ಮುಂದಿನವಾರ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಐದು ದಿನಗಳ ಸರಣಿ ರಜೆ ಇರುವುದುದರಿಂದ ಗ್ರಾಹಕರು ಆದಷ್ಟು ಬೇಗ ಯಾವುದೇ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಮತ್ತು ಸರ್ಕಾರಿ ಕಚೇರಿಯಲ್ಲಿನ ಕೆಲಸಗಳನ್ನು ಮುಗಿಸಿಕೊಂಡರೆ ಒಳ್ಳೆಯದು. ಕೊನೆಗೆ ಎಟಿಎಂನಲ್ಲೂ ಹಣ ಲಭಿಸಲಿದೆಯೋ ಇಲ್ಲವೋ ಹೇಳಲಿಕ್ಕಾಗುವುದಿಲ್ಲ. ಹಾಗಾಗಿ ಡಿಸೆಂಬರ್ 20 ರೊಳಗೆ ಕೆಲಸ ಮುಗಿಸಿಕೊಳ್ಳದಿದ್ದರೆ ಡಿಸೆಂಬರ್ 27ರವರೆಗೆ ಕಾಯಲೇಬೇಕಾಗುತ್ತದೆ.
ಮುಷ್ಕರ, ಹಬ್ಬ, ವಾರಾಂತ್ಯ ರಜೆಗಳ ಪರಿಣಾಮವಾಗಿ ಒಟ್ಟು 5 ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿವೆ ಎನ್ನಲಾಗಿದೆ. ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಪ್ರತ್ಯೇಕವಾಗಿ ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಉದ್ದೇಶಿಸಿದ್ದು ಡಿಸೆಂಬರ್ 21ಕ್ಕೆ ಬ್ಯಾಂಕ್ ಅಧಿಕಾರಿಗಳ ಯೂನಿಯನ್ ಮುಷ್ಕರಕ್ಕೆ ಕರೆ ನೀಡಿದೆ. ಡಿಸೆಂಬರ್.22ಕ್ಕೆ ನಾಲ್ಕನೇ ಶನಿವಾರವಾದ ಕಾರಣ ಬ್ಯಾಂಕ್ಗೆ ರಜೆ ಇದ್ದು ಡಿಸೆಂಬರ್.23 ಭಾನುವಾರ ಮತ್ತು ಡಿಸೆಂಬರ್.25ಕ್ಕೆ ಕ್ರಿಸ್ವುಸ್ ರಜೆ ಇದೆ. ಬ್ಯಾಂಕ್ ಒಕ್ಕೂಟಗಳ ಮಹಾವೇದಿಕೆ (ಯುಎಫ್ಬಿಯು) ಡಿ.26ರಂದು ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಡಿ.24 ಹೊರತುಪಡಿಸಿ ಉಳಿದ ಐದು ದಿನ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದೆ.
ಬ್ಯಾಂಕ್ ರಜಾದಿನಗಳು:
1. ಡಿಸೆಂಬರ್ 21ಕ್ಕೆ ಬ್ಯಾಂಕ್ ಅಧಿಕಾರಿಗಳ ಯೂನಿಯನ್ ಮುಷ್ಕರ.
2. ಡಿಸೆಂಬರ್ 22ಕ್ಕೆ ನಾಲ್ಕನೇ ಶನಿವಾರ.
3. ಡಿಸೆಂಬರ್ 23 ಭಾನುವಾರ.
4.ಡಿಸೆಂಬರ್ 25ಕ್ಕೆ ಕ್ರಿಸ್ವುಸ್ ರಜೆ.
5. ಡಿಸೆಂಬರ್ 26ರಂದು ಬ್ಯಾಂಕ್ ಒಕ್ಕೂಟಗಳ ಮಹಾವೇದಿಕೆ (ಯುಎಫ್ಬಿಯು) ಮುಷ್ಕರ
ಸತತ ನಾಲ್ಕು ದಿನ ರಜೆ ಇರುವುದರಿಂದ ಎಟಿಎಂನಲ್ಲಿ ಕೂಡ ನಗದು ಸಮಸ್ಯೆಗಳನ್ನು ಎದುರಿಸಬಹುದು. ಏಕೆಂದರೆ, ಬ್ಯಾಂಕುಗಳು ಪ್ರತಿದಿನ ಕೂಡ ಎಟಿಎಂಗಳಿಗೆ ಹಣವನ್ನು ತುಂಬಿಸುತ್ತಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ರಜೆ ಎಟಿಎಂ ಭರ್ತಿ ಮಾಡುವಿಕೆಯಲ್ಲೂ ಸಹ ಪರಿಣಾಮ ಬೀರುತ್ತದೆ. . ನಾಲ್ಕುದಿನ ರಜೆ ಕಾರಣ ಗ್ರಾಹಕರು ಹಣಕ್ಕಾಗಿ ಪರಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ, ನೀವು ಆನ್ಲೈನ್ ಬ್ಯಾಂಕಿಂಗ್ ಅನ್ನು ಮಾತ್ರ ಉಪಯೋಗಿಸಲು ಸಾಧ್ಯವಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
