fbpx
ಹೆಚ್ಚಿನ

ಇನ್​ಸ್ಟಾಗ್ರಾಂ ಬಳಸುವವರಿಗೆ ಇಲ್ಲಿದೆ ಸಿಹಿ ಸುದ್ದಿ – ಇನ್ಮುಂದೆ ಆ್ಯಪ್ ನಲ್ಲಿ ಸಿಗಲಿದೆ ಅದ್ಬುತ ಫೀಚರ್

ಸಾಮಾಜಿಕ ಜಾಲತಾಣಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಈಗಲಂತೂ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿ ತನಕವೂ ಎಲ್ಲರೂ ಈ ಫೇಸ್ ಬುಕ್ , ವಾಟ್ಸ್ ಆ್ಯಪ್ ಮತ್ತು ಇನ್​ಸ್ಟಾಗ್ರಾಂ ಅನ್ನು ಬಳಸುತ್ತಾರೆ. ಹೀಗಿರುವಾಗ ಬಳಕೆದಾರರನ್ನು ಸೆಳೆಯಲು ಈ ಆ್ಯಪ್ ಗಳು ತಮ್ಮ ಬಳೆಕೆದಾರರಿಗಾಗಿ ಹೊಸ-ಹೊಸ ಫೀಚರ್ ಗಳನ್ನು ನೀಡುತ್ತಲೇ ಇರುತ್ತಾರೆ . ಇದೀಗ ಇನ್​ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಹೊಸದಾದ ಸಿಹಿ ಸುದ್ದಿಯೊಂದನ್ನು ನೀಡಿದ್ದು. ಇನ್ಮುಂದೆ ಇನ್​ಸ್ಟಾಗ್ರಾಂ ಆ್ಯಪ್ ನಲ್ಲಿ ಅದ್ಭುತ ಫೀಚರ್ ಲಭ್ಯವಾಗಲಿದೆ .

ಯಾವ ಫೀಚರ್ ?

ಹೌದು, ಫೋಟೋ ಶೇರಿಂಗ್ ಫ್ಲಾಟ್​ಫಾರ್ಮ್​ ಇನ್​ಸ್ಟಾಗ್ರಾಂನಲ್ಲಿ ಧ್ವನಿ ಸಂದೇಶದ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದರಿಂದ ಇನ್ನು ಮುಂದೆ ವಾಟ್ಸ್​ಆ್ಯಪ್​ ರೀತಿಯಲ್ಲೇ ಇನ್​ಸ್ಟಾಗ್ರಾಂನಲ್ಲೂ ವಾಯ್ಸ್​ ಮೆಸೇಜ್ ಕಳುಹಿಸಬಹುದಾಗಿದೆ.

ಈ ಹೊಸ ಫೀಚರ್ ಅನ್ನು ಬಳಸೋದು ಹೇಗೆ ?

ಇನ್​ಸ್ಟಾಗ್ರಾಂ ನಲ್ಲಿ ನೀಡಲಾಗಿರುವ ಹೊಸ ಆಯ್ಕೆಯನ್ನು ಚಾಟ್​ ಬಾಕ್ಸ್​ನಲ್ಲಿ ಬಳಸಿಕೊಳ್ಳಬಹುದು. ಮೆಸೇಜ್​ ಮಾಡುವ ಜಾಗದಲ್ಲಿ ಮೈಕ್ರೋಫೋನ್ ರೀತಿಯ ಬಟನ್​ ಆಯ್ಕೆಯನ್ನು ನೀಡಲಾಗಿದ್ದು, ಇದನ್ನು ಒತ್ತಿ ಹಿಡಿದುಕೊಳ್ಳುವ ಮೂಲಕ ವಾಯ್ಸ್​ ರೆಕಾರ್ಡಿಂಗ್ ಮಾಡಿಕೊಳ್ಳಬಹುದು. ರೆಕಾರ್ಡಿಂಗ್ ಮುಗಿದ ಬಳಿಕ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ತಪ್ಪಾಗಿ ರೆಕಾರ್ಡಿಂಗ್ ಮಾಡಿಕೊಂಡಿದ್ದರೆ, ಎಡಕ್ಕೆ ಸ್ವೈಪ್ ಮಾಡುವ ಮೂಲಕ ಸಂದೇಶವನ್ನು ರದ್ದುಗೊಳಿಸಬಹುದು. ಹಾಗೂ ವಿಶೇಷವೆಂದರೆ, ಇನ್​ಸ್ಟಾಗ್ರಾಂ ಪ್ರಸ್ತುತ ಪಡಿಸಿರುವ ವಾಯ್ಸ್ ಮೆಸೇಜ್ ಆಯ್ಕೆಯ ಕಳುಹಿಸಿದ ಸಂದೇಶವನ್ನು ಅನ್​ಸೆಂಡ್​ ಆಯ್ಕೆಯ ಮೂಲಕ ರದ್ದು ಪಡಿಸಬಹುದು. .

ಇನ್​ಸ್ಟಾಗ್ರಾಂ ಆ್ಯಪ್​ನ ಈ ಹೊಸ ಆಯ್ಕೆಯು ಐಒಎಸ್​ ಮತ್ತು ಅಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಲಭ್ಯವಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top