fbpx
ವಿಶೇಷ

ಭಾರತದಲ್ಲಿ ‘ಪಾಕಿಸ್ತಾನ’ ಅನ್ನೋ ಹೆಸರಿನ ಊರು ಎಲ್ಲಿದೆ ಗೊತ್ತಾ ? – ಅಸಲಿಗೆ ಭಾರತದ ಈ ಸ್ಥಳಕ್ಕೆ ‘ಪಾಕಿಸ್ತಾನ’ ಎಂದು ಹೆಸರಿಡುವುದರ ಹಿಂದಿನ ಕಾರಣ ತಿಳ್ಕೊಳ್ಳಿ.

ಭಾರತದಲ್ಲಿ ಪಾಕಿಸ್ತಾನ ಅನ್ನೋ ಹೆಸರಿನ ಊರು ಇದೆಯೇ?ಇದೇನಿದು! ಅನ್ನುವ ಅಚ್ಚರಿ ನಿಮ್ಮಲ್ಲಿ ಉಂಟಾಗೋದು ಸಹಜ ಬಿಡಿ. ಆದರೆ ಅಚ್ಚರಿ ಎನಿಸದರೂ ನೀವು ಇದನ್ನು ನಂಬಲೇ ಬೇಕು! ಭಾರತ ಮತ್ತು ಪಾಕಿಸ್ತಾನ ಬೇರೆ ಬೇರೆ ದೇಶಗಳಾಗಿದ್ದರೂ ನಮ್ಮ ಭಾರತದಲ್ಲಿ ಪಾಕಿಸ್ತಾನ ಅನ್ನುವ ಹೆಸರಿನ ಒಂದು ಸ್ಥಳವಿದೆ. ಹೌದು, ಹಾಗಾದರೆ ಆ ಸ್ಥಳ ಅದೆಲ್ಲಿದೆ?ಏನು?ಎತ್ತ? ಅಂತ ನೀವು ತಿಳಿಯಬೇಕಿದ್ದಲ್ಲಿ ತಪ್ಪದೆ ಮುಂದೆ ಓದಿ !

ಹೌದು,ನಮ್ಮ ದೇಶದ ಬಿಹಾರ ರಾಜ್ಯದ ಪುರ್ನಿಯಾ ಅನ್ನುವ ಜಿಲ್ಲೆಯಲ್ಲಿ ಪಾಕಿಸ್ತಾನದ ಹೆಸರಿನ ಒಂದು ಹಳ್ಳಿ ಇದೆ. ಅಸಲಿಗೆ ಭಾರತದ ಬಿಹಾರದ ಪೂರ್ಣಿಯ ಜಿಲ್ಲೆಯ ಒಂದು ಹಳ್ಳಿಗೆ ಪಾಕಿಸ್ತಾನ ಎಂದು ಹೆಸರಿಡುವುದರ ಹಿಂದೆ ಒಂದು ಬಲವಾದ ಕಾರಣವಿದೆ. ಅದೇನಂದರೆ 1947 ರಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದವಾರ ಸ್ಮರಣಾರ್ಥವಾಗಿ ಬಿಹಾರದಲ್ಲಿರುವ ಈ ಒಂದು ಹಳ್ಳಿಗೆ ಅಲ್ಲಿನ ಜನರು ಪಾಕಿಸ್ತಾನ ಎಂದು ಹೆಸರಿಟ್ಟಿರಬಹುದು ಎಂದು ಇತಿಹಾಸ ಹೇಳುತ್ತದೆ. ಏನೇ ಆಗಲಿ ಸದಾ ಶತ್ರು ರಾಷ್ಟ್ರ ಎಂದು ನಮ್ಮ ಮೇಲೆ ಅಂದರೆ ಭಾರತದ ಮೇಲೆ ಹಗೆ ಸಾಧಿಸುವ ಪಾಕಿಸ್ತಾನ ದೇಶದ ಹೆಸರನ್ನು ನಾವು ಒಂದು ಊರಿನ ಹೆಸರಾಗಿ ಮಾರ್ಪಾಡು ಮಾಡಿರುವುದು ಹೆಮ್ಮೆಯೇ ವಿಷಯವೇ. ಅಲ್ಲವೇ!?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top