fbpx
ದೇವರು

ಭಸ್ಮಧಾರಿ, ರುಂಡಮಾಲಾಧರ ಶಿವನನ್ನು ಪಾರ್ವತಿ ಹೇಗೆ ಮದುವೆಯಾದಳು ಮರೆಯದೆ ಓದಿ ಅಪರೂಪದ ಕಥೆ

ಪಾರ್ವತಿ ಕಲ್ಯಾಣದ ಕಥೆ.

ಹಿಂದೆ ಒಮ್ಮೆ ಶಂಕರನು ಈ ಸ್ಥಳಕ್ಕೆ ಬಂದಾಗ ಇಲ್ಲಿನ ಪ್ರಶಾಂತ ವಾತಾವರಣವನ್ನು ಕಂಡು ಇಲ್ಲಿಯೇ ಸಮಾಧಿಸ್ಥನಾದನು. ಅವನ ತಪಸ್ಸು ಸಹ ಮುಂದುವರೆದಿತ್ತು. ಆ ಸಮಯದಲ್ಲಿ ತಾರಕಾಸುರ  ನೆಂಬುವವನು ದೇವಲೋಕದ ಮೇಲೆ ಆಗಾಗ ದಾಳಿ ಮಾಡುತ್ತಿದ್ದನು. ಇಲ್ಲಿಯ ತನಕ ಇರುವ ಯಾವ ದೇವರಿಂದಲೂ ತನಗೆ ಸಾವು ಬರಬಾರದೆಂಬ ವರ ಪಡೆದಿದ್ದನು. ಅವನು ಅಹಂಕಾರದಿಂದಾಗಿ ದೇವತೆಗಳು ಗಾಬರಿಯಾಗಿ ಬ್ರಹ್ಮನಲ್ಲಿ ಬಂದು ತಾರಕಾಸುರನ ಅಂತ್ಯದ ಬಗ್ಗೆ ಹೇಳಿದರು.ಅಲ್ಲದೆ ತಾರಕನ ಮಕ್ಕಳು ಸಹ ಮೂರು ಪಟ್ಟಣಗಳನ್ನು ಆಕಾಶದಲ್ಲಿಯೇ ನಿರ್ಮಿಸಿಕೊಂಡು ವಾಸವಾಗಿದ್ದರು. ಅವರಿಗೆ ತ್ರಿಪುರರೆಂದೇ ಕರೆಯುತ್ತಿದ್ದರು. ಮೊದಲಿಗೆ ತಾರಕಾಸುರನ ವಧೆ ಆಗುವ ಬಗೆಯನ್ನು ಬ್ರಹ್ಮದೇವ ತಿಳಿಸಿದನು.ಶಿವನು ಸಮಾಧಿಯಲ್ಲಿದ್ದರೆ. ಹಿಮವಂತನ ಮಗಳಾಗಿ ಹುಟ್ಟಿರುವ ಪಾರ್ವತಿ ತಪಸ್ಸಿನಲ್ಲಿದ್ದಾಳೆ. ಹಿಮಾಲಯನ ಹಾಗೂ ಅವನ ಪತ್ನಿ ಮನೋರಮೆಯರ ಮುದ್ದಿನ ಮಗಳು ತ್ರಿಲೋಕ ಸುಂದರಿ ಪಾರ್ವತಿಯೊಂದಿಗೆ ಶಿವನ ಮದುವೆಯಾಗಬೇಕು. ಅವರ ಮಗನಿಂದ ತಾರಕನ ಸಂಹಾರ ಸಾಧ್ಯವಾಗುವುದು. ನೀವು ಶಿವ ಶಿವೆಯರನ್ನು ಒಂದುಗೂಡಿಸುವ ಪ್ರಯತ್ನ ಮಾಡಿರಿ ಎಂದು ಹೇಳಿದನು.

ಇಂದ್ರನು ಶಿವನ ಸಮಾಧಿಯನ್ನು ಭಂಗಗೊಳಿಸುವ ಎಲ್ಲ ದೇವತೆಗಳೊಂದಿಗೆ ಚರ್ಚಿಸಿದನು. ಇದಕ್ಕೆ ಮನ್ಮಥನನ್ನು ಸಹಚರರೊಂದಿಗೆ ಕಳಿಸುವ ಯೋಚನೆ ಮಾಡಿದರು. ಹೂಬಾಣಗಳು, ಗೆಳೆಯ, ವಸಂತ, ಸತಿ, ರತಿ ಎಲ್ಲರೂ ಸೇರಿದಾಗ ಮನ್ಮಥನು ಲೋಕವನ್ನೇ ಮೋಹಗೊಳಿಸುವ ನಾನು ಶಿವನನ್ನು ಎಚ್ಚರಿಸುತ್ತೇನೆಂದು  ಗರ್ವದಿಂದಲೇ ಹೇಳಿ ಹಿಮಾಲಯ ಪರ್ವತಕ್ಕೆ ಬಂದನು. ಅಲ್ಲಿ ತಪಸ್ಸಿನಲ್ಲಿರುವ ಪಾರ್ವತಿಗೆ ತಮ್ಮ ಯೋಚನೆಯನ್ನು ತಿಳಿಸಿದಾಗ ಪಾರ್ವತಿಯು ಸಹ ಒಪ್ಪಿಕೊಂಡಳು. ಆಗ ಸುತ್ತಲೂ ಸುಂದರವಾದ ವಾತಾವರಣವನ್ನು ನಿರ್ಮಿಸಿದರು. ಹಸಿರಿನಿಂದ ಕಂಗೊಳಿಸುವ ಹೂವು, ಹಣ್ಣು, ಚಿಗುರುಗಳಿಂದ ಚಂದ ಕಾಣುವ ಪ್ರಕೃತಿಯಲ್ಲಿ ಶಿವನ ತಪೋಭಂಗದ ಕಾರ್ಯ ಆರಂಭಿಸಿದರು.

 

 

 

ಮನ್ಮಥನು ಕೋಗಿಲೆಗಳ ಇಂಪಾದ ಗಾನ, ನವಿಲಿನ ನಾಟ್ಯಗಳ ನಡುವೆ ಹೂಬಾಣಗಳನ್ನು ಶಿವನ ಮೇಲೆ ಪ್ರಯೋಗಿಸಿದನು. ದೇವತೆಗಳು ಮರೆಯಲ್ಲಿದ್ದು ವೀಕ್ಷಿಸುತ್ತಿದ್ದರು. ಪರಶಿವನು ಮನ್ಮಥನ ಬಾಣದಿಂದ ಸಿಟ್ಟಿನಿಂದ ಮೂರನೇ ಕಣ್ಣಿನಿಂದ ನೋಡಿದನು. ಮೂರು ಕಣ್ಣುಗಳಿರುವ ಶಿವನು ಮುಕ್ಕಣ್ಣನೆಂದೇ ಪ್ರಸಿದ್ಧನು. ಮೂರನೇ ಕಣ್ಣು ತೆರೆದಾಗಲೇ ಎದುರಿಗೆ ಇದ್ದ ಮನ್ಮಥನು ಭಸ್ಮವಾದನು, ಪಾರ್ವತಿ ಎದುರಿಗೆ ಇದ್ದರೂ ನೋಡದೆ ಶಿವನು ಮತ್ತೆ ಧ್ಯಾನಸಕ್ತನಾದನು.ಕೇವಲ ಭಕ್ತಿಯಿಂದ ಪರಶಿವನನ್ನು ಒಲಿಸಿಕೊಳ್ಳುತ್ತೇನೆಂದು ನಿಶ್ಚಯಿಸಿ ಪಾರ್ವತಿಯು ಕಠಿಣವಾದ ತಪಸ್ಸನ್ನಾಚರಿಸಿದ್ದಳು. ಕೇವಲ ಶಿವನನ್ನೇ ಮನದಲ್ಲಿ ನಮಃ ಶಿವಾಯ ಮಂತ್ರ ಪಠಿಸುತ್ತಾ ಪಾರ್ವತಿ ಪಂಚಾಗ್ನಿ ಮಧ್ಯೆ ತಪಸ್ಸನ್ನು ಆಚರಿಸುತ್ತಿದ್ದಳು, ಪಾರ್ವತಿಯ ತಪಸ್ಸು ಉಗ್ರವಾಗುತ್ತಿದ್ದಂತೆ ಪಾರ್ವತಿಯನ್ನು ಪರೀಕ್ಷಿಸುವ ಮನಸ್ಸಿನಿಂದ ಪರಶಿವನು ಬ್ರಹ್ಮಚಾರಿ ವೇಷದಿಂದ ಪಾವತಿ ಇದ್ದಲ್ಲಿಗೆ ಬಂದನು.

ರಾಜಕುಮಾರಿಯಾದ ನೀನು ಆ ಭಸ್ಮಧಾರಿ, ರುಂಡಮಾಲಾಧರ ಶಿವನನ್ನು ಏಕೆ ಮದುವೆಯಾಗುವೆ ? ಎಂದು ನಾನಾ ರೀತಿಯಿಂದ ಕೇಳಿ ಪಾರ್ವತಿಯ ಮನಸ್ಸು ದೃಢವಾಗಿ ತನ್ನಲ್ಲಿಯೇ ಇದೆಯೆಂದು ತಿಳಿದು ನಿಜರೂಪದಿಂದ ಪ್ರಕಟವಾದನು, ನಿನ್ನ ತಪಸ್ಸು ಪ್ರೀತಿಗಳಿಗೆ ಮೆಚ್ಚಿದ್ದೇನೆ. ನೀನು ಎಂದೆಂದೂ ನನ್ನ ಸತಿಯೇ, ನಾನು ನಿನ್ನವನು ಎಂದಾಗ ಗೌರಿಗೆ ಆನಂದವಾಯಿತು. ದೇವತೆಗಳು ಸಹ ಸಂತಸಗೊಂಡರು.

 

 

 

ಪಾರ್ವತಿಯ ಅಪೇಕ್ಷೆಯಂತೆ ಹಿಮಾಲಯನನ್ನು ಕೇಳಿ ಸಪ್ತಋಷಿಗಳು ವಿವಾಹ ನಿಶ್ಚಯಿಸಿದರು. ಆನಂತರ ವೈಭವದಿಂದ ಶಿವ ಪಾರ್ವತಿಯರ ವಿವಾಹ ಸಂಪನ್ನವಾಗಿ ಶಿವ ಶಿವೆಯರ ಕೈಲಾಸಕ್ಕೆ ಬಂದರು. ಆಗ ತನ್ನ ಪತಿಯನ್ನು ಕಳೆದುಕೊಂಡ ರತಿ ಬಂದು ದುಃಖದಿಂದ ಪರಿಪರಿಯಾಗಿ ಬೇಡಿಕೊಂಡಳು.ಮೂರು ಲೋಕಕ್ಕೆ ಒಳ್ಳೆಯದನ್ನು ಮಾಡಲು ಮನ್ಮಥನು ಮರಣ ಹೊಂದಿದನು. ಮೊದಲಿನ ಶರೀರವನ್ನು ಕಳೆದುಕೊಂಡಿದ್ದರಿಂದ  ‘ಅನಂಗ’ ಎಂದು ಮನ್ಮಥನಿಗೆ ಹೆಸರಾಯಿತು. ಮತ್ತೆ ಶರೀರ ಧರಿಸಿ ಕಾಮನು ಬದುಕಿರುತ್ತಾನೆ ಎಂದು ಶಿವನು ರತಿಗೆ ಭರವಸೆ ಕೊಟ್ಟು ಸಮಾಧಾನ ಪಡಿಸಿದನು.

ಹೀಗೆ ಶಿವನಿಂದ ಭಸ್ಮವಾದ ಮನ್ಮಥನು ಮತ್ತೆ ಜನ್ಮ ಪಡೆದು ರತಿಯೊಂದಿಗೆ ಸೇರಿದನು. ಈ ಕಾಮದಹನದ ಪ್ರಸಂಗವು ಕಾಮನ ಹುಣ್ಣಿಮೆಯೆಂದೇ  ಜಗದಲ್ಲಿ ಪ್ರಸಿದ್ಧಿ ಪಡೆದಿದೆ.ಮುಂದೆ ಶಿವಪಾರ್ವತಿಯರ ಮಗನಾದ ಕುಮಾರಸ್ವಾಮಿಯ ಜನನವಾಯಿತು. ಆ ಪರ್ವತವನ್ನು ಕುಮಾರ ಪರ್ವತವೆಂದು ಕರೆದರು. ಮಗುವನ್ನು ನೋಡಿಕೊಳ್ಳಲು ಆರು ಜನ ಕೃತ್ತಿಕಾ ದೇವಿಯರನ್ನು ನೇಮಿಸಿದ್ದರು. ಕೃತಿಕೆಯರಿಂದಲೇ ಸಲಹಲ್ಪಟ್ಟು ಕಾರ್ತಿಕೇಯ ಎಂದು ಸುಬ್ರಹ್ಮಣ್ಯ ಹೆಸರು ಪಡೆದನು. ಆರು ಮುಖಗಳಿರುವುದರಿಂದಾಗಿ ಷಣ್ಮುಖ ಎಂದು ಪ್ರಸಿದ್ಧನಾದನು.

ಇವನು ಪರಾಕ್ರಮದಿಂದ ತಾರಕಾಸುರ ನೊಂದಿಗೆ ಹೋರಾಡಿ ತಾರಕನನ್ನು ಸಂಹರಿಸಿದನು. ವೀರನಾದ ಸ್ಕಂದಕುಮಾರ ಸ್ವಾಮಿಯನ್ನೇ  ದೇವತೆಗಳು ಸೇನಾಪತಿ ಎಂದು ಘೋಷಿಸಿದರು. ಹೀಗೆ ಶಿವಪಾರ್ವತಿಯರ ವಿವಾಹದ ಕಥೆಯನ್ನು ತಿಳಿಸಿದ ವಿಶ್ವಾಮಿತ್ರರು ಈ ಪ್ರದೇಶದಲ್ಲಿಯೇ ಶಿವನು ತಪಸ್ಸು ಮಾಡಿದ್ದು ಈಗಲೂ ಹಲವಾರು ಜನರು ತಪಸ್ಸು ಮಾಡುತ್ತಿದ್ದಾರೆ ಎಂದು ನಾವು ಇಲ್ಲಿಯೇ ಇರೋಣವೆಂದಾಗ ವಿಶ್ವಾಮಿತ್ರರ ಆಗಮನವನ್ನು ತಿಳಿದ ಋುಷಿಗಳು ಬಂದು ಸತ್ಕರಿಸಿದರು ಅನಂತರ ಗಂಗಾನದಿಯನ್ನು ದಾಟಿ ಮುಂದೆ ಹೋಗಲಾರಂಭಿಸಿದರು.ಮಧ್ಯೆ ನದಿಯಲ್ಲಿ ಆಗುವ ಸರಯೂ ನೀರಿನ ಸದ್ದಿನ ಬಗ್ಗೆ ರಾಮನು ಕೇಳಿದಾಗ ಇದು ಸರಯೂ ಗಂಗಾ ನದಿಗಳ ಸಂಗಮ ಸ್ಥಳವೆಂದು, ಹಿಂದೆ ಬ್ರಹ್ಮದೇವರ ಇಚ್ಛೆಯಿಂದಾದ ಸರೋವರ ಮಾನಸ ಸರೋವರದಿಂದ ಹೊರಟ ನದಿಯೇ ಸರಯೂ ನದಿ. ಅದು ಅಯೋಧ್ಯೆಯ  ಸುತ್ತ ಸಹ ಹರಿಯುವುದು, ಈ ಸಂಗಮ ಸ್ಥಳ ಅತ್ಯಂತ ಪವಿತ್ರವಾದದ್ದು – ನಿಮ್ಮ ಹಿರಿಯರಿಂದ ಭೂಲೋಕಕ್ಕೆ ಬಂದ ಗಂಗೆಗೆ ಬ್ರಹ್ಮಸೃಷ್ಟಿಯ ಸರಿಯೂ ನರಿಗೆ ವಂದಿಸಿ ಎಂದು ವಿಶ್ವಾಮಿತ್ರರು ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top