fbpx
ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲೇ ವಿಶ್ವದಾಖಲೆ ಸೃಷ್ಟಿಸಿದ ರಿಷಬ್ ಪಂಥ್‌

ಕಳೆದ 11 ವರ್ಷಗಳ ನಂತರ ಭಾರತವು ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಪಂದ್ಯವನ್ನು ಗೆದ್ದಿದೆ. ಈ ಐತಿಹಾಸಿಕ ಪಂದ್ಯದಲ್ಲಿ ತಂಡದ ಸದಸ್ಯರಾಗಿದ್ದ ರಿಷಬ್‌ ಪಂಥ್ ಒಂದು ವಿಶ್ವದಾಖಲೆ ಯನ್ನು ಬರೆದಿದ್ದಾರೆ. ಹೌದು, ಅಡಿಲೇಡ್‌ನಲ್ಲಿ ನಡೆದ ಮೊದಲ ಆಸ್ಟ್ರೇಲಿಯಾ-ಭಾರತ ಟೆಸ್ಟ್‌ನಲ್ಲಿ ರಿಷಬ್ ಪಂಥ್‌ ಒಟ್ಟು 11 ಕ್ಯಾಚುಗಳನ್ನು ಪಡೆಯುವುದರ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಮೊದಲ ಟೆಸ್ಟ್ ಆಟದಲ್ಲಿ ಬ್ಯಾಟಿಂಗ್ ನಲ್ಲಿ ಏನು ಸದ್ದು ಮಾಡದ ಪಂಥ್ ಸರಣಿ ಕ್ಯಾಚ್ ಗಳ ಹಿಡಿಯುವುದರ ಮೂಲಕ ನೂತನ ದಾಖಲೆ ಬರೆದಿದ್ದು ಇಷ್ಟೇ ಕ್ಯಾಚುಗಳನ್ನು ಪಡೆದಿರುವ ಎ.ಬಿ.ಡಿವಿಲಿಯರ್ಸ್‌ ಮತ್ತು ಜಾಕ್ ರಸಲ್ಸ್‌ ಅವರ ಜೊತೆಯಾಗಿ ನಿಂತಿದ್ದಾರೆ.

ಅಷ್ಟೇ ಅಲ್ಲದೇ, ಟೆಸ್ಟ್‌ ಒಂದರಲ್ಲಿ ಅತಿ ಹೆಚ್ಚು ಕ್ಯಾಚುಗಳನ್ನು ಪಡೆದ ಭಾರತದ ವಿಕೆಟ್ ಕೀಪರ್‌ ಎಂಬ ಹೆಗ್ಗೆಳಿಕೆಗೆ ರಿಷಬ್ ಪಂಥ್ ಪಾತ್ರರಾಗಿದ್ದು ಅವರು ವೃದ್ಧಿಮಾನ್ ಸಹಾ ಹಾಗೂ ಧೋನಿ ಅವರ ದಾಖಲೆಗಳನ್ನು
ಪುಡಿ ಮಾಡಿದ್ದಾರೆ. ವೃದ್ಧಿಮಾನ್ ಸಹಾ ಪಂದ್ಯವೊಂದರಲ್ಲಿ 10 ಕ್ಯಾಚು ಪಡೆದಿದ್ದರೆ, ಧೋನಿ 9 ಕ್ಯಾಚು ಪಡೆದಿದ್ದರು

ನಿತ್ಯ ನೂತನ ದಾಖಲೆ ನಿರ್ಮಿಸಿರುವ ಪಂಥ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top