ಬ್ಲಾಕ್ ಟೀ ,ಕಪ್ಪು ಚಹಾ ಎಲೆಗಳನ್ನು ಸೇರಿಸಿ ,ನಿಂಬೆ ರಸ , ಜೇನು ಮತ್ತು ಏಲಕ್ಕಿಯನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ, ಸೋಸಿ ಬ್ಲಾಕ್ ಟೀ ತಯಾರಿಸಿ ಕುಡಿಯಬೇಕು .ಮಜ್ಜಿಗೆಯಲ್ಲಿ ಅಧಿಕ ಕೊಬ್ಬಿನಂಶವಿರುವುದಿಲ್ಲ ನಿತ್ಯ ಸೇವಿಸಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ಪಡೆಯಬಹುದು.ನಿಂಬೆ ರಸ , ಶುಂಠಿ,ಸೌತೆಕಾಯಿ ಹಾಗೂ ಪುದೀನಾ ರುಬ್ಬಿ ಜ್ಯೂಸು ಮಾಡಿಕೊಂಡು ಕುಡಿಬೇಕು ಒಂದು ವಾರದಲ್ಲಿ ಬದಲಾವಣೆ ಕಾಣಬಹುದು .ಪಾಲಾಕ್ ಸೊಪ್ಪಲ್ಲಿ ಕಬ್ಬಿಣಂಶ, ಕ್ಯಾಲ್ಸಿಯಂ, ಮೆಗ್ನೇಶಿಯಂ ಮತ್ತು ಆಂಟಿ ಆಕ್ಸಿಡೆಂಟ್ ಗಳೂ ಇವೆ ಕ್ಯಾಲರಿ ಇಳಿಸಲು ಸಹಾಯಕ.ಗೋಧಿ ಹುಲ್ಲಿನಲ್ಲಿರುವ ಕಬ್ಬಿಣಾಂಶ, ಪ್ರೊಟೀನ್ ಹಾಗು ನಾರಿನಂಶ ದೇಹದಲ್ಲಿ ಬೊಜ್ಜು ಕಡಿಮೆ ಮಾಡುತ್ತದೆ.ದಿನವೂ ಬೆಳಗ್ಗೆ ಗ್ರೀನ್ ಟೀ ಯ ಆಂಟಿಯಾಕ್ಸಿಡಂಟ್ ಅಂಶ ಗ್ರೀನ್ ಟೀಯ ಮಿತವಾದ ಸೇವನೆ ಬೊಜ್ಜು ಕಡಿಮೆ ಮಾಡುತ್ತದೆ.
ಬೀಟ್‌ರೂಟ್ ಗಳು ರಕ್ತಕ್ಕೆ ಸಂಬಂಧಿಸಿದ ರೋಗಗಳ ನಿವಾರಣೆ ,ತೂಕ ಇಳಿಸಲೂ ಸಹಕಾರಿ ಕಡಿಮೆ ಕ್ಯಾಲರಿ , ಫೈಬರ್ ಇದೆ.ಬೆಳ್ಳುಳ್ಳಿ ಉತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು, ನಿರೋಧಕ ಶಕ್ತಿ ಕಟ್ಟುತ್ತದೆ. ಕೊಬ್ಬು ನಿವಾರಿಸಿ ಎಲ್‌ಡಿಎಲ್ ಕೊಲೆಸ್ಟರಾಲ್ ನಿವಾರಿಸುತ್ತದೆ. ಉತ್ತಮ ಕೊಲೆಸ್ಟರಾಲ್ ಕೊಡುತ್ತದೆ. ಇವು ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಭಾಯಿಸಲು ಇವು ಉತ್ತಮ ಹಾಗೆಯೇ ಚಕ್ಕೆ ಲವಂಗವನ್ನು ಬಳಸಬಹುದು.ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿನೀರನ್ನು ಕುಡಿದರೆ ಹೊಟ್ಟೆಯ ಬೊಜ್ಜು ಕಡಿಮೆಯಾಗುವುದು.ಮೆಣಸಿನಕಾಯಿ , ಜೀರ್ಣಕ್ರಿಯೆ ಚುರುಕು ಮಾಡುತ್ತದೆ.ಅಡುಗೆಗೆ ಸಾಸಿವೆ ಎಣ್ಣೆ ಬಳಸುವುದು ಒಳ್ಳೆಯದು. ಇದರಲ್ಲಿ ಆಂಟಿಯಾಕ್ಸಿಡಂಟ್ ಅಂಶ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.ಬೆಳಗ್ಗೆ ಒಂದು ಚಮಚ ಜೇನನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದು.ಕಿತ್ತಳೆ ಸೇವನೆ ಒಳ್ಳೆಯದು ಪಿತ್ತ ನಿವಾರಿಸುತ್ತದೆ.ಅರಿಶಿಣವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
ಹುರುಳಿಕಾಳನ್ನು ಪುಡಿ ಮಾಡಿ ಮೊಸರಿನ ಜೊತೆ ಸೇರಿಸಿ ಹೊಟ್ಟೆ ಮತ್ತು ಸೊಂಟದ ಸುತ್ತ ಹಚ್ಚಿ ಸೊಂಟದ ಸುತ್ತಳತೆ ಕಡಿಮೆಯಾಗುತ್ತದೆ.ಹುರುಳಿಕಾಳು, ಹೆಸರುಕಾಳು, ಗೋಧಿ ಇವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದು.ಹೆಸರುಕಾಳಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಹಾಗೂ ಕ್ಯಾಲ್ಸಿಯಂ, ಕಬ್ಬಿಣದಂಶ, ಅಧಿಕ ನಾರಿನಂಶ ಕೊಲೆಸ್ಟ್ರಾಲ್ ಪ್ರಮಾಣವನ್ನ ಕಡಿಮೆ ಮಾಡಲು ಸಹಕಾರಿ.ಎಲೆಕೋಸನ್ನು ಹಸಿಯಾಗಿ ತಿಂದರೆ ತೂಕ ಕಡಿಮೆಯಾಗಲು ತುಂಬಾ ಸಹಕಾರಿಕಾರ್ಬೋಹೈಡ್ರೇಟ್ ಆಹಾರ ,ಕಡಿದ ತಿಂಡಿ , ಐಸ್ ಕ್ರೀಮ್ ,ಅಧಿಕ ಉಪ್ಪಿರುವ ತಿಂಡಿ ಮತ್ತು ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬಾರದು. ಅಧಿಕ ಕೊಬ್ಬಿನಂಶವಿರುವ ಮಾಂಸವನ್ನು ತಿನ್ನಬಾರದು.ಊಟದ ಜೊತೆ 5-6 ಕರಿಬೇವಿನ ಎಲೆ ತಿನ್ನುತ್ತಾ ಬಂದರೆ ಹೊಟ್ಟೆಯ ಬೊಜ್ಜು ಕಡಿಮೆಯಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
