ಮೊಸರಿಲ್ಲದೆ ನಿಜವಾದ ಊಟದ ಸವಿಯು ಮಾಯವಾಗುತ್ತದೆ. ಮೊಸರಿನಿಂದ ಬಗೆಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ.ಆದರೆ ಆಯುರ್ವೇದದ ಪ್ರಕಾರ ಮೊಸರಿನ ಸೇವನೆ ದೇಹದಲ್ಲಿ ಕಫ ದೋಷ ಉಂಟಾಗಲು ಕಾರಣವಾಗುತ್ತದೆ. ಅದರಲ್ಲೂ ರಾತ್ರಿ ಊಟದಲ್ಲಿ ಮೊಸರಿನ ಸೇವನೆ ಮಾಡಲೇಬಾರದು.ಮೊಸರನ್ನು ರಾತ್ರಿ ಹೊತ್ತು ಸೇವಿಸುತ್ತಾ ಇದ್ದರೆ ಅದು ನಿಧಾನವಾಗಿ ಮೊಸರಿನ ಜಿಡ್ಡಿನ ಅಂಶಗಳು ದೇಹಕ್ಕೆ ಸೇರಿ ಅದರಿಂದ ಕಫ ಸಮಸ್ಯೆ ಜಾಸ್ತಿಯಾಗುತ್ತದೆ.ಇದರಿಂದ ಅನೇಕ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ಹಾಗೆಯೇ ಮಧ್ಯಾಹ್ನದ ಹೊತ್ತು ಸೂರ್ಯ ಶಾಖಕ್ಕೆ ಮೈಯನ್ನು ಒಡ್ಡಬಾರದು. ಏಕೆಂದರೆ ಮಧ್ಯಾಹ್ನದ ಹೊತ್ತು ಪಿತ್ತವು ಬೇಗ ಬರಲು ಕಾರಣವಾಗಿ ಬಿಸಿಲಿನ ಶಾಖಕ್ಕೆ ಅದು ಹೆಚ್ಚಾಗುವ ಅಪಾಯವಿರುತ್ತದೆ. ಹಾಗೆಯೇ ರಾತ್ರಿ ಹೊತ್ತು ಮೊಸರಿನ ಬಳಕೆ ನಿಷಿದ್ಧ. ಮೊಸರು ರುಚಿಯಲ್ಲಿ ಹುಳಿಯಾಗಿದ್ದು, ಅದರ ಸಾಮರ್ಥ್ಯ ಮಾತ್ರ ಅಧಿಕ.
ಇದು ಜೀರ್ಣ ಕ್ರಿಯೆಯು ಇತರೆ ಆಹಾರಗಳ ಜೀರ್ಣ ಕ್ರಿಯೆಗಿಂತ ಸ್ವಲ್ಪ ಕಷ್ಟವೇ ಸರಿ. ಇದರಿಂದ ಬೊಜ್ಜು, ಕಫ, ಪಿತ್ತ ಹೆಚ್ಚಾಗಿ ಜೀರ್ಣದ ಸಾಮರ್ಥ್ಯವನ್ನೂ ಸಹ ಹೆಚ್ಚಿಸುತ್ತದೆ. ನಿಮಗೆ ಉದರದ ಊತ ಅಥವಾ ಉರಿಯು ಬಂದ ಸಂದರ್ಭಗಳಲ್ಲಿ ಮೊಸರನ್ನು ಸೇವಿಸಿದರೆ ಸಮಸ್ಯೆ ಇನ್ನೂ ಬಿಗಡಾಯಿಸಲಿದೆ. ಈ ಗುಣಲಕ್ಷಣವು ಹುಳಿಯಾದ ಮೊಸರಿನಲ್ಲಿ ಅಧಿಕವಿರುತ್ತದೆ.
ಹುಳಿ ಮೊಸರನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಿ ಸೇವಿಸಬಾರದು. ಇದನ್ನು ರಾತ್ರಿ ಸಮಯದಲ್ಲಿ, ವಸಂತ ಋತುವಿನಲ್ಲಿ ಮತ್ತು ಬೇಸಿಗೆಯಲ್ಲಿ ಸೇವಿಸುವುದು ನಿಷಿದ್ಧ. ಆದರೆ ಹುಳಿ ಮೊಸರಿಗೆ ಹೆಸರಿನ ಕಾಳಿನ ಸೂಪ್, ಜೇನು, ತುಪ್ಪ, ಸಕ್ಕರೆ ಮತ್ತು ಆಮ್ಲ ಬೆರೆಸಿಕೊಂಡು ಸೇವಿಸಿದರೆ ಉರಿಮೂತ್ರ ನಿವಾರಣೆ ಮತ್ತು ಅಜೀರ್ಣದ ನಿವಾರಣೆಯಾಗುತ್ತದೆ.ಆದರೆ ಮೊಸರನ್ನು ಸೇವಿಸದೇ ಆಹಾರ ಸ್ವೀಕರಿಸದೇ ಇರುವವರು, ಮೊಸರಿಗೆ ಮಾರುಹೋದವರು ಈ ಪರಿಹಾರವನ್ನು ಅನುಸರಿಸಬಹುದು. ಮೊಸರಿಗೆ ಸ್ವಲ್ಪ ಮೆಣಸಿನ ಪುಡಿ ಬೆರೆಸಿಕೊಂಡು ಸೇವಿಸಿದರೆ ಉತ್ತಮ. ಆದರೆ ಹೆಚ್ಚು ಮೆಣಸನ್ನು ಬೆರೆಸದಿರಿ, ಇದರಿಂದ ಉದರದಲ್ಲಿ ಉರಿಯ ಅನುಭವವಾಗುತ್ತದೆ.ಅದರಲ್ಲೂ ನಿಮಗೆ ಸ್ವಲ್ಪ ಕಹಿಯನ್ನು ಸೇವಿಸುವ ಸ್ವಭಾವವಿದ್ದಲ್ಲಿ, ಮೊಸರಿಗೆ ಸ್ವಲ್ಪ ಮೆಂತೆ ಕಾಳಿನ ಪುಡಿಯನ್ನು ಬೆರೆಸಿಕೊಂಡು ಸೇವಿಸಬಹುದು. ಹೀಗೆ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಯನ್ನು ಮತ್ತು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಬಹುದು.ಸಕ್ಕರೆ ಮಿಶ್ರಿತ ಮೊಸರನ್ನು ರಾತ್ರಿ ಸಮಯದಲ್ಲಿ ಸೇವಿಸಲೇಬಾರದು. ರಾತ್ರಿ ಹೊತ್ತು ಮೊಸರಿಗೆ ಬದಲು ಮಜ್ಜಿಗೆಯು ಅತೀ ಸೂಕ್ತ. ಮಜ್ಜಿಗೆಯ ಸೇವನೆಯಿಂದ ಎಲ್ಲ ನಾಳಗಳು ಶುದ್ಧಿಯಾಗಿ ಹಾನಿಕಾರಕ ಅಂಶಗಳು ಹೀರಿಕೊಳ್ಳುವುದನ್ನು ತಡೆಯಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
