fbpx
ಹೆಚ್ಚಿನ

ಬದುಕ ಬದಲಿಸಬಲ್ಲ ಓಶೋ ಹಿತವಚನಗಳು – ತಪ್ಪದೆ ಓದಿ !

ಭಾರತೀಯ ಆಧ್ಯಾತ್ಮಿಕ ಗುರು, ತತ್ವಜ್ಞಾನಿ ಮತ್ತು ರಜನೀಶ್ ಚಳುವಳಿಯ ನಾಯಕರಾಗಿದ್ದ ಗುರು ಓಶೋ ಹೇಳಿದ ಬದುಕ ಬದಲಿಸುವ ಹಿತವಚನಗಳನೊಮ್ಮೆ ಓದಿ !

ಸದ್ಗುರುವನ್ನು ಹುಡುಕಿ :

ನಿಮ್ಮ ಬಳಿ ಎಲ್ಲವೂ ಇದ್ದೂ ನಿಮಗೆ ಏನೂ ಇಲ್ಲವೆನಿಸಿದಾಗ ಆಗ ಸದ್ಗುರುವನ್ನು ಹುಡುಕಿ. ಯಾವತ್ತು ನಿಮ್ಮ ಸಫಲತೆಗಳೆಲ್ಲವೂ ಅಸಫಲ ಎನ್ನಿಸತೊಡಗುವುದೋ ಆಗ ಹುಡುಕಿ ಸದ್ಗುರುವನ್ನು. ಎಂದು ನಿಮ್ಮ ಬುದ್ಧಿಗೆ ನಿಮ್ಮ ಮೂರ್ಖತೆಯ ಅರಿವಾಗುವುದೋ ಅಂದು ಗುರುವನ್ನರಸುತ್ತ ಹೋಗಿ.

 

 

ಅಹಂಕಾರ ಶಕ್ತಿಯಲ್ಲ :

ಅಹಂಕಾರ ಶಕ್ತಿಯಲ್ಲ ಅದು ಆತ್ಮವನ್ನು ಕವಿದಿರುವ ಒಂದು ಪರದೆಯಾಗಿದೆ. ಅಜ್ಞಾನ ಇರುವಷ್ಟು ಕಾಲ ಅಹಂಕಾರ ನಮ್ಮೊಂದಿಗೆ ಇರುತ್ತದೆ . ಜ್ಞಾನದೊಂದಿಗೆ ಅಹಂಕಾರ ಲಯವಾಗಿ ಆ ಜಾಗದಲ್ಲಿ ಆತ್ಮದ ದರ್ಶವಾಗುತ್ತದೆ.

 

 

ಭಯದಿಂದ ಹೊರಬನ್ನಿ :

ಜಗತ್ತು ವಿಪರೀತವಾಗಿ ಭಯಪಡುವುದು ಮತ್ತೊಬ್ಬರು ಏನೆಂದುಕೊಂಡಾರು ಅನ್ನುವ ಯೋಚನೆಯಿಂದ. ಒಂದು ಸಲ ನೀವು ಈ ಭಯಭೀತ ಮಂದೆಯಿಂದ ಹೊರಬನ್ನಿ, ಮತ್ತೆಂದೂ ನೀವು ಕುರಿಗಳ ಹಾಗೆ ತಲೆ ತಗ್ಗಿಸಿ ನಡೆಯಲಾರಿರಿ. ನೆನಪಿರಲಿ ನೀವು ಬದುಕುವುದು ನಿಮಗಾಗಿ.

 

 

ವಿಚಾರ ಮಾಡಿ :

ನೀವು ಬದುಕಿನಲ್ಲಿ ಪ್ರಜ್ಞಾಪೂರ್ವಕವಾಗಿ ವಿಕಾಸಗೊಂಡಿರುವಿರೋ ಅಥವಾ ಗಾಳಿ ಬಂದಂತೆ ತೂರುವ ತರಗೆಲೆಯಂತೆ ಜೀವಿಸುತ್ತಿರುವಿರೋ? ಗಾಳಿಗೆ ತೂರಿದ ತರಗೆಲೆ ಎಲ್ಲಾದರೂ ತನ್ನ ಗುರಿಯನ್ನು ತಲುಪಬಲ್ಲುದೆ? ಯಾರಾದರೂ ಎಂದಾದರೂ ಹಾಗೆ ತಲುಪಿರುವರೇ? ಬದುಕಿನಲ್ಲಿ ಅಂತಹ ಪ್ರಜ್ಞಾಪೂರ್ವಕ ಉದ್ದೇಶವಿರದೆ ಯಾರೂ ಎಂದೂ ತಲುಪಲಾರರು. ಅಂತಹ ಪ್ರಜ್ಞಾಪೂರ್ವಕ ಹಂಬಲ ನಾವು ವಿಚಾರ ಮಾಡಿದಾಗ ಮಾತ್ರ ಸಿಗುತ್ತದೆ .

 

 

ನಾಳೆಯ ಚಿಂತೆ ಬೇಡ :

ಸೃಷ್ಟಿಯ ಪ್ರತಿಯೊಂದೂ ಹೀಗೆ ವರ್ತಮಾನದಲ್ಲಿ ಸಹಜವಾಗಿ ಬದುಕುತ್ತವೆ. ಆದರೆ ಮಾನವನಿಗೆ ಮಾತ್ರ ನಾಳೆಯದೇ ಚಿಂತೆ. ಮನುಷ್ಯರಷ್ಟೆ ನಾಳೆಗೆ ಬೇಕಾಗುತ್ತದೆ, ನಾಡಿದ್ದಿಗೆ ಬೇಕಾಗುತ್ತದೆ ಎಂದು ವ್ಯವಸ್ಥೆ ಮಾಡಿಟ್ಟುಕೊಳ್ಳುವುದು. ಈ ಗೀಳು ಎಷ್ಟೆಂದರೆ, ಕೆಲವರು ತಾವು ಸತ್ತ ಮೇಲೆ ನಮ್ಮ ಗೋರಿ ಹೀಗೇ ಇರಬೇಕೆಂದು ವ್ಯವಸ್ಥೆ ಮಾಡುವವರೂ ಇದ್ದಾರೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top