ಅನೇಕ ಜನರು ಸೊಂಟ ನೋವಿನಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಯವುದೇ ಕೆಲಸ ಮಾಡದಿದ್ದರೂ ನಿತ್ಯ ಸೊಂಟ ನೋವು ಉಂಟಾಗುತ್ತಿರುತ್ತದೆ. ಕೇವಲ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಈ ಮಾತ್ರೆಯು ಸೊಂಟ ನೋವನ್ನು ಸಂಪೂರ್ಣ ಗುಣಪಡಿಸಲ್ಲ. ಆದರೆ ಆಯುರ್ವೇದಲ್ಲಿ ಇದಕ್ಕೆ ಅದ್ಭುತವಾದ ಚಿಕಿತ್ಸೆ ಇದೆ. ಇದರಲ್ಲಿರುವ ಮೂರು ವಿಧದ ಚಿಕಿತ್ಸೆಯು ಶಾಶ್ವತ ಪರಿಹಾರ ನೀಡುತ್ತದೆ ಎಂದು ಡಾ.ಮಂಜರಿ ರಾಜೇಶ ಹೇಳುತ್ತಾರೆ.ಸೊಂಟ ನೋವಿಗೆ ಜೀವನಶೈಲಿಯೂ ಪ್ರಮುಖ ಕಾರಣ. ಮುಖ್ಯವಾಗಿ ಆಹಾರದಲ್ಲಿ ವ್ಯತ್ಯಾಸ, ರಾತ್ರಿ ವೇಳೆ ನಿದ್ರೆ ಬಾರದೆ ಹಗಲು ವೇಳೆಯಲ್ಲಿ ನಿದ್ರೆ ಮಾಡುವುದು, ಕೆಲವು ಹವ್ಯಾಸಗಳು ಕೂಡ ಶರೀರದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಚಿಂತೆ, ಮಾನಸಿಕ ಒತ್ತಡ ಕೂಡ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಈ ಪೈಕಿ ಅತಿ ಮುಖ್ಯವಾದುದು ಎಂದರೆ ಸೊಂಟ ನೋವು.ಆಯುರ್ವೇದಶಾಸ್ತ್ರದಲ್ಲಿ ಪೃದ್ರಸಿ ವಾತವೆಂದು ಕರೆಯುತ್ತಾರೆ. 90 ಪ್ರತಿಶತ ಜನರು ತಮ್ಮ ಜೀವನ ಕಾಲದಲ್ಲಿ ಸೊಂಟ ನೋವಿಗೆ ಒಳಗಾಗಿರುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಕಾರಣಗಳು: ಹೆಚ್ಚು ಸಮಯ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು, ಸ್ಥೂಲಕಾಯ, ವಿಪರೀತವಾಗಿ ಶ್ರಮಿಸುವುದು, ಅತಿಯಾದ ಭಾರ ಎತ್ತುವುದು, ದ್ವಿಚಕ್ರ ವಾಹನಗಳ ಮೇಲೆ ದೂರ ಪ್ರಯಾಣ ಮಾಡುವುದು, ರಸ್ತೆ ಅಪಘಾತ, ದೀರ್ಘಕಾಲದ ಕಾಯಿಲೆ, ವಂಶಪಾರಂಪರ‌್ಯ ವ್ಯಾಧಿ ಇವೆಲ್ಲ ಸೊಂಟ ನೋವಿಗೆ ಕಾರಣಗಳಾಗಿವೆ. ಮೇಲ್ಭಾಗದಲ್ಲಿ ಸ್ಥಬ್ಧತೆ ನೋವು ಉಂಟಾಗಿ ಆನಂತರ ಸೊಂಟದ ಭಾಗ, ತೊಡೆಗಳು, ಮಂಡಿ, ಪಕ್ಕೆಲುಬು, ಪಾದಗಳಿಗೆ ಈ ನೋವು ವ್ಯಾಪಿಸುತ್ತದೆ. ಈ ಸಮಸ್ಯೆ ಚಳಿಗಾಗಲದಲ್ಲಿ ಹೆಚ್ಚಾಗಿರುತ್ತದೆ. ಸೊಂಟದ ಭಾಗದಲ್ಲಿ ಪ್ರತ್ಯೇಕವಾಗಿ ಬೆನ್ನುಮೂಳೆಯ ಮಧ್ಯ ಭಾಗದಲ್ಲಿರುವ ಸಯಾಟಿಕಾ ನರದ ಮೇಲೆ ಒತ್ತಡ ಬೀಳುವುದರಿಂದ ಈ ನೋವು ಉಂಟಾಗುತ್ತದೆ.ಡಿಸ್ಕ್‌ನಲ್ಲಿ ಬದಲಾಣೆ: ಬೆನ್ನು ಮೂಳೆಯ ಮಧ್ಯೆ ಇರುವ ಡಿಸ್ಕ್‌ನಲ್ಲಿ ಕೆಲವು ಬದಲಾವಣೆಗಳಾಗುವುದರಿಂದ ಡಿಸ್ಕ್‌ನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಊತ ಬರುವುದರಿಂದ ಡಿಸ್ಕ್‌ಗೆ ರಕ್ತ ಪ್ರಸರಣೆ ಸರಿಯಾಗಿ ಇಲ್ಲದೆ ಇರುವುದು. ಡಿಸ್ಕ್‌ಗಳು ಸವೆದು ಹೋಗುವಂತಹ ಅನೇಕ ಸಮಸ್ಯೆಗಳಿಂದ ಈ ನೋವು ಉಂಟಾಗುತ್ತದೆ. ಡಿಸ್ಕ್‌ನಲ್ಲಿ ಊತ ಕಾಣಿಸಿದರೆ ಅದರೊಳಗಿರುವ ಅಂಟು ದ್ರವ್ಯ ಹೊರಹೊಮ್ಮಿ ನರಗಳ ಮೇಲೆ ಒತ್ತಡ ಹೆಚ್ಚಾಗಿ ಇದರಿಂದ ಬೆನ್ನು ನೋವು ಬರುತ್ತದೆ.
ಲಕ್ಷಣಗಳು: ಊತ, ಹೆಚ್ಚು ಶ್ರಮಿಸುವುದರಿಂದ ಸೊಂಟ ನೋವು ತೀವ್ರವಾಗುವುದು. ಸೂಜಿಗಳಿಂದ ಚುಚ್ಚಿದಂತೆ ನೋವು, ಕಾಲುಗಳು ಜೋಮು ಹಿಡಿಯುವುದು, ಉರಿ ಉಂಟಾಗುವುದು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಸ್ಪರ್ಶಜ್ಞಾನ ಕೂಡ ಕಳೆದುಕೊಳ್ಳುವುದು. ಸಮಸ್ಯೆ ಇನ್ನು ತೀವ್ರವಾಗಿದ್ದರೆ ಕೆಲವರು ಮಲ ಮೂತ್ರದ ಮೇಲೆ ನಿಯಂತ್ರಣ ಕಳೆದುಕೊಳ್ಳುವರು. ಸೊಂಟ ನೋವಿಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಅದು ಕೆಲವು ಕಾಲ ಮಾತ್ರ ಉಪಶಮನವಾಗುವುದು. ನೋವು ನಿವಾರಕ ಮಾತ್ರೆ ಸೇವನೆಯಿಂದ ಮಲಬದ್ಧತೆ, ಜೀರ್ಣದ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಈ ಸಮಸ್ಯೆಯನ್ನು ತ್ವರಿತವಾಗಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.ಶೋಧನ ಚಿಕಿತ್ಸೆ: ಕೆಲವರಿಗೆ ಪಂಚ ಕರ್ಮ ಚಿಕಿತ್ಸೆ (ಶೋಧನ ಚಿಕಿತ್ಸೆ) ಕೂಡ ಅಗತ್ಯವಾಗಿರುತ್ತದೆ. ದೋಷಗಳನ್ನು (ವಾತ, ಪಿತ್ತ, ಕಫ) ಗುಣಪಡಿಸಲು ಶರೀರ ಶುದ್ಧಿಯಿಂದ ಮಾಡಲಾಗುತ್ತದೆ. ಈ ಚಿಕಿತ್ಸೆಯಿಂದ ವಾತವನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯ.
ಆಯುರ್ವೇದಲ್ಲಿ ಸ್ನೇಹ ಕರ್ಮದಿಂದ ಬೆನ್ನು ಮೂಳೆಗಳ ಮಧ್ಯೆ ಸ್ಥಗ್ಧತೆಯನ್ನು ಹೆಚ್ಚು ಮಾಡಿ ಮೂಳೆಗಳನ್ನು ಚಲಿಸುವುದಕ್ಕೆ ಸುಲಭವಾಗಿ ಅವಕಾಶ ಮಾಡಿಕೊಡಲಾಗುವುದು. ಸ್ಥೆದ ಕರ್ಮ ಪದ್ಧತಿಯಿಂದ ಬಿಗಿಯಾಗಿರುವ ಮೂಳೆಗಳನ್ನು ಬಿಡಿ ಬಿಡಿಯಾಗಿ, ಮೃದುವಾಗಿ ಬದಲಾವಣೆ ಮಾಡಬಹುದು.ಕಟಿ ವಸ್ತಿ: ಈ ಚಿಕಿತ್ಸೆಗೆ ಆಯುರ್ವೇದದಲ್ಲಿ ಅತ್ಯಂತ ಪ್ರಧ್ಯಾನತೆ ನೀಡಲಾಗಿದೆ. ಸವೆದು ಹೋದಂತಹ ಕಾರ‌್ಟಿಲೇಜ್‌ನ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಸೊಂಟ ನೋವಿನ ತೀವ್ರತೆಯನ್ನು ಕಡಿಮೆ ಮಾಡುವುದರಲ್ಲಿ ಈ ಪ್ರಕ್ರಿಯೆ ಬಹಳಷ್ಟು ಉಪಯೋಗಕರವಾಗಿದೆ. ಇದೇ ಕ್ರಮದಲ್ಲಿ ಸರ್ಬಾಂಗಧಾರಾ ಚಿಕಿತ್ಸೆ ಕೂಡ ಬಹಳಷ್ಟು ಉಪಯೋಗವಾಗುತ್ತದೆ.ವಸ್ತಿ ಕರ್ಮ: ಈ ಚಿಕಿತ್ಸೆ ಸಣ್ಣ ಕರುಳು ಮತ್ತು ದೊಡ್ಡ ಕರುಳುಗಳಲ್ಲಿ ಎಂಟರಿಕ್ ಸರ್ವಿಸ್ ಸಿಸ್ಟಮ್ ಮೇಲೆ ಪ್ರಭಾವ ಬೀರುತ್ತದೆ. ಅದರಿಂದ ನಾಡಿ ಕಣಗಳಲ್ಲಿ ಏರ್ಪಾಡಾಗುವ ದೋಷಗಳನ್ನು ಸರಿ ಮಾಡಿ ಶಕ್ತಿಯನ್ನು ನೀಡುತ್ತದೆ. ವಾತವನ್ನು ಕೂಡ ಸಹಜ ಸ್ಥಿತಿಗೆ ತರುತ್ತದೆ. ಆಯುರ್ವೇದ ಚಿಕಿತ್ಸೆ ಬಳಿಕ ಪೌಷ್ಟಿಕ ಆಹಾರದ ಜತೆಗೆ ನಿಯಮಿತವಾಗಿ ವ್ಯಯಾಮವನ್ನು ಮಾಡುತ್ತಿದ್ದರೆ ಸೊಂಟ ಅಥವಾ ಬೆನ್ನು ನೋವಿಗೆ ಶಾಶ್ವತ ಪರಿಹಾರ ಪಡೆಯಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
