂ ಧೈರ್ಯ ಕೆಡಲಿಲ್ಲ. ಅಲ್ಲದೇ ಆ ವಿಚಾರದಲ್ಲಿ ಗಟ್ಟಿಯಾಗಿಯೇ ಯೋಚಿಸುತ್ತೇನೆ ಎಂದರು. ಮೇಲತ್ತಿದವರು ಕೆಳಗಿಯಿಳಿಯಲೇ ಬೇಕು, ಮೇಲೆ ಇರುತ್ತಾರೆ ಎಂದರೆ ಅದು ಹಣೆ ಬರಹಕ್ಕಿಂತ ದೊಡ್ಡದು. ನಾನು ಈ ಪ್ರಕರಣದಲ್ಲಿ ಸೋತಿದ್ದೀನಿ ಎಂದರು.

#MeToo ಅಭಿಯಾನದಲ್ಲಿ ಆರೋಪ ಮಾಡಿದ ಬಳಿಕ ನನಗೆ ಸೋತ ಅನುಭವ ಆಗಿದೆ. ಆದರೆ #MeToo ಪ್ರಕರಣದಲ್ಲಿ ಸಕಾರಾತ್ಮಕವಾಗಿರೋದು ನನಗೆ ತುಂಬಾ ತುಂಬಾ ಅಗತ್ಯವಾಗಿದೆ. ನಿಮ್ಮ ಮನಸ್ಸಿನೊಳಗಡೆ ಪ್ರಾಮಾಣಿಕತೆ ಇದ್ರೆ 100% ಗೆಲುವು ನಿಮ್ಮದೇ,ಈಗಲ್ಲ, ನಾಳೆ ಆಗಲ್ಲ, ನಾಳಿದ್ದಾದರೂ ಗೆಲುವು ಸಿಗಬಹುದು. ಖಂಡಿತ ಯಾವತ್ತಾದರೂ ಒಂದು ದಿನ ಗೆಲುವು ಮಾತ್ರ ಖಚಿತ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು. ನಂಬಿಕೆ ಇಟ್ಟು ಕೊಂಡಿರಿ ಅಂತಾ ಶ್ರುತಿ ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top