fbpx
ವಿಶೇಷ

ಓಂ ಶಾಂತಿ-ಶಾಂತಿ -ಶಾಂತಿ ಎಂಬ ಶಾಂತಿ ಮಂತ್ರ ಪಠಣದಲ್ಲಿ ‘ಶಾಂತಿ’ ಎಂಬ ಪದವನ್ನು ಏಕೆ ಮೂರು ಬರಿ ಉಚ್ಛರಿಸಲಾಗುತ್ತದೆ ಗೊತ್ತೇ ?

ಓಂ ಶಾಂತಿ-ಶಾಂತಿ -ಶಾಂತಿ ಎಂಬ ಶಾಂತಿ ಮಂತ್ರ ಪಠಣದಲ್ಲಿ ‘ಶಾಂತಿ’ ಎಂಬ ಪದವನ್ನು ಏಕೆ ಮೂರು ಬರಿ ಉಚ್ಛರಿಸಲಾಗುತ್ತದೆ ಎಂದು ನಾವು ತಿಳಿದುಕೊಳ್ಳುವ ಮುನ್ನ ನಾವು ಮೊದಲು ಶಾಂತಿ ಎಂದರೇನು ಎಂದು ತಿಳಿದುಕೊಳ್ಳಬೇಕು. ಶಾಂತಿ ಎಂದರೆ ಉಪಶಮನ ಅಥವಾ ನೆಮ್ಮದಿ. ಜೀವನದಲ್ಲಿ 3 ವಿಧವಾದ ದುಃಖಗಳಿಂದ ಬಿಡುಗಡೆಯನ್ನು ಕಾಣುವುದಕ್ಕೆ ನಾವು ಓಂ ಶಾಂತಿ-ಶಾಂತಿ -ಶಾಂತಿ ಎಂದು ಉಚ್ಛರಿಸುತ್ತೇವೆ. ಹಾಗಾದರೆ ಆ ಮೂರು ವಿಧದ ದುಃಖಗಳು ಯಾವುವು ಗೊತ್ತೇ ?

  1. ಮೊದಲನೆಯ ದುಃಖ ಯಾವುದೆಂದರೆ ಶಾರೀರಕ ಹಾಗೂ ಮಾನಸಿಕ ಭಾದೆಗಳು.
  2. ಎರಡನೆಯದು ಕ್ರಿಮಿಕೀಟಕಾದಿಗಳು, ಕ್ರೂರ ಮೃಗಗಳಿಂದಾಗುವ ದುಃಖ ಹಾಗೂ ಶತ್ರುಗಳ ಹಗೆ.
  3. ಮೂರನೆಯದು ಜೀವನದಲ್ಲಿ ಎದುರಾಗುವ ವೈಪರೀತ್ಯಗಳು ಹಾಗೂ ಗ್ರಹ-ನಕ್ಷತ್ರ ದೋಷಗಳ ಭಾದೆಗಳು.

ಹೀಗಾಗಿ ಮೇಲಿನ ಈ ಮೂರು ವಿಧವಾದ ದುಃಖಗಳಿಂದ ಬಿಡುಗಡೆ ಹೊಂದಿ ಶಾಂತಿಯನ್ನು ಕಾಣುವುದಕ್ಕೆ ಮೂರು ಬಾರಿ ಶಾಂತಿ-ಶಾಂತಿ-ಶಾಂತಿ ಎಂದು ಉಚ್ಛರಿಸುತ್ತ ಭಗವಂತನನ್ನ ಈ ಬಾಧೆಗಳಿಂದ ನಮ್ಮನ್ನು ಬಿಡಿಸು ಎಂದು ಅಪೀಲು ಸಲ್ಲಿಸಲಾಗುತ್ತದೆ.

ಓಂ ಶಾಂತಿ-ಶಾಂತಿ -ಶಾಂತಿ ಎಂಬ ಶಾಂತಿ ಮಂತ್ರ ಪಠಣದಲ್ಲಿ ‘ಶಾಂತಿ’ ಎಂಬ ಪದವನ್ನು ಏಕೆ ಮೂರು ಬರಿ ಉಚ್ಛರಿಸಲಾಗುತ್ತದೆ ಎಂಬುದು ಈಗ ತಿಳಿದು ಬಂದಿತು ಅಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top