fbpx
ರಾಜಕೀಯ

ಟಿಪ್ಪು ಸುಲ್ತಾನನ್ನು ಸಮರ್ಥಿಸಿದ ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಟಾಂಗ್ ಕೊಟ್ಟ ಶಿಲ್ಪಾ ಗಣೇಶ್.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ಸಲುವಾಗಿ ರಮ್ಯಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ವಿರುದ್ಧ ಫೇಸ್ಬುಕ್ ಮೂಲಕವೇ ಸಮರ ಸಾರಿ ಅಬ್ಬರಿಸಿದ್ದವರು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಿಲ್ಪಾ ಗಣೇಶ್ ಕೊನ ಗಳಿಗೆಯಲ್ಲಿ ಟಿಕೆಟ್ ಕಳೆದುಕೊಂಡಿದ್ದು ಎಲ್ಲರಿಗು ಗೊತ್ತೇ ಇದೆ. ಇಂಥಾ ಶಿಲ್ಪಾ ಇದೀಗ ಫೇಸ್ಬುಕ್ ಮೂಲಕವೇ ಮತ್ತೊಂದು ಸುತ್ತಿನ ಸಮರಕ್ಕೆ ಮುಂದಾಗಿದ್ದಾರೆ.

ಇತ್ತೀಚಿಗಷ್ಟೇ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಟಿಪ್ಪು ಜಯಂತಿಯ ಕುರಿತಾಗಿ, “ಟಿಪ್ಪು ಸ್ವಾತಂತ್ತ್ರ್ಯ ಹೋರಾಟಗಾರನಲ್ಲ, ಒಂದು ಸಂಸತನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ, ಇಂತಹ ಮೊಂಡು ವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣಂ , ವೀರ ಸಿಂಧೂರ ಲಕ್ಶ್ಮಣ, ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣರಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ?” ಎಂದು ಟ್ವೀಟ್ ಮಾಡಿದ್ದರು.

 

 

ಈ ಟ್ವೀಟ್ ನ್ನು ಖಂಡಿಸಿ ಶಿಲ್ಪಾ ಗಣೇಶ್ ಮಾನ್ಯ ಮಾಜಿ ಮುಖ್ಯ ಮಂತ್ರಿಗಳಿಗೆ ಟ್ವೀಟ್ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ.. ಟಿಪ್ಪು ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರವರಿಗೆ ತಿರುಗೇಟು ಕೊಟ್ಟಿರುವ ಶಿಲ್ಪಾ ಗಣೇಶ್ “.ದೇಶವಿರೋಧಿ ಘೋಷಣೆ ಕೂಗುವುದು,ದೇಶ ದ್ರೋಹಿಗಳಿಗೆ ಜೈಕಾರ ಹಾಕುವುದು, ಬೆಂಬಲಿಸುವುದು, ಭಗವದ್ಗೀತೆ ಸುಡುವುದು,ಹಿಂಧೂ ಧರ್ಮವನ್ನು-ದೇವರನ್ನು ಅವಮಾನಿಸುವುದು,ಹಿಂಧೂ ದೇವಾಲಯಗಳನ್ನು ಧ್ವಂಸಮಾಡುವುದು,ಅಭಿವ್ಯಕ್ತಿ ಸ್ವಾತಂತ್ರ್ಯ.ಆದರೆ,ಇತಿಹಾಸವೇ ಹೇಳಿರುವ ಮತಾಂಧನೊಬ್ಬನನ್ನು ಮತಾಂಧ ಎಂದರೆ,ನೀನು ಸಂವಿಧಾನವಿರೋಧಿ,ಕೋಮುಗಲಭೆಯಪ್ರಚೋದಕ, ಸಮಾಜ ಘಾತುಕ.” ಎಂದು ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top