ಚಿಲ್ಲಿ ಪೊಟ್ಯಾಟೋಸ್
ಬೇಕಾಗುವ ಸಾಮಾಗ್ರಿ:
2 ಆಲೂಗೆಡ್ಡೆ
2 ಚಮಚ ಕಾರ್ನ್ ಫ್ಲೋರ್
ಉಪ್ಪು -ರುಚಿಗೆ
1 ಚಮಚ ಶುಂಠಿ-ಬೆಳ್ಳುಳ್ಳಿ
1 ಈರುಳ್ಳಿ
1 ಕ್ಯಾಪ್ಸಿಕಂ
1 ಚಮಚ ಟೊಮಾಟೊ ಸಾಸ್
1 ಚಮಚ ಚಿಲ್ಲಿ ಸಾಸ್
ಅರ್ಧ ಚಮಚ ವಿನಿಗರ್
ಖಾರದ ಪುಡಿ
ಮಾಡುವ ವಿಧಾನ :
2 ಆಲೂಗೆಡ್ಡೆ ಯನ್ನು ಸಿಪ್ಪೆ ಬಿಡಿಸಿ ಉದ್ದಉದ್ದ ವಾಗಿ ಕತ್ತರಿಸಿಕೊಳ್ಳಬೇಕು ,ಕತ್ತರಿಸಿಕೊಂಡಮೇಲೆ ಅದಕ್ಕೆ 2 ಚಮಚ ಕಾರ್ನ್ ಫ್ಲೋರ್ ಮತ್ತು ರುಚಿಗೆ ತಾಕಷ್ಟು ಉಪ್ಪು ಹಾಕಿ ಬಿಸಿ ಎಣ್ಣೆಯಲ್ಲಿ ಕರಿದುಕೊಂಡು ಪಕ್ಕದಲ್ಲಿ ಇರಿಸಬೇಕು .ನಂತರ ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿಕೊಳ್ಳಬೇಕು ಎಣ್ಣೆ ಬಿಸಿಯಾದ ನಂತರ ಅದಕ್ಕೆ 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ,ಕತ್ತರಿಸಿಕೊಂಡ ಒಂದು ಈರುಳ್ಳಿ,1 ಚಮಚ ಖಾರದ ಪುಡಿ ಮತ್ತು ,ಕತ್ತರಿಸಿಕೊಂಡ ಒಂದು ಚಿಕ್ಕ ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು ಇದಕ್ಕೆ 1 ಚಮಚ ಕಾರ್ನ್ ಫ್ಲೋರ್ ನೀರಿನ ಮಿಶ್ರಣವನ್ನು ಹಾಕಿಕೊಳ್ಳಬೇಕು .
ಇನ್ನು ಸ್ವಲ್ಪ ಹೊತ್ತು ಬಾಡಿಸಿದ ಮೇಲೆ ಅದಕ್ಕೆ 1 ಚಮಚ ಟೊಮಾಟೊ ಸಾಸ್ ,1 ಚಮಚ ಚಿಲ್ಲಿ ಸಾಸ್ ಮತ್ತು ಅರ್ಧ ಚಮಚ ವಿನಿಗರ್ ಮತ್ತು ರುಚಿಗೆ ಬೇಕಾದ ಉಪ್ಪನ್ನು ಹಾಕಿ 5 ನಿಮಿಷದ ನಂತರ ಅದಕ್ಕೆ ಈಗಾಗಲೇ ಕರಿದು ಇಟ್ಟುಕೊಂಡ ಆಲೂಗೆಡ್ಡೆ ಯನ್ನು ಇದರೊಳಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕುಹೀಗೆ ಮಾಡಿದರೆ ಬಿಸಿ ಬಿಸಿ ರುಚಿ ರುಚಿ ಚಿಲ್ಲಿ ಪೊಟ್ಯಾಟೋಸ್ ಸವಿಯಲು ಸಿದ್ಧ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
