ಶ್ರೀ ಕ್ಷೇತ್ರ ಬಾದಾಮಿ ಬನಶಂಕರಿ ದೇವಾಲಯಕ್ಕೆ ಎಂದಾದರೊಮ್ಮೆ ಭೇಟಿ ನೀಡಿದ್ದೀರಾ? ಶ್ರೀ ಕ್ಷೇತ್ರದಲ್ಲಿ ಬನಶಂಕರಿ ತಾಯಿಯ ಮಹಿಮೆ ಅಪಾರವಾಗಿದ್ದು. ಭಕ್ತಿಯಿಂದ ಬರುವ ಭಕ್ತರ ಅಭಿಲಾಷೆಗಳನ್ನು ಈಡೇರಿಸುವ ಮಹಾತಾಯಿ ಬಾದಾಮಿಯಲ್ಲಿ ನೆಲೆಯೂರಿದ್ದು ತನ್ನ ಪ್ರಿಯ ಭಕ್ತರನ್ನು ಪೊರೆಯುತ್ತಿದ್ದಾಳೆ.
ಬಾಗಲಕೋಟೆಯ ಬಳಿ ಇರುವ ಈ ಬನಶಂಕರಿ ದೇವಾಲಯವು ಎಲ್ಲರ ಮೆಚ್ಚಿನ ತಾಣವಾಗಿದ್ದು . ಈ ದೇವಾಲಯದಲ್ಲಿ ಇನ್ನೊಂದು ವಿಶೇಷವಿದೆ. ಹೌದು, ಈ ದೇವಲಾಯಕ್ಕೆ ಭೇಟಿ ಕೊಟ್ಟಾಗ, ಅಲ್ಲಿ ಬಗೆ ಬಗೆ
ತಿಂಡಿಗಳ ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ಕೆಲ ತಾಯಂದಿರು ಕಾಣಸಿಗುತ್ತಾರೆ. ಅಸಲಿಗೆ ಇದು ಆ ತಾಯಂದಿರು ಬದುಕ ನಿರ್ವಹಣೆಗೆ ಮಾಡುವ ದಿವ್ಯ ಕೆಲಸವಾಗಿದ್ದು , ಈ ಅಮ್ಮಂದಿರು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ಮಕ್ಕಳು. ಈ ತಾಯಂದಿರ ತಿಂಡಿ ಬುಟ್ಟಿಯಲ್ಲಿ ಕೆಲ ತಿಂಡಿ ಇರುತ್ತವೆ ಉದಾಹರಣೆಗೆ ಉತ್ತರ ಕರ್ನಾಟಕ ಶೈಲಿಯ ಖಡಕ್ ರೊಟ್ಟಿ , ಗಟ್ಟಿ ಮೊಸರು ಇತ್ಯಾದಿ,. ಸಾಮಾನ್ಯವಾಗಿ ಈ ಭವ್ಯ ಕ್ಷೇತ್ರಕ್ಕೆ ಭೇಟಿ ಕೊಡುವ ಭಕ್ತಾದಿಗಳು ಹಾಗೂ ಅಲ್ಲೇ ನೆಲಸಿರುವ ಕೆಲವರು ಈ ಅಮ್ಮಂದಿರು ಪ್ರೀತಿಯಿಂದ ಬಡಿಸುವ ಊಟವ ಸವಿಯದೇ ಹೋಗಲಾರರು.ಈ ಅಮ್ಮಂದಿರು ಬಡಿಸುವ ರೀತಿಯೇ ವಿಶಿಷ್ಟ ವಾಗಿದ್ದು ಎಷ್ಟು ತಿಂದರು ಇನ್ನಷ್ಟು ಬೇಕು ಅನಿಸುತ್ತಲೇ ಇರುತ್ತದೆ. ಬುಟ್ಟಿಯಲ್ಲಿ ಆ ಅಮ್ಮಂದಿರು ಇಟ್ಟುಕೊಂಡಿರುವ ಒಂದೊಂದೇ ತಿಂಡಿ ಪದಾರ್ಥಗಳನ್ನು ನೋಡುತ್ತಿದ್ದರಂತೂ ಬಾಯಲ್ಲಿ ನೀರು ಬರುವುದಂತೂ ಖಚಿತ. ಅದರಲ್ಲೂ ಆ ಖಡಕ್ ರೊಟ್ಟಿಟಿಯನ್ನು ಗಟ್ಟಿ ಮೊಸರಿನೊಂದಿಗೆ ಅದ್ದಿಕೊಂಡು ತಿನ್ನುತ್ತಿದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು.
ಮುಖ್ಯವಾಗಿ ಈ ಊಟಕ್ಕೆ ಆ ಅಮ್ಮಂದಿರು ವಿಧಿಸುವ ಬೆಲೆಯೂ ಅತಿ ಕಡಿಮೆ ಇದ್ದು, ಹೊಟ್ಟೆ ತುಂಬ ಮಾತ್ರವಲ್ಲದೆ ಮನಸ್ತುಂಬ ಊಟ ಮಾಡಿದ ಅನುಭವವು ನಮ್ಮದಾಗುತ್ತದೆ. ಒಟ್ಟಿನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಪ್ರೀತಿಯಿಂದ ಕೂಡಿದ ಊಟ ನಮ್ಮ ಪಾಲಿಗೆ ಸಿಗುತ್ತದೆ.
ಒಟ್ಟಿನಲ್ಲಿ ಈ ಕಸುಬನ್ನು ಆರಿಸಿಕೊಂಡಿರುವ ಅಲ್ಲಿನ ಕೆಲ ತಾಯಂದಿರು ಲಾಭಕ್ಕಾಗಿ ಈ ದುಡಿಮೆಯನ್ನು ಮಾಡುತ್ತಿಲ್ಲ ಬದಲಿಗೆ ಒಬ್ಬರಿಗೆ ಹೊಟ್ಟೆ ತುಂಬ ಊಟ ಹಾಕಬಹುದು ಅನ್ನೋ ತೃಪ್ತ ಭಾವದಿಂದ ಈ ಕೆಲಸ ಮಾಡುತ್ತಿದ್ದಾರೆ. ಹಾಗೆಂದ ಮೇಲೆ ಇಂತಹ ಸ್ವಾವಲಂಬಿ ತಾಯಂದಿರಿಗೆ ನಾವು ಸಲಾಂ ಹೇಳಲೇ ಬೇಕು ಅಲ್ಲವೇ? .
ಸ್ನೇಹಿತರೇ, ಮುಂದೆ ಯಾವಾಗಲಾದರೂ ನೀವು ಬಾದಾಮಿ ಬನಶಂಕರಿ ದೇವಲಾಯಕ್ಕೆ ಭೇಟಿ ಕೊಟ್ಟಾಗ ತಪ್ಪದೇ ಈ ಭರ್ಜರಿ ಭೋಜನವನ್ನು ಸವಿದು ಬರುತ್ತೀರಾ ಅಲ್ಲವೇ?
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
