fbpx
ಸಮಾಚಾರ

“ವಿಷ್ಣುವರ್ಧನ್ ಆತ್ಮಕ್ಕೆ ರಾಜ್ಯ ಸರ್ಕಾರ ಶಾಂತಿ ನೀಡಬೇಕು” ಕೌರವ ಬಿಸಿ ಪಾಟೀಲ್.

ಕನ್ನಡದ ಮೇರುನಟರಲ್ಲಿ ಒಬ್ಬರಾದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸತ್ತು ಮಲಗಿ ಬರೋಬ್ಬರಿ 9 ವರ್ಷಗಳೇ ಕಳೆದಿದ್ದರು ಇಂಥ ಧೀಮಂತ ನಟನಿಗೊಂದು ನೆಟ್ಟಗಿನ ಸಮಾಧಿಯ ವ್ಯವಸ್ಥೆಯಾಗಿಲ್ಲ.. ಇದಕ್ಕೆ ಸರ್ಕಾರದ ಉಡಾಫೆ ಮತ್ತು ಚಿತ್ರರಂಗದ ನಿರ್ಲಕ್ಷ್ಯ ಮನೋಭಾವವೇ ಮುಖ್ಯ ಕಾರಣ ಎಂಬುದು ವಿಷ್ಣು ಅಭಿಮಾನಿಗಳ ಆರೋಪ. ಸ್ಮಾರಕದ ವಿಚಾರದಲ್ಲಿ ಅಭಿಮಾನಿಗಳು ಕಾದು ಸುಸ್ತಾಗಿದ್ದಾರೆ.. ಅಖಂಡ ಒಂಭತ್ತು ವರ್ಷಗಳು ಸವೆದಿದ್ದರೂ ವಿಷ್ಣು ಸ್ಮಾರಕ ನಿರ್ಮಾಣ ಇನ್ನೂ ನಿರ್ಮಾಣವೇಕೆ ಆಗಿಲ್ಲ ಎಂಬುದು ಕನ್ನಡಿಗರ ಅತಿ ದೊಡ್ಡ ಪ್ರಶ್ನೆಯಾಗಿದೆ.

 

 

ವಿಷ್ಣು ಸ್ಮಾರಕ ವಿಚಾರದಲ್ಲಿ ಉದ್ದೇಶಪೂರ್ವಕವಾಗಿಯೇ ಕೆಲವೊಂದು ಕಾಣದ ಕೈಗಳು ಸ್ಮಾರಕ ಆಗದ ಹಾಗೆ ತಡೆಯುತ್ತಿವೆ ಎನ್ನುವುದು ಅಭಿಮಾನಿಗಳ ಆರೋಪವಾಗಿದೆ. ವಿಷ್ಣು ನಿಧನದ ನಂತರ ಮೂರು ಬೇರೆ ಬೇರೆ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸ್ಮಾರಕದ ವಿಚಾರದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ವರ್ಷಗಳಿಂದಲೂ ವಿಷ್ಣು ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿರುವ ವಿಷ್ಣು ಸ್ಮಾರಕ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇದೇ ನೋವಿನಿಂದ ವಿಷ್ಣು ಸ್ಮಾರಕ ವಿಚಾರದಲ್ಲಿ

ಮೊನ್ನೆ ನಿಧನರಾದ ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕಂಠೀರವ ಸ್ಟುಡಿಯೋದ ಡಾ.ರಾಜ್ ಸಮಾಧಿಯ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. “ಡಾ.ರಾಜಕುಮಾರ್ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಡಾ.ಅಂಬರೀಶ್ ರವರ ಸ್ಮಾರಕಭಾವನ ನಿರ್ಮಿಸುತ್ತಿರುವಂತೆ ಅಲ್ಲೇ ಪಕ್ಕದಲ್ಲೇ ಈಗ ಡಾ.ವಿಷ್ಣುವರ್ಧನ್ ರವರ ಸ್ಮಾರಕವನ್ನೂ ನಿರ್ಮಿಸಿ” ಎಂಬ ಮಾತುಗಳು ಒಂದು ವರ್ಗದಿಂದ ಕೇಳಿಬರುತ್ತಿದೆ…

ವಿಷ್ಣು ಸ್ಮಾರಕದ ವಿಚಾರದ ಬಗ್ಗೆ ಚಿತ್ರರಂಗ ಮತ್ತು ಸರ್ಕಾರ ತೋರುತ್ತಿರುವ ಅಸಡ್ಡೆತನಕ್ಕೆ ಕಾಂಗ್ರೆಸ್ ಶಾಸಕ ಬೇಸರ ವ್ಯಕ್ತಪಡಿಸಿದ್ದಾರೆ. ಬಿ.ಸಿ.ಪಾಟೀಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ದಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕಕ್ಕೂ ಸರ್ಕಾರ ಕೂಡಲೇ ಆಸಕ್ತಿ ವಹಿಸಿ ನಿರ್ಮಿಸಬೇಕು. ಜಾಗದ ಸಮಸ್ಯೆಯಿದ್ದರೆ ಅವ್ರ ಕುಟುಂಬವನ್ನು ಕೇಳಿ ಸ್ಮಾರಕವನ್ನು ನಿರ್ಮಿಸಿ. ಸ್ಮಾರಕ ನಿರ್ಮಿಸಿ ವಿಷ್ಣು ಅವರ ಆತ್ಮಕ್ಕೆ ಶಾಂತಿಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದು ಟ್ವೀಟ್​​ ಮಾಡಿದ್ದಾರೆ.. ಈ ಟ್ವೀಟ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನೂ ಟ್ಯಾಗ್ ಮಾಡಿದ್ದಾರೆ..

ಒಟ್ಟಿನಲ್ಲಿ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ಮನೆಮಾಡಿರುವ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಕಂದಕಗಳು ಎದುರಾಗುತ್ತಲೇ ಇವೆ. ಸಾಹಸಸಿಂಹ ಬದುಕಿದ್ದಷ್ಟೂ ದಿನ ಯಾರ ಮುಂದೆ ಯಾವುದಕ್ಕೂ ಕೈ ಚಾಚದೆ ಸ್ವಾಭಿಮಾನದಿಂದ ಉಸಿರಾಡಿದ್ದವರು. ಅಂಥಾ ಮೇರು ವ್ಯಕ್ತಿಯ ಸ್ಮಾರಕಕ್ಕಾಗಿ ಕಂಡೋರ ಮರ್ಜಿಗೆ ಕಾಯುವಂತಾದ ದೌರ್ಭಾಗ್ಯದ ಬಗ್ಗೆ ವಿಷ್ಣು ಅಭಿಮಾನಿಗಳಲ್ಲಿ ತೀವ್ರವಾದ ಬೇಸರ ಮನೆ ಮಾಡಿ ವರ್ಷಗಳೇ ಕಳೆಯುತ್ತಿವೆ.. ಈ ಹಿಂದಿನ ಮುಖ್ಯಮಂತ್ರಿಗಳು ಈ ಬಗ್ಗೆ ತಾತ್ಸಾರವನ್ನಷ್ಟೇ ತೋರಿಸಿದ್ದರು. ಈಗ ಕೆಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಕೂಡ ಅದನ್ನೇ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top