fbpx
ಉಪಯುಕ್ತ ಮಾಹಿತಿ

ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡೋದು ಹೇಗೆಂದು ತಿಳಿದುಕೊಳ್ಳಿ.

ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡೋದು ಹೇಗೆಂದು ವಿವರವಾಗಿ ತಿಳಿದುಕೊಳ್ಳಿ ;

ಆನ್ ಲೈನ್ ಪಾವತಿಗೂ ಮುನ್ನ ಗಮನಿಸಬೇಕಾದ ಅಂಶಗಳು :

* ಪಾಲಿಕೆಯ ಎಲ್ಲ ಸಹಾಯ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಸಂಜೆ 7 ಗಂಟೆ ತನಕ ತೆರೆದಿರುತ್ತದೆ.

ಸಹಾಯವಾಣಿ : +9108065683804/5, +9108023365007/8.
Email: bbmpsas@bbmp.gov.in

* ಆನ್ ಲೈನ್ ನಲ್ಲಿ ಬ್ರೋಸರ್ ಮೋಝಿಲ್ಲಾ ಫೈರ್ ಫಾಕ್ಸ್ ಅಥವಾ ಗೂಗಲ್ ಕ್ರೋಮ್ ಬಳಸಿ ತೆರಿಗೆ ಪಾವತಿಸುವುದು ಸುರಕ್ಷಿತ ವಿಧಾನವಾಗಿದೆ.

 

ಆಸ್ತಿ ತೆರಿಗೆ ಪಾವತಿಸುವ ಮುನ್ನ ನೀವು ಈ ಅಂಶಗಳನ್ನು ನೆನಪಿನಲ್ಲಿ ಇಟ್ಟು ಕೊಂಡಿರಬೇಕು :

* ತೆರಿಗೆಯನ್ನು ನಗದು ಇಲ್ಲವೇ ಡಿ.ಡಿ ರೂಪದಲ್ಲಿ ಅಥವಾ ಆನ್ ಲೈನ್ ಮೂಲಕವಷ್ಟೇ ಪಾವತಿಸಬಹುದಾಗಿದೆ.

* ಪಾಲಿಕೆ ಕಚೇರಿಗಳಲ್ಲಿ 1000 ರೂ.ವರೆಗೆ ಮಾತ್ರ ನಗದು ಪಾವತಿಸಬಹುದಾಗಿದ್ದು, ಅದಕ್ಕಿಂತ ಹೆಚ್ಚು ಮೊತ್ತವಿದ್ದರೆ ನೀವು ಡಿ.ಡಿ ಮೂಲಕ ಸಲ್ಲಿಸಬೇಕು.

* ಆನ್​ಲೈನ್ ಮೂಲಕ 5 ಸಾವಿರ ರೂ. ಮೇಲ್ಪಟ್ಟು ಆಸ್ತಿತೆರಿಗೆ ಪಾವತಿಸುವವರು ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.

* ಒಂಬತ್ತು ಬ್ಯಾಂಕ್ ‌ಗಳು, 91 ಬೆಂಗಳೂರು ಒನ್ ಕೇಂದ್ರಗಳು ಹಾಗೂ ಸಹಾಯಕ ಕಂದಾಯಾಧಿಕಾರಿ ಕಚೇರಿಗಳಲ್ಲಿ ತೆರಿಗೆ ಪಾವತಿಸಬಹುದಾಗಿದೆ.

* ಆನ್‌ಲೈನ್ ಮೂಲಕ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಕೆನರಾ ಬ್ಯಾಂಕ್‌ ಶಾಖೆಯಲ್ಲಿ ನಗದು, ಡಿ.ಡಿ ಅಥವಾ ಪೇ-ಆರ್ಡರ್‌ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ.

 

ಆನ್ಲೈನ್ ನಲ್ಲಿ ನೀವು ಆಸ್ತಿ ತೆರಿಗೆ ಪಾವತಿಸುವುದಾದರೆ ಈ ನಿಯಮಗಳನ್ನು ಅನುಸರಿಸಿ :

* ಬಿಬಿಎಂಪಿಯ bbmp.gov.in ಅಥವಾ bbmptax.karnataka.gov.in ವೆಬ್‌ಸೈಟ್‌ನಲ್ಲಿ ತೆರಿಗೆ ಪಾವತಿಸಲು ಮೊದಲು ಪ್ರವೇಶ ಪಡೆಯಿರಿ

* ಕ್ರೆಡಿಟ್/ಡೆಬಿಟ್ ಕಾರ್ಡ್ ಅಥಾ ನೆಟ್ ಬ್ಯಾಂಕಿಂಗ್ ವಿಧಾನ ಆಯ್ಕೆ ಮಾಡಿಕೊಳ್ಳಿ.

* ನಗದು/ಡಿಡಿ/ ಚೆಕ್ ಪಾವತಿಯಾದರೆ, ಚಲನ್ ಬಟನ್ ಕ್ಲಿಕ್ ಮಾಡಿ.

* ಮೂಲ SAS ಅರ್ಜಿ ಸಂಖ್ಯೆ ಅಥವಾ PID ಸಂಖ್ಯೆಯನ್ನು ನಮೂದಿಸಿ.

* ಕಲಂ 3ನಲ್ಲಿ ಏನಾದರೂ ಬದಲಾವಣೆ ವೃತ್ತಿ/ವಯಸ್ಸು/ದೂರವಾಣಿ ಸಂಖ್ಯೆ/ ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ಇದ್ದರೆ ಮಾಡಿಕೊಳ್ಳಿ.

* ಕಲಂ 1,2 ಹಾಗೂ 4 ಬದಲಾಯಿಸಲು ಆಗುವುದಿಲ್ಲ.

* ಬೆಸ್ಕಾಂ, ಬಿಡಬ್ಲ್ಯೂ ಎಸ್ಎಸ್ ಬಿ ಆರ್ ಆರ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ

* ಕಲಂ 5ಎ ಹಾಗೂ 5ಬಿ ನಲ್ಲಿ ವಲಯವಾರು ಮಾಹಿತಿ ನೀಡಿ, ವಸತಿ/ವಾಣಿಜ್ಯ ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳಿ.

* ಇದೇ ರೀತಿ ಕಲಂ 7, 8ಯಲ್ಲಿ ನಿಮ್ಮ ಆಸ್ತಿ ವಿವರಗಳನ್ನು ತುಂಬಿ

* ಕಲಂ 9ರಲ್ಲಿ ಆಸ್ತಿ ಮೇಲೆ ಯಾವುದೇ ವ್ಯಾಜ್ಯ, ಕಟ್ಲೆ ಇದ್ದರೆ ನಮೂದಿಸಿ.

* ಕಲಂ 10 ರಲ್ಲಿ ಆಸ್ತಿ ತೆರಿಗೆ ರಿಟರ್ನ್ಸ್ ಬಗ್ಗೆ ಹಾಗೂ ಕಲಂ 11ರಲ್ಲಿ ವಸತಿಯೇತರ ಕಟ್ಟಡ ರಿಟರ್ನ್ಸ್ ಬಗ್ಗೆ ಮಾಹಿತಿ ಸಿಗಲಿದೆ.

* ಕಲಂ 17 ಒಟ್ಟಾರೆ ಪಾವತಿಬೇಕಾದ ಆಸ್ತಿ ತೆರಿಗೆ ಮೊತ್ತ ಸಿಗಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top