fbpx
ಭವಿಷ್ಯ

ಡಿಸೆಂಬರ್ 2018,12 ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಡಿಸೆಂಬರ್ ತಿಂಗಳ 12 ರಾಶಿಗಳ ಭವಿಷ್ಯ

ಮೇಷ ರಾಶಿ 

 

 

 

ಗುರು ಎಂಟನೇ ಸ್ಥಾನದಲ್ಲಿ, ಶನಿ 9ನೇ ಸ್ಥಾನದಲ್ಲಿ, ಕುಜ 11 ಮತ್ತು ಕೇತು ಹತ್ತನೇ ಸ್ಥಾನದಲ್ಲಿ ಮತ್ತು ರಾಹು ನಾಲ್ಕನೇ ಸ್ಥಾನದಲ್ಲಿ ನಿಮ್ಮ ರಾಶಿಯಿಂದ ಸಂಚಾರ ಮಾಡುತ್ತಿದ್ದಾರೆ. ಗ್ರಹಗಳ ಸಂಚಾರ ಅಷ್ಟೊಂದು ಅನುಕೂಲವಾಗಿ ಇಲ್ಲದೆ ಇರುವುದರಿಂದ ತಾವು ಆದಷ್ಟು ಜಾಗ್ರತೆ ವಹಿಸಿ, ಕುಟುಂಬ ಸದಸ್ಯರ ಜೊತೆ ಸಣ್ಣ ಪುಟ್ಟ ಕಲಹಗಳು ಉಂಟಾಗಬಹುದು, ದಂಪತಿಗಳ ನಡುವೆ ಮನಸ್ತಾಪಗಳು ಆದ್ದರಿಂದ ತಾಳ್ಮೆಯಿಂದ ಯೋಚಿಸಿ ಮಾತನಾಡುವುದು ಉತ್ತಮ, ವಿದ್ಯಾರ್ಥಿಗಳು ಹೆಚ್ಚಿನ ಶ್ರಮಪಟ್ಟು ಓದಬೇಕಾಗುತ್ತದೆ.

 

ನಿರುದ್ಯೋಗಿಗಳು ಈ ಮಾಸದ ಮಧ್ಯದಲ್ಲಿ ಶುಭ ಸುದ್ದಿಯನ್ನು ಕೇಳುತ್ತೀರಿ, ವ್ಯಾಪಾರಿಗಳಿಗೆ ಅಷ್ಟೊಂದು ಒಳ್ಳೆಯ ಸಮಯವಲ್ಲ ಎಂದೇ ಹೇಳಬಹುದು, ಆರೋಗ್ಯದ ಕಡೆ ಕಾಳಜಿ ವಹಿಸಿದರೆ ಒಳ್ಳೆಯದು, ದೂರ ಪ್ರಯಾಣ ಮಾಡುವ ಅವಕಾಶಗಳು ಬರುತ್ತವೆ,ಪ್ರಯಾಣ ಮಾಡುವಾಗ ಜಾಗ್ರತೆ ವಹಿಸಿದ್ದರೆ ಒಳ್ಳೆಯದು, ವಾಹನ ಚಲಾಯಿಸುವಾಗ ಎಚ್ಚರದಿಂದ ವಾಹನವನ್ನು ಚಲಾಯಿಸಿ, ಉದ್ಯೋಗದಲ್ಲಿರುವವರಿಗೆ ಒತ್ತಡ ಹೆಚ್ಚಾಗಿರುತ್ತದೆ, ಮನಸ್ತಾಪಗಳು ಉಂಟಾಗುತ್ತವೆ,ಈ ಸಮಯದಲ್ಲಿ ತಾಳ್ಮೆಯಿಂದ ಇದ್ದರೆ ಉತ್ತಮ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸಾಧಾರಣವಾದ ತಿಂಗಳಾಗಿರುತ್ತದೆ, ಅಷ್ಟಮದಲ್ಲಿ ಸೂರ್ಯ ಡಿಸೆಂಬರ್ 17, 18 ನೇ ತಾರೀಖಿನ ನಂತರ ಸೂರ್ಯನು 9ನೇ ಸ್ಥಾನದಲ್ಲಿ ಸಂಚಾರ ಮಾಡುತ್ತಾನೆ, ಆದರೆ ಆ ಎರಡು ದಿನಗಳಲ್ಲಿ ಮಾತ್ರ ತುಂಬಾ ತಾಳ್ಮೆ ಮತ್ತು ಸಹನೆಯಿಂದ ಇರಬೇಕು, ಸ್ಥಾನ ಪಲ್ಲಟದಿಂದ ತುಂಬಾ ಅನುಕೂಲವಾಗಲಿದೆ, ಕಾರ್ಯಸಿದ್ದಿ, ಸಮಯಕ್ಕೆ ತಕ್ಕ ಹಾಗೆ  ಕೆಲಸಗಳಿಂದ ಧನಲಾಭವಾಗುತ್ತದೆ,  ವಿದ್ಯಾರ್ಥಿಗಳಿಗೆ ಅನುಕೂಲವಾದ ಸಮಯವಾಗಿದೆ, ಯಾವ ಕೆಲಸ ಮಾಡಿದರೂ ಆ ಕೆಲಸದಲ್ಲಿ ಸ್ವಲ್ಪ ತೊಂದರೆಗಳಿದ್ದರೂ ಕ್ರಮೇಣ ಒಳ್ಳೆಯ ಅಭಿವೃದ್ದಿಯನ್ನು ಸಾಧಿಸುತ್ತೀರಿ, ಸಾಮಾಜಿಕ ಕ್ಷೇತ್ರದಲ್ಲಿ ಜಯವನ್ನು ಗಳಿಸುತ್ತೀರಿ, ಬೇರೆಯವರ ಆಶ್ಚರ್ಯ ಪಡುವ ಹಾಗೆ ಅಭಿವೃದ್ಧಿಯನ್ನು ಹೊಂದುತ್ತೀರ, ವಿದೇಶಿ ವ್ಯವಹಾರ ಮಾಡುತ್ತಿರುವವರಿಗೆ ಅನುಕೂಲವಾಗಿರುತ್ತದೆ.

ಪರಿಹಾರ:ಆದಿತ್ಯ ಹೃದಯ ಪಾರಾಯಣ ಮಾಡಿ ದುರ್ಗಾ ದೇವಿಯ ದೇವಸ್ಥಾನದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಿದರೆ ಒಳ್ಳೆಯದು. ದುರ್ಗ ಅಷ್ಟಕ ದುರ್ಗ ಸ್ತುತಿಯನ್ನು ಪಠಿಸಿ.

ವೃಷಭ ರಾಶಿ

 

 

 

ವೃಷಭ ರಾಶಿಗೆ ಗುರು ಏಳನೇ ಸ್ಥಾನದಲ್ಲಿ, ಶನಿ ಎಂಟನೇ ಸ್ಥಾನದಲ್ಲಿ, ಕುಜ ಹತ್ತು, ಕೇತು 9 ಮತ್ತು ರಾಹು ಮೂರನೇ ಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾರೆ.ಈ ತಿಂಗಳು ಸ್ವಲ್ಪ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ, ಕುಟುಂಬದಲ್ಲಿ ಕಲಹಗಳು ಮನಸ್ತಾಪಗಳು ಹೆಚ್ಚಾಗುತ್ತವೆ, ಕೆಲಸಗಳೆಲ್ಲ ನಿಧಾನವಾಗಿ ಆಗುವುದರಿಂದ ಮನಃಶಾಂತಿ ಇರುವುದಿಲ್ಲ, ಆಕಸ್ಮಿಕ ಖರ್ಚುಗಳು ಹೆಚ್ಚಾಗುತ್ತವೆ, ಬಂಧು ಮಿತ್ರರ ಜೊತೆ ಸಂತೋಷದಿಂದ ಸಮಯವನ್ನು ಕಳೆಯುತ್ತೀರ, ಐಶಾರಾಮಿ ಜೀವನ ನಡೆಸಲು ಬಹಳಷ್ಟು ಹಣ ಖರ್ಚಾಗುತ್ತದೆ.

 

ವಿದ್ಯಾರ್ಥಿಗಳು ಶ್ರಮಪಟ್ಟು ಓದಬೇಕಾಗುತ್ತದೆ, ಉದ್ಯೋಗದಲ್ಲಿರುವವರಿಗೆ ವರ್ಗಾವಣೆ ಸಾಧ್ಯತೆಯಿದೆ, ಈ ಮಾಸದಲ್ಲಿ ಕೋಪವನ್ನು ಕಡಿಮೆ ಮಾಡಿಕೊಂಡು ತಾಳ್ಮೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು, ಅಂದುಕೊಂಡ ಕೆಲಸಗಳು ಪೂರ್ತಿಯಾಗದೇ ದುಃಖಿಸುತ್ತಾ ಇರುತ್ತೀರ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸಾಧಾರಣವಾಗಿರುತ್ತದೆ, ವಿದ್ಯಾರ್ಥಿಗಳು ಶ್ರಮವಹಿಸಿ ಓದಬೇಕಾಗುತ್ತದೆ, ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಮಾತುಗಳು ಕೇಳಿ ಬರುತ್ತವೆ, ನೀವು ಏನೇ ಮಾತನಾಡಿದರೂ ಅದನ್ನು ತಪ್ಪಾಗಿ ತಿಳಿದುಕೊಳ್ಳುತ್ತಾರೆ, ಯಾರು ಏನೇ ಅಂದರೂ ಅದರ ಕಡೆ ಗಮನ ಹರಿಸದೆ ತಾಳ್ಮೆಯಿಂದ ಇದ್ದರೆ ಎಲ್ಲಾ ಸರಿ ಹೋಗುತ್ತದೆ, ಗುರುಬಲ ಇರುವುದರಿಂದ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಾರೆ, ಈ ಸಮಯದಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ, ಮಹಿಳೆಯರು ಸ್ವಲ್ಪ ಜಾಗ್ರತೆ ವಹಿಸಿದರೆ ಒಳ್ಳೆಯದು, ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ, ಬಂಧುಗಳಿಂದ ವಿಮರ್ಶೆಯನ್ನು ಕೇಳಬೇಕಾಗುತ್ತದೆ.

ಪರಿಹಾರ:ಮಾನಸಿಕ ಗೊಂದಲ, ಭಯ ದೂರವಾಗಲು ಪ್ರತಿ ಮಂಗಳವಾರ ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಹನುಮಂತನ ದರ್ಶನ ಮಾಡಿ.

ಮಿಥುನ ರಾಶಿ

 

 

 

ಈ ತಿಂಗಳು ಗುರು ಆರನೇ ಮನೆ, ಶನಿ ಏಳನೇ ಮನೆ, ಕುಜ 9ನೇ ಮನೆಯಲ್ಲಿ, ಕೇತು ಎಂಟನೆ ಮನೆ ಮತ್ತು ರಾಹು ಎರಡನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ.ಡಿಸೆಂಬರ್ 21 ನೇ ತಾರೀಖಿನ ನಂತರ ಕುಜ ಗ್ರಹವು ಮೀನ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಸಮಯವು ಅನುಕೂಲವಾಗಿರುತ್ತದೆ. ಆಕಸ್ಮಿಕ ಧನ ಲಾಭವಾಗುತ್ತದೆ. ತುಂಬಾ ದಿನಗಳಿಂದ ನಿಂತು ಹೋಗಿರುವ ಕೆಲಸಗಳೆಲ್ಲ ಈ ಮಾಸದಲ್ಲಿ ಪೂರ್ತಿಯಾಗುತ್ತದೆ , ಕೋರ್ಟ್ ಸಮಸ್ಯೆಗಳು ತೀರಿ ಹೋಗುತ್ತವೆ, ವ್ಯಾಪಾರಿಗಳಿಗೆ ಅನುಕೂಲಕರವಾಗಿದೆ ಮತ್ತು ಲಾಭವನ್ನು ಕಾಣುತ್ತೀರಿ, ವಿದ್ಯಾರ್ಥಿಗಳಿಗೂ ಕೂಡ ಅನುಕೂಲವಾಗಿರುವುದರಿಂದ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತದೆ.

 

ನಿರುದ್ಯೋಗಿಗಳು ಶುಭವಾರ್ತೆಯನ್ನು ಕೇಳುತ್ತೀರಿ, ಚಿನ್ನಾಭರಣಗಳನ್ನು ಖರೀದಿ ಮಾಡುವ ಅವಕಾಶಗಳು ಹೆಚ್ಚಾಗಿ ಗೋಚರಿಸುತ್ತವೆ, ಉದ್ಯೋಗದಲ್ಲಿರುವವರಿಗೆ ಸಮಯ ಅನುಕೂಲವಾಗಿರುತ್ತದೆ, ನೂತನವಾಗಿ ವ್ಯಾಪಾರ ಪ್ರಾರಂಭ ಮಾಡಬೇಕೆಂದು ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರವಾದ ಸಮಯವಾಗಿದೆ, ನೀವು ಮಾಡುವ ಮಧ್ಯವರ್ತಿಯ ಕೆಲಸದಲ್ಲಿ ಜಯವನ್ನು ಸಾಧಿಸುತ್ತೀರಿ, ನಿಮ್ಮ ಮಾತನ್ನು ತುಂಬಾ ಜನರು ಗೌರವಿಸುತ್ತಾರೆ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲವಾಗಿರುತ್ತದೆ, ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ, ಸಹಕಾರ ಪೂರ್ತಿಯಾಗಿ ಲಭಿಸುತ್ತದೆ, ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ.

ಪರಿಹಾರ:ಪ್ರತಿ ಮಂಗಳವಾರದ ದಿನ ಸುಬ್ರಮಣ್ಯ ದೇವರ ಆರಾಧನೆ ಮಾಡಿದರೆ ನೀವು ಅಂದುಕೊಂಡ ಕೆಲಸಗಳು ಪೂರ್ಣವಾಗುತ್ತವೆ.

ಕಟಕ ರಾಶಿ

 

 

 

ಗುರು ಐದನೇ ಮನೆಯಲ್ಲಿ, ಶನಿ ಆರನೇ ಮನೆ, ಕೇತು ಏಳನೇ ಮನೆ, ಕುಜ ಎಂಟನೆ ಮನೆ ಮತ್ತು ರಾಹು ಲಗ್ನದಲ್ಲಿ ಸಂಚಾರ ಮಾಡುತ್ತಿದ್ದಾರೆ. ಈ ಮಾಸದ ಮೊದಲಾರ್ಧದಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಗಳು ಗೋಚರಿಸುತ್ತವೆ, ಉದ್ಯೋಗದಲ್ಲಿರುವವರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ, ಆದ್ದರಿಂದ ನೀವು ತಾಳ್ಮೆಯಿಂದ ಇದ್ದರೆ ಒಳ್ಳೆಯದು, ತಿಂಗಳ ಮೊದಲ ಅರ್ಧದಲ್ಲಿ ಅವಮಾನವನ್ನು ಎದುರಿಸಬೇಕಾಗುತ್ತದೆ, ಕುಟುಂಬದಲ್ಲಿ ಕಲಹಗಳು ಬರುವ ಅವಕಾಶಗಳು ಹೆಚ್ಚು, ದಂಪತಿಗಳ ನಡುವೆ ಅನ್ಯೋನ್ಯತೆಯ ಕೊರತೆಯಾಗುವ ಅವಕಾಶಗಳು ಹೆಚ್ಚಾಗಿವೆ, ವಾಹನ ಚಲಾಯಿಸುವಾಗ ಜಾಗ್ರತೆ ವಹಿಸಿದರೆ ಒಳ್ಳೆಯದು, ದೈವಾರಾಧನೆ ಹೆಚ್ಚಾಗಿ ಮಾಡಬೇಕು.

 

ಈ ಮಾಸದ ಮೂರನೇ ವಾರದಲ್ಲಿ ಕುಜನ ಸ್ಥಾನ ಪಲ್ಲಟದಿಂದ ಸಮಯ ಅನುಕೂಲಕರವಾಗಿರುತ್ತದೆ ಮತ್ತು ಗೃಹಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭಗಳನ್ನು ಕಾಣುತ್ತೀರ, ನಿಂತು ಹೋಗಿರುವ ಕೆಲಸಗಳೆಲ್ಲ ಸಮಯಕ್ಕೆ ತಕ್ಕ ಹಾಗೆ ಪೂರ್ಣಗೊಳ್ಳುತ್ತವೆ, ಕೋರ್ಟ್ ಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿ ಗೋಚರಿಸುತ್ತವೆ, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತದೆ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲವಾದ ಸಮಯವಾಗಿದೆ, ಮೂರನೇ ವಾರ ಆಕಸ್ಮಿಕ ಧನಲಾಭ ಆಗಮಿಸಲಿದೆ, ದ್ವಿತೀಯಾರ್ಧದಲ್ಲಿ ನೂತನ ವ್ಯಾಪಾರ ಶುರುಮಾಡುವ ಅವಕಾಶಗಳಿವೆ, ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಲಿದೆ, ಶುಭಕಾರ್ಯಗಳು ನಡೆಯಲಿವೆ, ಸಂತಾನದಿಂದ ಸಂತೋಷದಿಂದ ಸುದ್ದಿಯನ್ನು ಕೇಳುತ್ತೀರಿ, ಈ ಮಾಸದ ದ್ವಿತೀಯಾರ್ಧದಲ್ಲಿ ಉದ್ಯೋಗದಲ್ಲಿರುವವರಿಗೆ ರಾಜಯೋಗ ಲಭಿಸಲಿದೆ, ನಿಮ್ಮ ಜಯ ನಿಮ್ಮ ಕೈಯಲ್ಲೇ ಇರುತ್ತದೆ, ಅಂದುಕೊಂಡ ಕೆಲಸಗಳು ಸಕಾಲದಲ್ಲಿ ನೆರವೇರುತ್ತವೆ, ಅವಿವಾಹಿತರು ಈ ಸಮಯದಲ್ಲಿ ಶುಭ ಸುದ್ದಿಯನ್ನು ಕೇಳುತ್ತೀರಿ.

ಪರಿಹಾರ:ಮಂಗಳವಾರದ ದಿನ ಸುಬ್ರಹ್ಮಣ್ಯ ದೇವರ ಆರಾಧನೆ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣುತ್ತೀರ , ಸುಬ್ರಮಣ್ಯ ಅಷ್ಟಕವನ್ನು ಪಠಿಸಿ, ಪ್ರತಿ ಸೋಮವಾರ ಗಣೇಶನಿಗೆ ತೆಂಗಿನಕಾಯಿಯ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಕಷ್ಟಗಳೆಲ್ಲಾ ದೂರವಾಗುತ್ತವೆ.

ಸಿಂಹ ರಾಶಿ

 

 

 

ಗುರು ನಾಲ್ಕನೇ ಸ್ಥಾನದಲ್ಲಿ, ಶನಿ 5, ಕುಜ 7,ಕೇತು 6 ನೇ ಸ್ಥಾನದಲ್ಲಿ ಮತ್ತು ರಾಹು 12ನೇ ಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾರೆ.ಡಿಸೆಂಬರ್ 21 ರ ನಂತರ ಕುಜನ ಸ್ಥಾನ ಪಲ್ಲಟದಿಂದ ಈ ತಿಂಗಳು ತುಂಬಾ ಅನುಕೂಲಕರವಾಗಿರುತ್ತದೆ. ಇದು ಅತ್ಯಂತ ಸುವರ್ಣ ಮಾಸ ಎಂದೇ ಹೇಳಬಹುದು, ಈ ತಿಂಗಳ ಮೊದಲಾರ್ಧದಲ್ಲಿ ತುಂಬಾ ಹಠಮಾರಿತನ ಹೆಚ್ಚಾಗಿರುತ್ತದೆ.ಈ ಸಮಯದಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ, ಮಾನಸಿಕ ಒತ್ತಡ ಹೆಚ್ಚಾಗಲಿದೆ, ಸಣ್ಣಪುಟ್ಟ ವಿಷಯಗಳಲ್ಲಿ ನಿಮ್ಮ ಘನತೆಗೆ ಧಕ್ಕೆ ಬರುವ ಸಾಧ್ಯತೆಯಿದೆ, ಆದ್ದರಿಂದ ಇದರ ಕಡೆ ಗಮನ ವಹಿಸಿದರೆ ಉತ್ತಮ, ಈ ತಿಂಗಳು ಆದಾಯಕ್ಕಿಂತ ಖರ್ಚು ಹೆಚ್ಚು, ಎರಡನೇ ವಾರ ಅಂದುಕೊಂಡ ಕೆಲಸಗಳು ನೀವು ಅಂದುಕೊಂಡ ಹಾಗೆಯೇ ನೆರವೇರುತ್ತವೆ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲವಾದ ಸಮಯ ಇದಾಗಿದೆ, ಬಂಧುಗಳಿಂದ ಮನಸ್ತಾಪಗಳು ಬರುವ ಅವಕಾಶಗಳು ಹೆಚ್ಚಾಗಿ ಗೋಚರಿಸುತ್ತವೆ.

 

ಉದ್ಯೋಗದಲ್ಲಿರುವವರಿಗೆ ಅನುಕೂಲಕರವಾಗಿದೆ, ಉದ್ಯೋಗದಲ್ಲಿ ಅಭಿವೃದ್ಧಿ ಮತ್ತು ಸಂಬಳ ಹೆಚ್ಚಾಗಲಿದೆ, ವ್ಯಾಪಾರ ಮಾಡುವವರು ಹೆಚ್ಚಿನ ಲಾಭವನ್ನು ಗಳಿಸುತ್ತಾರೆ, ನಿರುದ್ಯೋಗಿಗಳು ಶುಭ ಸುದ್ದಿಯನ್ನು ಕೇಳುತ್ತೀರಿ, ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕಂತೆ ಪ್ರತಿ ಫಲ ಸಿಗಲಿದೆ, ಗೃಹಕ್ಕೆ ಮತ್ತು ಭೂ ಸಂಬಂಧಿಸಿದ ವ್ಯವಹಾರಗಳು ಹೆಚ್ಚಿನ ಲಾಭವನ್ನು ಕಾಣಲಿವೆ, ಆರೋಗ್ಯದ ಕಡೆ ಕಾಳಜಿ ವಹಿಸಿ, ಕೋರ್ಟ್ ಗೆ ಸಂಬಂಧಿಸಿದ ವಿಷಯಗಳು ದೂರಾಗಲಿವೆ, ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ , ಆಲೋಚಿಸಿ ಪ್ರಣಾಳಿಕೆಯನ್ನು ಸಿದ್ಧಮಾಡಿಕೊಂಡು ಮುಂದಕ್ಕೆ ಸಾಗಿ, ಪುಣ್ಯ ಕ್ಷೇತ್ರ ದರ್ಶನವನ್ನೂ ಪಡೆಯುವುದು ಒಳ್ಳೆಯದು.

ಪರಿಹಾರ:ಈ ತಿಂಗಳು ಪ್ರತಿ  ಮಂಗಳವಾರ ದುರ್ಗಾ ದೇವಿಯ ಆರಾಧನೆ ದುರ್ಗಾಷ್ಟಕವನ್ನು ಪಠಿಸಿ, ಹಾಗೆಯೇ ಸುಬ್ರಮಣ್ಯ ಅಷ್ಟಕವನ್ನು ಸಹ ಪಠಿಸಿದರೆ ಒಳ್ಳೆಯದು.

ಕನ್ಯಾ ರಾಶಿ

 

 

 

ಗುರು ಮೂರನೇ ಸ್ಥಾನದಲ್ಲಿ, ಶನಿ 4 ,ಕುಜ 6 ,ಕೇತು 5 ಮತ್ತು ರಾಹು 11ನೇ ಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾರೆ,ಡಿಸೆಂಬರ್ 21 ನೇ ತಾರೀಖಿನ ನಂತರ ಕುಜನ ಸ್ಥಾನ ಪಲ್ಲಟದಿಂದ ಈ ತಿಂಗಳು ತುಂಬಾ ಅನುಕೂಲವಾಗಿದೆ, ಹೊಸ ವ್ಯಾಪಾರ ಪ್ರಾರಂಭಿಸಬೇಕು ಎನ್ನುವವರು, ವ್ಯಾಪಾರಿಗಳು ಒಳ್ಳೆಯ ಲಾಭವನ್ನು ಕಾಣುತ್ತೀರ. ಭೂ ಮತ್ತು ಗೃಹಕ್ಕೆ ಸಂಬಂಧಪಟ್ಟ ವ್ಯಾಪಾರಗಳನ್ನು ಮಾಡುವವರಿಗೂ ಸಹ ಅನುಕೂಲವಾದ ಸಮಯವಾಗಿದೆ, ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ, ಆಕಸ್ಮಿಕ ಧನ ಲಾಭವಾಗುತ್ತದೆ, ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ, ತುಂಬಾ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ, ಶುಭ ಕಾರ್ಯಗಳನ್ನು ಈ ತಿಂಗಳು ಮಾಡಬಹುದು.

 

ನಿರುದ್ಯೋಗಿಗಳು ಶುಭ ಸುದ್ದಿಯನ್ನು ಕೇಳುತ್ತೀರ, ಉದ್ಯೋಗದಲ್ಲಿರುವವರಿಗೆ ಅಭಿವೃದ್ಧಿಯಾಗಲಿದೆ, ವೇತನ ಹೆಚ್ಚಾಗಲಿದೆ, ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತೀರಿ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸಮಯ ಚೆನ್ನಾಗಿದೆ, ದೂರ ಪ್ರಯಾಣ ಮಾಡುವ ಅವಕಾಶಗಳು ಹೆಚ್ಚು, ಬಂಧು ಮಿತ್ರರ ಜೊತೆ ಭೋಜನ ಕೂಟದಲ್ಲಿ ಭಾಗಿಯಾಗಿ ನೂತನ ವ್ಯಕ್ತಿಯ ಪರಿಚಯವಾಗಿ ಉತ್ತೇಜನ ದೊರೆಯಲಿದೆ, ಸ್ತ್ರೀಯರು ನೂತನ ಆಭರಣಗಳನ್ನು ಖರೀದಿ ಮಾಡುತ್ತೀರಿ.

ಪರಿಹಾರ:ಗುರುವಾರದ ದಿನ ದಕ್ಷಿಣಾಮೂರ್ತಿ ದೇವರನ್ನು ಪೂಜಿಸಿ, ದತ್ತಾತ್ರೇಯ ದೇವನ್ ಮಂತ್ರವನ್ನು ಪಾರಾಯಣ ಮಾಡುವುದು ಒಳ್ಳೆಯದು, ಶಿವಾರಾಧನೆ ಮಾಡುವುದರಿಂದ ನಿಂತು ಹೋಗಿರುವ ಕೆಲಸಗಳೆಲ್ಲಾ ಪೂರ್ಣಗೊಳ್ಳುತ್ತವೆ.

ತುಲಾ ರಾಶಿ

 

 

 

ಗುರು ಎರಡನೇ ಸ್ಥಾನದಲ್ಲಿ, ಶನಿ 3, ಕುಜ 5, ಕೇತು 4 ಮತ್ತು ರಾಹು 10ನೇ ಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾರೆ. ಡಿಸೆಂಬರ್ 21 ನೇ ತಾರೀಖಿನ ನಂತರ ಕುಜನ ಸ್ಥಾನ ಪಲ್ಲಟದಿಂದ ಸಮಯ ಉತ್ತಮವಾಗಿದೆ, ಗ್ರಹಗಳು ಅನುಕೂಲವಾಗಿವೆ, ಎಲ್ಲಾ ವಿಷಯಗಳಲ್ಲಿಯೂ ವಿಜಯಗಳನ್ನು ಕಾಣುತ್ತೀರಿ, ವಿದ್ಯಾರ್ಥಿಗಳು ಶುಭವಾರ್ತೆಯನ್ನು ಕೇಳಲಿದ್ದೀರಿ, ನಿರುದ್ಯೋಗಿಗಳು ಸಹ ಒಳ್ಳೆಯ ಸುದ್ದಿಯನ್ನು ಎರಡನೇ ವಾರದಲ್ಲಿ ಕೇಳುತ್ತೀರ,ವ್ಯಾಪಾರಿಗಳಿಗೆ ಅನುಕೂಲವಾದ ಸಮಯವಾಗಿದೆ, ಈ ಸಮಯದಲ್ಲಿ ವ್ಯಾಪಾರವನ್ನು ವಿಸ್ತರಿಸಲು ಉತ್ತಮವಾದ ಸಮಯವಾಗಿದೆ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸಮಯ ತುಂಬಾ ಚೆನ್ನಾಗಿದೆ, ಈ ತಿಂಗಳು ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶಗಳು ಹೆಚ್ಚಾಗಿವೆ, ಇದರಿಂದ ನಿಮಗೆ ಸಹಾಯ ಸಹಕಾರ ಪೂರ್ತಿಯಾಗಿ ಲಭಿಸುತ್ತದೆ.

 

ಈ ಸಮಯದಲ್ಲಿ ನೂತನ ವಾಹನಗಳನ್ನು ಖರೀದಿ ಮಾಡುವ ಸಾಧ್ಯತೆ ಹೆಚ್ಚು, ಬಂಧು ಮಿತ್ರರ ಜೊತೆ ಸಂತೋಷದಿಂದ ಭೋಜನ ಕೂಟದಲ್ಲಿ ಭಾಗಿಯಾಗಲಿದ್ದೀರ, ಕೋರ್ಟ್ ಗೆ ಸಂಬಂಧಿಸಿದ ವಿಷಯಗಳು ದೂರವಾಗುತ್ತವೆ, ತೀರ್ಥಯಾತ್ರೆ ಮಾಡುವ , ಮೇಲಾಧಿಕಾರಿಗಳಿಂದ ಪ್ರಶಂಸೆ ಲಭಿಸಲಿದೆ, ಈ ಸಮಯದಲ್ಲಿ ಅಭಿವೃದ್ಧಿ ಮತ್ತು ವೇತನ ಹೆಚ್ಚಾಗುವ ಅವಕಾಶಗಳಿವೆ, ದೈವಾರಾಧನೆ ಮಾಡಿದರೆ ಒಳ್ಳೆಯದು, ಚಿನ್ನಾಭರಣಗಳನ್ನು ಖರೀದಿ ಮಾಡುವ ಅವಕಾಶಗಳಿವೆ, ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ, ಬಾಲ್ಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ, ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ, ನಿಮ್ಮ ಆಲೋಚನೆ ಈ ಸಮಯದಲ್ಲಿ ಕಾರ್ಯ ಸಿದ್ಧಿಯಾಗುತ್ತದೆ, ಬರಬೇಕಾದ ಬಾಕಿ ಹಣ ನಿಮ್ಮ ಕೈಗೆ ಬಂದು ಸೇರುತ್ತದೆ, ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುತ್ತವೆ.10 ನೇ ಸ್ಥಾನದಲ್ಲಿರುವ ರಾಹು, ನಾಲ್ಕನೇ ಸ್ಥಾನದಲ್ಲಿರುವ ಕೇತು ಗ್ರಹಣದಿಂದ ಆಗಾಗ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪರಿಹಾರ:ಸೋಮವಾರದ ದಿನ ಗಣಪತಿಯ ಆರಾಧನೆ ಮಾಡಿದರೆ ವಿಜ್ಞಗಳೆಲ್ಲ ದೂರವಾಗಿ ಕೆಲಸಗಳು ಸರಾಗವಾಗಿ ನೆರವೇರುತ್ತವೆ.

ವೃಶ್ಚಿಕ ರಾಶಿ

 

 

 

ಗುರು ಒಂದನೇ ಸ್ಥಾನದಲ್ಲಿ , ಶನಿ ಎರಡು, ಕುಜ 4, ಕೇತು ಮೂರು ಮತ್ತು ರಾಹು 9ನೇ ಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾರೆ,ಈ ಮಾಸದಲ್ಲಿ ತುಂಬಾ ಜಾಗ್ರತೆಯಿಂದ ಇದ್ದರೆ ಒಳ್ಳೆಯದು, ಮುಖ್ಯವಾಗಿ ಭಯ  ಹೆಚ್ಚಾಗಿರುತ್ತದೆ, ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಬರುವ ಅವಕಾಶಗಳು ಹೆಚ್ಚಾಗಿವೆ, ಬೇರೆಯವರು ನಿಂದನೆಗಳನ್ನು ಮಾಡುತ್ತಾರೆ,ಅದರ ಕಡೆ ಗಮನ ಹರಿಸಬೇಕು, ನಿಮ್ಮ ಕೆಲಸದ ಕಡೆ ಗಮನ ಹರಿಸಿದರೆ ಒಳ್ಳೆಯದು, ಕೆಲಸದಲ್ಲಿ ಹೆಚ್ಚಿನ ಅಡೆತಡೆಗಳನ್ನು ಎದುರಿಸಬೇಕಾಗುವುದು ,ವಿದೇಶ ವ್ಯವಹಾರ ಮಾಡುವವರು ಸಹ ಒಳ್ಳೆಯ ಲಾಭಗಳನ್ನು ಕಾಣುತ್ತಾರೆ, ಬರಬೇಕಾದ ಬಾಕಿ ಹಣ ಈ ಮಾಸದಲ್ಲಿ ಬರುತ್ತದೆ. ಹೆಚ್ಚಿನದಾಗಿ ದೈವಾರಾಧನೆಯ ಮಾಡಿ ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಮನಸ್ತಾಪಗಳು ಉಂಟಾಗುತ್ತವೆ, ಕೆಲಸದ ಕಡೆ ಹೆಚ್ಚಿನ ಜಾಗ್ರತೆ ವಹಿಸಿ, ತಾಳ್ಮೆಯಿಂದ ಇದ್ದರೆ ತುಂಬಾ ಒಳ್ಳೆಯದು.

 

ಆರೋಗ್ಯದ ಕಡೆಯೂ ಸಹ ದೃಷ್ಟಿ ಹರಿಸಿ, ಖರ್ಚುಗಳು ಹೆಚ್ಚಾಗಲಿವೆ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಈ ಮಾಸ ಸಾಧಾರಣ ಮಾಸವಾಗಿರುತ್ತದೆ, ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕಂತೆ ಪ್ರತಿಫಲವನ್ನು ಕಾಣುತ್ತೀರ, ವಿದೇಶ ಪ್ರಯತ್ನ ಮಾಡಲು ಪ್ರಯತ್ನಿಸುತ್ತಿರುವವರು ಸಣ್ಣಪುಟ್ಟ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ, ಶುಕ್ರನು 12ನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಶುಭ ಸುದ್ದಿಯನ್ನು ಕೇಳಲಿದ್ದೀರಿ, ಈ ಮಾಸದ ದ್ವಿತೀಯಾರ್ಧದಲ್ಲಿ ಸಮಯ ಚೆನ್ನಾಗಿರುತ್ತದೆ, ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರ, ಎಲ್ಲಾ ಕೆಲಸಗಳು ಸಹ ಅಂದುಕೊಂಡಂತೆ ಸಕಾಲದಲ್ಲಿ ಪೂರ್ತಿಯಾಗುತ್ತದೆ, ನೀವು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ, ವ್ಯಾಪಾರಿಗಳಿಗೆ ತುಂಬಾ ಅನುಕೂಲಕರವಾದ ತಿಂಗಳಾಗಿದೆ, ಈ ತಿಂಗಳು ಗುರು ,ರಾಹು, ಶುಕ್ರ ಮತ್ತು ಕೇತು ಒಳ್ಳೆಯ ಸ್ಥಾನದಲ್ಲಿ ಇರುವುದರಿಂದ ವಿಶೇಷವಾದ ಯೋಗವನ್ನು ಪಡೆಯುತ್ತೀರ, ವಿವಾಹಕ್ಕೆ ಅನುಕೂಲವಾದ ಸಮಯ ಇದಾಗಿದೆ, ಈ ಸಮಯದಲ್ಲಿ ಕಾರ್ಯಸಿದ್ಧಿ ಯಾಗಲಿದೆ, ಮನೋಲ್ಲಾಸದಿಂದ ಸಮಯವನ್ನು ಕಳೆಯುತ್ತೇವೆ.

ಪರಿಹಾರ:ಶನಿ ಮತ್ತು ರವಿಯ ದೋಷ ಇರುವುದರಿಂದ ಹೆಚ್ಚಿನದಾಗಿ ಶಿವನನ್ನು ಆರಾಧಿಸಿ ಭಾನುವಾರದ ದಿನ ಕಡಲೆಕಾಳನ್ನು ದಾನ ಮಾಡಿ.

ಧನಸ್ಸು ರಾಶಿ

 

 

 

ಗುರು 12ನೇ ಮನೆಯಲ್ಲಿ, ಶನಿ ಒಂದನೇ ಮನೆಯಲ್ಲಿ, ಕುಜ 3, ಕೇತು 2 ಮತ್ತು ರಾಹು 8ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ.ಡಿಸೆಂಬರ್ 21 ನೇ ತಾರೀಖಿನ ನಂತರ ಕುಜನ ಸ್ಥಾನ ಪಲ್ಲಟದಿಂದ ಸಮಯ ಅನುಕೂಲವಾಗಿರುವುದಿಲ್ಲ, ಈ ಸಮಯದಲ್ಲಿ ತಾಳ್ಮೆಯಿಂದ ಇದ್ದರೆ ಒಳ್ಳೆಯದು, ವಿದ್ಯಾರ್ಥಿಗಳು ಶ್ರಮವಹಿಸಿ ಓದಿದರೆ ಒಳ್ಳೆಯದು, ಅವಮಾನ ಬರುವ ಸಾಧ್ಯತೆಗಳು ಹೆಚ್ಚಾಗಿವೆ, ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಮುಂದೆ ಸಾಗುತೀರ, ಮುಖ್ಯವಾದ ಕೆಲಸಗಳನ್ನು ಆದಷ್ಟು  ಮುಂದೂಡಿದರೆ ಒಳ್ಳೆಯದು.

 

ಮನೋವೇದನೆ, ಕುಟುಂಬ ಸದಸ್ಯರ ಆರೋಗ್ಯದ ಕಡೆ ಗಮನ ಹರಿಸಿ, ರಾಜಕೀಯ ಕ್ಷೇತ್ರದವರಿಗೆ ಸಾಧಾರಣವಾಗಿರುತ್ತದೆ, ಮಾನಸಿಕ ಧೈರ್ಯ, ವಿಶ್ವಾಸ ನಿಮಗೆ ಈ ಸಮಯದಲ್ಲಿ ಹೆಚ್ಚಾಗುತ್ತದೆ. ದೈವ ಕಾರ್ಯಗಳಿಗೆ ಸಂಬಂಧಿಸಿದ ವಿಚಾರಕ್ಕೆ ಉಲ್ಲಾಸದಿಂದ ಭಾಗಿಯಾಗುತ್ತೀರ, ಶನಿ ಮತ್ತು ರವಿ ಒಂದೇ ಸ್ಥಾನದಲ್ಲಿ ಸಂಚಾರ ಮಾಡುತ್ತಿರುವುದರಿಂದ ಅಂದುಕೊಂಡ ಕೆಲಸಗಳು ನಿಧಾನವಾಗಿ ಮುಂದಕ್ಕೆ ಸಾಗುತ್ತದೆ, ವಿದೇಶಕ್ಕೆ ಸಂಬಂಧಿಸಿದ ವ್ಯವಹಾರಗಳಿಗೆ ಅನುಕೂಲವಾದ ಸಮಯವಲ್ಲ, ಮಾತನಾಡುವಾಗ ಆಲೋಚಿಸಿ ಮಾತನಾಡಿದರೆ ಒಳ್ಳೆಯದು, ಆರೋಗ್ಯದ ಕಡೆ ಜಾಗ್ರತೆ ವಹಿಸಿ ಆರ್ಥಿಕ ಪರಿಸ್ಥಿತಿಗಳು ತುಂಬಾ ಚೆನ್ನಾಗಿರುತ್ತದೆ.

ಪರಿಹಾರ:ಮಂಗಳವಾರದ ದಿನ ದುರ್ಗಾದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚಿದರೆ ಕಾರ್ಯ ಸಿದ್ಧಿಯಾಗುತ್ತದೆ, ಶಿವನ ಆರಾಧನೆಯನ್ನು ಮಾಡಿ.

ಮಕರ ರಾಶಿ

 

 

 

ಮಕರ ರಾಶಿಗೆ ಅಧಿಪತಿ ಶನಿ, ಗುರು ಹನ್ನೊಂದನೇ ಮನೆಯಲ್ಲಿ, ಶನಿ 12ನೇ ಮನೆ, ಕುಜ ಎರಡನೇ ಮನೆಯಲ್ಲಿ, ಕೇತು ಒಂದನೇ ಮನೆಯಲ್ಲಿ ಮತ್ತು ರಾಹು 7ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ,ಡಿಸೆಂಬರ್ 21 ನೇ ತಾರೀಖಿನ ನಂತರ ಕುಜನ ಸ್ಥಾನ ಪಲ್ಲಟದಿಂದ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಈ ತಿಂಗಳ ಮೊದಲಾರ್ಧದಲ್ಲಿ ಉತ್ತಮ ಸಮಯವಾಗಿದೆ,ಕಾರ್ಯ ಕ್ಷೇತ್ರದಲ್ಲಿರುವವರಿಗೆ ಸಮಯ ಅನುಕೂಲಕರವಾಗಿದೆ, ಈ ಮಾಸದ ದ್ವಿತೀಯಾರ್ಧದಲ್ಲಿ ಕುಜನ ಸ್ಥಾನ ಪಲ್ಲಟ ಆಗುತ್ತಿರುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುವುದು.

 

ಆಕಸ್ಮಿಕ ಕಲಹಗಳು ಮನಸ್ತಾಪಗಳು ಅಶಾಂತಿ ಮೂಡುವ ಸಾಧ್ಯತೆಗಳು ಗೋಚರಿಸುತ್ತಿವೆ, ಈ ಮಾಸದ ದ್ವಿತೀಯಾರ್ಧದಲ್ಲಿ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸಾಧಾರಣವಾಗಿದೆ, ದಂಪತಿಗಳ ನಡುವೆ ಮನಸ್ತಾಪಗಳಾಗುತ್ತವೆ, ಸಹೋದರ ಸಹೋದರಿಯರ ಮಧ್ಯೆ ಕಲಹಗಳು ಉಂಟಾಗುತ್ತವೆ, ಗುರು ಮತ್ತು ಶುಕ್ರರ ಗ್ರಹ ಬಲದಿಂದ ಕಾರ್ಯಗಳೆಲ್ಲ ಸರಾಗವಾಗಿ ಸಾಗುತ್ತವೆ, ಆಲೋಚನೆ ಮಾಡಿ ಮುಂದೆ ಸಾಗಿದರೆ ಒಳ್ಳೆಯದು.ಗುರುಬಲ ಚೆನ್ನಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾದ ಸಮಯವಾಗಿದೆ, ಪುಣ್ಯ ಕ್ಷೇತ್ರ ದರ್ಶನವನ್ನು ಮಾಡುತ್ತೀರ,ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಸಹಾಯ ಸಹಕಾರ ಪೂರ್ತಿಯಾಗಿ ಸಿಗುತ್ತದೆ, ಖರ್ಚುಗಳು ಹೆಚ್ಚಾಗಲಿವೆ, ವ್ಯಾಪಾರಿಗಳು ಲಾಭವನ್ನು ಕಾಣುತ್ತೀರ.ನಿಮ್ಮ ಇಷ್ಟದ ಅನುಸಾರವಾಗಿ ಬಾಳಬೇಕೆಂದು ಆಸೆ ಪಡುತ್ತೀರ, ಈ ತಿಂಗಳು ಆರ್ಥಿಕ ವಿಷಯಗಳಲ್ಲಿ ಆತುರಪಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಮನೆಯಲ್ಲಿ ಶುಭ ಕಾರ್ಯಗಳು ನೆರವೇರುತ್ತವೆ, ಅವಿವಾಹಿತರಿಗೆ ವಿವಾಹಯೋಗ ಪ್ರಾಪ್ತಿಯಾಗಲಿದೆ, ಬಂಧು ಮಿತ್ರರ ಜೊತೆ ಭೋಜನ ಕೂಟದಲ್ಲಿ ಭಾಗಿಯಾಗಲಿದ್ದೀರಿ.

ಪರಿಹಾರ:ಶನಿವಾರ ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಿ.

ಕುಂಭ ರಾಶಿ

 

 

 

ಗುರು ಹತ್ತನೇ ಮನೆಯಲ್ಲಿ, ಶನಿ ಹನ್ನೊಂದನೇ ಮನೆಯಲ್ಲಿ, ಕುಜ ಒಂದನೇ ಮನೆಯಲ್ಲಿ ಮತ್ತು ಕೇತು 12ನೇ ಮನೆಯಲ್ಲಿ ಮತ್ತು ರಾಹು ಆರನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ರಾಹುವಿನ ಸಂಚಾರದಿಂದ ಅಡೆತಡೆಗಳನ್ನು ಎದುರಿಸಬೇಕಾಗುವುದು. ಡಿಸೆಂಬರ್ 21 ನೇ ತಾರೀಖಿನ ನಂತರ ಕುಜನ ಸ್ಥಾನ ಪಲ್ಲಟದಿಂದ ಒಳ್ಳೆಯ ಸಮಯ ಬರುತ್ತದೆ. ಈ ಸಮಯದಲ್ಲಿ ವಿಜಯವನ್ನು ಕಾಣುತ್ತೀರ,ಚಿನ್ನಾಭರಣಗಳನ್ನು ಖರೀದಿ ಮಾಡುವ ಅವಕಾಶಗಳು ಹೆಚ್ಚಾಗಿವೆ, ಸಣ್ಣ ವ್ಯಾಪಾರಿಗಳಿಗೆ ಲಾಭದಾಯಕವಾಗಲಿದೆ, ಆಕಸ್ಮಿಕ ಧನ ಪ್ರಾಪ್ತಿಯಾಗುತ್ತದೆ, ಸುಖ ಪ್ರಯಾಣವನ್ನು ಮಾಡುತ್ತೀರಿ.

 

ಅಂದುಕೊಂಡ ಕೆಲಸಗಳು ನೆರವೇರುತ್ತವೆ, ತುಂಬಾ ದಿನಗಳಿಂದ ನಿಂತು ಹೋಗಿರುವ ಕೆಲಸಗಳು ಪ್ರಾರಂಭವಾಗಿ ಮುಂದಕ್ಕೆ ಸಾಗುತ್ತವೆ, ಈ ಮಾಸದಲ್ಲಿ ಸತ್ಕರ್ಮಗಳನ್ನು ಮಾಡಲು ಇಷ್ಟಪಡುತ್ತೀರಿ, ಭೂ ಮತ್ತು ಗೃಹ ಲಾಭಗಳನ್ನು ಕಾಣುತ್ತೀರ, ವಿದ್ಯಾರ್ಥಿಗಳಿಗೆ ಅನುಕೂಲವಾದ ಸಮಯವಾಗಿದೆ, ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ, ಉದ್ಯೋಗದಲ್ಲಿ ಲಾಭವನ್ನು ಕಾಣುತ್ತೀರ, ಈ ಸಮಯದಲ್ಲಿ ಪುಣ್ಯಕ್ಷೇತ್ರ ದರ್ಶನವನ್ನು ಮಾಡುತ್ತೀರಿ, ಕುಟುಂಬದವರ ಜೊತೆ ಸಂತೋಷದಿಂದ ಸಮಯವನ್ನು ಕಳೆಯುತ್ತೀರ, ಈ ಸಮಯದಲ್ಲಿ ಶತ್ರುಗಳೆಲ್ಲ ಮಿತ್ರರಾಗುತ್ತಾರೆ, ವಿದೇಶಿ ವ್ಯವಹಾರ ಮಾಡುವವರಿಗೆ ಸಮಯ ತುಂಬಾ ಅನುಕೂಲವಾಗಿದೆ, ಶುಕ್ರನು ಶುಭ ಮನೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಧನ ಲಾಭವನ್ನೂ ಕಾಣುತ್ತೀರಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನದಾಗಿ ಭಾಗಿಯಾಗುತ್ತೀರ.

ಪರಿಹಾರ:ಮಂಗಳವಾರದ ದಿನ ಸುಬ್ರಹ್ಮಣ್ಯ ಅಷ್ಟಕ ಮಂತ್ರವನ್ನು ಪಠಿಸಿ, ಶಿವ ಕವಚವನ್ನು ಪಾರಾಯಣ ಮಾಡುವುದರಿಂದ ಆರ್ಥಿಕ ಅಡೆತಡೆಗಳು ದೂರವಾಗುತ್ತವೆ, ಸೋಮವಾರ ಗಣಪತಿಗೆ ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಿ ಗಣಪತಿಯ ಆರಾಧನೆಯನ್ನು ಮಾಡಿದರೆ ಒಳ್ಳೆಯದು.

ಮೀನ ರಾಶಿ

 

 

 

ಈ ತಿಂಗಳು ಗುರು 9ನೇ ಮನೆಯಲ್ಲಿ, ಶನಿ ಹತ್ತು, ಕುಜ 12, ಕೇತು 11 ಮತ್ತು ರಾಹು ಐದನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಡಿಸೆಂಬರ್ 21 ನೇ ತಾರೀಖಿನ ನಂತರ ಕುಜನ ಸ್ಥಾನ ಪಲ್ಲಟದಿಂದ ಅನುಕೂಲವಾದ ಸಮಯ ಎಂದೇ ಹೇಳಬಹುದು. ಕುಜಗ್ರಹ ಅನುಕೂಲವಾಗಿರುವುದರಿಂದ ಆದಾಯ ಹೆಚ್ಚಾಗುತ್ತದೆ.ವಿದೇಶ ಪ್ರಯಾಣ ಮಾಡಲು ಪ್ರಯತ್ನಿಸುತ್ತಿರುವವರಿಗೆ ಈ ಸಮಯ ತುಂಬಾ ಚೆನ್ನಾಗಿದೆ, ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ವಿಜಯವನ್ನು ಕಾಣುತ್ತೀರ, ಈ ತಿಂಗಳು ವಿಶೇಷವಾದ ಫಲಿತಾಂಶವನ್ನು ವಿದ್ಯಾರ್ಥಿಗಳು ಪಡೆಯುತ್ತೀರ, ವ್ಯಾಪಾರ ವಿಸ್ತಾರ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಗೋಚರಿಸುತ್ತಿವೆ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲವಾದ ಸಮಯವಾಗಿದೆ, ಉದ್ಯೋಗದಲ್ಲಿರುವವರಿಗೆ ಅಭಿವೃದ್ಧಿ, ವೇತನ ಸಹ ಹೆಚ್ಚಾಗಲಿದೆ, ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತೀರಿ.

 

ನಿರುದ್ಯೋಗಿಗಳು ಶುಭವಾರ್ತೆಯನ್ನು ಕೇಳುತ್ತೀರಿ, ಚಿನ್ನಾಭರಣಗಳನ್ನು ಖರೀದಿ ಮಾಡುವ ಯೋಗವಿದೆ, ಕುಜನ ಪ್ರಭಾವದಿಂದ ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಕೋಪವನ್ನು ಮಾಡಿಕೊಳ್ಳುತ್ತೀರ, ತಾಳ್ಮೆಯಿಂದ ಇದ್ದರೆ ಒಳ್ಳೆಯದು, ಬಂಧು ಮಿತ್ರರ ಬಳಿ ಸಣ್ಣ ಪುಟ್ಟ ಕಲಹಗಳು ಬರುವ ಸಾಧ್ಯತೆಗಳು ಇರುವುದರಿಂದ ತುಂಬಾ ಜಾಗ್ರತೆಯಿಂದ ಇದ್ದರೆ ಒಳ್ಳೆಯದು, ನಿಮ್ಮನ್ನು ನೋಡಿ ಅಸೂಯೆ ಹೊಟ್ಟೆಕಿಚ್ಚು ಪಡುವವರು ಹೆಚ್ಚಾಗುತ್ತಾರೆ, ದೈವಾರಾದನೆ ಈ ಸಮಯದಲ್ಲಿ ಹೆಚ್ಚಾಗಿ ಮಾಡಿದರೆ ಒಳ್ಳೆಯದು, ಈ ಮಾಸದಲ್ಲಿ ಸ್ಥಿರಾಸ್ತಿಯನ್ನು ಖರೀದಿ ಮಾಡುವ ಸಾಧ್ಯತೆ ಹೆಚ್ಚು, ಮುಖ್ಯವಾದ ಕಾರ್ಯಕ್ರಮಗಳನ್ನು ಈ ಸಮಯದಲ್ಲಿ ಮಾಡಲಿದ್ದೀರಿ, ಗೃಹ ಪ್ರಯತ್ನಗಳು ನೆರವೇರುತ್ತವೆ,ಕೋರ್ಟ್ ಸಮಸ್ಯೆಗಳು ದೂರವಾಗುತ್ತವೆ, ಗ್ರಹಗಳು ಅನುಕೂಲ ವಾಗಿರುವುದರಿಂದ ಎಲ್ಲಾ ಕೆಲಸಗಳು ಅಡೆತಡೆಗಳಿಲ್ಲದೆ ಸಾಗುತ್ತವೆ.

ಪರಿಹಾರ:ಲಕ್ಷ್ಮಿ ದೇವಿ ಮತ್ತು ಗಣೇಶ ದೇವರ ಆರಾಧನೆ ಮಾಡಿದರೆ ಒಳ್ಳೆಯದು ರಾಹು ಮತ್ತು ಕೇತುವಿನ ಶಾಂತಿ ಮಾಡಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top