fbpx
ಆರೋಗ್ಯ

ದಾಸವಾಳ ಹೂವಿನ ಆರೋಗ್ಯಕರ ಗುಣ ಗೊತ್ತಿದೆಯೇ?

ದಾಸವಾಳ ಹೂವಿನಲ್ಲಿ ಹತ್ತಕ್ಕೂ ಹೆಚ್ಚಿನ ಆರೋಗ್ಯಕರ ಗುಣವಿದೆಯೆಂದು ಗೊತ್ತಿದೆಯೇ ದಾಸವಾಳ ಹೂ ಕೂದಲಿನ ಬೆಳವಣಿಗೆಗೆ ಒಳ್ಳೆಯದೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ, ಇದಲ್ಲದೆ ಮಹಿಳೆಯರಲ್ಲಿ ಬಿಳುಪು ಹೋಗುವುದನ್ನು ತಡೆಯುವುದರಿಂದ ಹಿಡಿದು ಇನ್ನು ಅನೇಕ ಆರೊಗ್ಯಕರ ಗುಣಗಳು ಇದರಲ್ಲಿ ಇದೆ.ದಾಸವಾಳದ ಹೂವಿನಲ್ಲಿ anti oxidants ಗುಣ ಅಧಿಕವಿದ್ದು ಈ ಹೂವನ್ನು ಬಳಸಿ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಈ ಸಣ್ಣ-ಪುಟ್ಟ ಸಮಸ್ಯೆಗಳಿಂದ ಪಾರಾಗಬಹುದು. antioxidants ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ.

ಮಹಿಳೆಯರಿಗೆ ಮೆನೋಪಸ್ ಸಮಯದಲ್ಲಿ ಹಾಟ್ ಪ್ಲಾಷ್ ಸಮಸ್ಯೆ ಕಂಡು ಬರುತ್ತದೆ. ತುಂಬಾ ಸೆಕೆಯಾದಂತೆ ಅನಿಸುವುದು, ಮೈಯೆಲ್ಲಾ ಬೆವರುವುದು ಈ ಸಮಸ್ಯೆಯಿಂದ ಹೊರಬರಲು ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಅದರ ಟೀ ಮಾಡಿ ಕುಡಿಯುವುದು ಒಳ್ಳೆಯದು.ವಯಸ್ಸು ಹೆಚ್ಚಾಗಿ ಸೌಂದರ್ಯ ಕಮ್ಮಿಯಾಗುವುದನ್ನು ನಾವು ಯಾರೂ ಬಯಸುವುದಿಲ್ಲ, ಆದರೂ ನಾವು ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಆದರೆ ಸ್ವಲ್ಪ ಆರೈಕೆ ಮಾಡಿದರೆ ಯೌವನದ ಚೆಲುವು ಬೇಗನೆ ಕಡಿಮೆಯಾಗುವುದನ್ನು ತಡೆಯಬಹುದು.ಮೊಡವೆ ಕಡಿಮೆ ಮಾಡಲು ದುಬಾರಿ ಚಿಕಿತ್ಸೆ ಮಾಡಿಸುತ್ತೇವೆ, ಆದರೆ ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು, ಅಲ್ಲದೆ ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ. ಈ ಹೂವಿನಲ್ಲಿ antioxidants ಮತ್ತು ವಿಟಮಿನ್ ಸಿ ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

 

 

 

ದೇಹದಲ್ಲಿ ನೀರಿನಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ. ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು, ಡ್ರೈ ಸ್ಕಿನ್ ಇರುವವರು ಇದರ ಜ್ಯೂಸ್ ಕುಡಿಯುವುದು ಒಳ್ಳೆಯದು.ಕೆಲವರಿಗೆ ಹೊಟ್ಟೆ ಸರಿಯಾಗಿ ಹಸಿಯುವುದಿಲ್ಲ, ಹೊಟ್ಟೆ ಹಸಿಯುತ್ತಿಲ್ಲ ಎಂದು ಊಟ ಸರಿಯಾಗಿ ಮಾಡದಿದ್ದರೆ ನಿಶ್ಯಕ್ತಿ ಉಂಟಾಗುವುದು. ಹೊಟ್ಟೆ ಹಸಿವು ಸರಿಯಾದ ರೀತಿಯಲ್ಲಿ ಆಗಲು ದಾಸವಾಳವನ್ನು ತಿನ್ನುವುದು ಒಳ್ಳೆಯದು.ಕೂದಲು ಉದುರುವುದನ್ನು ತಡೆಯುವ ಉತ್ತಮ ಮನೆ ಮದ್ದು ಇದಾಗಿದೆ. ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಪ್ರತೀದಿನ ಈ ಎಣ್ಣೆ ಹಚ್ಚಿದರೆ ಕಪ್ಪಾದ ಕೂದಲಿನ ಸೌಂದರ್ಯ ನಿಮ್ಮದಾಗುವುದು.ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಮ್ಮಿ ಮಾಡಬೇಕೆಂದು ಬಯಸುವುದಾದರೆ ದಿನಾ ಒಂದರಿಂದ ಎರಡು ದಾಸವಾಳದ ಹೂವನ್ನು ತಿನ್ನುವುದು ಒಳ್ಳೆಯದು.

ಬಾಡಿ ಹೀಟ್ ಆಗಿದ್ದರೆ ಅದನ್ನು ಕಮ್ಮಿ ಮಾಡಲು ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಒಳ್ಳೆಯದು. ದಾಸವಾಳದ ರಸ ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ, ಅದರಲ್ಲೂ ಬಿಳಿ ಬಣ್ಣದ ದಾಸವಾಳದಲ್ಲಿ ತಂಪು ನೀಡುವ ಅಂಶ ಹೆಚ್ಚಿರುವುದರಿಂದ, ಅದು ಕಣ್ಣುಗಳನ್ನು ಆಯಾಸದಿಂದ ಮುಕ್ತವಾಗಿರಿಸಿ, ತಂಪನ್ನು ನೀಡುತ್ತದೆ. ದಾಸವಾಳ ಹೂವಿನಲ್ಲಿರುವ antioxidants ಗುಣ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ದಾಸವಾಳ ಹೂವಿನ ಟೀ ಮಾಡಿ ಕುಡಿಯುವುದು ತುಂಬಾ ಒಳ್ಳೆಯದು. ಕೆಲವು ಮಹಿಳೆಯರಲ್ಲಿ ಅಧಿಕ ಬಿಳುಪು ಹೋಗುವ ಸಮಸ್ಯೆ ಕಂಡು ಬರುವುದು, ಈ ಸಮಸ್ಯೆ ಇರುವವರು ದಿನ ಒಂದು ಬಿಳಿ ದಾಸವಾಳ ಹೂ ತಿಂದರೆ ಬಿಳುಪು ಹೋಗುವುದು ಕಮ್ಮಿಯಾಗುವುದು.

ಹೃದಯ ಸಂಬಂಧಿ ತೊಂದರೆಗಳಿಗೆ ದಾಸವಾಳ ಹೂವಿನ ನೈಸರ್ಗಿಕ ಅಂಶ ಪರಿಣಾಮಕಾರಿ. ಈ ಹೂವಿನ ರಸದ ಕಷಾಯವನ್ನು ಕುಡಿದರೆ ದೇಹದಲ್ಲಿನ ಅತಿಯಾದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ. ದೇಹದಲ್ಲಿರುವ ಅನಗತ್ಯ ಬೊಜ್ಜನ್ನು ಕರಗಿಸುವಲ್ಲಿ ದಾಸವಾಳ ಹೆಚ್ಚು ಪ್ರಯೋಜನ. ದಾಸವಾಳದ ಹೂವಿನ ಟೀ ಮಾಡಿ ಕುಡಿದರೆ ಅಥವಾ ಅದರ ರಸವನ್ನು ಸೇವಿಸಿದರೆ, ಹೃದಯ ಸ್ಥಂಭನಕ್ಕೆ ಕಾರಣವಾಗುವ, ರಕ್ತದಲ್ಲಿ ಸೇರಿಕೊಂಡ ಅನಗತ್ಯ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಈ ಮೂಲಕ ಹೃದಯ ಸ್ಥಂಭನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ದಾಸವಾಳದ ರಸವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.ಕೆಂಪು ದಾಸವಾಳದ ಹೂವು ನೈಸರ್ಗಿಕವಾಗಿ ರಕ್ತದ ಬಣ್ಣವನ್ನು ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಇದು ಪರಿಣಾಮಕಾರಿ ಔಷಧಿ.

ಈ ಹೂವಿನಿಂದ ತೆಗೆದ ರಸ ಕೂದಲಿಗೆ ಹೊಳಪು ನೀಡಿ ಉತ್ತಮ ಕಂಡೀಶನರ್ ನಂತೆ ವರ್ತಿಸುತ್ತದೆ. ತಲೆಹೊಟ್ಟು ನಿವಾರಿಸಿ, ಇದು ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ.ದಾಸವಾಳ ಹೂವಿನ ತೈಲದ ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ.ಹೂವು ಹಾಗೂ ಎಲೆಗಳನ್ನು ಒಣಗಿಸಿ, ಸುಟ್ಟ ಬಳಿಕ ಸಿಗುವ ಬೂದಿಯನ್ನು ಹಚ್ಚಿದರೆ, ಕಣ್ಣಹುಬ್ಬುಗಳು ಹೊಳಪು ಪಡೆಯುತ್ತವೆ.ಬೇರೆ ದಾಸವಾಳ ಎಲೆಗಳಿಗಿಂತ ಬಿಳಿ ದಾಸವಾಳ ಎಲೆಗಳು ತುಂಬಾ ಒಳ್ಳೆಯದು.ದಾಸವಾಳ ಹೂಗಳ ಪಕಳೆಗಳನ್ನು ಶೂಗಳಿಗೆ ತಿಕ್ಕಿದರೆ, ಹೊಳಪು ಬರುತ್ತದೆ.ಹೂವಿನ ಪಕಳೆಗಳನ್ನು ಹಾಕಿ ತಯಾರಿಸಿದ ಚಹಾ ಸೇವನೆ ಎಷ್ಟೋ ಬುಡಕಟ್ಟು ಜನರಲ್ಲಿ ಇನ್ನೂ ಇದೆ. ಈ ಚಹಾ ಖನಿಜಾಂಶ ಹಾಗೂ ವಿಟಮಿನ್ ಒಳಗೊಂಡಿರುತ್ತದೆ.ದಾಸವಾಳ ಸಸ್ಯದ ಬೇರನ್ನು ಬಳಸಿ ತಯಾರಿಸುವ ಔಷಧವು ಅನೇಕ ರೋಗಗಳಿಗೆ ರಾಮಬಾಣವಾಗಿದೆ.ಬಿಳಿ ದಾಸವಾಳದ ಮೊಗ್ಗುಗಳನ್ನು ಉಪಹಾರ ಸೇವಿಸುವುದಕ್ಕಿಂತ ಮುನ್ನ (ನಸುಕಿನ ಜಾವ ಒಳ್ಳೆಯದು) ತಿಂದರೆ ಎಲ್ಲ ರೋಗಗಳೂ ನಿವಾರಣೆಯಾಗುತ್ತವೆ ಎಂಬುದು ಸಾಂಪ್ರದಾಯಿಕ ಚಿಕಿತ್ಸಾ ತಜ್ಞರ ಅಭಿಮತ. ತಿನ್ನುವ ಸಂದರ್ಭದಲ್ಲಿ ಕಹಿ ಎನಿಸಿದರೆ, ಸ್ವಲ್ಪ ಸಕ್ಕರೆಯನ್ನು ಬೆರೆಸಿ ಸೇವಿಸಬಹುದು. ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ದಾಸವಾಳ ಹೂವು ಸಹಕಾರಿ. ಹೀಗಾಗಿಯೇ ಹವಾಯಿ ದ್ವೀಪದ ಜನರು ಹೂಗಳನ್ನು ನೇರವಾಗಿ ತಿಂದರೆ, ಚೀನಾದವರು ಉಪ್ಪಿನಕಾಯಿ ಮಾಡಿಕೊಂಡು ಸೇವಿಸುತ್ತಾರೆ.

ದಾಸವಾಳ ಸಸ್ಯದ ಕಾಂಡದಲ್ಲಿರುವ ಫೈಬರ್ (ನಾರು) ಒಳ್ಳೆಯ ಗುಣಮಟ್ಟದ್ದು. ಬಟ್ಟೆ, ಬಲೆ ಹಾಗೂ ಪೇಪರ್ ತಯಾರಿಸಲು ಇದರ ಬಳಕೆಯಾಗುತ್ತದೆ. ಈ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ, ಬೇರಿನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೂ ಕುದಿಸಬೇಕು. ಗಾಯಗಳಿಗೆ ಈ ಎಣ್ಣೆ ಲೇಪಿಸಿದರೆ ಗುಣಮುಖವಾಗುತ್ತದೆ. ಬಿಳಿ ದಾಸವಾಳ ಎಲ್ಲಕ್ಕಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಹೂವುಗಳನ್ನು ಬೇವಿನ ಮರದ ಅಡಿಯಲ್ಲಿ (ನೆರಳಿನಲ್ಲಿ) ಒಣಗಿಸಬೇಕು. ನಂತರ ಇದನ್ನು ಪುಡಿ ಮಾಡಿ ಸೇವಿಸಿದರೆ ಎಲ್ಲ ಬಗೆಯ ಕ್ಯಾನ್ಸರ್‌ಗಳಿಗೆ ಉಪಶಮನಕಾರಿ.ನೆನೆಸಿದ ಅಕ್ಕಿಯ ಜೊತೆ ಬಿಳಿ ದಾಸವಾಳ ರುಬ್ಬಿ ಮಾಡಿದ ದೋಸೆ ತಂಪು. ದಾಸವಾಳ ಎಲೆಯ ಲೋಳೆ ತಲೆಗೆ ಬಳಸುವುದರಿಂದ ಕೂದಲು ಪಳಫಳ.

ಬಿಳಿ ದಾಸವಾಳದ ಎಲೆಗಳನ್ನು ನೀರಿನಲ್ಲಿ ಹಾಕಿ ಕಿವುಚಿ ಬರುವ ರಸಕ್ಕೆ ಬೆಲ್ಲ ,ಹಾಲು ಹಾಕಿ ಕುಡಿದರೆ ದೇಹದ ಉಷ್ಣ ಕಡಿಮೆ ಆಗುತ್ತದೆ.ಸ್ವಲ್ಪ ತೆಂಗಿನೆಣ್ಣೆಗೆ 7-8 ಬಿಳಿ ದಾಸವಾಳದ ಎಲೆ ಹಾಕಿ ಕಾಯಿಸಿ ತಣಿಸಿ ಕೂದಲಿಗೆ ಹಚ್ಚಿ ನಂತರ ಸ್ನಾನ ಮಾಡಿದರೆ ಕೂದಲು ಸ್ಮೂತ್ ಆಗಿ ಹೊಳಪು ಬರುತ್ತದೆ.ನೆನೆಸಿದ ಅಕ್ಕಿಯ ಜೊತೆ ಬಿಳಿ ದಾಸವಾಳ ರುಬ್ಬಿ ಮಾಡಿದ ದೋಸೆ ತಂಪು.

 

 

 

ಕೂದಲಿಗೆ ಉತ್ತಮವಾದ ಕಂಡೀಷನರ್: ದಾಸವಾಳದ ಎಲೆ ಜೊತೆ ಹೂವನ್ನು ಹಾಕಿ ಪೇಸ್ಟ್ ರೀತಿ ಮಾಡಿ ತಲೆಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುವುದು, ಅಕಾಲಿಕ ನೆರಿಗೆ ಉಂಟಾಗುವುದನ್ನು ತಪ್ಪಿಸಬಹುದು. ಅಲ್ಲದೆ ಇದು ನೈಸರ್ಗಿಕವಾದ ಕಂಡೀಷನರ್ ಆಗಿದ್ದು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಟೀ: ಇದರ ಹೂವಿನಿಂದ ಟೀ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಿಡ್ನಿ ಸಮಸ್ಯೆ ಬರದಂತೆ ತಡೆಯಲು, ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಖಿನ್ನತೆಯನ್ನು ಹೋಗಲಾಡಿಸುವಲ್ಲಿಯೂ ಸಹಕಾರಿ.ತ್ವಚೆ ಆರೈಕೆ: ಇದನ್ನು ಕಾಸ್ಮೆಟಿಕ್ ತಯಾರಿಕೆಯಲ್ಲೂ ಬಳಸುತ್ತಾರೆ. ಇದು ಸೂರ್ಯನ ನೇರಳಾತೀತ ಕಿರಣಗಳಿಂದ ತ್ವಚೆ ರಕ್ಷಣೆ ಮಾಡುವುದರಿಂದ ಸನ್ ಸ್ಕ್ರೀನ್ ಕ್ರೀಂಗಳಲ್ಲೂ ಮತ್ತು ಇತರ ಸೌಂದರ್ಯವರ್ಧಕಗಳಲ್ಲೂ ಬಳಸಬಹುದು.

ಬಿಪಿಯನ್ನು ಕಮ್ಮಿ ಮಾಡುತ್ತದೆ: ದಾಸವಾಳದ ಟೀ ಕುಡಿಯುವವವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗುವುದಿಲ್ಲ ಎಂದು ಸಮೀಕ್ಷೆಯಿಂದ ಸಾಬೀತಾಗಿದೆ.ಗಾಯವನ್ನು ಗುಣಪಡಿಸುತ್ತದೆ: ದಾಸವಾಳದ ಎಲೆಯ ರಸವನ್ನು ಹಿಂಡಿ ಗಾಯದ ಮೇಲೆ ಹಾಕಿದರೆ ಗಾಯವು ಬೇಗನೆ ಗುಣಮುಖವಾಗುವುದು.ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ: ದಾಸವಾಳ ಹೂವಿನ ಟೀ ಕುಡಿಯುವುದರಿಂದ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಸಂಧಿವಾತದ ನೋವನ್ನು ಕಮ್ಮಿ ಮಾಡುತ್ತದೆ. ಕೆಮ್ಮು ಮತ್ತು ಶೀತಕ್ಕೆ ಮನೆಮದ್ದು: ದಾಸವಾಳ ಹೂವಿನಲ್ಲಿ ವಿಟಮಿನ್ ಸಿ ಇದ್ದು ಇದು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೆಮ್ಮು, ಶೀತ ಈ ರೀತಿಯ ಸಾಮಾನ್ಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ತೂಕ ಕಮ್ಮಿಯಾಗಲು ಮತ್ತು ಜೀರ್ಣಕ್ರಿಯೆಗೆ: ದಾಸವಾಳದ ಟೀ ಕುಡಿಯುವುದರಿಂದ ಮೈಯ ಬೊಜ್ಜು ಕೂಡ ಕಮ್ಮಿಯಾಗುವುದು. ಅಲ್ಲದೆ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ.ಮುಟ್ಟಿನ ನೋವನ್ನು ಕಮ್ಮಿ ಮಾಡುತ್ತದೆ: ಕೆಲವರಿಗೆ ಮುಟ್ಟಿನ ಸಮಯದಲ್ಲಿ ವಿಪರೀತ ನೋವ್ವು ಕಂಡು ಬರುತ್ತದೆ. ಅದನ್ನು ಕಮ್ಮಿ ಮಾಡುವಲ್ಲಿ ದಾಸವಾಳ ಟೀ ಸಹಾಯ ಮಾಡುವುದು.ಅಕಾಲಿಕ ನೆರಿಗೆ ವಿರುದ್ಧ ಹೋರಾಡುತ್ತದೆ: ವಯಸ್ಸಾಗುತ್ತಿದ್ದಂತೆ ನೆರಿಗೆ ಬೀಳುವುದು ಸಹಜ, ಆದರೆ ಕೆಲವರು ಚಿಕ್ಕ ಪ್ರಾಯದಲ್ಲಿಯೇ ವಯಸ್ಸಾದವರಂತೆ ಕಾಣುತ್ತಾರೆ. ದಾಸವಾಳದ ಟೀ ಕುಡಿದರೆ ಈ ರೀತಿಯ ಅಕಾಲಿಕ ಮುಪ್ಪು ಉಂಟಾಗುವುದನ್ನು ತಡೆಯಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top