ಕಂಪ್ಯೂಟರ್ ಅಧುನಿಕ ಜಗತ್ತಿನ ಅದ್ಭುತ ಆವಿಷ್ಕಾರ. ಕಂಪ್ಯೂಟರ್ ಕಲಿಕೆ ಈಗ ತೀರಾ ಅವಶ್ಯ. ಪ್ರತಿಯೊಂದು ಕಚೇರಿಯಲ್ಲೂ , ಶಾಲಾ ಕಾಲೇಜಿನಲ್ಲೂ ಬಹುತೇಕ ಎಲ್ಲ ಕಡೆಯಲ್ಲೂ ಕಂಪ್ಯೂಟರ್ ಇಲ್ಲದೆ ಇದ್ದ ಪಕ್ಷದಲ್ಲಿ ಕೆಲಸಗಳೇ ನಡೆಯೋದಿಲ್ಲ. ಹೀಗಿರುವಾಗ ಈ ಅಮೂಲ್ಯ ಅವಿಷ್ಕಾರದ ಬಗ್ಗೆ ಎಷ್ಟು ತಿಳಿದಿಕೊಂಡರು ಅಲ್ಪವೇ ಅಲ್ಲವೇ? ಪ್ರತಿಯೊಂದು ಕೆಲಸದಲ್ಲೂ ತನ್ನ ಸಾರ್ವಭೌಮತ್ವ ವನ್ನು ಸ್ಥಾಪಿಸಿರುವ ಕಂಪ್ಯೂಟರ್ ಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗದಂತಾಗಿವೇ. ಕಂಪ್ಯೂಟರ್ ನಲ್ಲಿ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ಅದರಲ್ಲೂ ಕಂಪ್ಯೂಟರ್ ಗೆ ಜೋಡಿಯಂತಿರುವ ಕೀಬೋರ್ಡ್ ನಲ್ಲಂತೂ ನಾವು ಕಲಿಯಬೇಕಿರುವುದು ಬಹಳ. ಕಿ ಬೋರ್ಡ್ ನಲ್ಲಿ 101 ಕೀ ಗಳು ಇದ್ದು . ಪ್ರತಿಯೊಂದು ಕೀ ಗು ತನ್ನದೆ ಆದ ಕಾರ್ಯ ವೈಖರಿ ಇರುತ್ತದೆ. ಹೀಗಿರುವಾಗ ಯಾವತ್ತಾದರೂ ಕೀಬೋರ್ಡ್ ಮೇಲೆ ಕಾಣುವ ಫಂಕ್ಷನ್ ಕೀ ಗಳ (F1-F12) ವಿಶೇಷತೆ ಏನೆಂದು ಯೋಚಿಸಿದ್ದೀರಾ?
ಫಂಕ್ಷನ್ ಕೀ ಗಳ (F1-F12) ವಿಶೇಷತೆ ಹಾಗೂ ಕಾರ್ಯ ವೈಖರಿ ಬಗ್ಗೆ ತಿಳಿಯೋಣ ಬನ್ನಿ
1. F1 :
ಕೀಬೋರ್ಡ್‌ನಲ್ಲಿರುವ F1 ಕೀ ಯನ್ನು ಬಳಸಿಕೊಂಡು ನೀವು ಯಾವುದೇ ಪ್ರೋಗ್ರಾಂಗಳ ಸಹಾಯದ ಸ್ಕ್ರೀನ್ ತಗೆಯಬಹುದು. ಗೂಗಲ್ ಕ್ರೋಮ್ ಬಳಕೆ ಮಾಡಿದಾಗ F1 ಕೀ ಒತ್ತಿದರೆ ನಿಮಗೆ ‘ಹೆಲ್ಪ ಸ್ಕ್ರೀನ್‘ ತೆರೆದುಕೊಳ್ಳುತ್ತದೆ. ಅಂದರೆ ‘ಹೆಲ್ಪ್ ವಿಂಡೋ‘ ಅನ್ನು ನಿಮ್ಮ ಮುಂದೆ ತೆರೆದಿಡುವ ಕಾರ್ಯವನ್ನು ಈ ಕೀ ನಿರ್ವಹಿಸುತ್ತದೆ.
2. F2 :
ನೀವು F2 ಕೀ ಒತ್ತಿ ಯಾವುದೇ ಫೋಲ್ಡರ್ ಹೆಸರನ್ನು ಬದಲಾವಣೆ ಮಾಡಬಹುದಾಗಿದೆ. ಆದರೆ ಮೊದಲು ನೀವು ‘ರೀ ನೇಮ್‘ ಮಾಡಬೇಕೆಂದು ಕೊಂಡಿರುವ ಫೋಲ್ಡರ್ ನ್ನು ಆಯ್ಕೆ ಮಾಡಿಕೊಂಡು ಆ ನಂತರ F2 ಕೀ ಒತ್ತಬೇಕು. ಹೀಗೆ ಮಾಡಿದರೆ ನೀವು ಸುಲಭವಾಗಿ ನಿಮ್ಮ ಫೋಲ್ಡರ್ ನ್ನು ‘ರೀ ನೇಮ್’ ಮಾಡಬಹುದಾಗಿದೆ. ಈ ಕೀ ಒಂದು ‘ರೀ ನೇಮ್’ ಮಾಡಲು ಶಾರ್ಟ್ ಕಟ್ ಕೀ ಅಂತೇ ವರ್ತಿಸುವುದು ವಿಶೇಷ.
3. F3 :
ಯಾವುದಾದರೂ ಅಪ್ಲಿಕೇಷನ್ ನಲ್ಲಿ ನೀವು ಕಾರ್ಯನಿರ್ವಹಿಸುವಾಗ ಸರ್ಚ್ ಆಯ್ಕೆಯನ್ನು ತೆರಯಬೇಕೆಂದೆನಿಸಿದಾಗ F3 ಒತ್ತಿದರೆ ಸಾಕು.ಯಾವುದೇ ವಿಷಯವನ್ನು ಬಹುಬೇಗ ಸರ್ಚ್ ಮಾಡಲು ಇದೊಂದು ಉತ್ತಮ ಆಯ್ಕೆಯಾಗಿದೆ.
4 . F4 :
F4 ಕೆಲಸ ಏನು ಗೊತ್ತಾ? ನೀವು ಗೂಗಲ್ ಕ್ರೋಮ್ ಅಥವಾ ಯಾವುದೇ ಸರ್ಚ್ ಎಂಜಿನ್ ತೆರೆದು ಕೆಲಸ ಮಾಡುತ್ತಿರುವಾಗ ಒಂದೇ ಬಾರಿ ಎಲ್ಲಾ ವಿಂಡೊಗಳನ್ನು ಕ್ಲೋಸ್ ಮಾಡಲು ಬಯಸಿದರೆ ಆಗ ನೀವು ಸುಮ್ಮನೆ Alt+F4 ಒತ್ತಿದರೆ ಸಾಕು. ಇದರಿಂದ ನೀವು ಬಳಸುತ್ತಿದ್ದ ಸರ್ಚ್ ಇಂಜಿನ್ ಗಳು ಮತ್ತು ಉಳಿದ ಫೈಲ್ ಅಥವಾ ಫೋಲ್ಡರ್ ಗಳು ಬಹುಬೇಗನೆ ಕ್ಲೋಸ್ ಆಗುತ್ತವೆ
5. F5 :
ಕಂಪ್ಯೂಟರ್‌ನ ರೀಫ್ರೆಶ್ ಕೀ ಯಾವುದು ಗೊತ್ತಾ ?ಅದೇ F5 ನೀವು ಯಾವುದೇ ಪೇಜ್ ಅನ್ನು ರೀಫ್ರೆಶ್ ಮಾಡಲು F5 ಕೀ ಯನ್ನು ಒತ್ತಿ ಹಿಡಿದರೆ ಸಾಕು ಮತ್ತು ಯಾವುದೇ ಪೇಜ್ ಅನ್ನು ರೀಲೋಡ್ ಮಾಡಲೂ ಸಹ F5 ಕೀ ಬಳಸಿದರೆ ಸಾಕು.
6. F6 :
F6 ಕೀ ನಿಂದಾಗಿ ನೀವು ವೆಬ್‌ಪುಟದ ಯಾವುದಾದರೂ ಲಿಂಕ್ ಅನ್ನು ಪೂರ್ತಿಯಾಗಿ ಒಮ್ಮೆಲೇ ಸೆಲೆಕ್ಟ್ ಮಾಡಬಹುದು. ಸೆಲೆಕ್ಟ್ ಮಾಡಿದ ನಂತರ ಆ ಲಿಂಕ್ ಅನ್ನು Control +C ಒತ್ತಿ ನಕಲು ಮಾಡಿಕೊಳ್ಳಬಹುದಾಗಿದೆ.
7. F7 :
F7 ಕೀ ನ ವಿಶೇಷತೆ ಏನೆಂದರೆ ನೀವು ಮೈಕ್ರೊಸಾಫ್ಟ್ ವರ್ಡ್‌ನಂತಹ ಮೈಕ್ರೋಸಾಫ್ಟ್ ಅಪ್ಲಿಕೇಷನ್‌ಗಳಲ್ಲಿ ಈ ಕೀ ಮೂಲಕ ಗ್ರಾಮರ್ ಮತ್ತು ಸ್ಪೆಲ್ಲಿಂಗ್ ಚೆಕ್ ಮಾಡಬಹುದು. ಡಾಕ್ಯುಮೆಂಟ್‌ಗಳನ್ನು ರೀಚೆಕ್ ಮಾಡಲು ಈ ಆಯ್ಕೆ ಸಹಾಯಕ್ಕೆ ಬರುತ್ತದೆ.
8. F8 :
F8 ಕೀ ನ ಮಹತ್ವ ಏನೆಂದರೆ ಕಂಪ್ಯೂಟರ್ ಆನ್ ಮಾಡುವ ಪ್ರಕ್ರಿಯೆಯಲ್ಲಿ F8 ಕೀಯನ್ನು ಸತತವಾಗಿ ಒತ್ತುತ್ತಲೇ ಇದ್ದರೆ, ಕಂಪ್ಯೂಟರ್ ಬೂಟ್ ಮಾಡುವ ಹಂತಕ್ಕೆ ತೆರೆಯುತ್ತದೆ. ನಿಮ್ಮ ಕಂಪ್ಯೂಟರ್ ಅನ್ನು ಮತ್ತೆ ಹೊಸದರಂತಾಗಿಸುವ ಆಯ್ಕೆ ಇದಾಗಿದೆ.
9. F9 :
ಈ F9 ಕೀ ಅನ್ನು ಮೈಕ್ರೋಸಾಫ್ಟ್ ಔಟ್‌ಲುಕ್ ಇ-ಮೇಲ್‌ಗಳನ್ನು ಸೆಂಡ್ ಮತ್ತು ರಿಸೀವ್ ಮಾಡಲು ಬಳಸಬಹುದು . ಮತ್ತು ಮೈಕ್ರೋಸಾಫ್ಟ್ ಡಾಕ್ಯುಮೆಂಟ್‌ಗಳನ್ನು ರಿಫ್ರೆಶ್ ಮಾಡಲು ಸಹ ಇದೇ ಶಾರ್ಟ್ ಕೀ ಬೇಕು.
10. F10 :
ಅಪ್ಲಿಕೇಶನ್ ಮೆನು ಬಾರ್ ಸಕ್ರಿಯಗೊಳಿಸಲು F10 ಶಾರ್ಟ್ ಕೀ ಒತ್ತಬೇಕು. ಇದರಿಂದ ನೀವು ಅತಿ ಸುಲಭವಾಗ ಅಪ್ಲಿಕೇಶನ್ ಮೆನು ಬಾರ್ ತೆರೆಯಬಹುದಾಗಿದೆ. ಟ್ರೈ ಮಾಡಿ ನೋಡಿ.
11 . F11 :
ಇಂಟರ್‌ನೆಟ್ ಬ್ರೌಸಿಂಗ್ ತೆರೆದರೆ ಫುಲ್‌ಕ್ರೀನ್ ಆಯ್ಕೆಯನ್ನು ಮಾಡಬಹುದಾದ ಮತ್ತು ಫುಲ್ ಸ್ಕ್ರೀನ್ ಆಯ್ಕೆ ತೆರೆಯಬಹುದಾದ ಕಾರ್ಯವನ್ನು F11 ಕೀ ಮೂಲಕ ಮಾಡಬಹುದು. ಹಾಗು ಪುನಃ ಅದೇ ಕೀ ಒತ್ತಿ ಫುಲ್ ಸ್ಕ್ರೀನ್ ಇಂದ ಎಕ್ಸಿಟ್ ಆಗಬಹುದು.ಮತ್ತು ಭಾಷೆ ಬದಲಾವಣೆ ಮಾಡಲು ಸಹ ಇದೇ ಆಯ್ಕೆ ಬಳಸಬಹುದು.
12. F12
ಮೈಕ್ರೋಸಾಫ್ಟ್‌ನ ವರ್ಡ್‌ನಲ್ಲಿ ಸೇವ್ ಮತ್ತು ಡೈಲಾಗ್ ಬಾಕ್ಸ್ ತೆರೆಯಲು F12 ಬಳಕೆಯಾಗುತ್ತದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
