fbpx
ಹೆಚ್ಚಿನ

ಮಕ್ಕಳ ಮೆಚ್ಚಿನ “ಸಾಂಟಾ ಕ್ಲಾಸ್ ” ಯಾರು ಗೊತ್ತೇ? ಇಲ್ಲಿದೆ ನೋಡಿ ಸಾಂಟಾ ಕ್ಲಾಸ್ ಬಗ್ಗೆ ಅಚ್ಚರಿ ಹುಟ್ಟಿಸುವ ಸಂಗತಿಗಳು !

ಸಾಂಟಾ ಕ್ಲಾಸ್ ಯಾರಿಗೆ ಗೊತ್ತಿಲ್ಲ ಹೇಳಿ ? ಕ್ರಿಸ್ಮಸ್ ಹಬ್ಬ ಬಂತೆಂದರೆ ಸಾಕು ಚಿಕ-ಚಿಕ್ಕ ಮಕ್ಕಳು ಸಾಂಟಾ ತಾತನ ಬರುವಿಕೆಗಾಗಿ ಬಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಸಾಮಾನ್ಯವಾಗಿ ಸಾಂಟಾ ಕ್ಲಾಸ್ ಒಳ್ಳೆಯ, ನಗುಮುಖದ, ಬಿಳಿ ದಾಡಿಯುಳ್ಳ ಡುಮ್ಮ ಹೊಟ್ಟೆಯ ವ್ಯಕ್ತಿ ! ಕ್ರಿಸ್ಮಸ್ ನ ಹಿಂದಿನ ದಿನ ಅಂದರೆ ಕ್ರಿಸ್ಮಸ್ ಈವ್ ರಂದು ಸಾಂಟಾ ಕ್ಲಾಸ್ ಜಿಂಕೆಗಳಿಂದ ಕೂಡಿದ ತನ್ನ ಗಾಡಿಯಲ್ಲಿ ಹಾರುತ್ತ ಎಲ್ಲರ ಮನೆಗೂ ಹೋಗಿ ಅಲ್ಲಿರುವ ಮಕ್ಕಳಿಗಾಗಿ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ ಎಂಬುದು ಪುಟ್ಟ ಮಕ್ಕಳು ನಂಬಿಕೊಂಡಿರುವ ಕಥೆ. ಆದರೆ ಅಸಲಿಗೆ ಈ ಸಾಂಟಾ ಕ್ಲಾಸ್ ಯಾರು ಗೊತ್ತೇ ?

ಸಾಂಟಾ ಕ್ಲಾಸ್ ಒಬ್ಬ ಆಗರ್ಭ ಶ್ರೀಮಂತ ಆತನ ಮೊದಲ ಹೆಸರು ಸಂತ ನಿಕೋಲಸ್. ಸಾಂತಾಕ್ಲಾಸ್ ಎಂಬ ಹೆಸರು ಸಂತ ನಿಕೋಲಸ್ ಎಂಬ ಹೆಸರಿನ ರೂಪಾಂತರವೇ ಹೌದು. ಯುರೋಪಿನ ಮೈರಾ ನಗರಕ್ಕೆ ಸೇರಿದ ಪಟಾರಾ ರೇವು ಪಟ್ಟಣದಲ್ಲಿ ವಾಸಿಸುತ್ತಿದ್ದ ಒಂದು ಶ್ರೀಮಂತ ಕುಟುಂಬದಲ್ಲಿ ಈತನು ನಾಲ್ಕನೇ ಶತಮಾನದಲ್ಲಿ ಜನಿಸಿದ. ಈತನಿಗೆ ಬಡ ಬಗ್ಗರೆಂದರೆ ಅದೇನೋ ಉತ್ಕಟ ಪ್ರೀತಿ. ತನ್ನ ತಂದೆ ತಾಯಿಯನ್ನು ಕಳೆದುಕೊಂಡ ನಂತರ ಈತ ತನ್ನ ಅಪಾರ ಸಂಪತ್ತನ್ನು ದಾನ ಮಾಡಲು ಆರಂಭಿಸಿದ ಹಾಗೂ ತನ್ನಲಿದ್ದ ಸಂಪತ್ತನ್ನು ರಹಸ್ಯವಾಗಿ ಉಡುಗೊರೆಗಳ ಮೂಲಕ ಬಡವರಿಗೆ ನೀಡುವ ಅಭ್ಯಾಸವನ್ನು ಆತ ರೂಢಿಸಿಕೊಂಡ.

ಹೀಗಿರುವಾಗ ಒಂದು ದಿನ ಬಡ ವಿಧವೆಯೋರ್ವಳು ಗೋಳಾಡುತ್ತಾ ನಿಕೊಲಸ್ ಗೆ ಎದುರಾದಳಂತೆ. ಆಕೆ ಅವಳ ಮೂರು ಮಕ್ಕಳೂ ವಿದ್ಯಾರ್ಜನೆಗಾಗಿ ಅಥೇನ್ಸ್‍ಗೆ ಹೊಗುವ ದಾರಿಯಲ್ಲಿ ಹೋಟೆಲಿವನೊಬ್ಬನ ಸಂಗಡ ತಂಗಿದ್ದಾಗ, ಅವನು ಆ ಮಕ್ಕಳನ್ನು ಕೊಂದು ಉಪ್ಪಿನಕಾಯಿ ಮಾಡಿ ಪಾತ್ರೆಯಲ್ಲಿತ್ತಿರುವುದಾಗಿ ಹೇಳಿಕೊಂಡಳಂತೆ . ಇದನ್ನು ಕೇಳಿದ ನಿಕೋಲಾಸ್ ಆ ಮಕ್ಕಳಿಗಾಗಿ ದೇವರಲ್ಲಿ ಪ್ರಾರ್ಥಿಸಲು ಆ ಮಕ್ಕಳಿಗೆ ಮತ್ತೆ ಜೀವ ಬಂದಿತು ಎನ್ನುವ ಕತೆಯಿದೆ.

ಮತ್ತೊಂದೆಡೆ ಮೂರು ಹೆಣ್ಣು ಮಕ್ಕಳ ಬಡವನೊಬ್ಬನು ಇದ್ದನಂತೆ. ಆತ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಿಂದಾಗಿ ಆ ಮಕ್ಕಳನ್ನು ಮದುವೆ ಮಾಡಿಕೊಡಲು ನಿಶ್ಯಕ್ತನಾಗಿದ್ದನಂತೆ . ಇದನ್ನು ಹೇಗೋ ತಿಳಿದ್ಕೊಂಡ ಸಂತ ನಿಕೋಲಾಸ್ ಈ ಬಡ ಕುಟುಂಬಕ್ಕೆ ರಹಸ್ಯವಾಗಿ ಸಹಾಯ ಮಾಡಲು ಹೋದಾಗ ಮೆನೆಯ ಯಜಮಾನನಿಗೆ ಸಿಕ್ರೆಟ್​ ಸಂತಾ ಯಾರೂ ಎಂಬುದು ತಿಳಿದು ಬಂದಿತಂತೆ. ಇದರಿಂದ ಇಷ್ಟು ದಿನ ಅಸಹಾಯಕರಿಗೆ ಸಹಾಯ ಮಾಡುತ್ತಿದ್ದ ದೇವಾ ಪುರುಷ ಈತನೇ ಎಂದು ಜನಕ್ಕೆ ತಿಳಿಯಿತಂತೆ. ಆ ನಂತರ ಯಾರಿಗಾದರೂ ಸಿಕ್ರೆಟ್​ ಉಡುಗೊರೆಗಳು ಸಿಕ್ಕರೆ, ಅದು​ ಸಂತ ನಿಕೋಲಸ್​ ನೀಡಿರುವುದು ಎಂದು ನಂಬಲಾಗುತ್ತಿತ್ತಂತೆ. ಈ ನಂಬಿಕೆ ಇಂದಿಗೂ ಪ್ರಸ್ತುತದಲ್ಲಿರುವುದು ವಿಶೇಷವೇ ಸರಿ. ಕ್ರಮೇಣ ವಿಶ್ವದೆಲ್ಲೆಡೆ ನಿಕೋಲಸ್​ ಕಥೆಯು ಹರಡಿತು. ಅದರಂತೆ ಕ್ರಿಸ್ಮಸ್​ ಸಂದರ್ಭದಲ್ಲಿ ಸಿಕ್ರೆಟ್​ ಗಿಫ್ಟ್ ಅಥವಾ ಸಾಂತಾ ಗಿಫ್ಟ್​​ ನೀಡುವ ಸಂಪ್ರದಾಯ ಕೂಡ ಹುಟ್ಟಿಕೊಂಡಿತು.

ಆಗಿನ ಕಾಲದಲ್ಲೇ ಟರ್ಕಿ ದೇಶದಲ್ಲಿ ಈ ಸಂತನ ನೆನಪಿಗೆ ಹಲವಾರು ಅಂಚೆಚೀಟಿಗಳನ್ನು ಹೊರತಂದಿದ್ದರು. ಮೈರಾದಲ್ಲಿ ಆತನ ಸಮಾಧಿ ಇಂದಿಗೂ ಸುರಕ್ಷಿತವಾಗಿದೆ. ಅವನ ಅವಶೇಷಗಳನ್ನು 11ನೇ ಶತಮಾನದಲ್ಲಿ ಇಟಲಿಯ ಬಾರಿ ಎಂಬ ಸ್ಥಳಕ್ಕೆ ಒಯ್ದು ಅಲ್ಲಿ ಅವನಿಗೆ ಸ್ಮಾರಕವೊಂದನ್ನು ನಿರ್ಮಿಸಿದ್ದಾರೆ.ಅಮೆರಿಕಾದ ಸೈಂಟ್ ನಿಕೊಲಸ್ ಎಂಬ ಹೆಸರಿರುವ ಚಿಕ್ಕದೊಂದು ಊರಿದೆ. ಈ ಊರಿಂದ ಪ್ರತಿ ವರ್ಷವೂ ಕ್ರಿಸ್ಮಸ್ ಸಮಯದಲ್ಲಿ ಅಮೂಲ್ಯ ಉಡುಗೊರೆಗಳನ್ನು ಜಗತ್ತಿನ ಎಲ್ಲಾ ಕಡೆಗಳಲ್ಲಿರುವ ಅಸಂಖ್ಯಾತ ಬಡ ಮಕ್ಕಳಿಗೆ ಕಳುಹಿಸುತ್ತಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top