fbpx
ಹೆಚ್ಚಿನ

ಭೀಷ್ಮ ಪಿತಾಮಹರು ಬರೋಬ್ಬರಿ 58 ದಿನಗಳ ಕಾಲ ಶರಶಯ್ಯೆಯ ಮೇಲೆ ಮಲಗಿದ್ದರೂ ಪ್ರಾಣ ಹಿಡಿದಿಟ್ಟುಕೊಂಡಿದ್ದು ಏಕೆ ಗೊತ್ತಾ? ಇಲ್ಲಿದೆ ನೋಡಿ ಉತ್ತರ .

ಭೀಷ್ಮ ಪಿತಾಮಹರು ಮಹಾಭಾರತದ ಪ್ರಮುಖ ಪಾತ್ರವಾಗಿದ್ದು, ಇವರು ಶಂತನು ಮತ್ತು ಗಂಗೆಗೆ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವರು. ದೇವವ್ರತ/ಸತ್ಯವ್ರತ ಎಂಬುದು ಭೀಷ್ಮರ ಮೊದಲ ಹೆಸರಾಗಿದ್ದು ಇವರು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾರೆ.

ಶಾಸ್ತ್ರಜ್ಞಾನವನ್ನು ದೇವರ್ಷಿ ಬೃಹಸ್ಪತಿಯಿಂದಲೂ, ಶಸ್ತ್ರ ವಿದ್ಯೆಗಳನ್ನು ಋಷಿ ಭಾರದ್ವಾಜ, ಪರಶುರಾಮರಿಂದಲೂ ಕಲಿತ ಭೀಷ್ಮ ಪಿತಾಮಹರು ತಮ್ಮ ತಂದೆ ಶಂತನುವಿನ ಸುಖಕ್ಕೋಸ್ಕರ ಆಜೀವನ ಬ್ರಹ್ಮಚರ್ಯ ಪಾಲಿಸುವ ಪ್ರತಿಜ್ಞೆ ಮಾಡುತ್ತಾರೆ . ಹಾಗಾಗಿ ಈಗಲೂ ಸಹ ಯಾರಾದರೂ ಪ್ರತಿಜ್ಞೆ ಮಾಡಿ ಅದನ್ನು ತಪ್ಪದೆ ನೆರವೇರಿಸಬೇಕಾದರೆ ಅದನ್ನು ಭೀಷ್ಮ ಪ್ರತಿಜ್ಞೆ ಎಂದೇ ಸಂಭೋದಿಸಲಾಗುತ್ತದೆ. ತಮ್ಮ ಸಚ್ಚಾರಿತ್ರ್ಯ ಹಾಗೂ ನಿಷ್ಠೆಯಿಂದಾಗಿ ಹೆಸರುಗಳಿಸಿದ್ದ ಭೀಷ್ಮ ಪಿತಾಮಹರು ಇಂದಿಗೂ ಶ್ರೀಕೃಷ್ಣನ ನಂತರ ಮಹಾಭಾರತದಲ್ಲಿ ಅತ್ಯಂತ ಗೌರವಯುತವಾದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಾಗಾದರೆ ಅಪ್ರತಿಮ ವ್ಯಕ್ತಿಯಾದ ಭೀಷ್ಮ ಪಿತಾಮಹರು ಬರೋಬ್ಬರಿ 58 ದಿನಗಳ ಕಾಲ ಶರಶಯ್ಯೆಯ ಮೇಲೆ ಮಲಗಿದ್ದರೂ ಪ್ರಾಣ ಹಿಡಿದಿಟ್ಟುಕೊಂಡಿದ್ದು ಏಕೆ ಗೊತ್ತಾ?

ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಭೀಷ್ಮ ಪಿತಾಮಹರು ಅರ್ಜುನನ ಬಾಣಕ್ಕೆ ತುತ್ತಾಗಿಶರಶಯ್ಯೆ ಯಲ್ಲಿ ಮಲಗುತ್ತಾರೆ.ಶರಶಯ್ಯೆ ಮಲಗಿದ ತಕ್ಷಣ ಭೀಷ್ಮ ಪಿತಾಮಹರು ಪ್ರಾಣ ಬಿಡಬಹುದಾದ ಅವಕಾಶವಿದ್ದರೂ ಭೀಷ್ಮರು ತಮ್ಮ ಪ್ರಾಣವನು ತ್ಯಜಿಸುವುದಿಲ್ಲ. ಏಕೆಂದರೆ ಭೀಷ್ಮ ಪಿತಾಮಹರು ಶರಶಯ್ಯೆಯ ಮೇಲೆ ಮಲಗುವಾಗ ದಕ್ಷಿಣಾಯಣ ಇರುತ್ತದೆ. ಹಾಗಾಗಿ ಅವರು ತಮ್ಮ ಪ್ರಾಣ ಬಿಡಲು ಇಚ್ಛಿಸುವುದಿಲ್ಲ.ತದನಂತರ ಬರೋಬ್ಬರಿ 58 ದಿನಗಳ ಕಾಲ ಕಾದ ನಂತರ ಅಂದರೆ ಸಂಕ್ರಾಂತಿಯಂದು ಸೂರ್ಯ ಉತ್ತರಾಯಣಕ್ಕೆ ಬಂದ ಬಳಿಕ ಭೀಷ್ಮ ಪಿತಾಮಹರು ತಮ್ಮ ಪ್ರಾಣ ಬಿಡುತ್ತಾರೆ.ಅಲ್ಲಿಯವರೆಗೆ ತಮ್ಮ ತಪೋ ಶಕ್ತಿಯಿಂದ ಹಾಗೆ ಭೀಷ್ಮರು ತಮ್ಮ ಜೀವವನ್ನು ಹಿಡಿದಿಟ್ಟುಕೊಂಡಿರುತ್ತಾರೆ . ಒಟ್ಟಿನಲ್ಲಿ ಉತ್ತರಾಯಣದ ಮಹತ್ವವನ್ನು ಆಗಲೇ ಭೀಷ್ಮ ಪಿತಾಮಹರು ಬಿಚ್ಚಿಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top