fbpx
ಕ್ರೀಡೆ

WWEಗೆ ವಿದಾಯ ಹೇಳಲಿದ್ದಾರ ಸೂಪರ್ ಸ್ಟಾರ್ ಜಾನ್ ಸೀನಾ ?

ಹಲವರ ಮೆಚ್ಚಿನ ಕ್ರೀಡೆಯಾಗಿರುವ WWE ಗೆ ಪ್ರಪಂಚಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇನ್ನೂ ಜಾನ್ ಸೀನಾ ಮತ್ತು ಅಂಡರ್ ಟೇಕರ್ ಅಂತಹ ಕುಸ್ತಿ ಪಟುಗಳ ಹಿಂದೆ ಅಭಿಮಾನಿಗಳ ದಂಡೇ ಇದೆ. ವಿಶೇಷವಾಗಿ “ಜಾನ್ ಸೀನಾ” ರವರಿಗೆ ಭಾರತದಲ್ಲಿ ಅನೇಕ ಅಭಿಮಾನಿಗಳಿದ್ದು ಅವರೊಂದಿಗೆ ಜಾನ್ ಸೀನಾ ಉತ್ತಮ ಸಂಬಂಧ ಹೊಂದಿದ್ದಾರೆ. ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಜಾನ್ ಸೀನಾ ಹಲವರ ಖಾಯ ಫೇವರಿಟ್ ಕುಸ್ತಿಪಟು ಆಗಿದ್ದಾರೆ. ಹೀಗಿರುವಾಗ ಈ ನಡುವೆ ಜಾನ್ ಸೀನಾ WWE ರಿಂಗ್​​ನಲ್ಲಿ ಕಾಣಿಸಿಕೊಳ್ಳದೆ ಇರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ ಅದರೊಂದಿಗೆ ಬಹಳ ದಿನಗಳಿಂದ ಜಾನ್ ಸೀನಾ ರವರು WWE ಅಖಾಡಕ್ಕೆ ಇಳಿಯದ ಕಾರಣಕ್ಕೆ ಬಹುಶಃ ಅವರು WWE ಗೆ ವಿದಾಯ ಹೇಳಲಿದ್ದಾರೆ ಎನ್ನುವ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದ್ದು ಈ ವಿಷಯ ಅಭಿಮಾನಿಗಳ ಪಾಲಿಗಂತೂ ನುಂಗಲಾರದ ತುತ್ತಾಗಿದೆ.

ಹೌದು, ಜಾನ್ ಸೀನಾ ರವರ ವಿದಾಯದ ವಿಷಯಕ್ಕೆ ಪುಷ್ಠಿ ನೀಡುವಂತೆ ಹಲವು ದಿನಗಳಿಂದ WWE  ರಿಂಗ್ ನಲ್ಲಿ ಜಾನ್ ಸೀನಾ ರವರು ಕಾಣಿಸಿಕೊಂಡೆ ಇಲ್ಲ. ಆದರೆ ಇದರ ನಡುವೆಯೂ ಜಾನ್​ ಸೀನಾ ಡಿಸೆಂಬರ್​​​ ತಿಂಗಳ ಅಂತ್ಯಕ್ಕೆ ಮತ್ತೆ WWEಗೆ ಕಮ್​ಬ್ಯಾಕ್ ಮಾಡಿ ಪಂದ್ಯವನ್ನು ಆಡಲಿದ್ದಾರೆ ಎಂಬ ವಿಚಾರಗಳು ಕೇಳಿ ಬರುತ್ತಿತ್ತು ಆದರೆ ಈ ವಿಷಯವು ಸಹ ಅಭಿಮಾನಿಗಳಿಗೆ ಮತ್ತೆ ನಿರಾಸೆಯನ್ನುಂಟು ಮಾಡಿದೆ.

ಹಾಗಾದರೆ ಜಾನ್ ಸೀನಾ ರವರು ಇನ್ಯಾವ ಕೆಲಸದಲ್ಲಿ ನಿರತರಾಗಿದ್ದಾರೆ ?

WWE  ನಲ್ಲಿ ಜಾನ್ ಸೀನಾ ರವರು ಭಾಗವಹಿಸಿ ಹಲವು ದಿನಗಳೇ ಕಳೆದು ಹೋಗಿದೆ . ಹೀಗಿರುವಾಗ WWE  ನಲ್ಲಿ ಭಾಗವಹಿಸುವುದನ್ನು ಬಿಟ್ಟು ಬೇರೆ ಯಾವ ಕೆಲಸದಲ್ಲಿ ಜಾನ್ ಸೀನಾ ರವರು ಮಗ್ನರಾಗಿದ್ದಾರೆ ಅನ್ನುವ  ಸಹಜ ಕುತೂಹಲ ಎಲ್ಲರಲ್ಲೂ ಮೂಡಿದೆ. ಹೀಗಾಗಿ ಬಂದ ಮಾಹಿತಿಗಳ ಪ್ರಕಾರ ಜಾನ್ ಸೀನಾ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ . ಹಾಗೂ ಜಾನ್ ಸೀನಾ ಇನ್ನೂ ಕೆಲವು ಸಿನಿಮಾಗಳಿಗೆ ಸಹಿ ಮಾಡಿದ್ದು, 2019 ರಲ್ಲು WWEನಲ್ಲಿ ಕಾಣಿಸುವುದು ಅನುಮಾನ ಎನ್ನಲಾಗುತ್ತಿದೆ.

ಸದ್ಯ ಚೀನಾ ಸಿನಿಮಾವೊಂದರಲ್ಲಿ ಜಾಕಿ ಚಾನ್​​ಜೊತೆ ಬ್ಯುಸಿಯಾಗಿರುವ ಸೀನಾ, ಇದರ ಜೊತೆಗೆ ಇನ್ನು ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಇದನ್ನೆಲ್ಲಾ ಗಮನಿಸಿದರೆ ಜಾನ್ ಸೀನಾ ಅವರು WWEಗೆ ವಿದಾಯ ಹೇಳಬಹುದೇನೋ ಅನ್ನುವ ಸಂದೇಹಗಳು ಎಲ್ಲರಲ್ಲೂ ಮೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top